< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 5 >

1 ಭೂಮಿಯ ಮೇಲಿರುವ ನಮ್ಮ ಈ ದೇಹವೆಂಬ ಗುಡಾರವು ಅಳಿದುಹೊದರೂ, ದೇವರಿಂದ ನಿರ್ಮಿತವಾಗಿರುವ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು; ಅದು ಮನುಷ್ಯನ ಕೈಗಳಿಂದ ಕಟ್ಟಿರುವ ಮನೆಯಲ್ಲ ಬದಲಾಗಿ ಶಾಶ್ವತವಾದ ಮನೆಯಾಗಿದೆ. (aiōnios g166)
ಅಪರಮ್ ಅಸ್ಮಾಕಮ್ ಏತಸ್ಮಿನ್ ಪಾರ್ಥಿವೇ ದೂಷ್ಯರೂಪೇ ವೇಶ್ಮನಿ ಜೀರ್ಣೇ ಸತೀಶ್ವರೇಣ ನಿರ್ಮ್ಮಿತಮ್ ಅಕರಕೃತಮ್ ಅಸ್ಮಾಕಮ್ ಅನನ್ತಕಾಲಸ್ಥಾಯಿ ವೇಶ್ಮೈಕಂ ಸ್ವರ್ಗೇ ವಿದ್ಯತ ಇತಿ ವಯಂ ಜಾನೀಮಃ| (aiōnios g166)
2 ನಾವು ಈ ದೇಹದಲ್ಲಿರುವವರೆಗೆ ನರಳುತ್ತಾ; ಪರಲೋಕದಿಂದ ದೊರಕುವ ನಮ್ಮ ನಿವಾಸವನ್ನು ದೇಹದ ಮೇಲೆ ನಾವು ಎಂದು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ.
ಯತೋ ಹೇತೋರೇತಸ್ಮಿನ್ ವೇಶ್ಮನಿ ತಿಷ್ಠನ್ತೋ ವಯಂ ತಂ ಸ್ವರ್ಗೀಯಂ ವಾಸಂ ಪರಿಧಾತುಮ್ ಆಕಾಙ್ಕ್ಷ್ಯಮಾಣಾ ನಿಃಶ್ವಸಾಮಃ|
3 ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು.
ತಥಾಪೀದಾನೀಮಪಿ ವಯಂ ತೇನ ನ ನಗ್ನಾಃ ಕಿನ್ತು ಪರಿಹಿತವಸನಾ ಮನ್ಯಾಮಹೇ|
4 ಏಕೆಂದರೆ, ಈ ದೇಹವೆಂಬ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ; ಬದಲಾಗಿ ಅದರ ಮೇಲೆ ಧರಿಸಿಕೊಳ್ಳಬೇಕೆಂಬುದೇ. ಆದ್ದರಿಂದ ನಶ್ವರವಾದದ್ದು ಅಳಿದುಹೋಗಿ ಅಮರವಾದದ್ದು ಉಳಿಯುವಂತೆ ಅಪೇಕ್ಷಿಸುತ್ತೇವೆ.
ಏತಸ್ಮಿನ್ ದೂಷ್ಯೇ ತಿಷ್ಠನತೋ ವಯಂ ಕ್ಲಿಶ್ಯಮಾನಾ ನಿಃಶ್ವಸಾಮಃ, ಯತೋ ವಯಂ ವಾಸಂ ತ್ಯಕ್ತುಮ್ ಇಚ್ಛಾಮಸ್ತನ್ನಹಿ ಕಿನ್ತು ತಂ ದ್ವಿತೀಯಂ ವಾಸಂ ಪರಿಧಾತುಮ್ ಇಚ್ಛಾಮಃ, ಯತಸ್ತಥಾ ಕೃತೇ ಜೀವನೇನ ಮರ್ತ್ಯಂ ಗ್ರಸಿಷ್ಯತೇ|
5 ಆ ಸ್ಥಿತಿಗಾಗಿ ನಮ್ಮನ್ನು ಸಿದ್ಧಗೊಳಿಸಿರುವಾತನು ದೇವರೇ; ಅದಕ್ಕಾಗಿ ಆತನು ಪವಿತ್ರಾತ್ಮನನ್ನು ನಮಗೆ ಸಂಚಕಾರವಾಗಿ ನೀಡಿದ್ದಾನೆ.
ಏತದರ್ಥಂ ವಯಂ ಯೇನ ಸೃಷ್ಟಾಃ ಸ ಈಶ್ವರ ಏವ ಸ ಚಾಸ್ಮಭ್ಯಂ ಸತ್ಯಙ್ಕಾರಸ್ಯ ಪಣಸ್ವರೂಪಮ್ ಆತ್ಮಾನಂ ದತ್ತವಾನ್|
6 ಹೀಗಿರುವುದರಿಂದ ನಾವು ಯಾವಾಗಲೂ ನಂಬಿಕೆಯುಳ್ಳವರಾಗಿರಬೇಕು; ದೇಹದಲ್ಲಿ ವಾಸಿಸುವವರೆಗೂ ಕರ್ತನಿಂದ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆ
ಅತಏವ ವಯಂ ಸರ್ವ್ವದೋತ್ಸುಕಾ ಭವಾಮಃ ಕಿಞ್ಚ ಶರೀರೇ ಯಾವದ್ ಅಸ್ಮಾಭಿ ರ್ನ್ಯುಷ್ಯತೇ ತಾವತ್ ಪ್ರಭುತೋ ದೂರೇ ಪ್ರೋಷ್ಯತ ಇತಿ ಜಾನೀಮಃ,
7 ನಾವು ನೋಡುತ್ತಾ ನಡೆಯದೇ, ನಂಬುವವರಾಗಿಯೇ ನಡೆಯುತ್ತೇವೆ.
ಯತೋ ವಯಂ ದೃಷ್ಟಿಮಾರ್ಗೇ ನ ಚರಾಮಃ ಕಿನ್ತು ವಿಶ್ವಾಸಮಾರ್ಗೇ|
8 ಇದನ್ನು ಕುರಿತು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿ ಇರುವುದೇ ಉತ್ತಮವೆಂದು ಎಣಿಸುವವರಾಗಿದ್ದೇವೆ.
ಅಪರಞ್ಚ ಶರೀರಾದ್ ದೂರೇ ಪ್ರವಸ್ತುಂ ಪ್ರಭೋಃ ಸನ್ನಿಧೌ ನಿವಸ್ತುಞ್ಚಾಕಾಙ್ಕ್ಷ್ಯಮಾಣಾ ಉತ್ಸುಕಾ ಭವಾಮಃ|
9 ಆದ್ದರಿಂದ ನಾವು ದೇಹವೆಂಬ ಮನೆಯಲ್ಲಿದ್ದರೂ ಸರಿಯೇ ಅಥವಾ ಅದನ್ನು ಬಿಟ್ಟಿದ್ದರೂ ಸರಿಯೇ, ಕರ್ತನನ್ನು ಮೆಚ್ಚಿಸುವವರಾಗಿರಬೇಕೆಂಬುದೇ ನಮ್ಮ ಗುರಿಯಾಗಿದೆ.
ತಸ್ಮಾದೇವ ಕಾರಣಾದ್ ವಯಂ ತಸ್ಯ ಸನ್ನಿಧೌ ನಿವಸನ್ತಸ್ತಸ್ಮಾದ್ ದೂರೇ ಪ್ರವಸನ್ತೋ ವಾ ತಸ್ಮೈ ರೋಚಿತುಂ ಯತಾಮಹೇ|
10 ೧೦ ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.
ಯಸ್ಮಾತ್ ಶರೀರಾವಸ್ಥಾಯಾಮ್ ಏಕೈಕೇನ ಕೃತಾನಾಂ ಕರ್ಮ್ಮಣಾಂ ಶುಭಾಶುಭಫಲಪ್ರಾಪ್ತಯೇ ಸರ್ವ್ವೈಸ್ಮಾಭಿಃ ಖ್ರೀಷ್ಟಸ್ಯ ವಿಚಾರಾಸನಸಮ್ಮುಖ ಉಪಸ್ಥಾತವ್ಯಂ|
11 ೧೧ ಆದ್ದರಿಂದ, ಕರ್ತನಲ್ಲಿ ಭಯವುಳ್ಳವರಾಗಿರಬೇಕೆಂದು ನಾವು, ಮನುಷ್ಯರನ್ನು ಒಡಂಬಡಿಸುತ್ತೇವೆ. ನಾವು ಎಂಥವರೆಂದು ದೇವರಿಗೆ ಪ್ರಕಟವಾಗಿದ್ದೇವೆ. ಅದು ನಿಮ್ಮ ಮನಸ್ಸಾಕ್ಷಿಗೆ ಕೂಡಾ ಗೊತ್ತಾಗಿದೆ ಎಂದು ನಂಬಿಕೊಂಡಿದ್ದೇನೆ.
ಅತಏವ ಪ್ರಭೋ ರ್ಭಯಾನಕತ್ವಂ ವಿಜ್ಞಾಯ ವಯಂ ಮನುಜಾನ್ ಅನುನಯಾಮಃ ಕಿಞ್ಚೇಶ್ವರಸ್ಯ ಗೋಚರೇ ಸಪ್ರಕಾಶಾ ಭವಾಮಃ, ಯುಷ್ಮಾಕಂ ಸಂವೇದಗೋಚರೇಽಪಿ ಸಪ್ರಕಾಶಾ ಭವಾಮ ಇತ್ಯಾಶಂಸಾಮಹೇ|
12 ೧೨ ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.
ಅನೇನ ವಯಂ ಯುಷ್ಮಾಕಂ ಸನ್ನಿಧೌ ಪುನಃ ಸ್ವಾನ್ ಪ್ರಶಂಸಾಮ ಇತಿ ನಹಿ ಕಿನ್ತು ಯೇ ಮನೋ ವಿನಾ ಮುಖೈಃ ಶ್ಲಾಘನ್ತೇ ತೇಭ್ಯಃ ಪ್ರತ್ಯುತ್ತರದಾನಾಯ ಯೂಯಂ ಯಥಾಸ್ಮಾಭಿಃ ಶ್ಲಾಘಿತುಂ ಶಕ್ನುಥ ತಾದೃಶಮ್ ಉಪಾಯಂ ಯುಷ್ಮಭ್ಯಂ ವಿತರಾಮಃ|
13 ೧೩ ನಮಗೆ ಬುದ್ಧಿಭ್ರಮಣೆಯಾಗಿದ್ದರೆ ಅದು ದೇವರ ಮಹಿಮೆಗಾಗಿಯೇ; ಹಾಗೂ ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ಪ್ರಯೋಜನಕ್ಕಾಗಿಯೇ.
ಯದಿ ವಯಂ ಹತಜ್ಞಾನಾ ಭವಾಮಸ್ತರ್ಹಿ ತದ್ ಈಶ್ವರಾರ್ಥಕಂ ಯದಿ ಚ ಸಜ್ಞಾನಾ ಭವಾಮಸ್ತರ್ಹಿ ತದ್ ಯುಷ್ಮದರ್ಥಕಂ|
14 ೧೪ ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ.
ವಯಂ ಖ್ರೀಷ್ಟಸ್ಯ ಪ್ರೇಮ್ನಾ ಸಮಾಕೃಷ್ಯಾಮಹೇ ಯತಃ ಸರ್ವ್ವೇಷಾಂ ವಿನಿಮಯೇನ ಯದ್ಯೇಕೋ ಜನೋಽಮ್ರಿಯತ ತರ್ಹಿ ತೇ ಸರ್ವ್ವೇ ಮೃತಾ ಇತ್ಯಾಸ್ಮಾಭಿ ರ್ಬುಧ್ಯತೇ|
15 ೧೫ ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು.
ಅಪರಞ್ಚ ಯೇ ಜೀವನ್ತಿ ತೇ ಯತ್ ಸ್ವಾರ್ಥಂ ನ ಜೀವನ್ತಿ ಕಿನ್ತು ತೇಷಾಂ ಕೃತೇ ಯೋ ಜನೋ ಮೃತಃ ಪುನರುತ್ಥಾಪಿತಶ್ಚ ತಮುದ್ದಿಶ್ಯ ಯತ್ ಜೀವನ್ತಿ ತದರ್ಥಮೇವ ಸ ಸರ್ವ್ವೇಷಾಂ ಕೃತೇ ಮೃತವಾನ್|
16 ೧೬ ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಮ್ಮೆ ಕ್ರಿಸ್ತನನ್ನು ನಾವು ಹೀಗೇ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಆ ರೀತಿಯಾಗಿ ಪರಿಗಣಿಸುವುದಿಲ್ಲ.
ಅತೋ ಹೇತೋರಿತಃ ಪರಂ ಕೋಽಪ್ಯಸ್ಮಾಭಿ ರ್ಜಾತಿತೋ ನ ಪ್ರತಿಜ್ಞಾತವ್ಯಃ| ಯದ್ಯಪಿ ಪೂರ್ವ್ವಂ ಖ್ರೀಷ್ಟೋ ಜಾತಿತೋಽಸ್ಮಾಭಿಃ ಪ್ರತಿಜ್ಞಾತಸ್ತಥಾಪೀದಾನೀಂ ಜಾತಿತಃ ಪುನ ರ್ನ ಪ್ರತಿಜ್ಞಾಯತೇ|
17 ೧೭ ಆದ್ದರಿಂದ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.
ಕೇನಚಿತ್ ಖ್ರೀಷ್ಟ ಆಶ್ರಿತೇ ನೂತನಾ ಸೃಷ್ಟಿ ರ್ಭವತಿ ಪುರಾತನಾನಿ ಲುಪ್ಯನ್ತೇ ಪಶ್ಯ ನಿಖಿಲಾನಿ ನವೀನಾನಿ ಭವನ್ತಿ|
18 ೧೮ ಇವೆಲ್ಲವುಗಳು ದೇವರಿಂದಲೇ ಉಂಟಾದದ್ದು. ದೇವರು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಂಧಾನಪಡಿಸಿಕೊಂಡು, ಸಂಧಾನಮಾಡುವ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ;
ಸರ್ವ್ವಞ್ಚೈತದ್ ಈಶ್ವರಸ್ಯ ಕರ್ಮ್ಮ ಯತೋ ಯೀಶುಖ್ರೀಷ್ಟೇನ ಸ ಏವಾಸ್ಮಾನ್ ಸ್ವೇನ ಸಾರ್ದ್ಧಂ ಸಂಹಿತವಾನ್ ಸನ್ಧಾನಸಮ್ಬನ್ಧೀಯಾಂ ಪರಿಚರ್ಯ್ಯಾಮ್ ಅಸ್ಮಾಸು ಸಮರ್ಪಿತವಾಂಶ್ಚ|
19 ೧೯ ಹೇಗೆಂದರೆ, ಕ್ರಿಸ್ತನಲ್ಲಿ ದೇವರು ಜಗತ್ತನ್ನು ತನ್ನೊಡನೆ ಸಂಧಾನಮಾಡಿಕೊಳ್ಳುತ್ತಿದ್ದಾನೆ; ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೇ, ಈ ಸಂಧಾನದ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಅದನ್ನು ನಮ್ಮ ಮೇಲೆ ಹೊರಿಸಿದ್ದಾನೆ.
ಯತಃ ಈಶ್ವರಃ ಖ್ರೀಷ್ಟಮ್ ಅಧಿಷ್ಠಾಯ ಜಗತೋ ಜನಾನಾಮ್ ಆಗಾಂಸಿ ತೇಷಾಮ್ ಋಣಮಿವ ನ ಗಣಯನ್ ಸ್ವೇನ ಸಾರ್ದ್ಧಂ ತಾನ್ ಸಂಹಿತವಾನ್ ಸನ್ಧಿವಾರ್ತ್ತಾಮ್ ಅಸ್ಮಾಸು ಸಮರ್ಪಿತವಾಂಶ್ಚ|
20 ೨೦ ಆದ್ದರಿಂದ ನಾವು ಕ್ರಿಸ್ತನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾನೆ. ದೇವರೊಡನೆ ನೀವು ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತೇವೆ.
ಅತೋ ವಯಂ ಖ್ರೀಷ್ಟಸ್ಯ ವಿನಿಮಯೇನ ದೌತ್ಯಂ ಕರ್ಮ್ಮ ಸಮ್ಪಾದಯಾಮಹೇ, ಈಶ್ವರಶ್ಚಾಸ್ಮಾಭಿ ರ್ಯುಷ್ಮಾನ್ ಯಾಯಾಚ್ಯತೇ ತತಃ ಖ್ರೀಷ್ಟಸ್ಯ ವಿನಿಮಯೇನ ವಯಂ ಯುಷ್ಮಾನ್ ಪ್ರಾರ್ಥಯಾಮಹೇ ಯೂಯಮೀಶ್ವರೇಣ ಸನ್ಧತ್ತ|
21 ೨೧ ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತ ಯೇಸುವಿನಲ್ಲಿ ನಾವು ನೀತಿವಂತರಾಗಬೇಕೆಂದು ದೇವರು ಹೀಗೆ ಮಾಡಿದರು.
ಯತೋ ವಯಂ ತೇನ ಯದ್ ಈಶ್ವರೀಯಪುಣ್ಯಂ ಭವಾಮಸ್ತದರ್ಥಂ ಪಾಪೇನ ಸಹ ಯಸ್ಯ ಜ್ಞಾತೇಯಂ ನಾಸೀತ್ ಸ ಏವ ತೇನಾಸ್ಮಾಕಂ ವಿನಿಮಯೇನ ಪಾಪಃ ಕೃತಃ|

< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 5 >