< ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ 1 >

1 ನಮ್ಮ ರಕ್ಷಕನಾದ ದೇವರ ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು
អស្មាកំ ត្រាណកត៌្តុរីឝ្វរស្យាស្មាកំ ប្រត្យាឝាភូមេះ ប្រភោ រ្យីឝុខ្រីឞ្ដស្យ ចាជ្ញានុសារតោ យីឝុខ្រីឞ្ដស្យ ប្រេរិតះ បៅលះ ស្វកីយំ សត្យំ ធម៌្មបុត្រំ តីមថិយំ ប្រតិ បត្រំ លិខតិ។
2 ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ, ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ.
អស្មាកំ តាត ឦឝ្វរោៜស្មាកំ ប្រភុ រ្យីឝុខ្រីឞ្ដឝ្ច ត្វយិ អនុគ្រហំ ទយាំ ឝាន្តិញ្ច កុយ៌្យាស្តាំ។
3 ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ, ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ,
មាកិទនិយាទេឝេ មម គមនកាលេ ត្វម៑ ឥផិឞនគរេ តិឞ្ឋន៑ ឥតរឝិក្ឞា ន គ្រហីតវ្យា, អនន្តេឞូបាខ្យានេឞុ វំឝាវលិឞុ ច យុឞ្មាភិ រ្មនោ ន និវេឝិតវ្យម្
4 ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, ವಂಶಾವಳಿಗಳೂ ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ.
ឥតិ កាំឝ្ចិត៑ លោកាន៑ យទ៑ ឧបទិឝេរេតត៑ មយាទិឞ្ដោៜភវះ, យតះ សវ៌្វៃរេតៃ រ្វិឝ្វាសយុក្តេឝ្វរីយនិឞ្ឋា ន ជាយតេ កិន្តុ វិវាទោ ជាយតេ។
5 ಶುದ್ಧಹೃದಯ, ಒಳ್ಳೆಯ ಮನಸ್ಸಾಕ್ಷಿ, ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ.
ឧបទេឝស្យ ត្វភិប្រេតំ ផលំ និម៌្មលាន្តះករណេន សត្សំវេទេន និឞ្កបដវិឝ្វាសេន ច យុក្តំ ប្រេម។
6 ಕೆಲವರು ಈ ಗುರಿಯನ್ನು ಬಿಟ್ಟು ವ್ಯರ್ಥವಾದ ವಿಚಾರಗಳ ಕಡೆಗೆ ತಿರುಗಿಕೊಂಡಿದ್ದಾರೆ.
កេចិត៑ ជនាឝ្ច សវ៌្វាណ្យេតានិ វិហាយ និរត៌្ហកកថានាម៑ អនុគមនេន វិបថគាមិនោៜភវន៑,
7 ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ, ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ.
យទ៑ ភាឞន្តេ យច្ច និឝ្ចិន្វន្តិ តន្ន ពុធ្យមានា វ្យវស្ថោបទេឞ្ដារោ ភវិតុម៑ ឥច្ឆន្តិ។
8 ಧರ್ಮಶಾಸ್ತ್ರವು ಒಳ್ಳೆಯದೆಂದು ಬಲ್ಲೆವು. ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು.
សា វ្យវស្ថា យទិ យោគ្យរូបេណ គ្ឫហ្យតេ តហ៌្យុត្តមា ភវតីតិ វយំ ជានីមះ។
9 ಧರ್ಮಶಾಸ್ತ್ರವು ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು,
អបរំ សា វ្យវស្ថា ធាម៌្មិកស្យ វិរុទ្ធា ន ភវតិ កិន្ត្វធាម៌្មិកោ ៜវាធ្យោ ទុឞ្ដះ បាបិឞ្ឋោ ៜបវិត្រោ ៜឝុចិះ បិត្ឫហន្តា មាត្ឫហន្តា នរហន្តា
10 ೧೦ ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ.
វេឝ្យាគាមី បុំមៃថុនី មនុឞ្យវិក្រេតា មិថ្យាវាទី មិថ្យាឝបថការី ច សវ៌្វេឞាមេតេឞាំ វិរុទ្ធា,
11 ೧೧ ಈ ಬೋಧನೆಯು ಭಾಗ್ಯವಂತನಾದ ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ. ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು.
តថា សច្ចិទានន្ទេឝ្វរស្យ យោ វិភវយុក្តះ សុសំវាទោ មយិ សមប៌ិតស្តទនុយាយិហិតោបទេឝស្យ វិបរីតំ យត៑ កិញ្ចិទ៑ ភវតិ តទ្វិរុទ្ធា សា វ្យវស្ថេតិ តទ្គ្រាហិណា ជ្ញាតវ្យំ។
12 ೧೨ ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು;
មហ្យំ ឝក្តិទាតា យោៜស្មាកំ ប្រភុះ ខ្រីឞ្ដយីឝុស្តមហំ ធន្យំ វទាមិ។
13 ೧೩
យតះ បុរា និន្ទក ឧបទ្រាវី ហិំសកឝ្ច ភូត្វាប្យហំ តេន វិឝ្វាស្យោ ៜមន្យេ បរិចារកត្វេ ន្យយុជ្យេ ច។ តទ៑ អវិឝ្វាសាចរណម៑ អជ្ញានេន មយា ក្ឫតមិតិ ហេតោរហំ តេនានុកម្បិតោៜភវំ។
14 ೧೪ ಆದರೆ ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು.
អបរំ ខ្រីឞ្ដេ យីឝៅ វិឝ្វាសប្រេមភ្យាំ សហិតោៜស្មត្ប្រភោរនុគ្រហោ ៜតីវ ប្រចុរោៜភត៑។
15 ೧೫ ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ, ಯಾಕೆಂದರೆ ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು.
បាបិនះ បរិត្រាតុំ ខ្រីឞ្ដោ យីឝុ រ្ជគតិ សមវតីណ៌ោៜភវត៑, ឯឞា កថា វិឝ្វាសនីយា សវ៌្វៃ គ្រហណីយា ច។
16 ೧೬ ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು. (aiōnios g166)
តេឞាំ បាបិនាំ មធ្យេៜហំ ប្រថម អាសំ កិន្តុ យេ មានវា អនន្តជីវនប្រាប្ត្យត៌្ហំ តស្មិន៑ វិឝ្វសិឞ្យន្តិ តេឞាំ ទ្ឫឞ្ដាន្តេ មយិ ប្រថមេ យីឝុនា ខ្រីឞ្ដេន ស្វកីយា ក្ឫត្ស្នា ចិរសហិឞ្ណុតា យត៑ ប្រកាឝ្យតេ តទត៌្ហមេវាហម៑ អនុកម្បាំ ប្រាប្តវាន៑។ (aiōnios g166)
17 ೧೭ ಸರ್ವಯುಗಗಳ ಅರಸನೂ, ಅಮರನೂ, ಅದೃಶ್ಯನೂ ಆಗಿರುವ ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್. (aiōn g165)
អនាទិរក្ឞយោៜទ្ឫឝ្យោ រាជា យោៜទ្វិតីយះ សវ៌្វជ្ញ ឦឝ្វរស្តស្យ គៅរវំ មហិមា ចានន្តកាលំ យាវទ៑ ភូយាត៑។ អាមេន៑។ (aiōn g165)
18 ೧೮ ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ.
ហេ បុត្រ តីមថិយ ត្វយិ យានិ ភវិឞ្យទ្វាក្យានិ បុរា កថិតានិ តទនុសារាទ៑ អហម៑ ឯនមាទេឝំ ត្វយិ សមប៌យាមិ, តស្យាភិប្រាយោៜយំ យត្ត្វំ តៃ រ្វាក្យៃរុត្តមយុទ្ធំ ករោឞិ
19 ೧೯ ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ.
វិឝ្វាសំ សត្សំវេទញ្ច ធារយសិ ច។ អនយោះ បរិត្យាគាត៑ កេឞាញ្ចិទ៑ វិឝ្វាសតរី ភគ្នាភវត៑។
20 ೨೦ ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.
ហុមិនាយសិកន្ទរៅ តេឞាំ យៅ ទ្វៅ ជនៅ, តៅ យទ៑ ធម៌្មនិន្ទាំ បុន រ្ន កត៌្តុំ ឝិក្ឞេតេ តទត៌្ហំ មយា ឝយតានស្យ ករេ សមប៌ិតៅ។

< ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ 1 >