< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 1 >

1 ದಾವೀದನ ಮಗನಾದ ಸೊಲೊಮೋನನು ತನ್ನ ರಾಜ್ಯದಲ್ಲಿ ಸಂಪೂರ್ಣ ಪ್ರಭುತ್ವ ಹೊಂದಿದನು. ಅವನ ದೇವರಾದ ಯೆಹೋವನು ಅವನ ಸಂಗಡ ಇದ್ದು ಅವನನ್ನು ಬಲಾಢ್ಯನಾಗುವಂತೆ ಆಶೀರ್ವದಿಸಿ ನಡೆಸಿದನು.
Davut oğlu Süleyman krallığını sağlamlaştırdı. Çünkü Tanrısı RAB onunlaydı ve onu çok yüceltti.
2 ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಗೋತ್ರ ಪ್ರಧಾನರಾದವರೊಂದಿಗೂ, ಇಸ್ರಾಯೇಲ್ ಪ್ರಭುಗಳೊಂದಿಗೂ ಮಾತನಾಡಿದನು.
Süleyman bütün İsrailliler'i –binbaşıları, yüzbaşıları, yargıçları, İsrail'in boy başları olan önderleri– çağırttı.
3 ಅವನ ಸಂಗಡ ಇದ್ದ ಸರ್ವಸಮೂಹದೊಡನೆ ಗಿಬ್ಯೋನಿನಲ್ಲಿರುವ ಪೂಜಾಸ್ಥಳಕ್ಕೆ ಹೋದನು. ಏಕೆಂದರೆ ಯೆಹೋವನ ಸೇವಕನಾದ ಮೋಶೆಯು ಅರಣ್ಯದಲ್ಲಿ ಮಾಡಿದ ದೇವದರ್ಶನದ ಗುಡಾರವು ಅಲ್ಲಿತ್ತು.
Sonra bütün toplulukla birlikte Givon'daki tapınma yerine gitti. Çünkü RAB'bin kulu Musa'nın çölde yaptığı Tanrı'yla Buluşma Çadırı oradaydı.
4 ದಾವೀದನು ದೇವರ ಮಂಜೂಷವನ್ನು ಕಿರ್ಯತ್ಯಾರೀಮಿನಿಂದ ತಾನು ಅದನ್ನಿರಿಸಲು ಸಿದ್ಧ ಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಅವನು ಯೆರೂಸಲೇಮಿನಲ್ಲಿ ಅದಕ್ಕಾಗಿ ಗುಡಾರವನ್ನು ಮಾಡಿಸಿದ್ದನು.
Ancak Davut Tanrı'nın Antlaşma Sandığı'nı Kiryat-Yearim'den getirip Yeruşalim'de hazırladığı çadıra koymuştu.
5 ಇದಲ್ಲದೆ ಹೂರನ ಮಗನಾದ ಊರಿಯ, ಈತನ ಮಗನಾದ ಬೆಚಲೇಲನು ಮಾಡಿದ ತಾಮ್ರದ ಯಜ್ಞವೇದಿಯು ಅಲ್ಲೇ ಯೆಹೋವನ ಗುಡಾರದ ಮುಂದಿತ್ತು. ಸೊಲೊಮೋನನೂ ಆ ಸಮೂಹದವರೂ ಅಲ್ಲಿಗೆ ಹೋದರು.
Hur oğlu Uri oğlu Besalel'in yaptığı tunç sunağı da Givon'da RAB'bin Konutu'nun önüne yerleştirmişti. Süleyman'la topluluk orada RAB'be danıştılar.
6 ಆಗ ಸೊಲೊಮೋನನು ದೇವದರ್ಶನ ಗುಡಾರದ ಬಳಿಯಲ್ಲಿ ಯೆಹೋವನ ಮುಂದೆ ಇರುವ ತಾಮ್ರದ ಯಜ್ಞವೇದಿಯ ಬಳಿಗೆ ಹೋಗಿ ಅದರ ಮೇಲೆ ಸಾವಿರ ಸರ್ವಾಂಗಹೋಮಗಳನ್ನು ಸಮರ್ಪಿಸಿದನು.
Süleyman RAB'bin önüne, Buluşma Çadırı'nın önündeki tunç sunağa çıkarak üzerinde bin yakmalık sunu sundu.
7 ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು ಅವನಿಗೆ, “ನಿನಗೆ, ಯಾವ ವರ ಬೇಕು ಕೇಳಿಕೋ” ಎಂದು ಹೇಳಲು
Tanrı o gece Süleyman'a görünüp, “Sana ne vermemi istersin?” diye sordu.
8 ಸೊಲೊಮೋನನು ದೇವರಿಗೆ, “ನೀನು ನನ್ನ ತಂದೆಯಾದ ದಾವೀದನಿಗೆ ಮಹಾ ದಯೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಅರಸನಾಗುವಂತೆ ಮಾಡಿದೆ.
Süleyman, “Babam Davut'a büyük iyilikler yaptın” diye karşılık verdi, “Beni de onun yerine kral atadın.
9 ಈಗ ಯೆಹೋವನಾದ ದೇವರೇ, ನೀನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವು ನೆರವೇರಲಿ. ಏಕೆಂದರೆ ಭೂಮಿಯ ಧೂಳಿನಷ್ಟು ಅಸಂಖ್ಯವಾದ ಜನಾಂಗದವರಿಗೆ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀ.
Ya RAB Tanrı, babam Davut'a verdiğin söz yerine gelsin! Beni yeryüzünün tozu kadar çok olan bir halkın kralı yaptın.
10 ೧೦ ನಿನ್ನ ಪ್ರಜೆಗಳಾದ ಈ ಮಹಾ ಜನಾಂಗವನ್ನು ಮುನ್ನಡೆಸುವುದಕ್ಕೂ, ಆಳುವುದಕ್ಕೂ, ನ್ಯಾಯತೀರಿಸುವುದಕ್ಕೂ ಜ್ಞಾನ ವಿವೇಕಗಳನ್ನು ಅನುಗ್ರಹಿಸು” ಎಂದು ಕೇಳಿದನು.
Şimdi bu halkı yönetebilmem için bana bilgi ve bilgelik ver. Başka türlü senin bu büyük halkını kim yönetebilir!”
11 ೧೧ ಆಗ ದೇವರು ಸೊಲೊಮೋನನಿಗೆ, “ಇದು ನಿನ್ನ ಆಕಾಂಕ್ಷೆಯಾಗಿ ಇದ್ದುದರಿಂದಲೂ ಘನವನ್ನೂ, ಧನವನ್ನೂ, ಐಶ್ವರ್ಯವನ್ನೂ, ನಿನ್ನ ವೈರಿಗಳ ಪ್ರಾಣವನ್ನಾಗಲಿ, ದೀರ್ಘಾಯುಷ್ಯವನ್ನಾಗಲಿ ಕೇಳದೆ, ನಾನು ಯಾರನ್ನು ಮುನ್ನಡೆಸಲು ನಿನ್ನನ್ನು ಅರಸನನ್ನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನ, ವಿವೇಕಗಳನ್ನು ನೀನು ಕೇಳಿಕೊಂಡದ್ದರಿಂದಲೂ ಜ್ಞಾನವೂ, ವಿವೇಕವೂ ನಿನಗೆ ಕೊಡಲ್ಪಟ್ಟಿವೆ.
Tanrı Süleyman'a, “Demek yüreğinin dileği bu” dedi, “Zenginlik, mal mülk, onur ya da senden nefret edenlerin ölümünü istemedin, kendin için uzun ömür de istemedin. Bunların yerine seni başına kral yaptığım halkımı yönetmek için bilgi ve bilgelik istedin.
12 ೧೨ ಇದಲ್ಲದೆ ನಿನಗಿಂತ ಮೊದಲು ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ, ನಿನ್ನ ತರುವಾಯ ಯಾರಿಗೂ ಇರದಂಥ ಘನ, ಧನ, ಐಶ್ವರ್ಯಗಳನ್ನೂ ಅನುಗ್ರಹಿಸುವೆನು” ಎಂದನು.
Sana bilgi ve bilgelik verilecektir. Sana ayrıca öyle bir zenginlik, mal mülk ve onur vereceğim ki, benzeri ne senden önceki krallarda görülmüştür, ne de senden sonrakilerde görülecektir.”
13 ೧೩ ಆನಂತರ ಸೊಲೊಮೋನನು ದೇವದರ್ಶನದ ಗುಡಾರವನ್ನು ಬಿಟ್ಟು, ಗಿಬ್ಯೋನಿನಲ್ಲಿರುವ ಪೂಜಾಸ್ಥಳದಿಂದ ಯೆರೂಸಲೇಮಿಗೆ ಬಂದು, ಇಸ್ರಾಯೇಲ್ ರಾಜ್ಯವನ್ನು ಆಳಿದನು.
Bundan sonra Süleyman Givon'daki tapınma yerinden, Buluşma Çadırı'ndan ayrılıp Yeruşalim'e gitti. İsrail'i oradan yönetti.
14 ೧೪ ಅರಸನಾದ ಸೊಲೊಮೋನನು ರಥಗಳನ್ನೂ ರಾಹುತರನ್ನೂ ಸಂಗ್ರಹಿಸಿದನು. ಸಾವಿರದ ನಾನೂರು ರಥಗಳೂ ಮತ್ತು ಹನ್ನೆರಡು ಸಾವಿರ ರಾಹುತರೂ ಅವನಿಗೆ ಇದ್ದರು. ಇವರನ್ನು ರಥದ ಪಟ್ಟಣಗಳಲ್ಲಿಯೂ ಕೆಲವರನ್ನು ಯೆರೂಸಲೇಮಿನಲ್ಲಿ ಅರಸನೊಂದಿಗೂ ಇರಿಸಿದನು. ಉಳಿದವುಗಳನ್ನು ರಥಗಳಿಗಾಗಿ ನೇಮಿಸಿದ ಪಟ್ಟಣದಲ್ಲಿ ಇರಿಸಿದನು.
Kral Süleyman savaş arabalarıyla atlarını topladı. Bin dört yüz savaş arabası, on iki bin atı vardı. Bunların bir kısmını savaş arabaları için ayrılan kentlere, bir kısmını da kendi yanına, Yeruşalim'e yerleştirdi.
15 ೧೫ ಅರಸನು ಯೆರೂಸಲೇಮಿನಲ್ಲಿ ಬೆಳ್ಳಿ ಬಂಗಾರವು ಹೇರಳವಾಗಿದ್ದು ಅವು ಕಲ್ಲಿನಂತೆಯೂ, ಹಾಗು ದೇವದಾರು ಮರಗಳು ತಗ್ಗಿನಲ್ಲಿರುವ ಅತ್ತಿಮರಗಳಂತೆ ಹೇರಳವಾಗಿರುವಂತೆ ಮಾಡಿದನು.
Krallığı döneminde Yeruşalim'de altın ve gümüş taş değerine düştü. Sedir ağaçları Şefela'daki yabanıl incir ağaçları kadar bollaştı.
16 ೧೬ ಅರಸನಾದ ಸೊಲೊಮೋನನ ಕುದುರೆಗಳು ಐಗುಪ್ತ್ಯ ದೇಶದವುಗಳಾಗಿದ್ದವು. ಅವನ ವರ್ತಕರು ಅವುಗಳನ್ನು ಹಿಂಡು ಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು.
Süleyman'ın atları Mısır ve Keve'den getirilirdi. Kralın tüccarları atları Keve'den satın alırdı.
17 ೧೭ ರಥಕ್ಕೆ ಆರುನೂರು ಬೆಳ್ಳಿ ನಾಣ್ಯಗಳಂತೆ, ಕುದುರೆಗೆ ನೂರೈವತ್ತು ಬೆಳ್ಳಿನಾಣ್ಯಗಳಂತೆ ಕೊಟ್ಟು, ರಥಗಳನ್ನೂ, ಕುದುರೆಗಳನ್ನೂ ಐಗುಪ್ತ್ಯ ದೇಶದಿಂದ ತರಿಸುತ್ತಿದ್ದರು. ಇವುಗಳನ್ನು ಹಿತ್ತಿಯರ ಮತ್ತು ಅರಾಮ್ಯರ ಅರಸರ ಮುಖಾಂತರವೇ ತರಿಸುತ್ತಿದ್ದರು.
Mısır'dan bir savaş arabası altı yüz, bir at yüz elli şekel gümüşe getirilirdi. Bunları bütün Hitit ve Aram krallarına satarlardı.

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 1 >