< ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ 4 >

1 ನಾನು ದೇವರ ಸಮಕ್ಷಮದಲ್ಲಿ ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಬರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯನ್ನೂ, ಆತನ ರಾಜ್ಯವನ್ನೂ ಮುಂದಿಟ್ಟು ನಿನಗೆ ಖಂಡಿತವಾಗಿ ಹೇಳುವುದೇನಂದರೆ,
ಈಶ್ವರಸ್ಯ ಗೋಚರೇ ಯಶ್ಚ ಯೀಶುಃ ಖ್ರೀಷ್ಟಃ ಸ್ವೀಯಾಗಮನಕಾಲೇ ಸ್ವರಾಜತ್ವೇನ ಜೀವತಾಂ ಮೃತಾನಾಞ್ಚ ಲೋಕಾನಾಂ ವಿಚಾರಂ ಕರಿಷ್ಯತಿ ತಸ್ಯ ಗೋಚರೇ ಽಹಂ ತ್ವಾಮ್ ಇದಂ ದೃಢಮ್ ಆಜ್ಞಾಪಯಾಮಿ|
2 ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು.
ತ್ವಂ ವಾಕ್ಯಂ ಘೋಷಯ ಕಾಲೇಽಕಾಲೇ ಚೋತ್ಸುಕೋ ಭವ ಪೂರ್ಣಯಾ ಸಹಿಷ್ಣುತಯಾ ಶಿಕ್ಷಯಾ ಚ ಲೋಕಾನ್ ಪ್ರಬೋಧಯ ಭರ್ತ್ಸಯ ವಿನಯಸ್ವ ಚ|
3 ಯಾಕೆಂದರೆ ಜನರು ಸ್ವಸ್ಥಬೋಧನೆಯನ್ನು ಒಪ್ಪಲಾರದ ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.
ಯತ ಏತಾದೃಶಃ ಸಮಯ ಆಯಾತಿ ಯಸ್ಮಿನ್ ಲೋಕಾ ಯಥಾರ್ಥಮ್ ಉಪದೇಶಮ್ ಅಸಹ್ಯಮಾನಾಃ ಕರ್ಣಕಣ್ಡೂಯನವಿಶಿಷ್ಟಾ ಭೂತ್ವಾ ನಿಜಾಭಿಲಾಷಾತ್ ಶಿಕ್ಷಕಾನ್ ಸಂಗ್ರಹೀಷ್ಯನ್ತಿ
4 ಅವರು ಸತ್ಯ ಬೋಧನೆಗೆ ಕಿವಿಗೊಡದೆ ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು.
ಸತ್ಯಮತಾಚ್ಚ ಶ್ರೋತ್ರಾಣಿ ನಿವರ್ತ್ತ್ಯ ವಿಪಥಗಾಮಿನೋ ಭೂತ್ವೋಪಾಖ್ಯಾನೇಷು ಪ್ರವರ್ತ್ತಿಷ್ಯನ್ತೇ;
5 ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ ಸ್ವಸ್ಥಚಿತ್ತನಾಗಿರು, ಹಿಂಸೆಯನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.
ಕಿನ್ತು ತ್ವಂ ಸರ್ವ್ವವಿಷಯೇ ಪ್ರಬುದ್ಧೋ ಭವ ದುಃಖಭೋಗಂ ಸ್ವೀಕುರು ಸುಸಂವಾದಪ್ರಚಾರಕಸ್ಯ ಕರ್ಮ್ಮ ಸಾಧಯ ನಿಜಪರಿಚರ್ಯ್ಯಾಂ ಪೂರ್ಣತ್ವೇನ ಕುರು ಚ|
6 ಯಾಕೆಂದರೆ ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.
ಮಮ ಪ್ರಾಣಾನಾಮ್ ಉತ್ಸರ್ಗೋ ಭವತಿ ಮಮ ಪ್ರಸ್ಥಾನಕಾಲಶ್ಚೋಪಾತಿಷ್ಠತ್|
7 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.
ಅಹಮ್ ಉತ್ತಮಯುದ್ಧಂ ಕೃತವಾನ್ ಗನ್ತವ್ಯಮಾರ್ಗಸ್ಯಾನ್ತಂ ಯಾವದ್ ಧಾವಿತವಾನ್ ವಿಶ್ವಾಸಞ್ಚ ರಕ್ಷಿತವಾನ್|
8 ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.
ಶೇಷಂ ಪುಣ್ಯಮುಕುಟಂ ಮದರ್ಥಂ ರಕ್ಷಿತಂ ವಿದ್ಯತೇ ತಚ್ಚ ತಸ್ಮಿನ್ ಮಹಾದಿನೇ ಯಥಾರ್ಥವಿಚಾರಕೇಣ ಪ್ರಭುನಾ ಮಹ್ಯಂ ದಾಯಿಷ್ಯತೇ ಕೇವಲಂ ಮಹ್ಯಮ್ ಇತಿ ನಹಿ ಕಿನ್ತು ಯಾವನ್ತೋ ಲೋಕಾಸ್ತಸ್ಯಾಗಮನಮ್ ಆಕಾಙ್ಕ್ಷನ್ತೇ ತೇಭ್ಯಃ ಸರ್ವ್ವೇಭ್ಯೋ ಽಪಿ ದಾಯಿಷ್ಯತೇ|
9 ನೀನು ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು,
ತ್ವಂ ತ್ವರಯಾ ಮತ್ಸಮೀಪಮ್ ಆಗನ್ತುಂ ಯತಸ್ವ,
10 ೧೦ ಯಾಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ, ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು. (aiōn g165)
ಯತೋ ದೀಮಾ ಐಹಿಕಸಂಸಾರಮ್ ಈಹಮಾನೋ ಮಾಂ ಪರಿತ್ಯಜ್ಯ ಥಿಷಲನೀಕೀಂ ಗತವಾನ್ ತಥಾ ಕ್ರೀಷ್ಕಿ ರ್ಗಾಲಾತಿಯಾಂ ಗತವಾನ್ ತೀತಶ್ಚ ದಾಲ್ಮಾತಿಯಾಂ ಗತವಾನ್| (aiōn g165)
11 ೧೧ ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ.
ಕೇವಲೋ ಲೂಕೋ ಮಯಾ ಸಾರ್ದ್ಧಂ ವಿದ್ಯತೇ| ತ್ವಂ ಮಾರ್ಕಂ ಸಙ್ಗಿನಂ ಕೃತ್ವಾಗಚ್ಛ ಯತಃ ಸ ಪರಿಚರ್ಯ್ಯಯಾ ಮಮೋಪಕಾರೀ ಭವಿಷ್ಯತಿ,
12 ೧೨ ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
ತುಖಿಕಞ್ಚಾಹಮ್ ಇಫಿಷನಗರಂ ಪ್ರೇಷಿತವಾನ್|
13 ೧೩
ಯದ್ ಆಚ್ಛಾದನವಸ್ತ್ರಂ ತ್ರೋಯಾನಗರೇ ಕಾರ್ಪಸ್ಯ ಸನ್ನಿಧೌ ಮಯಾ ನಿಕ್ಷಿಪ್ತಂ ತ್ವಮಾಗಮನಸಮಯೇ ತತ್ ಪುಸ್ತಕಾನಿ ಚ ವಿಶೇಷತಶ್ಚರ್ಮ್ಮಗ್ರನ್ಥಾನ್ ಆನಯ|
14 ೧೪ ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.
ಕಾಂಸ್ಯಕಾರಃ ಸಿಕನ್ದರೋ ಮಮ ಬಹ್ವನಿಷ್ಟಂ ಕೃತವಾನ್ ಪ್ರಭುಸ್ತಸ್ಯ ಕರ್ಮ್ಮಣಾಂ ಸಮುಚಿತಫಲಂ ದದಾತು|
15 ೧೫ ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು.
ತ್ವಮಪಿ ತಸ್ಮಾತ್ ಸಾವಧಾನಾಸ್ತಿಷ್ಠ ಯತಃ ಸೋಽಸ್ಮಾಕಂ ವಾಕ್ಯಾನಾಮ್ ಅತೀವ ವಿಪಕ್ಷೋ ಜಾತಃ|
16 ೧೬ ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ.
ಮಮ ಪ್ರಥಮಪ್ರತ್ಯುತ್ತರಸಮಯೇ ಕೋಽಪಿ ಮಮ ಸಹಾಯೋ ನಾಭವತ್ ಸರ್ವ್ವೇ ಮಾಂ ಪರ್ಯ್ಯತ್ಯಜನ್ ತಾನ್ ಪ್ರತಿ ತಸ್ಯ ದೋಷಸ್ಯ ಗಣನಾ ನ ಭೂಯಾತ್;
17 ೧೭ ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.
ಕಿನ್ತು ಪ್ರಭು ರ್ಮಮ ಸಹಾಯೋ ಽಭವತ್ ಯಥಾ ಚ ಮಯಾ ಘೋಷಣಾ ಸಾಧ್ಯೇತ ಭಿನ್ನಜಾತೀಯಾಶ್ಚ ಸರ್ವ್ವೇ ಸುಸಂವಾದಂ ಶೃಣುಯುಸ್ತಥಾ ಮಹ್ಯಂ ಶಕ್ತಿಮ್ ಅದದಾತ್ ತತೋ ಽಹಂ ಸಿಂಹಸ್ಯ ಮುಖಾದ್ ಉದ್ಧೃತಃ|
18 ೧೮ ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್. (aiōn g165)
ಅಪರಂ ಸರ್ವ್ವಸ್ಮಾದ್ ದುಷ್ಕರ್ಮ್ಮತಃ ಪ್ರಭು ರ್ಮಾಮ್ ಉದ್ಧರಿಷ್ಯತಿ ನಿಜಸ್ವರ್ಗೀಯರಾಜ್ಯಂ ನೇತುಂ ಮಾಂ ತಾರಯಿಷ್ಯತಿ ಚ| ತಸ್ಯ ಧನ್ಯವಾದಃ ಸದಾಕಾಲಂ ಭೂಯಾತ್| ಆಮೇನ್| (aiōn g165)
19 ೧೯ ಪ್ರಿಸ್ಕಿಲ್ಲಳಿಗೂ, ಅಕ್ವಿಲ್ಲನಿಗೂ, ಒನೇಸಿಪೊರನ ಮನೆಯವರಿಗೂ ವಂದನೆಹೇಳು.
ತ್ವಂ ಪ್ರಿಷ್ಕಾಮ್ ಆಕ್ಕಿಲಮ್ ಅನೀಷಿಫರಸ್ಯ ಪರಿಜನಾಂಶ್ಚ ನಮಸ್ಕುರು|
20 ೨೦ ಎರಸ್ತನು ಕೊರಿಂಥದಲ್ಲಿ ನಿಂತನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು.
ಇರಾಸ್ತಃ ಕರಿನ್ಥನಗರೇ ಽತಿಷ್ಠತ್ ತ್ರಫಿಮಶ್ಚ ಪೀಡಿತತ್ವಾತ್ ಮಿಲೀತನಗರೇ ಮಯಾ ವ್ಯಹೀಯತ|
21 ೨೧ ಚಳಿಗಾಲಕ್ಕೆ ಮುಂಚೆಯೇ ಬರುವುದಕ್ಕೆ ಪ್ರಯತ್ನಿಸು. ಯುಬೂಲನು, ಪೊದೆಯನೂ, ಲೀನನೂ, ಕ್ಲೌದ್ಯಳೂ ಉಳಿದ ಸಹೋದರರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ.
ತ್ವಂ ಹೇಮನ್ತಕಾಲಾತ್ ಪೂರ್ವ್ವಮ್ ಆಗನ್ತುಂ ಯತಸ್ವ| ಉಬೂಲಃ ಪೂದಿ ರ್ಲೀನಃ ಕ್ಲೌದಿಯಾ ಸರ್ವ್ವೇ ಭ್ರಾತರಶ್ಚ ತ್ವಾಂ ನಮಸ್ಕುರ್ವ್ವತೇ|
22 ೨೨ ಕರ್ತನು ನಿನ್ನ ಆತ್ಮದೊಂದಿಗೆ ಇರಲಿ. ಆತನ ಕೃಪೆಯು ನಿಮ್ಮೊಂದಿಗಿರಲಿ.
ಪ್ರಭು ರ್ಯೀಶುಃ ಖ್ರೀಷ್ಟಸ್ತವಾತ್ಮನಾ ಸಹ ಭೂಯಾತ್| ಯುಷ್ಮಾಸ್ವನುಗ್ರಹೋ ಭೂಯಾತ್| ಆಮೇನ್|

< ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ 4 >