< ಪೇತ್ರನು ಬರೆದ ಮೊದಲನೆಯ ಪತ್ರಿಕೆ 3 >

1 ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು.
ហេ យោឞិតះ, យូយមបិ និជស្វាមិនាំ វឝ្យា ភវត តថា សតិ យទិ កេចិទ៑ វាក្យេ វិឝ្វាសិនោ ន សន្តិ តហ៌ិ
2
តេ វិនាវាក្យំ យោឞិតាម៑ អាចារេណាត៌្ហតស្តេឞាំ ប្រត្យក្ឞេណ យុឞ្មាកំ សភយសតីត្វាចារេណាក្រឞ្ដុំ ឝក្ឞ្យន្តេ។
3 ಜಡೆ ಹೆಣೆದುಕೊಳ್ಳುವುದೂ, ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವುದೂ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಳ್ಳುವುದೂ ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು.
អបរំ កេឝរចនយា ស្វណ៌ាលង្ការធារណោន បរិច្ឆទបរិធានេន វា យុឞ្មាកំ វាហ្យភូឞា ន ភវតុ,
4 ಆದರೆ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದೂ ಮತ್ತು ಶಾಶ್ವತವಾದದ್ದೂ ಆಗಿರುವ ಸಾತ್ವಿಕತೆ ಮತ್ತು ಶಾಂತಮನಸ್ಸು ಎಂಬ ಆಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ.
កិន្ត្វីឝ្វរស្យ សាក្ឞាទ៑ ពហុមូល្យក្ឞមាឝាន្តិភាវាក្ឞយរត្នេន យុក្តោ គុប្ត អាន្តរិកមានវ ឯវ។
5 ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದ ಭಕ್ತೆಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು.
យតះ បូវ៌្វកាលេ យាះ បវិត្រស្ត្រិយ ឦឝ្វរេ ប្រត្យាឝាមកុវ៌្វន៑ តា អបិ តាទ្ឫឝីមេវ ភូឞាំ ធារយន្ត្យោ និជស្វាមិនាំ វឝ្យា អភវន៑។
6 ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಒಳ್ಳೆಯದನ್ನು ಮಾಡುತ್ತಾ ಯಾವ ಭೀತಿಗೂ ಭಯಪಡುವುದಿಲ್ಲವಾದರೆ ನೀವು ಆಕೆಯ ಕುವರಿಯರೇ ಆಗುವಿರಿ.
តថៃវ សារា ឥព្រាហីមោ វឝ្យា សតី តំ បតិមាខ្យាតវតី យូយញ្ច យទិ សទាចារិណ្យោ ភវថ វ្យាកុលតយា ច ភីតា ន ភវថ តហ៌ិ តស្យាះ កន្យា អាធ្វេ។
7 ಅದೇ ರೀತಿಯಾಗಿ ಪತಿಯರೇ, ಸ್ತ್ರೀಯು ನಿಮ್ಮಗಿಂತ ಬಲಹೀನಳೆಂಬುದನ್ನು ತಿಳಿದುಕೊಂಡು, ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ನಡೆದುಕೊಳ್ಳಿರಿ, ಅವರು ನಿತ್ಯಜೀವ ವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಗೌರವವನ್ನು ಸಲ್ಲಿಸಿರಿ. ಹೀಗೆ ಮಾಡಿದರೆ ನಿಮ್ಮ ಪ್ರಾರ್ಥನೆಗಳಿಗೆ ಅಡಚಣೆ ಉಂಟಾಗುವುದಿಲ್ಲ.
ហេ បុរុឞាះ, យូយំ ជ្ញានតោ ទុព៌្ពលតរភាជនៃរិវ យោឞិទ្ភិះ សហវាសំ កុរុត, ឯកស្យ ជីវនវរស្យ សហភាគិនីភ្យតាភ្យះ សមាទរំ វិតរត ច ន ចេទ៑ យុឞ្មាកំ ប្រាត៌្ហនានាំ ពាធា ជនិឞ្យតេ។
8 ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ.
វិឝេឞតោ យូយំ សវ៌្វ ឯកមនសះ បរទុះខៃ រ្ទុះខិតា ភ្រាត្ឫប្រមិណះ ក្ឫបាវន្តះ ប្រីតិភាវាឝ្ច ភវត។
9 ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.
អនិឞ្ដស្យ បរិឝោធេនានិឞ្ដំ និន្ទាយា វា បរិឝោធេន និន្ទាំ ន កុវ៌្វន្ត អាឝិឞំ ទត្ត យតោ យូយម៑ អាឝិរធិការិណោ ភវិតុមាហូតា ឥតិ ជានីថ។
10 ೧೦ ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ, “ಜೀವವನ್ನು ಬಯಸುತ್ತಾ ಸುದಿನಗಳನ್ನು ನೋಡುವುದಕ್ಕೆ ಕಾದಿರುವಾತನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನು ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನು ಬಿಗಿಹಿಡಿದುಕೊಳ್ಳಲಿ.
អបរញ្ច, ជីវនេ ប្រីយមាណោ យះ សុទិនានិ ទិទ្ឫក្ឞតេ។ បាបាត៑ ជិហ្វាំ ម្ឫឞាវាក្យាត៑ ស្វាធរៅ ស និវត៌្តយេត៑។
11 ೧೧ ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೆದನ್ನು ಮಾಡಲಿ. ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.
ស ត្យជេទ៑ ទុឞ្ដតាមាគ៌ំ សត្ក្រិយាញ្ច សមាចរេត៑។ ម្ឫគយាណឝ្ច ឝាន្តិំ ស និត្យមេវានុធាវតុ។
12 ೧೨ ಏಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ ಮತ್ತು ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಆದರೆ ಕೆಡುಕರಿಗೋ ಕರ್ತನು ವಿಮುಖನಾಗಿರುತ್ತಾನೆ.”
លោចនេ បរមេឝស្យោន្មីលិតេ ធាម៌្មិកាន៑ ប្រតិ។ ប្រាត៌្ហនាយាះ ក្ឫតេ តេឞាះ តច្ឆ្រោត្រេ សុគមេ សទា។ ក្រោធាស្យញ្ច បរេឝស្យ កទាចារិឞុ វត៌្តតេ។
13 ೧೩ ನೀವು ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?
អបរំ យទិ យូយម៑ ឧត្តមស្យានុគាមិនោ ភវថ តហ៌ិ កោ យុឞ្មាន៑ ហិំសិឞ្យតេ?
14 ೧೪ ಒಂದು ವೇಳೆ ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ. ಅವರ ಬೆದರಿಕೆಗೆ ಹೆದರಬೇಡಿರಿ, ಕಳವಳಪಡಬೇಡಿರಿ.
យទិ ច ធម៌្មាត៌្ហំ ក្លិឝ្យធ្វំ តហ៌ិ ធន្យា ភវិឞ្យថ។ តេឞាម៑ អាឝង្កយា យូយំ ន ពិភីត ន វិង្ក្ត វា។
15 ೧೫ ಆದರೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೆನೆಂದು ಕೇಳುವವರೆಲ್ಲರಿಗೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ. ಆದರೆ ಅದನ್ನು ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದಲೂ ಹೇಳಿರಿ.
មនោភិះ កិន្តុ មន្យធ្វំ បវិត្រំ ប្រភុមីឝ្វរំ។ អបរញ្ច យុឞ្មាកម៑ អាន្តរិកប្រត្យាឝាយាស្តត្ត្វំ យះ កឝ្ចិត៑ ប្ឫច្ឆតិ តស្មៃ ឝាន្តិភីតិភ្យាម៑ ឧត្តរំ ទាតុំ សទា សុសជ្ជា ភវត។
16 ೧೬ ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೆಯ ನಡತೆಯನ್ನು ಕುರಿತು ಕೆಟ್ಟಮಾತುಗಳನ್ನಾಡುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು.
យេ ច ខ្រីឞ្ដធម៌្មេ យុឞ្មាកំ សទាចារំ ទូឞយន្តិ តេ ទុឞ្កម៌្មការិណាមិវ យុឞ្មាកម៑ អបវាទេន យត៑ លជ្ជិតា ភវេយុស្តទត៌្ហំ យុឞ្មាកម៑ ឧត្តមះ សំវេទោ ភវតុ។
17 ೧೭ ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತಲೂ ಒಳ್ಳೆ ನಡತೆಯುಳ್ಳವರಾಗಿಯೇ ದೇವರ ಚಿತ್ತದ ಪ್ರಕಾರ ಬಾಧೆಪಡುವುದು ಉತ್ತಮ.
ឦឝ្វរស្យាភិមតាទ៑ យទិ យុឞ្មាភិះ ក្លេឝះ សោឍវ្យស្តហ៌ិ សទាចារិភិះ ក្លេឝសហនំ វរំ ន ច កទាចារិភិះ។
18 ೧೮ ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣ ಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವುದಕ್ಕಾಗಿ ಒಂದೇ ಸಾರಿ ಪಾಪನಿವಾರಣೆಗೋಸ್ಕರ ಬಾಧೆಪಟ್ಟು ಸತ್ತನು. ಆತನು ಶರೀರಸಂಬಂಧವಾಗಿ ಕೊಲ್ಲಲ್ಪಟ್ಟು, ಆತ್ಮ ಸಂಬಂಧವಾಗಿ ತಿರುಗಿ ಬದುಕುವವನಾದನು.
យស្មាទ៑ ឦឝ្វរស្យ សន្និធិម៑ អស្មាន៑ អានេតុម៑ អធាម៌្មិកាណាំ វិនិមយេន ធាម៌្មិកះ ខ្រីឞ្ដោ ៜប្យេកក្ឫត្វះ បាបានាំ ទណ្ឌំ ភុក្តវាន៑, ស ច ឝរីរសម្ពន្ធេ មារិតះ កិន្ត្វាត្មនះ សម្ពន្ធេ បុន រ្ជីវិតោ ៜភវត៑។
19 ೧೯ ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು.
តត្សម្ពន្ធេ ច ស យាត្រាំ វិធាយ ការាពទ្ធានាម៑ អាត្មនាំ សមីបេ វាក្យំ ឃោឞិតវាន៑។
20 ೨೦ ಅಂದರೆ ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಅವರು ಆತನಿಗೆ ಅವಿಧೇಯರಾಗಿದ್ದರು. ಆ ನಾವೆಯೊಳಗೆ ಸೇರಿದ ಎಂಟು ಜನರು ಮಾತ್ರ ನೀರಿನೊಳಗಿನಿಂದ ರಕ್ಷಿಸಲ್ಪಟ್ಟರು.
បុរា នោហស្យ សមយេ យាវត៑ បោតោ និរមីយត តាវទ៑ ឦឝ្វរស្យ ទីគ៌្ហសហិឞ្ណុតា យទា វ្យលម្ពត តទា តេៜនាជ្ញាគ្រាហិណោៜភវន៑។ តេន បោតោនាល្បេៜរ្ថាទ៑ អឞ្ដាវេវ ប្រាណិនស្តោយម៑ ឧត្តីណ៌ាះ។
21 ೨೧ ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ದೇಹದ ಮೇಲಿನ ಕೊಳೆಯನ್ನು ಹೊಗಲಾಡಿಸುವಂಥದ್ದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದಾಗಿದೆ.
តន្និទឝ៌នញ្ចាវគាហនំ (អត៌្ហតះ ឝារីរិកមលិនតាយា យស្ត្យាគះ ស នហិ កិន្ត្វីឝ្វរាយោត្តមសំវេទស្យ យា ប្រតជ្ញា សៃវ) យីឝុខ្រីឞ្ដស្យ បុនរុត្ថានេនេទានីម៑ អស្មាន៑ ឧត្តារយតិ,
22 ೨೨ ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ, ದೇವದೂತರು, ಅಧಿಕಾರಿಗಳು ಮತ್ತು ಶಕ್ತಿಗಳೂ ಆತನ ಸ್ವಾಧೀನವಾಗಿವೆ.
យតះ ស ស្វគ៌ំ គត្វេឝ្វរស្យ ទក្ឞិណេ វិទ្យតេ ស្វគ៌ីយទូតាះ ឝាសកា ពលានិ ច តស្យ វឝីភូតា អភវន៑។

< ಪೇತ್ರನು ಬರೆದ ಮೊದಲನೆಯ ಪತ್ರಿಕೆ 3 >