< ಸಮುವೇಲನು - ಪ್ರಥಮ ಭಾಗ 2 >

1 ಹನ್ನಳು ದೇವರ ಬಳಿ ಹೀಗೆ ವಿಜ್ಞಾಪಿಸಿದಳು, “ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ; ನನ್ನ ಕೊಂಬು ಯೆಹೋವನಿಂದ ಎತ್ತಲ್ಪಟ್ಟಿದೆ. ಶತ್ರುಗಳ ಮುಂದೆ ನನ್ನ ಬಾಯಿ ಧೈರ್ಯವಾಗಿ ಮಾತನಾಡುತ್ತದೆ, ಯಾಕೆಂದರೆ ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
Mgbe ahụ Hana kpere ekpere sị: “Obi m na-aṅụrị ọṅụ nʼime Onyenwe anyị; nʼime Onyenwe anyị ka e buliri mpi m elu. Ọnụ m na-anya isi megide ndị iro m, nʼihi na-enwere m mmasị na nzọpụta gị.
2 “ಯೆಹೋವನಂಥ ಪರಿಶುದ್ಧನು ಇಲ್ಲವೇ ಇಲ್ಲ; ನಿನ್ನ ಹೊರತು ದೇವರು ಯಾರೂ ಇಲ್ಲ ನಮ್ಮ ದೇವರಂತಹ ಸಮಾನವಾದ ಆಶ್ರಯವಿಲ್ಲ.
“O nweghị onye dị nsọ dịka Onyenwe anyị; o nweghị onye dị karịa gị, o nweghị nkume ọzọ yiri Chineke anyị.
3 “ಇನ್ನು ಮುಂದೆ ಗರ್ವದಿಂದ ಮಾತನಾಡಬೇಡಿರಿ; ಸೊಕ್ಕಿನ ಮಾತು ನಿಮ್ಮ ಬಾಯಿಂದ ಹೊರಡದಿರಲಿ. ದೇವರಾದ ಯೆಹೋವನು ಸರ್ವಜ್ಞನು; ಆತನು ಮನುಷ್ಯರ ಕ್ರಿಯೆಗಳನ್ನು ತೂಗಿನೋಡುವನು.
“Anọgidela na-ekwu okwu site na mpako, ekwekwala ka ọnụ gị kwupụta okwu nganga. Nʼihi na Onyenwe anyị bụ Chineke maara ihe niile, ya bụ onye na-anwale ọrụ niile.
4 “ಶೂರರ ಬಿಲ್ಲುಗಳು ಮುರಿಯಲ್ಪಟ್ಟಿವೆ, ಎಡವಿದವರು ಶೌರ್ಯವೆಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾರೆ.
“Ụta ndị na-ebu agha agbajiela ma ndị ahụ dara mba ka e nyere ike.
5 ಹೊಟ್ಟೆತುಂಬಾ ಊಟಮಾಡುತ್ತಿದ್ದವರು ಅನ್ನಕ್ಕೋಸ್ಕರ ಕೂಲಿಮಾಡುತ್ತಾರೆ; ಹಸಿದವರು ಉಂಡು ಸುಖದಿಂದಿರುತ್ತಾರೆ. ಬಂಜೆಯು ಏಳು ಮಂದಿ ಮಕ್ಕಳನ್ನು ಹೆರುವಳು; ಮಕ್ಕಳುಳ್ಳವಳು ದಿಕ್ಕಿಲ್ಲದೆ ಹೋಗುವಳು.
Ndị na-eriju afọ e meela onwe ha ndị ọrụ ngo maka nri, ma ndị na-adịghị eriju afọ na mbụ aghọọla ndị agụụ adịghị agụkwa. Nwanyị aga amụtala ụmụ asaa ma nwanyị ahụ mụrụ ọtụtụ ụmụ adịghị amụtakwa.
6 “ಯೆಹೋವನೇ ಸಾಯಿಸುವವನೂ ಬದುಕಿಸುವವನೂ; ಪಾತಾಳದಲ್ಲಿ ದೊಬ್ಬುವವನೂ ಮೇಲಕ್ಕೆ ಬರಮಾಡುವವನೂ ಆತನೇ. (Sheol h7585)
“Onyenwe anyị na-eweta ọnwụ, ya na-emekwa ka a dị ndụ, ọ bụ ya na-eme ka mmadụ daa nʼụra ọnwụ, na-emekwa ka ha dị ndụ ọzọ. (Sheol h7585)
7 ಬಡತನ, ಸಿರಿತನಗಳನ್ನು ಕೊಡುವವನೂ ಯೆಹೋವನೇ, ತಗ್ಗಿಸುವವನೂ, ಹೆಚ್ಚಿಸುವವನೂ ಆತನೇ.
Onyenwe anyị na-ezite ụbịam na akụnụba; ọ na-eweda nʼala, ma na-ebulikwa elu.
8 ಆತನು ದೀನರನ್ನು ಧೂಳಿನಿಂದ ಎತ್ತಿ; ದರಿದ್ರರನ್ನು ತಿಪ್ಪೆಯಿಂದ ಎಬ್ಬಿಸಿ ಅಧಿಪತಿಗಳೊಂದಿಗೆ ಕುಳ್ಳಿರಿಸಿ ಅವನಿಗೆ ಮಹಿಮಾಸನವನ್ನು ಬಾಧ್ಯತೆಯಾಗಿ ಅನುಗ್ರಹಿಸುವವನಾಗಿದ್ದಾನೆ. ಭೂಮಿಯ ಆಧಾರಸ್ತಂಭಗಳು ಯೆಹೋವನವೇ; ಆತನೇ ಅವುಗಳ ಮೇಲೆ ಭೂಮಂಡಲವನ್ನು ಸ್ಥಾಪಿಸಿದ್ದಾನೆ.
Ọ na-esite na ntụ welite onye ogbenye na-ebuli ndị mkpa na-akpa site nʼikpo ntụ. Ọ na-eme ka ha soro ụmụ eze nọdụ, na-emekwa ka ha keta ocheeze nsọpụrụ. “Nʼihi na ntọala ụwa bụ nke Onyenwe anyị nʼelu ya ka ọ dọkwasịrị ụwa.
9 “ಆತನು ತನ್ನ ನಂಬಿಗಸ್ತ ಭಕ್ತರ ಹೆಜ್ಜೆಗಳನ್ನು ಕಾಯುವನು; ಆದರೆ ದುಷ್ಟರನ್ನು ಅಂಧಕಾರದ ಮೌನದಲ್ಲಿ ಮುಳುಗಿಸುವನು, ಭುಜಬಲದಿಂದಲೇ ಯಾವನೂ ಜಯಹೊಂದಲಾರನು.
Ọ ga-echebe ụkwụ ndị nsọ ya ma ndị ajọ omume ka ọ ga-eme ka ha dere duu nʼime ọchịchịrị. “Ọ bụghị site nʼịdị ike ka mmeri si abịa.
10 ೧೦ “ಯೆಹೋವನನ್ನು ವಿರೋಧಿಸುವವರು ಮುರಿಯಲ್ಪಡುತ್ತಾರೆ; ಆತನು ಆಕಾಶದಿಂದ ಅವರ ಮೇಲೆ ಗರ್ಜಿಸುತ್ತಾನೆ. ಯೆಹೋವನು ಭೂಮಿಯ ಕಟ್ಟಕಡೆಯಲ್ಲಿರುವವರಿಗೂ ನ್ಯಾಯತೀರಿಸುವನು. ತಾನು ನೇಮಿಸಿದ ಅರಸನಿಗೆ ಬಲವನ್ನು ಅನುಗ್ರಹಿಸುವನು; ತನ್ನ ಅಭಿಷಿಕ್ತನ ಕೊಂಬನ್ನು ಉನ್ನತಮಾಡುವನು.”
Ndị ahụ na-ebuli onwe ha imegide Onyenwe anyị ka a ga-etipịa. Onye kachasị ihe niile elu ga-ebigbọ site nʼeluigwe megide ha. Onyenwe anyị ga-ekpe nsọtụ niile nke ụwa ikpe. “Ọ ga-enye eze ya ike bulikwaa ịdị ike nke onye ya e tere mmanụ.”
11 ೧೧ ಅನಂತರ ಎಲ್ಕಾನನು ರಾಮದಲ್ಲಿದ್ದ ತನ್ನ ಮನೆಗೆ ಹೋದನು; ಹುಡುಗನು ಯಾಜಕನಾದ ಏಲಿಯ ಕೈಕೆಳಗಿದ್ದುಕೊಂಡು ಯೆಹೋವನ ಸೇವೆ ಮಾಡುತ್ತಿದ್ದನು.
Mgbe ahụ, Elkena na Hana laghachiri Rema, ma ha hapụrụ Samuel nʼebe ahụ. Nwata ahụ ghọrọ onyeozi Onyenwe anyị, nʼihi na ọ nọ na-enyere Elayị onye nchụaja aka.
12 ೧೨ ಏಲಿಯ ಮಕ್ಕಳು ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ.
Ụmụ Elayị bụ ndị omume ha jọgburu onwe ya; ha na-elelị Onyenwe anyị anya.
13 ೧೩ ಯಜ್ಞವನ್ನರ್ಪಿಸುವುದಕ್ಕೆ ಬಂದ ಜನರಲ್ಲಿ ಈ ಯಾಜಕರು ನಡಿಸಿದ್ದೇನಂದರೆ, ಯಜ್ಞಮಾಂಸವು ಬೇಯುತ್ತಿರುವಾಗಲೇ ಯಾಜಕನ ಆಳು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಬರುತ್ತಿದ್ದನು.
Dịka mmeso ndị nchụaja nʼebe ndị mmadụ si dị: mgbe onye ọbụla bịara ịchụ aja, onyeozi onye nchụaja na-abịa mgbe a na-esi anụ, jiri ndụdụ nwere eze atọ nʼaka ya.
14 ೧೪ ಆ ಮಾಂಸ ಬೇಯುತ್ತಿರುವ ಕೊಪ್ಪರಿಗೆಯಲ್ಲಾಗಲಿ, ಭಾಂಡಲ್ಲಾಗಲಿ (ದೊಡ್ಡ ಹಂಡೆ), ತಪ್ಪಲೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚಿ ಅದಕ್ಕೆ ಸಿಕ್ಕಿದ್ದೆಲ್ಲವನ್ನೂ ಯಾಜಕನಿಗೆಂದು ತೆಗೆದುಕೊಳ್ಳುತ್ತಿದ್ದನು. ಶೀಲೋವಿಗೆ ಬರುತ್ತಿದ ಇಸ್ರಾಯೇಲ್ಯರೆಲ್ಲರಿಗೂ ಹೀಗೆಯೇ ಮಾಡುತ್ತಿದ್ದರು.
Ọ na-adụnye ya nʼime efere anụ maọbụ ite, maọbụ iko e ji esi anụ. Ihe ọbụla ndụdụ ahụ dụpụtara ka onye nchụaja na-ewere. Otu a ka ha si emeso ndị Izrel niile na-abịa na Shaịlo.
15 ೧೫ ಇದಲ್ಲದೆ ಯಾಜಕನ ಆಳು ಕೊಬ್ಬನ್ನು ಹೋಮಮಾಡುವುದಕ್ಕಿಂತ ಮುಂಚೆಯೇ ಬಂದು ಯಜ್ಞವನ್ನರ್ಪಿಸುವವನಿಗೆ, “ಯಾಜಕನಿಗೋಸ್ಕರ ಸುಡತಕ್ಕ ಮಾಂಸವನ್ನು ಕೊಡು; ನೀನು ಬೇಯಿಸಿದ ಮಾಂಸವನ್ನು ಅವನು ತೆಗೆದುಕೊಳ್ಳುವುದಿಲ್ಲ; ಅವನಿಗೆ ಹಸಿಮಾಂಸವೇ ಬೇಕು” ಅನ್ನುವನು.
Mgbe ụfọdụ, tupu e suree abụba anụ nʼebe ịchụ aja, ndị ozi onye nchụaja na-abịa gwa onye wetara anụ ịchụ aja sị ya, “Nye onye nchụaja anụ ndụ nke ọ ga-ahụ nʼọkụ, nʼihi na ọ chọghị iri anụ e siri esi, kama anụ ndụ ka ọ chọrọ.”
16 ೧೬ ಅರ್ಪಿಸುವವನು, ಮೊದಲು ಕೊಬ್ಬನ್ನು ಹೋಮಮಾಡಲಿ, ಅನಂತರ ನಿನಗೆ ಬೇಕಾದದ್ದನ್ನು ತೆಗೆದುಕೋ ಎಂದು ಹೇಳಿದರೆ ಅವನು, “ಈಗಲೇ ಕೊಡಬೇಕು; ಇಲ್ಲವಾದರೆ ಬಲಾತ್ಕಾರದಿಂದ ತೆಗೆದುಕೊಳ್ಳುವೆನು” ಎನ್ನುವನು.
Ọ bụrụ na onye ji anụ ahụ bịa ịchụ aja agwa onyeozi ahụ okwu sị, “Chere ka anyị buru ụzọ suo abụba ndị a ọkụ tupu i were ihe ị chọrọ,” onyeozi ahụ na-aza sị, “Nye m anụ ahụ ugbu a, ọ bụrụ na i nyeghị m ya aga m eji ike were ya.”
17 ೧೭ ಹೀಗೆ ಆ ಯೌವನಸ್ಥರು ಯೆಹೋವನ ನೈವೇದ್ಯವನ್ನು ತುಚ್ಛೀಕರಿಸಿದ್ದರಿಂದ ಅವರ ಪಾಪವು ಯೆಹೋವನ ದೃಷ್ಟಿಯಲ್ಲಿ ಆಧಿಕವಾಯಿತು.
Mmehie ụmụ okorobịa ndị a na-eme dị ukwuu nʼanya Onyenwe anyị, nʼihi na ha na-eleda onyinye a na-ewetara Onyenwe anyị anya.
18 ೧೮ ಆದರೆ ಬಾಲಕನಾದ ಸಮುವೇಲನು ಏಫೋದೆಂಬ ನಾರು ಮಡಿಯಂಗಿಯನ್ನು ತೊಟ್ಟುಕೊಂಡು ಯೆಹೋವನ ಸೇವೆ ಮಾಡುತ್ತಿದ್ದನು.
Nʼoge a, Samuel na-agakwa ozi ya nʼihu Onyenwe anyị. Ọ bụ ezie na ọ bụ naanị nwantakịrị, ọ na-eyi akwa ọcha efọọd dịka ndị nchụaja.
19 ೧೯ ಅವನ ತಾಯಿಯು ಪ್ರತಿವರ್ಷವೂ ತನ್ನ ಗಂಡನ ಜೊತೆಯಲ್ಲಿ ಯಜ್ಞವನ್ನರ್ಪಿಸುವುದಕ್ಕೆ ಬರುವಾಗ ಒಂದು ಚಿಕ್ಕ ಅಂಗಿಯನ್ನು ಹೊಲಿದು ಅವನಿಗೆ ತಂದುಕೊಡುತ್ತಿದ್ದಳು.
Afọ ọbụla, nne ya na-akwara ya uwe mwụda, nke ọ na-ewetara ya mgbe ya na di ya bịara ịchụ aja.
20 ೨೦ ಏಲಿಯು ಎಲ್ಕಾನನಿಗೆ, “ನೀನು ಯೆಹೋವನಿಗೆ ಒಪ್ಪಿಸಿಬಿಟ್ಟ ಮಗನಿಗೆ ಬದಲಾಗಿ ಆತನು ಈ ಸ್ತ್ರೀಯಿಂದ ನಿನಗೆ ಬೇರೆ ಮಕ್ಕಳನ್ನು ಕೊಡಲಿ” ಎಂದು ಹೇಳಿ ಅವನನ್ನೂ ಅವನ ಹೆಂಡತಿಯನ್ನೂ ಆಶೀರ್ವದಿಸುತ್ತಿದ್ದನು. ಅನಂತರ ಅವರು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು.
Tupu ha alaa, Elayị na-agọzi Elkena na Hana sị, “Ka Onyenwe anyị nye gị ụmụ ọzọ, ndị ga-anọchi anya onye a ị rịọrọ maka ya, nke i nyeghachiri Onyenwe anyị.”
21 ೨೧ ಯೆಹೋವನು ಕಟಾಕ್ಷಿಸಿದ್ದರಿಂದ ಹನ್ನಳಿಗೆ ಮೂರು ಮಂದಿ ಗಂಡುಮಕ್ಕಳೂ, ಇಬ್ಬರು ಹೆಣ್ಣುಮಕ್ಕಳಾದರು. ಬಾಲಕನಾಗಿದ್ದ ಸಮುವೇಲನು ಯೆಹೋವನ ಸನ್ನಿಧಿಯಲ್ಲೇ ಬೆಳೆದು ದೊಡ್ಡವನಾದನು.
Onyenwe anyị gosiri Hana amara. Ọ tụrụ ime mụta ụmụ ndị ikom atọ, na ụmụ ndị inyom abụọ. Ma Samuel tokwara nʼije ozi ya nʼihu Onyenwe anyị.
22 ೨೨ ಬಹುವೃದ್ಧನಾದ ಏಲಿಯು ತನ್ನ ಮಕ್ಕಳು ಎಲ್ಲಾ ಇಸ್ರಾಯೇಲರಲ್ಲಿ ನಡೆಸುತ್ತಿರುವುದನ್ನೂ, ಅವರು ದೇವದರ್ಶನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರೊಡನೆ ಸಂಗಮಿಸುತ್ತಿರುವುದನ್ನೂ ಕೇಳಿ
Nʼoge a, Elayị abụrụla nnọọ agadi. Ọ nọkwa na-anụ ihe ọjọọ niile ụmụ ya ndị ikom na-eme ndị Izrel niile, ya na otu ha si edinakwuru ụmụ nwanyị na-eje ozi nʼọnụ ụzọ ebe ịchụ aja ụlọ nzute.
23 ೨೩ ಅವರಿಗೆ, “ಎಲ್ಲಾ ಜನರಿಂದಲೂ ನಿಮ್ಮ ದುಷ್ಕೃತ್ಯಗಳನ್ನು ಕೇಳುತ್ತೇನೆ. ಹೀಗೇಕೆ ಮಾಡುತ್ತೀರಿ?”
Ya mere, Elayị gwara ụmụ ya sị, “Anụla m site nʼọnụ ndị Onyenwe anyị, banyere ihe ọjọọ niile dị iche iche unu na-eme. Gịnị mere unu ji na-eme ihe ọjọọ dị otu a?
24 ೨೪ ನನ್ನ ಮಕ್ಕಳೇ, ಹೀಗೆ ಮಾಡಬಾರದು, ನೀವು ಯೆಹೋವನ ಜನರನ್ನು ದುರ್ಮಾರ್ಗಕ್ಕೆ ಎಳೆಯುವವರಾಗಿದ್ದೀರೆಂದು ಕೇಳಿದ್ದೇನೆ; ಇದು ಒಳ್ಳೆಯದಲ್ಲ.
Ọ bụghị akụkọ ọma ka m na-anụ site nʼọnụ ndị Onyenwe anyị banyere unu.
25 ೨೫ “ಮನುಷ್ಯನು ಮನುಷ್ಯರಿಗೆ ಅಪರಾಧಮಾಡಿದರೆ ದೇವರು ಮಧ್ಯಸ್ಥಿಕೆಯನ್ನು ವಹಿಸುವನು; ಆದರೆ ಮನುಷ್ಯನು ಯೆಹೋವನಿಗೆ ಅಪರಾಧಮಾಡಿದರೆ ಮಧ್ಯಸ್ಥಿಕೆ ವಹಿಸುವವರಾರು?” ಎಂದು ಎಚ್ಚರಿಸಿದರೂ ಅವರು ತಮ್ಮ ತಂದೆಯ ಮಾತಿಗೆ ಕಿವಿಗೊಡಲಿಲ್ಲ, ಯಾಕೆಂದರೆ ಯೆಹೋವನು ಅವರನ್ನು ನಾಶಮಾಡಲು ನಿರ್ಧರಿಸಿದ್ದನು.
Ọ bụrụ na mmadụ emehie megide mmadụ, Chineke nwere ike gbooro ya ọgụ. Ma ọ bụrụ na mmadụ emehie megide Onyenwe anyị, onye ga-egboro ya ọgụ?” Ma ụmụ ya ndị ikom egeghị nna ha ntị, nʼihi na Onyenwe anyị na-akwado ịla ha nʼiyi.
26 ೨೬ ಬಾಲಕನಾದ ಸಮುವೇಲನಾದರೋ ಬೆಳೆಯುತ್ತಾ ಬಂದ ಹಾಗೆಲ್ಲಾ ಯೆಹೋವನ ಮತ್ತು ಮನುಷ್ಯರ ದಯೆಗೆ ಪಾತ್ರನಾದನು.
Nwata ahụ bụ Samuel na-eto, na-agba dimkpa, bụrụkwa onye ihe ya dị Onyenwe anyị na mmadụ mma.
27 ೨೭ ದೇವರ ಮನುಷ್ಯನೊಬ್ಬನು ಏಲಿಯ ಬಳಿಗೆ ಬಂದು ಅವನಿಗೆ, “ಯೆಹೋವನು ನಿನಗೆ ಹೇಳುವುದೇನಂದರೆ, ‘ಇಸ್ರಾಯೇಲರು ಐಗುಪ್ತದಲ್ಲಿ ಫರೋಹನ ದಾಸತ್ವದಲ್ಲಿದ್ದಾಗ ನಾನು ನಿನ್ನ ಗೋತ್ರದವರಿಗೆ ಪ್ರತ್ಯಕ್ಷನಾಗಿ
Otu onye nke Chineke bịara gwa Elayị okwu sị ya, “Ihe ndị a ka Onyenwe anyị kwuru: Ọ bụ na m ezipụtaghị ike m nʼụzọ pụtara ihe mgbe nna nna gị ha bụ ohu nʼala Ijipt nʼokpuru Fero?
28 ೨೮ ಇಸ್ರಾಯೇಲರ ಎಲ್ಲಾ ಕುಟುಂಬಗಳಿಂದ ಅವರನ್ನೇ ಯಾಜಕೋದ್ಯೋಗಕ್ಕೆ ಅಂದರೆ ಯಜ್ಞವನ್ನರ್ಪಿಸುವುದಕ್ಕೂ, ಧೂಪಹಾಕುವುದಕ್ಕೂ, ನನ್ನ ಸನ್ನಿಧಿಯಲ್ಲಿ ಏಫೋದನ್ನು ಧರಿಸಿಕೊಳ್ಳುವುದಕ್ಕೂ ಆರಿಸಿಕೊಂಡೆನು; ಅವರಿಗೆ ಇಸ್ರಾಯೇಲರ ಯಜ್ಞಶೇಷದ ಹಕ್ಕನ್ನು ಅನುಗ್ರಹಿಸಿದೆನು.
Ahọpụtara m nna nna unu ochie site nʼetiti ebo niile nke Izrel mee ya ka ọ bụrụ onye nchụaja m, ka ọ chụọ aja nʼebe ịchụ aja m, isure ihe nsure ọkụ na-esi isi ụtọ, na iyi uwe efọọd ndị nchụaja nʼihu m. Enyere m ezinaụlọ nna nna gị onyinye niile Izrel ji chụọ aja nsure ọkụ.
29 ೨೯ ನನ್ನ ಪ್ರಜೆಗಳಾದ ಇಸ್ರಾಯೇಲರು ನನ್ನ ಆಜ್ಞಾನುಸಾರವಾಗಿ ನನ್ನ ಮಂದಿರಕ್ಕೆ ತರುವ ಯಜ್ಞನೈವೇದ್ಯಗಳ ಘನತೆಯನ್ನು ನೀವು ಭಂಗಪಡಿಸಿ, ಅವುಗಳ ಶ್ರೇಷ್ಠ ಭಾಗಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವುದೇಕೆ? ನೀನು ನನ್ನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವುದು ಸರಿಯೋ?’
Gịnị mere unu ji na-elelị aja a na-achụrụ m, na onyinye a na-ewetara m nʼusoro dịka m si nye ya nʼiwu anya? Gịnị mere i ji na-asọpụrụ ụmụ gị karịa m, ime onwe unu ka unu gbaa abụba site nʼidebere onwe unu akụkụ kachasị mma nke onyinye niile ụmụ Izrel, ndị m, na-ewetara m.
30 ೩೦ ಇಸ್ರಾಯೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಿನ್ನ ಗೋತ್ರದವರೂ, ಸಂತಾನದವರೂ ನಿರಂತರವೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬೇಕೆಂದು ವಾಗ್ದಾನಮಾಡಿದ್ದೆನು. ಆದರೆ ಈಗ ನಾನು ತಿಳಿಸುವುದೇನಂದರೆ, ಅದು ನನಗೆ ದೂರವಾಗಿರಲಿ; ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು.
“Nʼihi ya, otu a ka Onyenwe anyị, Chineke Izrel, kwupụtara, sị, ‘Ekwere m nkwa na ndị ezinaụlọ gị na nke nna gị ga-eje ozi nʼihu m ruo mgbe ebighị ebi,’ ma ugbu a, otu a ka Onyenwe anyị kwubiri ya, ‘Ọ gaghị adịkwa otu a nʼebe m nọ! Nʼihi na ndị na-asọpụrụ m ka m ga-asọpụrụ, ma ndị niile na-eleda m anya, ka a ga-akpọ ihe efu.
31 ೩೧ ಇಗೋ, ನಾನು ನಿನ್ನ ಮತ್ತು ನಿನ್ನ ಮನೆಯವರ ಭುಜಬಲವನ್ನು ಮುರಿಯುವ ದಿನಗಳು ಬರುವವು. ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವುದಿಲ್ಲ.
Oge na-abịa mgbe m ga-ebipụ ike gị na ike ezinaụlọ nna gị, wezuga ha ka nwoke ọbụla nʼezinaụlọ gị hapụ ito ghọọ agadi.
32 ೩೨ ನಿನ್ನ ವೈರಿಯು ನನ್ನ ಮಂದಿರದಲ್ಲಿ ಸೇವೆಮಾಡುವುದನ್ನು ನೋಡುವಿ. ಇಸ್ರಾಯೇಲರಿಗೆ ಸರ್ವಶುಭವನ್ನು ದಯಪಾಲಿಸುವೆನು; ಆದರೆ ನಿನ್ನ ಮನೆಯಲ್ಲಿ ಪೂರ್ಣಾಯುಷ್ಯವನ್ನು ಹೊಂದಿ ಜೀವಿಸುವವರು ಇನ್ನು ಮುಂದೆ ಒಬ್ಬರಾದರು ಇರುವುದಿಲ್ಲ.
Ị ga-ahụ mkpagbu nʼebe obibi m; a ga-emere Izrel ihe ọma nke ga-eme ka i nwee anya ụfụ, ma ọ dịghị onye ga-eme agadi nʼezinaụlọ gị.
33 ೩೩ ನಾನು ನಿನ್ನ ಸಂತಾನವನ್ನು ನನ್ನ ಸಾನ್ನಿಧ್ಯ ಸೇವೆಯಿಂದ ತೆಗೆದುಹಾಕದೆ, ಒಬ್ಬನನ್ನಾದರೂ ಉಳಿಸಿದರೆ ಅವನು ನಿನ್ನ ಕಣ್ಣೀರಿಗೂ ಮತ್ತು ಮನೋವ್ಯಥೆಗೂ ಕಾರಣನಾಗುವನು. ನಿನ್ನ ಸಂತಾನದವರೆಲ್ಲರೂ ಕತ್ತಿಯಿಂದ ಸಂಹಾರವಾಗುವರು.
Onye ọbụla nʼime unu nke m na-ebipụghị site nʼebe ịchụ aja m ga-adị ndụ naanị nʼọnọdụ anya mmiri akwa nke ga-ekpuchi ya anya, na iru ụjụ nke obi. Ụmụ ụmụ gị niile ga-anwụ tupu ha eruo agadi.
34 ೩೪ ಇದೆಲ್ಲಾ ನೆರವೇರುವುದೆಂಬುದಕ್ಕೆ ನಿನ್ನ ಮಕ್ಕಳಾದ ಹೊಫ್ನಿ ಹಾಗೂ ಫೀನೆಹಾಸರು ಒಂದೇ ದಿನದಲ್ಲಿ ಸಾಯುವುದೇ ಗುರುತಾಗಿರುವುದು.
“‘Ihe ga-adakwasị ụmụ gị ndị ikom, bụ Hofni na Finehaz, ga-abụrụ gị ihe ama. Ha abụọ ga-anwụ nʼotu ụbọchị.
35 ೩೫ ನನ್ನ ಹೃದಯದ ಹಾಗೂ ಮನಸ್ಸಿನ ಆಲೋಚನೆಗಳನ್ನು ನೆರವೇರಿಸುವ ಒಬ್ಬ ನಂಬಿಗಸ್ತನಾದ ಯಾಜಕನನ್ನು ಎಬ್ಬಿಸುವೆನು; ಅವನಿಗೆ ಶಾಶ್ವತ ಗೃಹವನ್ನು ಅನುಗ್ರಹಿಸುವೆನು. ಅವನು ನನ್ನ ಅಭಿಷಿಕ್ತನ ಬಳಿಯಲ್ಲಿ ಸದಾಕಾಲ ಸೇವೆಮಾಡುವನು.’
Aga m akpọlite nye onwe m, onye nchụaja kwesiri ntụkwasị obi, onye ga-eme ihe dị m nʼuche na nʼobi. Aga m eme ka ezinaụlọ ya guzosie ike. O ga-eje ozi nʼihu Onye m e tere mmanụ oge niile.
36 ೩೬ ನಿನ್ನ ಮನೆಯಲ್ಲಿ ಉಳಿದವರು ಬಂದು ಅವನ ಮುಂದೆ ಅಡ್ಡ ಬಿದ್ದು, ನಮಗೆ ಒಂದು ಬೆಳ್ಳಿಕಾಸನ್ನು ರೊಟ್ಟಿಯ ಚೂರನ್ನು ಕೊಡು; ಒಂದು ತುತ್ತು ಅನ್ನಕ್ಕೆ ಮಾರ್ಗವಾಗುವ ಹಾಗೆ ಯಾಜಕನ ಸೇವೆಯಲ್ಲಿ ಯಾವುದಕ್ಕಾದರೂ ನಮ್ಮನ್ನು ಸೇರಿಸಿಕೋ” ಎಂದು ಅವನನ್ನು ಬೇಡಿಕೊಳ್ಳುವರು, ಎಂದು ಹೇಳಿದನು.
Mgbe ahụ, ndị niile fọdụrụ nʼezinaụlọ gị ga-abịa kpọọ isiala nye ya, rịọọ ya ego na ihe oriri. Ha ga-asị, “Biko, nyetụ m ọrụ m ga-arụ nʼetiti ndị nchụaja, ka m hụ ihe m ga-eri.”’”

< ಸಮುವೇಲನು - ಪ್ರಥಮ ಭಾಗ 2 >