< ಅರಸುಗಳು - ದ್ವಿತೀಯ ಭಾಗ 22 >

1 ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಮೂವತ್ತೊಂದು ವರ್ಷ ಆಳಿದನು. ಬೊಚ್ಕತೂರಿನವಳೂ ಅದಾಯನ ಮಗಳೂ ಆದ ಯೆದೀದಾ ಎಂಬಾಕೆಯು ಅವನ ತಾಯಿ.
Иосия бе осем години на възраст когато се възцари, и царува в Ерусалим тридесет и една година; а името на майка му бе Иедида, дъщаря на Адаия от Васкат.
2 ಅರಸನಾದ ಯೋಷೀಯನು ಯೆಹೋವನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಳ್ಳದೆ ತನ್ನ ಪೂರ್ವಜನಾದ ದಾವೀದನ ಮಾರ್ಗದಲ್ಲಿಯೇ ನಡೆದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು.
Той върши това, което бе право пред Господа, като ходи напълно в пътя на баща си Давида, баз да се отклони на дясно или на ляво.
3 ಅರಸನಾದ ಯೋಷೀಯನು ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಚಲ್ಯನ ಮಗನೂ, ಮೆಷುಲ್ಲಾಮನ ಮೊಮ್ಮಗನೂ, ಯೆಹೋವನ ಆಲಯದ ಲೇಖಕನೂ ಆದ ಶಾಫಾನನನ್ನು ಕರೆದು ಅವನಿಗೆ,
И в осемнадесетата година на цар Иосия, царят прати в Господния дом секретаря Сафан, син на Азалия, Месуламовия син, и му каза:
4 “ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ, ಅವನಿಗೆ ದ್ವಾರಪಾಲಕರು ಯೆಹೋವನ ಆಲಯಕ್ಕೆ ಬರುವ ಜನರಿಂದ ಕೂಡಿಸಿದ ಹಣವನ್ನು ಲೆಕ್ಕಿಸಬೇಕು,
Иди при първосвещеника Холкия та му речи да изброи внесените в Господния дом пари, които врътърите са събрали от людете,
5 ಅದಲ್ಲದೆ ಆಲಯದ ಕೆಲಸಮಾಡಿಸುವ ಮುಖ್ಯಸ್ಥರಿಗೆ ಅದನ್ನು ಒಪ್ಪಿಸು ಎಂದು ಹೇಳಬೇಕು, ಮುಖ್ಯಸ್ಥರು ಅದನ್ನು ಯೆಹೋವನ ಆಲಯದ ದುರಸ್ತಿ ಕೆಲಸಕ್ಕೆ ಉಪಯೋಗಿಸಲಿ,
и нека ги предадат в ръката на работниците; които надзирават Господния дом; а а те нека ги дадат на работниците, които са в Господния дом, за да поправят разваленото на дома,
6 ಬಡಗಿ, ಶಿಲ್ಪಿ, ಮೇಸ್ತ್ರಿ ಮೊದಲಾದವರ ಸಂಬಳಕ್ಕಾಗಿಯೂ, ದೇವಾಲಯಕ್ಕೆ ಬೇಕಾದ ಮರ, ಕೆತ್ತಿದ ಕಲ್ಲು ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ ಅದನ್ನು ಉಪಯೋಗಿಸಿಕೊಳ್ಳಲಿ,
на дърводелците, на строителите и на зидарите, - за да купят дървета и дялани камъни за да поправят дома.
7 ಅವರು ನಂಬಿಗಸ್ತರಾಗಿರುವುದರಿಂದ ಅವರ ವಶಕ್ಕೆ ಕೊಡಲ್ಪಡುವ ಹಣದ ಲೆಕ್ಕವನ್ನು ಕೇಳಬಾರದು” ಎಂದು ಆಜ್ಞಾಪಿಸಿ ಅವನನ್ನು ಯೆಹೋವನ ಆಲಯಕ್ಕೆ ಕಳುಹಿಸಿದನು.
Обаче, не държаха с тях никаква сметка за предаваните в ръцете им пари, защото постъпваха честно.
8 ಪ್ರಧಾನ ಯಾಜಕನಾದ ಹಿಲ್ಕೀಯನು ಲೇಖಕನಾದ ಶಾಫಾನನಿಗೆ, “ಯೆಹೋವನ ಆಲಯದಲ್ಲಿ ನನಗೆ ಧರ್ಮೋಪದೇಶಗ್ರಂಥವು ಸಿಕ್ಕಿರುತ್ತದೆ” ಎಂದು ಹೇಳಿ, ಅದನ್ನು ಅವನ ಕೈಯಲ್ಲಿ ಕೊಟ್ಟನು. ಶಾಫಾನನು ಅದನ್ನು ಓದಿದನು.
Тогава първосвещеникът Хелкия каза на секретаря Сафан: Намерих книгата на закона в Господния дом. И Хелкия даде книгата на Сафана, който я прочете.
9 ಅನಂತರ ಲೇಖಕನಾದ ಶಾಫಾನನು ಹಿಂತಿರುಗಿ ಅರಸನ ಬಳಿಗೆ ಹೋಗಿ, “ನಿನ್ನ ಸೇವಕರು ಯೆಹೋವನ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ದೇವಾಲಯದ ಕೆಲಸವನ್ನು ಮಾಡಿಸುವ ಮುಖ್ಯಸ್ಥರಿಗೆ ಒಪ್ಪಿಸಿದರು.
И секретарят Сафан отиде при царя и доложи на царя, казвайки: Слугите ти иждивиха парите, които намериха в дома, като ги предадоха в ръката на работниците, които надзирават Господния дом.
10 ೧೦ ಇದಲ್ಲದೆ, ಯಾಜಕನಾದ ಹಿಲ್ಕೀಯನು ಲೇಖಕನಾದ ಶಾಫಾನನಿಗೆ ಒಂದು ಗ್ರಂಥವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಅದನ್ನು ಅರಸನ ಮುಂದೆ ಓದಿದನು.
Тоже секретарят Сафан извески на царя, казвайки: Свещеник Хелкия ми даде една книха. И Сафан я прочете пред царя.
11 ೧೧ ಅರಸನು ಧರ್ಮೋಪದೇಶಗ್ರಂಥದ ವಾಕ್ಯಗಳನ್ನು ಕೇಳಿದಾಗ, ಬಟ್ಟೆಗಳನ್ನು ಹರಿದುಕೊಂಡನು.
А царят, като чу думите на книгата на закона, раздра дрехите си.
12 ೧೨ ಅರಸನು ಯಾಜಕನಾದ ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕಾಯನ ಮಗನಾದ ಅಕ್ಬೋರ್, ಲೇಖಕನಾದ ಶಾಫಾನ್, ತನ್ನ ಸಹಾಯಕನಾದ ಅಸಾಯ ಎಂಬುವವರಿಗೆ,
Тогава царят заповадя на свещеника Хелкия, на Ахикама Сафановия син, на Аховора Михеевия син, на секретаря Сафан, и на царския слуга Асаия, казвайки:
13 ೧೩ “ನಮ್ಮ ಪೂರ್ವಿಕರು ನಮಗೆ ಸಿಕ್ಕಿರುವ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳಿಗೆ ಕಿವಿಗೊಡದೆಯೂ, ಅವುಗಳನ್ನು ಕೈಕೊಳ್ಳದೆಯೂ ಹೋದುದರಿಂದ ನಾವು ಯೆಹೋವನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿಯೂ, ಜನರಿಗಾಗಿಯೂ, ಮತ್ತು ಎಲ್ಲಾ ಯೆಹೂದ್ಯರಿಗಾಗಿಯೂ ಯೆಹೋವನ ಬಳಿಗೆ ಹೋಗಿ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳ ಕುರಿತಾಗಿ ವಿಚಾರಿಸಿರಿ” ಎಂದು ಆಜ್ಞಾಪಿಸಿದನು.
Идете, допитайте се до Господа за мене, за людете и за целия Юда, относно думите на тая книга, който се намери; защото голям е Господният гняв, който е пламнал против нас, понеже бащите ни не послушаха думите на тая книга та да постъпват напълно според както е писано за нас.
14 ೧೪ ಆಗ ಯಾಜಕನಾದ ಹಿಲ್ಕೀಯನು, ಅಹೀಕಾಮ್, ಅಕ್ಬೋರ್, ಶಾಫಾನ್, ಅಸಾಯ, ಎಂಬುವವರು “ಹುಲ್ದ” ಎಂಬ ಪ್ರವಾದಿನಿಯ ಬಳಿಗೆ ಹೋಗಿ ಆಕೆಯ ಹತ್ತಿರ ವಿಚಾರಿಸಿದರು. ಹರ್ಹಸನ ಮೊಮ್ಮಗನೂ, ತಿಕ್ವನ ಮಗನೂ, ಯಾಜಕವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಈಕೆಯ ಪತಿ. ಈಕೆಯು ಯೆರೂಸಲೇಮಿನ ಎರಡನೆಯ ಕೇರಿಯಲ್ಲಿ ವಾಸಿಸುತ್ತಿದ್ದಳು.
И така, свещеник Хелкия, Ахикам, Аховор, Сафан и Асаия отидоха при пророчицата Олда, жена на одеждопазителя Селум, син на Текуя, Арасовия син. А тя живееше в Ерусалим, във втория участък; и те говориха с нея.
15 ೧೫ ಹುಲ್ದಳು ಅವರಿಗೆ, “ನಿಮ್ಮನ್ನು ಕಳುಹಿಸಿದವನಿಗೆ ಇಸ್ರಾಯೇಲರ ದೇವರಾದ ಯೆಹೋವನ ಮಾತನ್ನು ತಿಳಿಸಿರಿ.
И тя им рече: Така казва Господ Израилевият Бог: Кажете на човека, който ви е пратил до Мене:
16 ೧೬ ಯೆಹೋವನು, ‘ಈ ದೇಶದ ಮೇಲೆಯೂ ಮತ್ತು ಜನರ ಮೇಲೆಯೂ ಯೆಹೂದದ ಅರಸನು ಓದಿಸಿದ ಗ್ರಂಥದಲ್ಲಿ ಬರೆದಿರುವ ಎಲ್ಲಾ ಆಪತ್ತುಗಳನ್ನು ಬರಮಾಡುವನು.
Така казва Господ: Ето, Аз ще докарам злото на това място и на жителите му, според всичко което е писано в книгата, която Юдовият цар е прочел.
17 ೧೭ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಹಾಕಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ಕೋಪಗೊಳ್ಳುವಂತೆ ಮಾಡಿರುವುದರಿಂದ ನನ್ನ ಕೋಪಾಗ್ನಿಯು ಈ ದೇಶದ ಮೇಲೆ ಉರಿಯಹತ್ತಿದೆ, ಅದು ಆರಿಹೋಗುವುದೇ ಇಲ್ಲ’ ಎನ್ನುತ್ತಾನೆ.
Понеже Ме оставиха и кадяха на други богове, та Ме разгневиха с всичките дала на ръцате си, затова гневът Ми ще пламне против това място, и няма да угасне.
18 ೧೮ ತಾನು ಕೇಳಿದ ವಾಕ್ಯಗಳ ವಿಷಯವಾಗಿ ಯೆಹೋವನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ತಿಳಿಸಬೇಕಾದ ಇಸ್ರಾಯೇಲರ ದೇವರಾದ ಯೆಹೋವನ ಮಾತೇನೆಂದರೆ,
Но на Юдовия цар, който ви прати да се допитате до Господа, така да му кажете: Така казва Гостпод Израилевият Бог: Относно думите, които ти си чул:
19 ೧೯ ‘ನಾನು ಈ ದೇಶವನ್ನೂ, ನಿವಾಸಿಗಳನ್ನೂ, ಶಾಪವಿಸ್ಮಯಗಳಿಗೆ ಗುರಿಮಾಡುವೆನೆಂಬುವುದನ್ನು ನೀನು ಕೇಳಿದಾಗ, ದುಃಖಪಟ್ಟು ಯೆಹೋವನಾದ ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದಲೂ, ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು’
Понеже сърцето ти е омекнало, и ти си се смирил пред Господа, когато си чул това, което говорих против това място и против жителите му, че ще запустеят и ще станат за проклетия, и ти раздра дрехите си и плака пред Мене, затова и Аз те послушах, казва Господ.
20 ೨೦ ಆದುದರಿಂದ, ‘ನಾನು ಈ ದೇಶಕ್ಕೆ ಬರಮಾಡುವ ಶಿಕ್ಷೆಗಳಲ್ಲಿ ನೀನು ಒಂದನ್ನೂ ನೋಡದೆ ಸಮಾಧಾನದಿಂದ ಮರಣಹೊಂದಿ ಸಮಾಧಿ ಸೇರುವಂತೆ ಆಶೀರ್ವದಿಸುವೆನು’ ಎಂದು ಹೇಳಿದ್ದನ್ನು ತಿಳಿಸಿರಿ” ಎಂದು ಹೇಳಿದಳು. ಅವರು ಹಿಂದಿರುಗಿ ಬಂದು ಅರಸನಿಗೆ ಆ ಮಾತುಗಳನ್ನು ತಿಳಿಸಿದರು.
Ето, прочее, Аз ще те прибера при бащите ти, и ще се прибереш в гроба си с мир; и твоите очи няма да видят нищо от всичкото зло, което ще докарам на това място. И те доложиха на царя.

< ಅರಸುಗಳು - ದ್ವಿತೀಯ ಭಾಗ 22 >