< ಅರಸುಗಳು - ಪ್ರಥಮ ಭಾಗ 20 >

1 ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ರಥಾಶ್ವಬಲಗಳಿಂದ ಕೂಡಿದ ಮೂವತ್ತೆರಡು ಅರಸರೊಂದಿಗೆ ಹೊರಟು ಬಂದು ಸಮಾರ್ಯ ಪಟ್ಟಣಕ್ಕೆ ಮುತ್ತಿಗೆ ಹಾಕಿ ಯುದ್ಧಮಾಡಿದನು.
וּבֶן־הֲדַ֣ד מֶֽלֶךְ־אֲרָ֗ם קָבַץ֙ אֶת־כָּל־חֵילֹ֔ו וּשְׁלֹשִׁ֨ים וּשְׁנַ֥יִם מֶ֛לֶךְ אִתֹּ֖ו וְס֣וּס וָרָ֑כֶב וַיַּ֗עַל וַיָּ֙צַר֙ עַל־שֹׁ֣מְרֹ֔ון וַיִּלָּ֖חֶם בָּֽהּ׃
2 ಅವನು ಆ ಪಟ್ಟಣದಲ್ಲಿದ್ದ ಇಸ್ರಾಯೇಲರ ಅರಸನಾದ ಅಹಾಬನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ,
וַיִּשְׁלַ֧ח מַלְאָכִ֛ים אֶל־אַחְאָ֥ב מֶֽלֶךְ־יִשְׂרָאֵ֖ל הָעִֽירָה׃
3 “ನಿನ್ನ ಬೆಳ್ಳಿಬಂಗಾರ ನನ್ನದು. ನಿನ್ನ ಪ್ರಿಯ ಹೆಂಡತಿ ಮಕ್ಕಳು ನನ್ನವರೇ ಎಂದು ತಿಳಿದುಕೋ” ಎಂಬುದಾಗಿ ತಿಳಿಸಿದನು.
וַיֹּ֣אמֶר לֹ֗ו כֹּ֚ה אָמַ֣ר בֶּן־הֲדַ֔ד כַּסְפְּךָ֥ וּֽזְהָבְךָ֖ לִֽי־ה֑וּא וְנָשֶׁ֧יךָ וּבָנֶ֛יךָ הַטֹּובִ֖ים לִי־הֵֽם׃
4 ಅದಕ್ಕೆ ಇಸ್ರಾಯೇಲರ ಅರಸನು, “ನನ್ನ ಒಡೆಯನಾದ ಅರಸನೇ, ನೀನು ಹೇಳಿದಂತೆ ನಾನು ನಿನ್ನವನೇ, ನನಗಿರುವುದೆಲ್ಲವೂ ನಿನ್ನದೇ” ಎಂದು ಉತ್ತರಕೊಟ್ಟು ಕಳುಹಿಸಿದನು.
וַיַּ֤עַן מֶֽלֶךְ־יִשְׂרָאֵל֙ וַיֹּ֔אמֶר כִּדְבָרְךָ֖ אֲדֹנִ֣י הַמֶּ֑לֶךְ לְךָ֥ אֲנִ֖י וְכָל־אֲשֶׁר־לִֽי׃
5 ಆ ದೂತರು ತಿರುಗಿ ಅಹಾಬನ ಬಳಿಗೆ ಬಂದು, “ನಿನ್ನ ಬೆಳ್ಳಿಬಂಗಾರವನ್ನೂ ನಿನ್ನ ಪ್ರಿಯ ಹೆಂಡತಿ ಮಕ್ಕಳನ್ನು ನನಗೆ ಒಪ್ಪಿಸಬೇಕೆಂದು ನಿನಗೆ ಹೇಳಿಕಳುಹಿಸಿದೆನಲ್ಲಾ.
וַיָּשֻׁ֙בוּ֙ הַמַּלְאָכִ֔ים וַיֹּ֣אמְר֔וּ כֹּֽה־אָמַ֥ר בֶּן־הֲדַ֖ד לֵאמֹ֑ר כִּֽי־שָׁלַ֤חְתִּי אֵלֶ֙יךָ֙ לֵאמֹ֔ר כַּסְפְּךָ֧ וּזְהָבְךָ֛ וְנָשֶׁ֧יךָ וּבָנֶ֖יךָ לִ֥י תִתֵּֽן׃
6 ನಾಳೆ ಇಷ್ಟು ಹೊತ್ತಿಗೆ ನನ್ನ ಆಳುಗಳನ್ನು ಕಳುಹಿಸುವೆನು, ಅವರು ನಿನ್ನ ಮತ್ತು ನಿನ್ನ ಸೇವಕರ ಮನೆಗಳನ್ನು ಶೋಧಿಸಿ ನಿಮಗೆ ಇಷ್ಟವಾಗಿರುವವುಗಳನ್ನೆಲ್ಲಾ ತೆಗೆದುಕೊಳ್ಳುವರು ಎಂಬುದಾಗಿ ಬೆನ್ಹದದನು ಅನ್ನುತ್ತಾನೆ” ಎಂದು ತಿಳಿಸಿದರು.
כִּ֣י ׀ אִם־כָּעֵ֣ת מָחָ֗ר אֶשְׁלַ֤ח אֶת־עֲבָדַי֙ אֵלֶ֔יךָ וְחִפְּשׂוּ֙ אֶת־בֵּ֣יתְךָ֔ וְאֵ֖ת בָּתֵּ֣י עֲבָדֶ֑יךָ וְהָיָה֙ כָּל־מַחְמַ֣ד עֵינֶ֔יךָ יָשִׂ֥ימוּ בְיָדָ֖ם וְלָקָֽחוּ׃
7 ಆಗ ಇಸ್ರಾಯೇಲರ ಅರಸನು ದೇಶದ ಎಲ್ಲಾ ಹಿರಿಯರನ್ನು ಕರೆಯಿಸಿ ಅವರಿಗೆ, “ನೋಡಿದಿರಾ ಅವನು ನಮಗೆ ಕೇಡು ಬಗೆಯುತ್ತಾನೆ, ‘ನಿನ್ನ ಬೆಳ್ಳಿಬಂಗಾರವನ್ನೂ ಹೆಂಡತಿ ಮಕ್ಕಳನ್ನು ನನಗೆ ಕೊಡು’ ಎಂದು ಅವನು ಹೇಳಿ ಕಳುಹಿಸಿದಕ್ಕೆ ನಾನು ಒಪ್ಪಿದರೂ ಅವನಿಗೆ ತೃಪ್ತಿಯಾಗಲಿಲ್ಲ” ಎಂದು ಹೇಳಿದನು.
וַיִּקְרָ֤א מֶֽלֶךְ־יִשְׂרָאֵל֙ לְכָל־זִקְנֵ֣י הָאָ֔רֶץ וַיֹּ֙אמֶר֙ דְּעֽוּ־נָ֣א וּרְא֔וּ כִּ֥י רָעָ֖ה זֶ֣ה מְבַקֵּ֑שׁ כִּֽי־שָׁלַ֨ח אֵלַ֜י לְנָשַׁ֤י וּלְבָנַי֙ וּלְכַסְפִּ֣י וְלִזְהָבִ֔י וְלֹ֥א מָנַ֖עְתִּי מִמֶּֽנּוּ׃
8 ಆಗ ಎಲ್ಲಾ ಹಿರಿಯರೂ ಮತ್ತು ಜನರೂ ಅವನಿಗೆ, “ನೀನು ಈ ಮಾತಿಗೆ ಒಪ್ಪಬೇಡ” ಎಂದರು.
וַיֹּאמְר֥וּ אֵלָ֛יו כָּל־הַזְּקֵנִ֖ים וְכָל־הָעָ֑ם אַל־תִּשְׁמַ֖ע וְלֹ֥וא תֹאבֶֽה׃
9 ಆದುದರಿಂದ ಅವನು ಬಂದಂಥ ದೂತರ ಮುಖಾಂತರವಾಗಿ ಬೆನ್ಹದದನಿಗೆ, “ನನ್ನ ಒಡೆಯನೇ, ಅರಸನೇ, ನಾನು ನಿನ್ನ ಮೊದಲನೆಯ ಮಾತಿಗೆ ಒಪ್ಪಿ ಅದರಂತೆ ಮಾಡಲು ಸಿದ್ಧನಾಗಿರುತ್ತೇನೆ. ಆದರೆ ಎರಡನೆಯ ಮಾತಿಗೆ ಒಪ್ಪಲಾರೆನು” ಎಂದು ಹೇಳಿ ಕಳುಹಿಸಿದನು. ದೂತರು ಬಂದು ಈ ಮಾತನ್ನು ಬೆನ್ಹದದನಿಗೆ ತಿಳಿಸಿದರು.
וַיֹּ֜אמֶר לְמַלְאֲכֵ֣י בֶן־הֲדַ֗ד אִמְר֞וּ לַֽאדֹנִ֤י הַמֶּ֙לֶךְ֙ כֹּל֩ אֲשֶׁר־שָׁלַ֨חְתָּ אֶל־עַבְדְּךָ֤ בָרִֽאשֹׁנָה֙ אֶעֱשֶׂ֔ה וְהַדָּבָ֣ר הַזֶּ֔ה לֹ֥א אוּכַ֖ל לַעֲשֹׂ֑ות וַיֵּֽלְכוּ֙ הַמַּלְאָכִ֔ים וַיְשִׁבֻ֖הוּ דָּבָֽר׃
10 ೧೦ ಆಗ ಅವನು ಅಹಾಬನಿಗೆ, “ಸಮಾರ್ಯ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡುವೆನು, ಲೆಕ್ಕವಿಲ್ಲದ ನನ್ನ ಸೈನಿಕರು ಅದರಿಂದ ಉಂಟಾದ ಒಂದು ಹಿಡಿ ಧೂಳನ್ನು ಬಿಡುವುದಿಲ್ಲ. ಹಾಗೆ ಬಿಟ್ಟರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಹೇಳಿಕಳುಹಿಸಿದನು.
וַיִּשְׁלַ֤ח אֵלָיו֙ בֶּן־הֲדַ֔ד וַיֹּ֕אמֶר כֹּֽה־יַעֲשׂ֥וּן לִ֛י אֱלֹהִ֖ים וְכֹ֣ה יֹוסִ֑פוּ אִם־יִשְׂפֹּק֙ עֲפַ֣ר שֹׁמְרֹ֔ון לִשְׁעָלִ֕ים לְכָל־הָעָ֖ם אֲשֶׁ֥ר בְּרַגְלָֽי׃
11 ೧೧ ಇಸ್ರಾಯೇಲರ ಅರಸನು ಬಂದ ದೂತರಿಗೆ, “ಯುದ್ಧಕ್ಕಾಗಿ ನಡುಕಟ್ಟನ್ನು ಬಿಗಿದುಕೊಳ್ಳುವವನು, ಅದನ್ನು ಬಿಚ್ಚಿಡುವ ಜಯಶಾಲಿಯಂತೆ ಹೆಚ್ಚಳಪಡಬಾರದು ಎಂದು ಅವನಿಗೆ ಹೇಳಿರಿ” ಎಂದನು.
וַיַּ֤עַן מֶֽלֶךְ־יִשְׂרָאֵל֙ וַיֹּ֣אמֶר דַּבְּר֔וּ אַל־יִתְהַלֵּ֥ל חֹגֵ֖ר כִּמְפַתֵּֽחַ׃
12 ೧೨ ತನ್ನ ಅರಸುಗಳ ಸಂಗಡ ಡೇರೆಗಳಲ್ಲಿ ಮದ್ಯಪಾನ ಮಾಡುತ್ತಿದ್ದ ಬೆನ್ಹದದನು ಈ ಉತ್ತರವನ್ನು ಕೇಳುತ್ತಲೇ ಪಟ್ಟಣಕ್ಕೆ ಮುತ್ತಿಗೆ ಹಾಕುವಂತೆ ಸೈನಿಕರಿಗೆ ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಿದರು.
וַיְהִ֗י כִּשְׁמֹ֙עַ֙ אֶת־הַדָּבָ֣ר הַזֶּ֔ה וְה֥וּא שֹׁתֶ֛ה ה֥וּא וְהַמְּלָכִ֖ים בַּסֻּכֹּ֑ות וַיֹּ֤אמֶר אֶל־עֲבָדָיו֙ שִׂ֔ימוּ וַיָּשִׂ֖ימוּ עַל־הָעִֽיר׃
13 ೧೩ ಆಗ ಒಬ್ಬ ಪ್ರವಾದಿಯು ಇಸ್ರಾಯೇಲರ ಅರಸನಾದ ಅಹಾಬನ ಬಳಿಗೆ ಬಂದು ಅವನಿಗೆ, “ಈ ಮಹಾ ಸಮೂಹವನ್ನು ನೋಡಿದೆಯಾ, ನಾನು ಯೆಹೋವನೇ ಎಂಬುದು ನಿನಗೆ ಗೊತ್ತಾಗುವಂತೆ ಈ ದಿನವೇ ಇವರನ್ನೆಲ್ಲಾ ನಿನ್ನ ಕೈಗೆ ಒಪ್ಪಿಸುವೆನು ಎಂದು ಯೆಹೋವನು ಅನ್ನುತ್ತಾನೆ” ಎಂಬುದಾಗಿ ಹೇಳಿದನು.
וְהִנֵּ֣ה ׀ נָבִ֣יא אֶחָ֗ד נִגַּשׁ֮ אֶל־אַחְאָ֣ב מֶֽלֶךְ־יִשְׂרָאֵל֒ וַיֹּ֗אמֶר כֹּ֚ה אָמַ֣ר יְהוָ֔ה הְֽרָאִ֔יתָ אֵ֛ת כָּל־הֶהָמֹ֥ון הַגָּדֹ֖ול הַזֶּ֑ה הִנְנִ֨י נֹתְנֹ֤ו בְיָֽדְךָ֙ הַיֹּ֔ום וְיָדַעְתָּ֖ כִּֽי־אֲנִ֥י יְהוָֽה׃
14 ೧೪ ಅಹಾಬನು ಅವನನ್ನು, “ಇದು ಯಾರ ಮುಖಾಂತರವಾಗಿ ಆಗುವುದು?” ಎಂದು ಕೇಳಿದ್ದಕ್ಕೆ ಅವನು, “ಪ್ರದೇಶಾಧಿಪತಿಗಳ ಸೇವಕರಾಗಿ ಕೆಲಸ ಮಾಡುವ ಯುವ ಅಧಿಕಾರಿಗಳ ಮುಖಾಂತರವಾಗಿ ಆಗುವುದು ಎಂದು ಯೆಹೋವನು ಅನ್ನುತ್ತಾನೆ” ಎಂದು ಉತ್ತರಕೊಟ್ಟನು. ಅಹಾಬನು ಪುನಃ ಅವನನ್ನು, “ಯುದ್ಧ ಪ್ರಾರಂಭಮಾಡತಕ್ಕವರು ಯಾರು?” ಎಂದು ಕೇಳಲು ಅವನು, “ನೀನೇ” ಎಂದು ಹೇಳಿದನು.
וַיֹּ֤אמֶר אַחְאָב֙ בְּמִ֔י וַיֹּ֙אמֶר֙ כֹּֽה־אָמַ֣ר יְהוָ֔ה בְּנַעֲרֵ֖י שָׂרֵ֣י הַמְּדִינֹ֑ות וַיֹּ֛אמֶר מִֽי־יֶאְסֹ֥ר הַמִּלְחָמָ֖ה וַיֹּ֥אמֶר אָֽתָּה׃
15 ೧೫ ಅಹಾಬನು ಪ್ರದೇಶಾಧಿಪತಿಗಳ ಸೇವಕರಾಗಿ ಕೆಲಸ ಮಾಡುವ ಯುವ ಅಧಿಕಾರಿಗಳನ್ನು ಲೆಕ್ಕಿಸಿದಾಗ ಇನ್ನೂರ ಮೂವತ್ತೆರಡು ಜನರಿದ್ದರು. ಇಸ್ರಾಯೇಲರ ಸೈನ್ಯವನ್ನು ಲೆಕ್ಕಿಸಿದಾಗ ಏಳು ಸಾವಿರ ಜನರಿದ್ದರು.
וַיִּפְקֹ֗ד אֶֽת־נַעֲרֵי֙ שָׂרֵ֣י הַמְּדִינֹ֔ות וַיִּהְי֕וּ מָאתַ֖יִם שְׁנַ֣יִם וּשְׁלֹשִׁ֑ים וְאַחֲרֵיהֶ֗ם פָּקַ֧ד אֶת־כָּל־הָעָ֛ם כָּל־בְּנֵ֥י יִשְׂרָאֵ֖ל שִׁבְעַ֥ת אֲלָפִֽים׃
16 ೧೬ ಮಧ್ಯಾಹ್ನದಲ್ಲಿ ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಜನರು ಅರಸರ ಸಂಗಡ ಮದ್ಯಪಾನ ಮಾಡಿ ಮತ್ತರಾಗಿ ಡೇರೆಯಲ್ಲಿ ಕುಳಿತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು.
וַיֵּצְא֖וּ בַּֽצָּהֳרָ֑יִם וּבֶן־הֲדַד֩ שֹׁתֶ֨ה שִׁכֹּ֜ור בַּסֻּכֹּ֗ות ה֧וּא וְהַמְּלָכִ֛ים שְׁלֹשִֽׁים־וּשְׁנַ֥יִם מֶ֖לֶךְ עֹזֵ֥ר אֹתֹֽו׃
17 ೧೭ ಪ್ರದೇಶಾಧಿಪತಿಗಳ ಆಳುಗಳು ಮೊದಲು ಬಂದರು. ಸಮಾರ್ಯದ ಜನರು ಹೊರಗೆ ಬಂದಿರುತ್ತಾರೆಂದು ಬೆನ್ಹದದನ ಕಾವಲುಗಾರರು ಅವನಿಗೆ ತಿಳಿಸಿದರು.
וַיֵּצְא֗וּ נַעֲרֵ֛י שָׂרֵ֥י הַמְּדִינֹ֖ות בָּרִֽאשֹׁנָ֑ה וַיִּשְׁלַ֣ח בֶּן־הֲדַ֗ד וַיַּגִּ֤ידוּ לֹו֙ לֵאמֹ֔ר אֲנָשִׁ֕ים יָצְא֖וּ מִשֹּׁמְרֹֽון׃
18 ೧೮ ಅವನು ಅವರಿಗೆ, “ಅವರು ಯುದ್ಧಕ್ಕಾಗಿ ಬಂದಿದ್ದರೂ ಸಮಾಧಾನಕ್ಕಾಗಿ ಬಂದಿದ್ದರೂ ಅವರನ್ನು ಸಜೀವಿಗಳನ್ನಾಗಿ ಹಿಡಿದು ತನ್ನಿರಿ” ಎಂದು ಆಜ್ಞಾಪಿಸಿದನು.
וַיֹּ֛אמֶר אִם־לְשָׁלֹ֥ום יָצָ֖אוּ תִּפְשׂ֣וּם חַיִּ֑ים וְאִ֧ם לְמִלְחָמָ֛ה יָצָ֖אוּ חַיִּ֥ים תִּפְשֽׂוּם׃
19 ೧೯ ಮೊದಲು ಹೊರಟುಬಂದಿದ್ದ ದೇಶಾಧಿಪತಿಗಳ ಆಳುಗಳ ಹಿಂದೆ ಇಸ್ರಾಯೇಲ್ ಸೈನ್ಯದವರೂ ಬಂದರು.
וְאֵ֙לֶּה֙ יָצְא֣וּ מִן־הָעִ֔יר נַעֲרֵ֖י שָׂרֵ֣י הַמְּדִינֹ֑ות וְהַחַ֖יִל אֲשֶׁ֥ר אַחֲרֵיהֶֽם׃
20 ೨೦ ಅವರಲ್ಲಿ ಪ್ರತಿಯೊಬ್ಬನೂ ತನ್ನ ಎದುರಿಗೆ ಬಂದ ವಿರೋಧಿಯನ್ನು ಕೊಲ್ಲುತ್ತಾ ಮುಂದುವರಿದರು. ಅರಾಮ್ಯರು ಓಡಿಹೋಗಲು ಇಸ್ರಾಯೇಲರು ಅವರನ್ನು ಹಿಂದಟ್ಟಿದರು. ಅವರ ಅರಸನಾದ ಬೆನ್ಹದದನೂ ಹಾಗು ಕೆಲವು ಸವಾರರೂ ಕುದುರೆಗಳನ್ನೇರಿ ಓಡಿಹೋಗಿ ತಪ್ಪಿಸಿಕೊಂಡರು.
וַיַּכּוּ֙ אִ֣ישׁ אִישֹׁ֔ו וַיָּנֻ֣סוּ אֲרָ֔ם וַֽיִּרְדְּפֵ֖ם יִשְׂרָאֵ֑ל וַיִּמָּלֵ֗ט בֶּן־הֲדַד֙ מֶ֣לֶךְ אֲרָ֔ם עַל־ס֖וּס וּפָרָשִֽׁים׃
21 ೨೧ ಇಸ್ರಾಯೇಲರ ಅರಸನು ಹೊರಟು ಬಂದು ಅರಾಮ್ಯರ ರಥಾಶ್ವಬಲಗಳನ್ನು ಸೋಲಿಸಿ ಮಹಾಸಮೂಹವನ್ನು ಸಂಹರಿಸಿದನು.
וַיֵּצֵא֙ מֶ֣לֶךְ יִשְׂרָאֵ֔ל וַיַּ֥ךְ אֶת־הַסּ֖וּס וְאֶת־הָרָ֑כֶב וְהִכָּ֥ה בַאֲרָ֖ם מַכָּ֥ה גְדֹולָֽה׃
22 ೨೨ ಆಗ ಪ್ರವಾದಿಯು ಪುನಃ ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ಅರಾಮ್ಯರ ಅರಸನು ಮುಂದಿನ ವರ್ಷದಲ್ಲಿ ಇನ್ನೊಮ್ಮೆ ನಿನಗೆ ವಿರುದ್ಧವಾಗಿ ಬರುತ್ತಾನೆ. ಆದುದರಿಂದ ನೀನು ಹೋಗಿ ನಿನ್ನನ್ನು ಬಲಪಡಿಸಿಕೋ, ಜಾಗರೂಕನಾಗಿದ್ದು ನೀನು ಮಾಡತಕ್ಕದ್ದೇನೆಂಬುದನ್ನು ಆಲೋಚಿಸು” ಎಂದನು.
וַיִּגַּ֤שׁ הַנָּבִיא֙ אֶל־מֶ֣לֶךְ יִשְׂרָאֵ֔ל וַיֹּ֤אמֶר לֹו֙ לֵ֣ךְ הִתְחַזַּ֔ק וְדַ֥ע וּרְאֵ֖ה אֵ֣ת אֲשֶֽׁר־תַּעֲשֶׂ֑ה כִּ֚י לִתְשׁוּבַ֣ת הַשָּׁנָ֔ה מֶ֥לֶךְ אֲרָ֖ם עֹלֶ֥ה עָלֶֽיךָ׃ ס
23 ೨೩ ಅರಾಮ್ಯರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ, “ಇಸ್ರಾಯೇಲ್ ದೇವರು ಬೆಟ್ಟಗಳ ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು. ನಾವು ಅವರೊಡನೆ ಬಯಲಿನಲ್ಲಿ ಯುದ್ಧಮಾಡುವುದಾದರೆ ಹೇಗೂ ಜಯಹೊಂದುವೆವು.
וְעַבְדֵ֨י מֶֽלֶךְ־אֲרָ֜ם אָמְר֣וּ אֵלָ֗יו אֱלֹהֵ֤י הָרִים֙ אֱלֹ֣הֵיהֶ֔ם עַל־כֵּ֖ן חָזְק֣וּ מִמֶּ֑נּוּ וְאוּלָ֗ם נִלָּחֵ֤ם אִתָּם֙ בַּמִּישֹׁ֔ור אִם־לֹ֥א נֶחֱזַ֖ק מֵהֶֽם׃
24 ೨೪ ನೀನು ಆಯಾ ಸ್ಥಳಗಳಲ್ಲಿರುವ ಅರಸರನ್ನು ತೆಗೆದುಹಾಕಿ ಅವರಿಗೆ ಬದಲಾಗಿ ಪ್ರದೇಶಾಧಿಪತಿಗಳನ್ನು ನೇಮಿಸು.
וְאֶת־הַדָּבָ֥ר הַזֶּ֖ה עֲשֵׂ֑ה הָסֵ֤ר הַמְּלָכִים֙ אִ֣ישׁ מִמְּקֹמֹ֔ו וְשִׂ֥ים פַּחֹ֖ות תַּחְתֵּיהֶֽם׃
25 ೨೫ ಅನಂತರ ನಮ್ಮ ಸೈನ್ಯದಿಂದ ನಷ್ಟವಾಗಿ ಹೋದಷ್ಟು ಜನರನ್ನು, ಕುದುರೆಗಳನ್ನೂ, ರಥಗಳನ್ನೂ ತಿರುಗಿ ಕೂಡಿಸಿ ಅವರೊಡನೆ ಬಯಲಿನಲ್ಲಿ ಯುದ್ಧಮಾಡೋಣ. ನಮಗೆ ಹೇಗೂ ಜಯಸಿಕ್ಕುವುದು ನಿಶ್ಚಯ” ಎಂದು ಹೇಳಿದನು. ಅವನು ಅದರಂತೆಯೇ ಮಾಡಿದನು.
וְאַתָּ֣ה תִֽמְנֶה־לְךָ֣ ׀ חַ֡יִל כַּחַיִל֩ הַנֹּפֵ֨ל מֵאֹותָ֜ךְ וְס֣וּס כַּסּ֣וּס ׀ וְרֶ֣כֶב כָּרֶ֗כֶב וְנִֽלָּחֲמָ֤ה אֹותָם֙ בַּמִּישֹׁ֔ור אִם־לֹ֥א נֶחֱזַ֖ק מֵהֶ֑ם וַיִּשְׁמַ֥ע לְקֹלָ֖ם וַיַּ֥עַשׂ כֵּֽן׃ פ
26 ೨೬ ಒಂದು ವರ್ಷ ದಾಟಿದ ನಂತರ ಬೆನ್ಹದದನು ಅರಾಮ್ಯರನ್ನು ಕೂಡಿಸಿಕೊಂಡು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೆ ಅಫೇಕಕ್ಕೆ ಹೋದನು.
וַֽיְהִי֙ לִתְשׁוּבַ֣ת הַשָּׁנָ֔ה וַיִּפְקֹ֥ד בֶּן־הֲדַ֖ד אֶת־אֲרָ֑ם וַיַּ֣עַל אֲפֵ֔קָה לַמִּלְחָמָ֖ה עִם־יִשְׂרָאֵֽל׃
27 ೨೭ ಇಸ್ರಾಯೇಲರು ಸಹ ಆಹಾರ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಅವರಿಗೆ ವಿರುದ್ಧವಾಗಿ ಬಂದರು. ಅರಾಮ್ಯರು ದೇಶದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರು. ಆಡುಮರಿಗಳ ಎರಡು ಹಿಂಡುಗಳಂತಿರುವ ಇಸ್ರಾಯೇಲರು ಅವರ ಎದುರಿನಲ್ಲಿ ಪಾಳೆಯ ಮಾಡಿಕೊಂಡರು.
וּבְנֵ֣י יִשְׂרָאֵ֗ל הָתְפָּקְדוּ֙ וְכָלְכְּל֔וּ וַיֵּלְכ֖וּ לִקְרָאתָ֑ם וַיַּחֲנ֨וּ בְנֵֽי־יִשְׂרָאֵ֜ל נֶגְדָּ֗ם כִּשְׁנֵי֙ חֲשִׂפֵ֣י עִזִּ֔ים וַאֲרָ֖ם מִלְא֥וּ אֶת־הָאָֽרֶץ׃
28 ೨೮ ಆಗ ದೇವರ ಮನುಷ್ಯನು ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ಯೆಹೋವನು ಹೀಗೆನ್ನುತ್ತಾನೆ, ಯೆಹೋವನು ತಗ್ಗುಗಳ ದೇವರಲ್ಲ. ಬೆಟ್ಟಗಳ ದೇವರಾಗಿರುತ್ತಾನೆ ಅಂದುಕೊಂಡು ಬಂದಿರುವ ಈ ಅರಾಮ್ಯರ ಮಹಾ ಸಮೂಹವನ್ನು ನಿನ್ನ ಕೈಗೆ ಒಪ್ಪಿಸುವೆನು. ಇದರಿಂದ ನಾನು ಯೆಹೋವನೇ ಎಂದು ನಿನಗೆ ಗೊತ್ತಾಗುವುದು” ಎಂದು ಹೇಳಿದನು.
וַיִּגַּ֞שׁ אִ֣ישׁ הָאֱלֹהִ֗ים וַיֹּאמֶר֮ אֶל־מֶ֣לֶךְ יִשְׂרָאֵל֒ וַיֹּ֜אמֶר כֹּֽה־אָמַ֣ר יְהוָ֗ה יַ֠עַן אֲשֶׁ֨ר אָמְר֤וּ אֲרָם֙ אֱלֹהֵ֤י הָרִים֙ יְהוָ֔ה וְלֹֽא־אֱלֹהֵ֥י עֲמָקִ֖ים ה֑וּא וְ֠נָתַתִּי אֶת־כָּל־הֶהָמֹ֨ון הַגָּ֤דֹול הַזֶּה֙ בְּיָדֶ֔ךָ וִֽידַעְתֶּ֖ם כִּֽי־אֲנִ֥י יְהוָֽה׃
29 ೨೯ ಈ ಎರಡು ಸೈನ್ಯಗಳು ಏಳು ದಿನಗಳ ವರೆಗೆ ಎದುರುಬದುರಾಗಿ ಪಾಳೆಯ ಮಾಡಿಕೊಂಡಿದ್ದವು. ಏಳನೆಯ ದಿನದಲ್ಲಿ ಯುದ್ಧ ಪ್ರಾರಂಭವಾಗಲು ಇಸ್ರಾಯೇಲರು ಆ ಒಂದೇ ದಿನದಲ್ಲಿ ಅರಾಮ್ಯರ ಒಂದು ಲಕ್ಷ ಮಂದಿ ಕಾಲಾಳುಗಳನ್ನು ವಧಿಸಿದರು.
וַֽיַּחֲנ֧וּ אֵ֦לֶּה נֹ֥כַח אֵ֖לֶּה שִׁבְעַ֣ת יָמִ֑ים וַיְהִ֣י ׀ בַּיֹּ֣ום הַשְּׁבִיעִ֗י וַתִּקְרַב֙ הַמִּלְחָמָ֔ה וַיַּכּ֨וּ בְנֵֽי־יִשְׂרָאֵ֧ל אֶת־אֲרָ֛ם מֵאָה־אֶ֥לֶף רַגְלִ֖י בְּיֹ֥ום אֶחָֽד׃
30 ೩೦ ಉಳಿದ ಇಪ್ಪತ್ತೇಳು ಸಾವಿರ ಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು. ಆದರೆ ಆ ಪಟ್ಟಣದ ಗೋಡೆಯು ಅವರ ಮೇಲೆ ಬಿದ್ದುದರಿಂದ ಅವರೂ ಸತ್ತರು. ಬೆನ್ಹದದನು ಆ ಪಟ್ಟಣವನ್ನು ಹೊಕ್ಕು ಒಂದು ಮನೆಯ ಒಳಕೋಣೆಯಲ್ಲಿ ಬಚ್ಚಿಟ್ಟುಕೊಂಡನು.
וַיָּנֻ֨סוּ הַנֹּותָרִ֥ים ׀ אֲפֵקָה֮ אֶל־הָעִיר֒ וַתִּפֹּל֙ הַחֹומָ֔ה עַל־עֶשְׂרִ֨ים וְשִׁבְעָ֥ה אֶ֛לֶף אִ֖ישׁ הַנֹּותָרִ֑ים וּבֶן־הֲדַ֣ד נָ֔ס וַיָּבֹ֥א אֶל־הָעִ֖יר חֶ֥דֶר בְּחָֽדֶר׃ ס
31 ೩೧ ಆಗ ಅವನ ಸೇವಕರು ಅವನಿಗೆ, “ಇಸ್ರಾಯೇಲರ ಅರಸರು ದಯೆಯುಳ್ಳವರೆಂದು ನಾವು ಕೇಳಿದ್ದೇವೆ. ಆದುದರಿಂದ ಸೊಂಟಕ್ಕೆ ಗೋಣಿತಟ್ಟು ಕಟ್ಟಿಕೊಂಡು ತಲೆಯ ಮೇಲೆ ಹಗ್ಗವನ್ನಿಟ್ಟುಕೊಂಡು ಆ ಅರಸನ ಬಳಿ ಹೋಗುವುದಕ್ಕೆ ನಮಗೆ ಅಪ್ಪಣೆಯಾಗಲಿ. ಹೀಗೆ ಮಾಡುವುದಾದರೆ ಅವನು ನಿನ್ನ ಜೀವವನ್ನು ಉಳಿಸಾನು” ಎಂದು ಹೇಳಿದರು.
וַיֹּאמְר֣וּ אֵלָיו֮ עֲבָדָיו֒ הִנֵּֽה־נָ֣א שָׁמַ֔עְנוּ כִּ֗י מַלְכֵי֙ בֵּ֣ית יִשְׂרָאֵ֔ל כִּֽי־מַלְכֵ֥י חֶ֖סֶד הֵ֑ם נָשִׂ֣ימָה נָּא֩ שַׂקִּ֨ים בְּמָתְנֵ֜ינוּ וַחֲבָלִ֣ים בְּרֹאשֵׁ֗נוּ וְנֵצֵא֙ אֶל־מֶ֣לֶךְ יִשְׂרָאֵ֔ל אוּלַ֖י יְחַיֶּ֥ה אֶת־נַפְשֶֽׁךָ׃
32 ೩೨ ಅವರು ಸೊಂಟಕ್ಕೆ ಗೋಣಿತಟ್ಟು ಕಟ್ಟಿಕೊಂಡು ತಲೆಯ ಮೇಲೆ ಹಗ್ಗವನ್ನಿಟ್ಟುಕೊಂಡು ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ನನಗೆ ಜೀವದಾನಮಾಡಬೇಕು ಎಂದು ನಿನ್ನ ಸೇವಕನಾದ ಬೆನ್ಹದದನು ವಿಜ್ಞಾಪಿಸುತ್ತಾನೆ” ಅಂದರು. ಆಗ ಅವನು, “ಬೆನ್ಹದದನು ಇನ್ನೂ ಜೀವದಿಂದಿರುತ್ತಾನೋ? ಅವನು ನನ್ನ ಸಹೋದರನು” ಎಂದು ಉತ್ತರಕೊಟ್ಟನು.
וַיַּחְגְּרוּ֩ שַׂקִּ֨ים בְּמָתְנֵיהֶ֜ם וַחֲבָלִ֣ים בְּרָאשֵׁיהֶ֗ם וַיָּבֹ֙אוּ֙ אֶל־מֶ֣לֶךְ יִשְׂרָאֵ֔ל וַיֹּ֣אמְר֔וּ עַבְדְּךָ֧ בֶן־הֲדַ֛ד אָמַ֖ר תְּחִֽי־נָ֣א נַפְשִׁ֑י וַיֹּ֛אמֶר הַעֹודֶ֥נּוּ חַ֖י אָחִ֥י הֽוּא׃
33 ೩೩ ಅವರು ಈ ಮಾತು ಶುಭವಚನವೆಂದು ನೆನಸಿ ಕೂಡಲೆ ಅವನ ಮಾತನ್ನೇ ಹಿಡಿದು, “ಬೆನ್ಹದದನು ನಿನ್ನ ಸಹೋದರನೇ ಹೌದು” ಅಂದರು. ಅವನು ಅವರಿಗೆ, “ಹೋಗಿ ಬೆನ್ಹದದನನ್ನು ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಲು ಅವನು ಬಂದಾಗ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು.
וְהָאֲנָשִׁים֩ יְנַחֲשׁ֨וּ וַֽיְמַהֲר֜וּ וַיַּחְלְט֣וּ הֲמִמֶּ֗נּוּ וַיֹּֽאמְרוּ֙ אָחִ֣יךָ בֶן־הֲדַ֔ד וַיֹּ֖אמֶר בֹּ֣אוּ קָחֻ֑הוּ וַיֵּצֵ֤א אֵלָיו֙ בֶּן־הֲדַ֔ד וֽ͏ַיַּעֲלֵ֖הוּ עַל־הַמֶּרְכָּבָֽה׃
34 ೩೪ ಬೆನ್ಹದದನು ಅವನಿಗೆ, “ನನ್ನ ತಂದೆಯು ನಿನ್ನ ತಂದೆಯಿಂದ ಕಿತ್ತುಕೊಂಡ ಪಟ್ಟಣಗಳನ್ನು ನಾನು ಹಿಂದಕ್ಕೆ ಕೊಡುತ್ತೇನೆ, ಅವನು ಸಮಾರ್ಯದಲ್ಲಿ ಮಾಡಿದಂತೆ ನೀನು ನಿನಗೋಸ್ಕರ ದಮಸ್ಕದಲ್ಲಿ ಕೆಲವು ಕೇರಿಗಳನ್ನು ನಿನ್ನದಾಗಿಸಿಕೊಳ್ಳಬಹುದು” ಎಂದು ಹೇಳಿದನು. ಆಗ ಅಹಾಬನು, “ನಾನು ಈ ಒಪ್ಪಂದದ ಮೇಲೆ ನಿನ್ನನ್ನು ಬಿಟ್ಟುಬಿಡುತ್ತೇನೆ” ಎಂದು ಹೇಳಿ ಅವನಿಂದ ಪ್ರಮಾಣ ಮಾಡಿಸಿ ಕಳುಹಿಸಿಬಿಟ್ಟನು.
וַיֹּ֣אמֶר אֵלָ֡יו הֶעָרִ֣ים אֲשֶׁר־לָֽקַח־אָבִי֩ מֵאֵ֨ת אָבִ֜יךָ אָשִׁ֗יב וְ֠חוּצֹות תָּשִׂ֨ים לְךָ֤ בְדַמֶּ֙שֶׂק֙ כַּאֲשֶׁר־שָׂ֤ם אָבִי֙ בְּשֹׁ֣מְרֹ֔ון וַאֲנִ֖י בַּבְּרִ֣ית אֲשַׁלְּחֶ֑ךָּ וַיִּכְרָת־לֹ֥ו בְרִ֖ית וַֽיְשַׁלְּחֵֽהוּ׃ ס
35 ೩೫ ಪ್ರವಾದಿಮಂಡಳಿಯಲ್ಲಿ ಒಬ್ಬನು ಯೆಹೋವನ ಆತ್ಮ ಪ್ರೇರಿತನಾಗಿ ತನ್ನ ಜೊತೆಗಾರನಿಗೆ “ನನ್ನನ್ನು ಹೊಡಿ” ಎಂದು ಹೇಳಿದನು. ಅದಕ್ಕೆ ಅವನು ಒಪ್ಪಲಿಲ್ಲ.
וְאִ֨ישׁ אֶחָ֜ד מִבְּנֵ֣י הַנְּבִיאִ֗ים אָמַ֧ר אֶל־רֵעֵ֛הוּ בִּדְבַ֥ר יְהוָ֖ה הַכֵּ֣ינִי נָ֑א וַיְמָאֵ֥ן הָאִ֖ישׁ לְהַכֹּתֹֽו׃
36 ೩೬ ಆಗ ಪ್ರವಾದಿಯು ಅವನಿಗೆ, “ನೀನು ಯೆಹೋವನ ಮಾತನ್ನು ಕೇಳದೆ ಹೋದುದರಿಂದ ನನ್ನನ್ನು ಬಿಟ್ಟು ಹೊರಟ ಕೂಡಲೇ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವುದು” ಎಂದನು. ಅವನು ಅವನನ್ನು ಬಿಟ್ಟು ಹೋದ ಕೂಡಲೆ ಒಂದು ಸಿಂಹವು ಬಂದು ಅವನನ್ನು ಕೊಂದು ಹಾಕಿತು.
וַיֹּ֣אמֶר לֹ֗ו יַ֚עַן אֲשֶׁ֤ר לֹֽא־שָׁמַ֙עְתָּ֙ בְּקֹ֣ול יְהוָ֔ה הִנְּךָ֤ הֹולֵךְ֙ מֵֽאִתִּ֔י וְהִכְּךָ֖ הָאַרְיֵ֑ה וַיֵּ֙לֶךְ֙ מֵֽאֶצְלֹ֔ו וַיִּמְצָאֵ֥הוּ הָאַרְיֵ֖ה וַיַּכֵּֽהוּ׃
37 ೩೭ ಅನಂತರ ಆ ಪ್ರವಾದಿಯು ಇನ್ನೊಬ್ಬನನ್ನು ನೋಡಿ, “ನನ್ನನ್ನು ಹೊಡಿ” ಎಂದು ಅವನನ್ನು ಬೇಡಿಕೊಂಡನು. ಅವನು ಇವನನ್ನು ಗಾಯವಾಗುವಷ್ಟು ಹೊಡೆದನು.
וַיִּמְצָא֙ אִ֣ישׁ אַחֵ֔ר וַיֹּ֖אמֶר הַכֵּ֣ינִי נָ֑א וַיַּכֵּ֥הוּ הָאִ֖ישׁ הַכֵּ֥ה וּפָצֹֽעַ׃
38 ೩೮ ಆಗ ಅವನು ತನ್ನ ಗುರುತು ತಿಳಿಯಬಾರದೆಂದು ಮುಂಡಾಸದಿಂದ ಕಣ್ಣುಗಳನ್ನು ಮುಚ್ಚಿಕೊಂಡು ಅರಸನು ಬರುವ ದಾರಿಯಲ್ಲಿ ನಿಂತನು.
וַיֵּ֙לֶךְ֙ הַנָּבִ֔יא וַיַּעֲמֹ֥ד לַמֶּ֖לֶךְ עַל־הַדָּ֑רֶךְ וַיִּתְחַפֵּ֥שׂ בָּאֲפֵ֖ר עַל־עֵינָֽיו׃
39 ೩೯ ಅವನು ಹಾದು ಹೋಗುವಾಗ ಅವನಿಗೆ, “ನಿನ್ನ ಸೇವಕನಾದ ನಾನು ಯುದ್ಧಕ್ಕೆ ಹೋದಾಗ ರಣರಂಗದಲ್ಲಿ ಒಬ್ಬ ಸೈನಿಕನು ಶತ್ರುವನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದು, ‘ನೀನು ಇವನನ್ನು ಕಾಯಬೇಕು, ಇವನು ತಪ್ಪಿಸಿಕೊಂಡರೆ ಇವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವು ನನ್ನದಾಗಿರುವುದು ಅಥವಾ ನೀನು ನನಗೆ ಒಂದು ತಲಾಂತು ಬೆಳ್ಳಿಯನ್ನು ಕೊಡಬೇಕು’ ಎಂದು ಆಜ್ಞಾಪಿಸಿದನು.
וַיְהִ֤י הַמֶּ֙לֶךְ֙ עֹבֵ֔ר וְה֖וּא צָעַ֣ק אֶל־הַמֶּ֑לֶךְ וַיֹּ֜אמֶר עַבְדְּךָ֣ ׀ יָצָ֣א בְקֶֽרֶב־הַמִּלְחָמָ֗ה וְהִנֵּֽה־אִ֨ישׁ סָ֜ר וַיָּבֵ֧א אֵלַ֣י אִ֗ישׁ וַיֹּ֙אמֶר֙ שְׁמֹר֙ אֶת־הָאִ֣ישׁ הַזֶּ֔ה אִם־הִפָּקֵד֙ יִפָּקֵ֔ד וְהָיְתָ֤ה נַפְשְׁךָ֙ תַּ֣חַת נַפְשֹׁ֔ו אֹ֥ו כִכַּר־כֶּ֖סֶף תִּשְׁקֹֽול׃
40 ೪೦ ನಾನು ಕೆಲಸದಲ್ಲಿದ್ದಾಗ ಅವನು ತಪ್ಪಿಸಿಕೊಂಡು ಹೋದನು” ಎಂದು ಮೊರೆಯಿಟ್ಟನು. ಇಸ್ರಾಯೇಲರ ಅರಸನು ಇವನಿಗೆ “ನಿನಗೆ ಆ ತೀರ್ಪು ಸರಿಯಾಗಿದೆ, ತೀರ್ಮಾನಿಸಿದವನು ನೀನೇ ಅಲ್ಲವೋ?” ಎಂದು ನುಡಿದನು.
וַיְהִ֣י עַבְדְּךָ֗ עֹשֵׂ֥ה הֵ֛נָּה וָהֵ֖נָּה וְה֣וּא אֵינֶ֑נּוּ וַיֹּ֨אמֶר אֵלָ֧יו מֶֽלֶךְ־יִשְׂרָאֵ֛ל כֵּ֥ן מִשְׁפָּטֶ֖ךָ אַתָּ֥ה חָרָֽצְתָּ׃
41 ೪೧ ಕೂಡಲೆ ಆ ಪ್ರವಾದಿಯು ಕಣ್ಣುಗಳ ಮೇಲಿನಿಂದ ಮುಂಡಾಸವನ್ನು ತೆಗೆದುದರಿಂದ ಅವನು ಪ್ರವಾದಿಗಳಲ್ಲೊಬ್ಬನೆಂದು ಇಸ್ರಾಯೇಲರ ಅರಸನಿಗೆ ಗೊತ್ತಾಯಿತು.
וַיְמַהֵ֕ר וַיָּ֙סַר֙ אֶת־הָ֣אֲפֵ֔ר מֵעַל (מֵעֲלֵ֖י) עֵינָ֑יו וַיַּכֵּ֤ר אֹתֹו֙ מֶ֣לֶךְ יִשְׂרָאֵ֔ל כִּ֥י מֵֽהַנְּבִאִ֖ים הֽוּא׃
42 ೪೨ ಆಗ ಪ್ರವಾದಿಯು ಅರಸನಿಗೆ, “ಸಂಹರಿಸಬೇಕೆಂದು ನಾನು ನಿನ್ನ ಕೈಗೆ ಒಪ್ಪಿಸಿದ ಮನುಷ್ಯನನ್ನು ನೀನು ಹೋಗಗೊಟ್ಟಿದ್ದರಿಂದ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವು ಹೋಗುವುದು. ನಿನ್ನ ಪ್ರಜೆಗಳು ಅವನ ಪ್ರಜೆಗಳಾಗುವರು ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.
וַיֹּ֣אמֶר אֵלָ֗יו כֹּ֚ה אָמַ֣ר יְהוָ֔ה יַ֛עַן שִׁלַּ֥חְתָּ אֶת־אִישׁ־חֶרְמִ֖י מִיָּ֑ד וְהָיְתָ֤ה נַפְשְׁךָ֙ תַּ֣חַת נַפְשֹׁ֔ו וְעַמְּךָ֖ תַּ֥חַת עַמֹּֽו׃
43 ೪೩ ಆಗ ಇಸ್ರಾಯೇಲರ ಅರಸನು ಸಿಟ್ಟಿನಿಂದ ಗಂಟುಮುಖ ಮಾಡಿಕೊಂಡು ಸಮಾರ್ಯದಲ್ಲಿದ್ದ ತನ್ನ ಮನೆಗೆ ಹೋದನು.
וַיֵּ֧לֶךְ מֶֽלֶךְ־יִשְׂרָאֵ֛ל עַל־בֵּיתֹ֖ו סַ֣ר וְזָעֵ֑ף וַיָּבֹ֖א שֹׁמְרֹֽונָה׃ פ

< ಅರಸುಗಳು - ಪ್ರಥಮ ಭಾಗ 20 >