< ಅರಸುಗಳು - ಪ್ರಥಮ ಭಾಗ 11 >

1 ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು ಮತ್ತು ಹಿತ್ತಿಯರು ಎಂಬ ಜನಾಂಗಗಳ ಸ್ತ್ರೀಯರನ್ನು ಮೋಹಿಸಿದನು.
Farao babaa no akyi no, ɔhene Salomo dɔɔ ananafoɔ mmaa bebree a na wɔyɛ Moabfoɔ, Amonfoɔ, Edomfoɔ, Sidonfoɔ ne Hetifoɔ.
2 ಯೆಹೋವನು ಈ ಜನಾಂಗಗಳ ವಿಷಯದಲ್ಲಿ ಇಸ್ರಾಯೇಲರಿಗೆ, “ನಿಮಗೂ ಅವರಿಗೂ ಕೊಡುವುದು ತೆಗೆದುಕೊಳ್ಳುವುದು ನಡೆಯಬಾರದು, ಅದು ನಡೆಯುವುದಾದರೆ ಅವರು ನಿಮ್ಮ ಮನಸ್ಸನ್ನು ತಮ್ಮ ದೇವತೆಗಳ ಕಡೆಗೆ ತಿರುಗಿಸಾರು” ಎಂದು ಆಜ್ಞಾಪಿಸಿದ್ದರೂ ಸೊಲೊಮೋನನು ಅವರ ಸ್ತ್ರೀಯರಲ್ಲಿ ಅನುರಕ್ತನಾಗಿದ್ದನು.
Na Awurade aka no pefee akyerɛ ne nkurɔfoɔ sɛ, wɔne saa aman no nni awadeɛ, ɛfiri sɛ, mmaa a wɔbɛware wɔn no bɛtwetwe wɔn ama wɔakɔsom wɔn anyame. Nanso, Salomo waree wɔn ara.
3 ಅವನಿಗೆ ರಾಜವಂಶದವರಾದ ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಜನರು ಉಪಪತ್ನಿಯರಿದ್ದರು. ಈ ಸ್ತ್ರೀಯರು ಅವನ ಮನಸ್ಸನ್ನು ಕೆಡಿಸಿಬಿಟ್ಟರು.
Na ɔwɔ yerenom ahanson ne mpenafoɔ ahasa. Na ampa ara wɔtwee ne ɔkra firii Awurade ho.
4 ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಪ್ರಾಮಾಣಿಕವಾದ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ.
Ɛberɛ a Salomo bɔɔ akɔkoraa no, wɔtwee nʼakoma kɔɔ anyame afoforɔ so, na wamfa ne ho anto Awurade, ne Onyankopɔn so, sɛdeɛ nʼagya Dawid yɛeɛ no.
5 ಅವನು ಚೀದೋನ್ಯರ ಅಷ್ಟೋರೆತ್ ದೇವತೆಯನ್ನೂ, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನು ಆರಾಧಿಸತೊಡಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
Salomo dii Sidonfoɔ nyamebaa Astoret ne Amonfoɔ nyame Molek a na wɔkyiri no no akyi.
6 ಅವನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಸೇವಿಸಿದಂತೆ ಅವನು ಸೇವಿಸಲಿಲ್ಲ.
Enti, Salomo yɛɛ bɔne wɔ Awurade ani so. Wanni Awurade akyi, sɛdeɛ nʼagya Dawid yɛeɛ no.
7 ಅವನು ಯೆರೂಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಮತ್ತು ಅಮ್ಮೋನಿಯರ ಮೋಲೆಕ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾಸ್ಥಳಗಳನ್ನು ಕಟ್ಟಿಸಿದನು.
Salomo sii abosonnan maa Moabfoɔ nyame Kemos, a na ɔyɛ akyiwadeɛ, wɔ Ngo Bepɔ a ɛwɔ Yerusalem apueeɛ fam, na ɔsii bi nso maa Amonfoɔ nyame Molek, a na ɔyɛ akyiwadeɛ.
8 ಈ ರೀತಿಯಾಗಿ ಅನ್ಯಜನಾಂಗಗಳಿಂದ ಬಂದ ತನ್ನ ಹೆಂಡತಿಯರು ತಮ್ಮ ದೇವತೆಗಳಿಗೆ ಧೂಪಹಾಕುವುದಕ್ಕೂ ಮತ್ತು ಯಜ್ಞವರ್ಪಿಸುವುದಕ್ಕೂ ಅನುಕೂಲ ಮಾಡಿಕೊಟ್ಟನು.
Salomo sisii abosonnan yi maa nʼananayerenom nyinaa, sɛ wɔnhye nnuhwam, na wɔmmɔ afɔdeɛ mma wɔn anyame wɔ hɔ.
9 ಇಸ್ರಾಯೇಲ್ ದೇವರಾದ ಯೆಹೋವನು ಸೊಲೊಮೋನನಿಗೆ ಎರಡು ಸಾರಿ ಕಾಣಿಸಿಕೊಂಡು,
Na Awurade bo fuu Salomo, ɛfiri sɛ, nʼakoma adane afiri Awurade, Israel Onyankopɔn, a wada ne ho adi akyerɛ no mprenu no ho.
10 ೧೦ ಅನ್ಯದೇವತೆಗಳನ್ನು ಸೇವಿಸಲೇ ಬಾರದೆಂದು ಆಜ್ಞಾಪಿಸಿದ್ದರೂ ಅವನು ಆತನ ಆಜ್ಞೆಗಳನ್ನು ಮೀರಿದ್ದರಿಂದ ಆತನು ಅವನ ಮೇಲೆ ಕೋಪಗೊಂಡನು.
Ɔbɔɔ Salomo kɔkɔ sɛ ɔnni anyame foforɔ akyi, nanso Salomo anni Awurade ahyɛdeɛ so.
11 ೧೧ ಯೆಹೋವನು ಅವನಿಗೆ, “ನೀನು ಈ ರೀತಿಯಾಗಿ ಮಾಡಿ ನನ್ನ ವಿಧಿನಿಬಂಧನೆಗಳನ್ನು ಮೀರಿದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕನಿಗೆ ಕೊಡುವೆನು.
Enti, Awurade ka kyerɛɛ Salomo sɛ, “Esiane sɛ woanni mʼapam so, na woapo me mmara enti, ampa ara, mɛte ahemman no afiri wo ho, na mede ama wʼasomfoɔ no mu baako.
12 ೧೨ ಆದರೂ ನಾನು ನಿನ್ನ ತಂದೆಯಾದ ದಾವೀದನನ್ನು ನೆನಸಿ ನಿನ್ನ ಕಾಲದಲ್ಲಿ ಇದನ್ನು ಮಾಡುವುದಿಲ್ಲ. ನಿನ್ನ ಮಗನ ಕೈಯಿಂದ ಅದನ್ನು ಕಿತ್ತುಕೊಳ್ಳುವೆನು.
Nanso, ɛsiane wʼagya Dawid enti, merenyɛ saa ɛberɛ a wote ase. Mɛgye ahemman no afiri wo babarima nsam.
13 ೧೩ ಆದರೆ ರಾಜ್ಯವನ್ನೆಲ್ಲಾ ಕಿತ್ತುಕೊಳ್ಳುವುದಿಲ್ಲ. ನನ್ನ ಸೇವಕನಾದ ದಾವೀದನಿಗೋಸ್ಕರವೂ ನಾನು ಆರಿಸಿಕೊಂಡ ಯೆರೂಸಲೇಮ್ ಪಟ್ಟಣಕ್ಕೋಸ್ಕರವೂ ನಿನ್ನ ಮಗನಿಗೆ ಒಂದು ಕುಲವನ್ನು ಉಳಿಸುವೆನು” ಎಂದು ಹೇಳಿದನು.
Ɛno mpo, mɛma wadi abusuakuo baako so, ɛsiane me ɔsomfoɔ Dawid ne kuropɔn Yerusalem a mayi asi hɔ no enti.”
14 ೧೪ ಯೆಹೋವನು ಎದೋಮ್ಯನೂ, ರಾಜಪುತ್ರನೂ ಆದ ಹದದನನ್ನು ಸೊಲೊಮೋನನಿಗೆ ವಿರುದ್ಧವಾಗಿ ಎಬ್ಬಿಸಿದನು.
Na Awurade pagyaa Edomni Hadad a na ɔfiri Edom adehyebusua mu, sɛ ɔnyɛ ɔtamfoɔ ntia Salomo.
15 ೧೫ ದಾವೀದನಿಗೂ ಎದೋಮಿನವರಿಗೂ ಯುದ್ಧ ನಡೆಯುತ್ತಿರುವಾಗ ಸೇನಾಪತಿಯಾದ ಯೋವಾಬನು ಇಸ್ರಾಯೇಲ್ ಸರ್ವಸೈನ್ಯದೊಡನೆ ಅಲ್ಲಿಗೆ ಹೋಗಿ, ಹತರಾದ ಇಸ್ರಾಯೇಲರನ್ನು ಸಮಾಧಿಮಾಡಿದನು.
Mfeɛ bi a atwam no, Dawid ne Yoab a na ɔyɛ nʼakodɔm sahene no kɔɔ Edom kɔsiee Israelfoɔ bi a wɔtotɔɔ akono no. Ɛberɛ a wɔwɔ hɔ no, anka Israel akodɔm no reyɛ akunkum mmarima a wɔwɔ Edom nyinaa.
16 ೧೬ ಯೋವಾಬನು ಮತ್ತು ಎಲ್ಲಾ ಇಸ್ರಾಯೇಲರು ಆರು ತಿಂಗಳು ಅಲ್ಲಿಯೇ ಇದ್ದು, ಎದೋಮ್ಯರ ಎಲ್ಲಾ ಗಂಡಸರನ್ನು ಸಂಹರಿಸಿದರು.
Yoab ne akodɔm no tenaa hɔ abosome nsia kunkumm wɔn.
17 ೧೭ ಆ ಸಮಯದಲ್ಲಿ ಬಾಲಕನಾದ ಹದದನು ತನ್ನ ತಂದೆಯ ಸೇವಕರಾದ ಕೆಲವು ಜನರು ಎದೋಮ್ಯರ ಜೊತೆಯಲ್ಲಿ ಐಗುಪ್ತಕ್ಕೆ ಓಡಿಹೋಗಬೇಕೆಂದು ಹೊರಟನು.
Nanso, Hadad ne nʼagya adehyeɛ ntuanofoɔ no mu kakra dwaneeɛ. (Saa ɛberɛ no na Hadad yɛ abɔfra ketewa bi.)
18 ೧೮ ಅವರು ಮೊದಲು ಮಿದ್ಯಾನಿಗೂ, ಆ ಮೇಲೆ ಪಾರಾನಿಗೂ ಬಂದರು. ಅಲ್ಲಿಂದ ಕೆಲವು ಜನರು ಪಾರಾನಿನ ಜನರನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಐಗುಪ್ತದ ಅರಸನಾದ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಆಹಾರವನ್ನು, ಮನೆಯನ್ನೂ ಮತ್ತು ಭೂಮಿಯನ್ನೂ ಕೊಟ್ಟನು.
Wɔdwane firii Midian kɔɔ Paran. Paran hɔ na ebinom kɔkaa wɔn ho. Afei, wɔkɔɔ Misraim, Farao nkyɛn, na ɔmaa wɔn baabi a wɔbɛtena, aduane ne asase.
19 ೧೯ ಹದದನು ಫರೋಹನ ವಿಶೇಷ ದಯೆಗೆ ಪಾತ್ರನಾದುದರಿಂದ ಫರೋಹನನು ತನ್ನ ಹೆಂಡತಿಯೂ ರಾಣಿಯೂ ಆದ ತಖ್ಪೆನೇಸ್ ಎಂಬಾಕೆಯ ತಂಗಿಯನ್ನು ಅವನಿಗೆ ಮದುವೆಮಾಡಿಕೊಟ್ಟನು.
Farao pɛɛ Hadad asɛm yie, na ɔmaa no ɔyere a na ɔyɛ ɔhemmaa Tapanhes nuabaa.
20 ೨೦ ಆಕೆಯಲ್ಲಿ ಅವನಿಗೆ ಗೆನುಬತ್ ಎಂಬ ಮಗನು ಹುಟ್ಟಿದನು. ತಖ್ಪೆನೆಸಳು ಈ ಹುಡುಗನನ್ನು ಫರೋಹನ ಮನೆಯಲ್ಲೇ ಸಾಕಿದಳು. ಅಲ್ಲಿ ಅವನು ಫರೋಹನ ಕುಮಾರರ ಜೊತೆಯಲ್ಲಿದ್ದನು.
Ɔne no woo ɔbabarima a wɔtoo no edin Genubat, na wɔtetee no fraa Farao mmammarima mu wɔ Farao ahemfie.
21 ೨೧ ದಾವೀದನು ಪೂರ್ವಿಕರ ಬಳಿಗೆ ಸೇರಿದನೆಂದೂ ಸೇನಾಧಿಪತಿಯಾದ ಯೋವಾಬನು ಮೃತನಾದನೆಂದೂ ಐಗುಪ್ತದಲ್ಲಿದ್ದ ಹದದನು ಕೇಳಿ ಫರೋಹನನಿಗೆ, “ನಾನು ಸ್ವದೇಶಕ್ಕೆ ಹೋಗಬೇಕೆಂದಿರುತ್ತೇನೆ, ನನಗೆ ಅಪ್ಪಣೆ ಕೊಡು” ಅಂದನು.
Ɛberɛ a Hadad tee wɔ Misraim sɛ Dawid ne ne sahene Yoab awuwu no, ɔka kyerɛɛ Farao sɛ, “Ma mensane nkɔ mʼankasa me ɔman mu.”
22 ೨೨ ಫರೋಹನು ಅವನನ್ನು, “ನನ್ನ ಬಳಿಯಲ್ಲಿ ನೀನಗೇನು ಕೊರತೆಯಾಯಿತು. ಸ್ವದೇಶಕ್ಕೆ ಹೋಗಬೇಕೆಂದು ಯಾಕೆ ಬಯಸುತ್ತೀ?” ಎಂದು ಕೇಳಿದನು. ಅದಕ್ಕೆ ಹದದನು, “ಏನೂ ಕೊರತೆಯಾಗಿರುವುದಿಲ್ಲ. ಆದರೂ ನನಗೆ ಹೋಗುವುದಕ್ಕೆ ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು.
Farao bisaa no sɛ, “Adɛn? Ɛdeɛn na ɛho hia wo wɔ ha? Ɛdeɛn ho na yɛadi wo hwammɔ a enti wopɛ sɛ wokɔ wo kurom?” Ɔbuaa sɛ, “Biribiara nkɔɔ bɔne, nanso kɔ ara na mepɛ sɛ mekɔ efie.”
23 ೨೩ ದೇವರು ಸೊಲೊಮೋನನಿಗೆ ವಿರೋಧವಾಗಿ ಎಬ್ಬಿಸಿದ ಎರಡನೆಯ ವೈರಿಯು ಎಲ್ಯಾದಾವನ ಮಗನಾದ ರೆಜೋನ್ ಎಂಬುವನು.
Onyankopɔn pagyaa Eliada babarima Reson nso ma ɔbɛyɛɛ ɔtamfoɔ tiaa Salomo. Reson dwane firii ne wura ɔhene Hadadeser a ɔfiri Soba nkyɛn
24 ೨೪ ದಾವೀದನು ಚೋಬದವರನ್ನು ಸಂಹರಿಸಿದಾಗ ಅವನು ಚೋಬದ ಅರಸನೂ ಒಡೆಯನೂ ಆದ ಹದದೆಜೆರನನ್ನು ಬಿಟ್ಟು ಓಡಿಹೋಗಿ ಕೆಲವು ಜನರನ್ನು ಕೂಡಿಸಿಕೊಂಡು ತಾನು ಅವರ ನಾಯಕನಾಗಿ ಅವರೊಡನೆ ದಮಸ್ಕಕ್ಕೆ ಬಂದು ಅಲ್ಲಿ ಅರಸನಾದನು.
bɛyɛɛ adɔnyɛfoɔ panin. Dawid dii Hadadeser so nkonim no, Reson ne ne mmarima dwane kɔɔ Damasko, kɔdii ɔhene wɔ hɔ.
25 ೨೫ ಸೊಲೊಮೋನನ ಜೀವಮಾನದಲ್ಲೆಲ್ಲಾ ಇಸ್ರಾಯೇಲರಿಗೆ ಮಹಾಬಾಧಕನಾದ ಹದದನಲ್ಲದೆ ಅವನೂ ವೈರಿಯಾಗಿದ್ದನು. ಅವನು ಅರಾಮ್ ದೇಶದಲ್ಲಿ ಆಳುವವನಾಗಿ ಇಸ್ರಾಯೇಲರನ್ನು ಬಹಳವಾಗಿ ದ್ವೇಷಿಸಿದನು.
Reson bɛyɛɛ Israel ɔtamfoɔ kɛseɛ wɔ Salomo ahennie nkaeɛ no nyinaa mu; na ɔyɛɛ ɔteeteefoɔ sɛdeɛ Hadad yɛeɛ no. Reson kɔɔ so tanee Israel dendeenden, na ɔtoaa so dii ɔhene wɔ Aram.
26 ೨೬ ಅರಸನಾದ ಸೊಲೊಮೋನನಿಗೆ ವಿರುದ್ಧವಾಗಿ ಎದ್ದವರಲ್ಲಿ ಅವನ ಸೇವಕನೂ ಚರೇದ ಊರಿನ ಎಫ್ರಾಯೀಮ್ಯನಾದ ನೆಬಾಟನ ಮಗನಾದ ಯಾರೊಬ್ಬಾಮನೆಂಬವನು ಮತ್ತೊಬ್ಬನು. ಚೆರೂಗಳೆಂಬ ವಿಧವೆಯು ಅವನ ತಾಯಿ.
Otuatefoɔ panin foforɔ bi nso ne Nebat babarima Yeroboam. Na ɔyɛ Salomo ankasa mpanimfoɔ no mu baako. Na ɔfiri kuro Sereda a ɛwɔ Efraim mu. Na wɔfrɛ ne maame Senua a ɔyɛ okunafoɔ.
27 ೨೭ ಅವನು ತಿರುಗಿ ಬಿದ್ದದ್ದು ಹೇಗೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ ತನ್ನ ತಂದೆಯಾದ ದಾವೀದನ ಪಟ್ಟಣದ ದುರ್ಬಲ ಸ್ಥಳಗಳನ್ನು ಭದ್ರಪಡಿಸುತ್ತಿರುವಾಗ,
Nʼatuateɛ no asekyerɛ nie: Na Salomo rekyekyere Milo, na ɔgu so resiesie nʼagya Dawid kuro no afasuo no,
28 ೨೮ ಯೌವನಸ್ಥನಾದ ಯಾರೊಬ್ಬಾಮನು ಬಹು ಸಾಮರ್ಥ್ಯದಿಂದ ಕೆಲಸಮಾಡುತ್ತಿರುವುದನ್ನು ಕಂಡು ಅವನನ್ನು ಯೋಸೇಫ್ಯರ ಎಲ್ಲಾ ಆಳುಗಳ ಮೇಲೆ ಮೇಸ್ತ್ರಿಯನ್ನಾಗಿ ನೇಮಿಸಿದನು.
na Yeroboam yɛ nsiyɛfoɔ. Salomo hunuu no sɛ ɔyɛ ɔdeyɛfoɔ no, ɔde no tuaa adwumayɛfoɔ a wɔfiri Efraim ne Manase mmusuakuo mu no ano.
29 ೨೯ ಒಂದು ದಿನ ಯಾರೊಬ್ಬಾಮನು ಯೆರೂಸಲೇಮಿನಿಂದ ಎಲ್ಲಿಗೋ ಹೋಗುತ್ತಿರುವಾಗ ಅಡವಿಯಲ್ಲಿ ಶಿಲೋವಿನವನಾದ ಅಹೀಯನೆಂಬ ಪ್ರವಾದಿಯು ಅವನಿಗೆ ಎದುರಾದನು. ಅವನು ಹೊಸ ಬಟ್ಟೆಯನ್ನು ಹೊದ್ದುಕೊಂಡಿದ್ದನು. ಅಲ್ಲಿ ಇವರಿಬ್ಬರ ಹೊರತಾಗಿ ಬೇರೆ ಯಾರೂ ಇರಲಿಲ್ಲ.
Ɛda bi a Yeroboam refiri Yerusalem no, ɔhyiaa odiyifoɔ Ahiya, Siloni, wɔ ɛkwan so a ɔhyɛ atadeɛ foforɔ. Na wɔn baanu nko na wɔwɔ wiram hɔ.
30 ೩೦ ಆಗ ಅಹೀಯನು ತಾನು ಹೊದ್ದುಕೊಂಡಿದ್ದ ಹೊಸ ಬಟ್ಟೆಯನ್ನು ತೆಗೆದುಕೊಂಡು ಹರಿದು ಹನ್ನೆರಡು ತುಂಡು ಮಾಡಿದನು.
Ɛhɔ na Ahiya worɔɔ nʼatadeɛ foforɔ a na ɛhyɛ no no, tetee mu asinasini dumienu.
31 ೩೧ ಅವನು ಯಾರೊಬ್ಬಾಮನಿಗೆ, “ನೀನು ಇವುಗಳಲ್ಲಿ ಹತ್ತು ತುಂಡುಗಳನ್ನು ತೆಗೆದುಕೋ. ಇಸ್ರಾಯೇಲ್ ದೇವರಾದ ಯೆಹೋವನು ರಾಜ್ಯವನ್ನು ಸೊಲೊಮೋನನಿಂದ ಕಿತ್ತುಕೊಂಡು,
Na ɔka kyerɛɛ Yeroboam sɛ, “Fa asinasini yi mu edu, na sei na Awurade, Israel Onyankopɔn, reka: ‘Merebɛgye ahemman no afiri Salomo nsam, na mede mmusuakuo no mu edu bɛma wo.
32 ೩೨ ತನ್ನ ಸೇವಕನಾದ ದಾವೀದನ ನಿಮಿತ್ತವಾಗಿಯೂ, ತಾನು ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದ ನಿಮಿತ್ತವಾಗಿಯೂ ಅವನಿಗೆ ಒಂದೇ ಕುಲವನ್ನು ಉಳಿಸಿ, ಬೇರೆ ಹತ್ತು ಕುಲಗಳನ್ನು ನಿನಗೆ ಕೊಡುತ್ತೇನೆ” ಎಂದು ಹೇಳುತ್ತಾನೆ.
Na ɛsiane me ɔsomfoɔ Dawid ne Yerusalem a mayi afiri Israel mmusuakuo no nyinaa mu no enti, mɛgya no abusua baako.
33 ೩೩ ಇದಲ್ಲದೆ ಆತನು ನಿನಗೆ, “ಸೊಲೊಮೋನನೂ ಅವರ ಮನೆಯವರೂ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ‘ಕೆಮೋಷ್’ ಮತ್ತು ಅಮ್ಮೋನಿಯರ ‘ಮಿಲ್ಕೋಮ್’ ಇವುಗಳನ್ನು ಆರಾಧಿಸಿದ್ದೂ ಮತ್ತು ಅವರ ತಂದೆಯಾದ ದಾವೀದನು ನನ್ನ ನೇಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆ ಹೋದದ್ದೇ ಇದಕ್ಕೆ ಕಾರಣ.
Ɛfiri sɛ, Salomo agya me hɔ, akɔsom Astoret a ɔyɛ Sidonfoɔ nyamebaa ne Kemos a ɔyɛ Moabfoɔ nyame ne Amonfoɔ nyame Molek. Wamfa mʼakwan so anyɛ deɛ ɛsɔ mʼani. Wanni me mmara ne mʼahyɛdeɛ so te sɛ nʼagya Dawid.
34 ೩೪ ಆದರೂ ನಾನು ಸೊಲೊಮೋನನ ಕೈಯಿಂದ ರಾಜ್ಯವನ್ನೆಲ್ಲಾ ಕಿತ್ತುಕೊಳ್ಳುವುದಿಲ್ಲ. ನನ್ನ ಆಜ್ಞಾವಿಧಿಗಳನ್ನು ಕೈಕೊಂಡವನೂ, ನಾನು ಆರಿಸಿಕೊಂಡ ಸೇವಕನೂ ಆದ ದಾವೀದನ ನಿಮಿತ್ತವಾಗಿ ಅವನನ್ನು ಅವನ ಜೀವಮಾನದಲ್ಲೆಲ್ಲಾ ಅರಸನನ್ನಾಗಿಯೇ ಇರಿಸುವೆನು.
“‘Nanso, merennye ahemman no nyinaa mfiri Salomo nsam saa ɛberɛ yi. Esiane me ɔsomfoɔ Dawid, deɛ meyii no no, na ɔtiee mʼahyɛdeɛ, dii me mmara so no enti, mɛma Salomo adi adeɛ mfeɛ a aka no wɔ ne nkwa mu.
35 ೩೫ ಆದರೆ ಅದನ್ನು ಅವನ ಮಗನ ಕೈಯಿಂದ ಕಿತ್ತುಕೊಂಡು ನಿನಗೆ ಹತ್ತು ಕುಲಗಳನ್ನು ಕೊಡುವೆನು.
Na mɛgye ahemman no afiri ne babarima nsam, na mede mmusuakuo no mu edu ama wo.
36 ೩೬ ನಾನು ನನ್ನ ಹೆಸರಿಗೋಸ್ಕರ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ನನ್ನ ಸೇವಕನಾದ ದಾವೀದನ ದೀಪವು ನನ್ನ ಸನ್ನಿಧಿಯಲ್ಲಿ ಉರಿಯುತ್ತಲೇ ಇರುವಂತೆ ಅವನ ಮಗನಿಗೆ ಒಂದು ಕುಲವನ್ನು ಉಳಿಸುವೆನು.
Ne babarima bɛnya abusuakuo baako, sɛdeɛ ɛbɛyɛ a, me ɔsomfoɔ Dawid asefoɔ bɛkɔ so adi ɔhene wɔ Yerusalem, kuro a mayi sɛ me din nna so no.
37 ೩೭ ನಾನು ನಿನ್ನನ್ನು ಇಸ್ರಾಯೇಲರ ಅರಸನನ್ನಾಗಿ ನೇಮಿಸುವೆನು. ನೀನು ಅವರನ್ನು ನಿನ್ನ ಇಷ್ಟದ ಪ್ರಕಾರ ಆಳಬಹುದು.
Na mede wo bɛsi Israel ahennwa no so, na wobɛdi adeɛ no sɛdeɛ wʼankasa wʼakoma pɛ.
38 ೩೮ ನನ್ನ ಸೇವಕನಾದ ದಾವೀದನು ನನ್ನ ಆಜ್ಞಾವಿಧಿಗಳನ್ನು ಕೈಕೊಂಡಂತೆ ನೀನೂ ನನ್ನ ಆಜ್ಞೆಗಳನ್ನು ಕೈಕೊಂಡು ನನ್ನ ಮಾರ್ಗದಲ್ಲಿ ನಡೆದು ನನ್ನನ್ನು ಮೆಚ್ಚಿಸುವುದಾದರೆ ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸುವೆನು. ಇಸ್ರಾಯೇಲ್ ರಾಜ್ಯವು ನಿನ್ನ ಪಾಲಾಗುವುದು.
Sɛ wotie asɛm a meka kyerɛ wo, na wonante mʼakwan mu, na woyɛ deɛ medwene sɛ ɛyɛ, na wotie me mmara, di mʼahyɛdeɛ so, sɛdeɛ me ɔsomfoɔ Dawid yɛeɛ no a, ɛnneɛ, daa mɛka wo ho. Mɛtim wo fie adedie ase, sɛdeɛ meyɛ maa Dawid no, na mede Israel bɛma wo.
39 ೩೯ ದಾವೀದನ ಸಂತಾನದವರನ್ನು ಅವರ ಪಾಪದ ನಿಮಿತ್ತ ತಲೆತಗ್ಗಿಸುವಂತೆ ಮಾಡಿ ಕುಗ್ಗಿಸುವೆನು. ಆದರೆ ಸದಾಕಾಲಕ್ಕೂ ಅದು ಮುಂದುವರಿಯುವುದಿಲ್ಲ” ಎಂದು ಹೇಳಿದನು.
Nanso, ɛsiane Salomo bɔne a wayɛ enti, mɛtwe Dawid asefoɔ aso, nanso ɛrenyɛ afebɔɔ.’”
40 ೪೦ ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು ಐಗುಪ್ತದ ಅರಸನಾದ ಶೀಶಕನ ಬಳಿಗೆ ಹೋಗಿ ಸೊಲೊಮೋನನು ಜೀವದಿಂದಿರುವ ವರೆಗೆ ಅಲ್ಲಿಯೇ ಇದ್ದನು.
Salomo pɛɛ sɛ ɔkum Yeroboam, nanso ɔdwane kɔɔ Misraim, Misraimhene Sisak nkyɛn, kɔsii sɛ Salomo wuiɛ.
41 ೪೧ ಸೊಲೊಮೋನನ ಉಳಿದ ಎಲ್ಲಾ ಕೃತ್ಯಗಳನ್ನೂ, ಅವನ ಜ್ಞಾನವನ್ನೂ ಕುರಿತು ಸೊಲೊಮೋನನ ಚರಿತ್ರೆ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
Na Salomo ahennie ho nsɛm nkaeɛ, deɛ ɔyɛeɛ ne ne nyansa no deɛ, wɔatwerɛ wɔ Salomo Ho Nsɛm Nwoma no mu.
42 ೪೨ ಅವನು ಯೆರೂಸಲೇಮಿನಲ್ಲಿದ್ದುಕೊಂಡು ಎಲ್ಲಾ ಇಸ್ರಾಯೇಲರನ್ನು ನಲ್ವತ್ತು ವರ್ಷ ಆಳಿದ ನಂತರ,
Salomo dii ɔhene wɔ Yerusalem ne Israel nyinaa so mfirinhyia aduanan.
43 ೪೩ ಪೂರ್ವಿಕರ ಬಳಿಗೆ ಸೇರಿದನು. ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು.
Ɛberɛ a Salomo wuiɛ no, wɔsiee no wɔ nʼagya Dawid kurom. Na ne babarima Rehoboam na ɔdii nʼadeɛ sɛ ɔhene foforɔ.

< ಅರಸುಗಳು - ಪ್ರಥಮ ಭಾಗ 11 >