< ಅಪೊಸ್ತಲರ ಕೃತ್ಯಗಳ 14 >

1 ಇಕೋನ್ಯದಲ್ಲಿ ಪೌಲ ಮತ್ತು ಬಾರ್ನಬರು ಅದೇ ಪ್ರಕಾರವಾಗಿ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಪ್ರೇರಣಾತ್ಮಕವಾದ ಬೋಧನೆ ನೀಡಿ ಮಾತನಾಡಿದ್ದರಿಂದ ಯೆಹೂದ್ಯರಲ್ಲಿಯೂ, ಗ್ರೀಕರಲ್ಲಿಯೂ ಬಹುಮಂದಿ ಕರ್ತನಾದ ಯೇಸುಕ್ರಿಸ್ತನನ್ನು ನಂಬುವವರಾದರು.
Zgodí se pa v Ikoniji, da sta šla vkupej v shajališče Judovsko, in sta govorila, tako, da je veliko mnoštvo Judov in Grkov verovalo.
2 ಆದರೆ ನಂಬದೆ ಹೋದ ಯೆಹೂದ್ಯರು, ಅನ್ಯಜನರ ಮನಸ್ಸನ್ನು ಈ ಸಹೋದರರ ವಿರುದ್ಧವಾಗಿ ಪ್ರಚೋದಿಸಿ ಕೆಡಿಸಿದರು.
Tisti Judje pa, kteri niso verovali, podpihajo in nadražijo duše poganov zoper brate.
3 ಹೀಗಿರಲಾಗಿ ಅವರು ಬಹುಕಾಲ ಅಲ್ಲಿದ್ದು ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ನಡೆಯುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟಿದ್ದರಿಂದ ಆತನ ಮೇಲೆ ಭರವಸವಿಟ್ಟು ಧೈರ್ಯದಿಂದ ಮಾತನಾಡುತ್ತಿದ್ದರು.
Ali ostala sta dosti časa, govoreč srčno v Gospodu, kteri je pričeval besedo milosti svoje, in je dajal, da so se znamenja in čudeži godili po njunih rokah.
4 ಆಗ ಆ ಊರಿನ ಜನರು ಎರಡು ಭಾಗವಾದರೂ; ಕೆಲವರು ಯೆಹೂದ್ಯರ ಪಕ್ಷದವರಾದರು, ಕೆಲವರು ಅಪೊಸ್ತಲರ ಪಕ್ಷದವರಾದರು.
In množica mestna se razdelí; in eni so bili z Judi, eni pa z aposteljnoma.
5 ಅನ್ಯಜನರೂ, ಯೆಹೂದ್ಯರೂ ಕೂಡಿ ತಮ್ಮ ಅಧಿಪತಿಗಳ ಸಮ್ಮತಿಯಿಂದ ಅಪೊಸ್ತಲರನ್ನು ಪೀಡಿಸುವುದಕ್ಕೂ, ಕಲ್ಲೆಸೆದು ಕೊಲ್ಲುವುದಕ್ಕೂ ಪ್ರಯತ್ನಿಸಿದಾಗ,
Ko so se pa vzdignili pogani in Judje s poglavarji svojimi, da bi ju zasramotili in kamenjali,
6 ಅಪೊಸ್ತಲರು ಅದನ್ನು ತಿಳಿದು ಅಲ್ಲಿಂದ ಓಡಿಹೋಗಿ ಲುಕವೋನ್ಯದಲ್ಲಿದ್ದ ಲುಸ್ತ್ರ ಮತ್ತು ದೆರ್ಬೆ ಎಂಬ ಊರುಗಳಿಗೂ,
Zvesta, in pobegneta v Likaonski mesti Listro in Derbo, in okolico,
7 ಅವುಗಳಿಗೆ ಸೇರಿರುವ ಸೀಮೆಗೂ ಹೋಗಿ ಅಲ್ಲಿ ಸುವಾರ್ತೆಯನ್ನು ಸಾರಿದರು.
In tu sta oznanjevala evangelj.
8 ಲುಸ್ತ್ರ ಪಟ್ಟಣದಲ್ಲಿ ಕಾಲುಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಕುಳಿತಿದ್ದನು. ಅವನು ಹುಟ್ಟುಕುಂಟನಾಗಿದ್ದು, ಅದುವರೆಗೂ ನಡೆಯಲಾರದೆ ಇದ್ದವನು.
In sedel je v Listri en mož bolan na nogah, hrom iz telesa matere svoje, kteri ni bil nikoli hodil.
9 ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು. ಪೌಲನು ಅವನನ್ನು ದಿಟ್ಟಿಸಿ ನೋಡಿ ವಾಸಿಯಾಗುವುದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು;
Ta je poslušal Pavla, ko je govoril; in on pogleda nanj, in videvši, da ima vero, da bo ozdravel,
10 ೧೦ “ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ” ಎಂದು ಮಹಾಧ್ವನಿಯಿಂದ ಹೇಳಿದನು. ಕೂಡಲೆ ಆ ಮನುಷ್ಯನು ಹಾರಿ ನಡೆದಾಡಿದನು.
Reče z močnim glasom: Stopi na noge svoje po konci! In skočil jo, in hodil je.
11 ೧೧ ಪೌಲನು ಮಾಡಿದ್ದನ್ನು ಗುಂಪು ಕೂಡಿದ್ದ ಜನರು ನೋಡಿ; “ದೇವರುಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದುಬಂದರು” ಎಂದು ಲುಕವೋನ್ಯ ಭಾಷೆಯಲ್ಲಿ ಕೂಗಾಡಿದರು.
Ljudstvo pa, ko je videlo, kar je Pavel storil, povzdignejo glas svoj, govoreč Likaonski: Bogova sta v človeškej podobi sešla k nam.
12 ೧೨ ಬಾರ್ನಬನನ್ನು ‘ದ್ಯೌಸ್’ ದೇವರೆಂತಲೂ ಪೌಲನು ಪ್ರಮುಖ ಭಾಷಣಕಾರನಾದ್ದರಿಂದ ಅವನನ್ನು ‘ಹೆರ್ಮೆ’ ದೇವರೆಂತಲೂ ಅಂದುಕೊಂಡರು.
In imenovali so Barnaba Jupiterja; a Pavla Merkurija, ker je bil on načelnik besede.
13 ೧೩ ಊರ ಮುಂದಿದ್ದ ದ್ಯೌಸ್ ದೇವರ ಗುಡಿಯ ಪೂಜಾರಿಯು ಎತ್ತುಗಳನ್ನೂ, ಹೂವಿನ ಹಾರಗಳನ್ನೂ ಊರಬಾಗಿಲಿನ ಹತ್ತಿರಕ್ಕೆ ತಂದು ಜನರೊಂದಿಗೆ ಅವರಿಗೆ ಬಲಿಕೊಡಬೇಕೆಂದಿದ್ದನು.
Duhoven pa Jupiterjev, ki je bil pred mestom, pripelje juncev, in prinese vencev pred vrata, in hotel jima je z ljudstvom darovati.
14 ೧೪ ಇದನ್ನು ಕೇಳಿ ಅಪೊಸ್ತಲರಾದ ಬಾರ್ನಬ ಮತ್ತು ಪೌಲರು ತಮ್ಮ ವಸ್ತ್ರಗಳನ್ನು ಹರಿದುಕೊಂಡು ಜನರ ಗುಂಪಿನೊಳಗೆ ನುಗ್ಗಿ ಹೀಗೆಂದು ಕೂಗಿ ಹೇಳಿದರು;
Ko sta pa aposteljna Barnaba in Pavel to slišala, raztrgala sta oblačila svoja, in skočila sta med ljudstvo kričeč,
15 ೧೫ “ಜನರೇ, ನೀವು ಹೀಗೇಕೆ ಮಾಡುತ್ತೀರೀ? ನಾವೂ ಮನುಷ್ಯರೇ, ನಿಮ್ಮಂಥ ಸ್ವಭಾವವುಳ್ಳವರು. ನೀವು ಈ ವ್ಯರ್ಥವಾದ ಕೆಲಸಗಳನ್ನು ಬಿಟ್ಟುಬಿಟ್ಟು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಸುವಾರ್ತೆಯನ್ನು ನಿಮಗೆ ಸಾರಿಹೇಳುವವರಾಗಿದ್ದೇವೆ.
In govoreč: Možjé! kaj to delate? Tudi midva sva umrljiva, vam enaka človeka, ktera vam oznanjujeva, da se od teh praznih reči obrnite k živemu Bogu, kteri je ustvaril nebo in zemljo in morje in vse, kar je v njih;
16 ೧೬ ಗತಿಸಿಹೋದ ಕಾಲದಲ್ಲಿ ಆತನು ಎಲ್ಲಾ ಜನಾಂಗಗಳನ್ನು ತಮ್ಮ ತಮ್ಮ ಮನಸ್ಸಿಗೆ ತೋಚಿದ ಮಾರ್ಗಗಳಲ್ಲಿ ನಡೆಯುವುದಕ್ಕೆ ಬಿಟ್ಟು ಬಿಟ್ಟನು.
Kteri je v preteklih časih pustil vse narode, da so hodili po svojih potih:
17 ೧೭ ಆದರೆ ದೇವರು ತನ್ನ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಮೂಲಕ ಸಾಕ್ಷಿ ನೀಡುತ್ತಲೇ ಬಂದಿದ್ದಾನೆ; ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ, ಸುಗ್ಗಿಕಾಲಗಳನ್ನೂ ದಯಪಾಲಿಸಿ, ಆಹಾರ ಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ, ಉಪಕಾರಮಾಡುತ್ತಾ ಬಂದವನು ಆತನೇ” ಎಂದು ಹೇಳಿದರು.
Vendar pa ni sebe brez pričevanja pustil, delajoč dobrote, dajoč nam z neba dež in rodovitne čase, napolnjujoč srca naša z jedjó in veseljem.
18 ೧೮ ಬಾರ್ನಬ ಮತ್ತು ಪೌಲರು ಈ ಮಾತುಗಳನ್ನು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯಲು ಆಸಾಧ್ಯವಾಯಿತು.
In govoreč to, komaj sta ustavila ljudstvo, da jima ni darovalo.
19 ೧೯ ತರುವಾಯ ಅಂತಿಯೋಕ್ಯದಿಂದಲೂ, ಇಕೋನ್ಯದಿಂದಲೂ ಯೆಹೂದ್ಯರು ಬಂದು, ಜನರನ್ನು ಪ್ರೇರೇಪಿಸಿ ಪೌಲನನ್ನು ಕೊಲ್ಲುವುದಕ್ಕೆ ಕಲ್ಲೆಸೆದರು, ಅವನು ಸತ್ತನೆಂದು ಭಾವಿಸಿ ಊರಹೊರಕ್ಕೆ ಅವನನ್ನು ಎಳೆದುಹಾಕಿದರು.
Med tem pa pride nekaj Judov iz Antijohije in Ikonije, in pregovorivši ljudstvo, kamenjali so Pavla in izvlekli iz mesta, misleč, da je umrl.
20 ೨೦ ಆದರೆ ಶಿಷ್ಯರು ಅವನ ಸುತ್ತಲು ನಿಂತುಕೊಂಡಿರುವಾಗ ಅವನು ಎದ್ದು ಊರೊಳಕ್ಕೆ ಹೋದನು.
Ko so ga pa učenci obstopili, vstane in vnide v mesto; in drugi dan izide z Barnabom v Derbo.
21 ೨೧ ಮರುದಿನ ಪೌಲನು, ಬಾರ್ನಬನ ಜೊತೆಯಲ್ಲಿ ದೆರ್ಬೆಗೆ ಹೊರಟನು. ಆ ಊರಿನಲ್ಲಿ ಅವರು ಸುವಾರ್ತೆಯನ್ನು ಸಾರಿ ಅನೇಕರನ್ನು ಶಿಷ್ಯರನ್ನಾಗಿ ಮಾಡಿದ ಮೇಲೆ ಹಿಂತಿರುಗಿ ಲುಸ್ತ್ರಕ್ಕೂ, ಇಕೋನ್ಯಕ್ಕೂ, ಅಂತಿಯೋಕ್ಯಕ್ಕೂ ಬಂದರು.
In ko sta oznanila evangelj temu mestu, in sta mnoge podučila, vrnila sta se v Listro in Ikonijo in Antijohijo,
22 ೨೨ ಅಲ್ಲಿ ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿ ಕ್ರಿಸ್ತ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲಿರಿ ಎಂದು ಪ್ರೋತ್ಸಾಹಿಸಿದರು. ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕಾಗಿದೆ ಎಂದು ಬೋಧಿಸಿದರು.
Potrjujoč duše učencev, opominjajoč, da naj ostanejo v veri, in da nam je treba po mnogih stiskah vniti v kraljestvo Božje.
23 ೨೩ ಇದಲ್ಲದೆ ಪ್ರತಿ ಕ್ರೈಸ್ತ ಸಭೆಗೂ ಹಿರಿಯರನ್ನು ನೇಮಿಸಿದರು. ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರು ನಂಬಿದ್ದ ಕರ್ತನಿಗೆ ಅವರನ್ನು ಒಪ್ಪಿಸಿದರು.
In postavivši jim starešine po cerkvah, molivši s postom, izročila sta jih Gospodu, v kterega so verovali.
24 ೨೪ ತರುವಾಯ ಪಿಸಿದ್ಯ ಸೀಮೆಯನ್ನು ಹಾದು ಪಂಫುಲ್ಯ ಸೀಮೆಗೆ ಬಂದು,
In prešla sta Pisidijo in prišla v Pamfilijo.
25 ೨೫ ಅದಕ್ಕೆ ಸೇರಿರುವ ಪೆರ್ಗೆ ಊರಿನಲ್ಲಿ ಕರ್ತನ ವಾಕ್ಯವನ್ನು ಸಾರಿದ ಮೇಲೆ ಅತಾಲ್ಯ ಪಟ್ಟಣಕ್ಕೆ ಇಳಿದು ಅಲ್ಲಿಂದ ಸಮುದ್ರಮಾರ್ಗವಾಗಿ ಪ್ರಯಾಣಮಾಡಿ ಅಂತಿಯೋಕ್ಯವನ್ನು ತಲುಪಿದರು.
In govorivši v Pergi besedo, sešla sta v Atalijo;
26 ೨೬ ಅವರು ಈವರೆಗೆ ನೆರವೇರಿಸಿ ಬಂದಿರುವ ಕೆಲಸಕ್ಕೋಸ್ಕರ ತಮ್ಮನ್ನೇ ದೇವರ ಕೃಪಾಶ್ರಯಕ್ಕೆ ಮೊದಲು ಒಪ್ಪಿಸಿಕೊಟ್ಟದ್ದು ಈ ಊರಿನಲ್ಲಿಯೇ.
In odtod sta se odpeljala po morji v Antijohijo, odkoder sta bila izročena milosti Božjej na delo, ktero sta dokončala.
27 ೨೭ ಅಲ್ಲಿ ಸಭೆಯನ್ನು ಕೂಡಿಸಿ, ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳೆಲ್ಲವನ್ನೂ, ಆತನು ಅನ್ಯಜನರಿಗೆ ನಂಬಿಕೆಯ ಬಾಗಿಲು ತೆರೆದದ್ದನ್ನೂ ವಿವರವಾಗಿ ಅವರಿಗೆ ತಿಳಿಸಿದರು.
Ko sta pa prišla in sta zbrala cerkev, sporočila sta, koliko reči je Bog ž njima storil, in da je odprl poganom vrata vere.
28 ೨೮ ತರುವಾಯ ಅವರು ಅಲ್ಲಿ ಶಿಷ್ಯರ ಸಂಗಡ ಹೆಚ್ಚುಕಾಲ ತಂಗಿದ್ದರು.
In prebila sta tu ne malo časa z učenci.

< ಅಪೊಸ್ತಲರ ಕೃತ್ಯಗಳ 14 >