< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 7 >

1 ನೀವು ಬರೆದು ಕಳುಹಿಸಿದ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ, ಸ್ತ್ರೀಯರ ಶರೀರ ಸಂಪರ್ಕವಿಲ್ಲದೆ ಇರುವುದು ಪುರುಷನಿಗೆ ಒಳ್ಳೆಯದು;
អបរញ្ច យុឞ្មាភិ រ្មាំ ប្រតិ យត៑ បត្រមលេខិ តស្យោត្តរមេតត៑, យោឞិតោៜស្បឝ៌នំ មនុជស្យ វរំ;
2 ಆದರೆ ಜಾರತ್ವದ ಶೋಧನೆಗೆ ಅವಕಾಶ ಕೊಡದಿರಲು ಪ್ರತಿಯೊಬ್ಬನಿಗೂ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ.
កិន្តុ វ្យភិចារភយាទ៑ ឯកៃកស្យ បុំសះ ស្វកីយភាយ៌្យា ភវតុ តទ្វទ៑ ឯកៃកស្យា យោឞិតោ ៜបិ ស្វកីយភត៌្តា ភវតុ។
3 ಗಂಡನು ಹೆಂಡತಿಗೆ, ಹಾಗೆಯೇ ಹೆಂಡತಿಯು ಗಂಡನಿಗೆ ಒಗೆತನವನ್ನು ಸಲ್ಲಿಸಲಿ
ភាយ៌្យាយៃ ភត៌្រា យទ្យទ៑ វិតរណីយំ តទ៑ វិតីយ៌្យតាំ តទ្វទ៑ ភត៌្រេៜបិ ភាយ៌្យយា វិតរណីយំ វិតីយ៌្យតាំ។
4 ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಹೆಂಡತಿಗುಂಟು.
ភាយ៌្យាយាះ ស្វទេហេ ស្វត្វំ នាស្តិ ភត៌្តុរេវ, តទ្វទ៑ ភត៌្តុរបិ ស្វទេហេ ស្វត្វំ នាស្តិ ភាយ៌្យាយា ឯវ។
5 ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ.
ឧបោឞណប្រាត៌្ហនយោះ សេវនាត៌្ហម៑ ឯកមន្ត្រណានាំ យុឞ្មាកំ កិយត្កាលំ យាវទ៑ យា ប្ឫថក្ស្ថិតិ រ្ភវតិ តទន្យោ វិច្ឆេទោ យុឞ្មន្មធ្យេ ន ភវតុ, តតះ បរម៑ ឥន្ទ្រិយាណាម៑ អធៃយ៌្យាត៑ ឝយតាន៑ យទ៑ យុឞ្មាន៑ បរីក្ឞាំ ន នយេត៑ តទត៌្ហំ បុនរេកត្រ មិលត។
6 ನಾನು ಹೀಗೆ ಮಾಡಬಹುದೆಂದು ಹೇಳುತ್ತಿರುವುದು ಆಜ್ಞೆಯಲ್ಲ, ನನ್ನ ಅಭಿಪ್ರಾಯವಷ್ಟೇ.
ឯតទ៑ អាទេឝតោ នហិ កិន្ត្វនុជ្ញាត ឯវ មយា កថ្យតេ,
7 ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ ಆದರೆ ಒಬ್ಬನು ಒಂದು ವಿಧವಾಗಿ ಮತ್ತೊಬ್ಬನು ಇನ್ನೊಂದು ವಿಧವಾಗಿ ದೇವರಿಂದ ವರವನ್ನು ಹೊಂದಿಕೊಂಡಿದ್ದಾರೆ.
យតោ មមាវស្ថេវ សវ៌្វមានវានាមវស្ថា ភវត្វិតិ មម វាញ្ឆា កិន្ត្វីឝ្វរាទ៑ ឯកេនៃកោ វរោៜន្យេន ចាន្យោ វរ ឥត្ថមេកៃកេន ស្វកីយវរោ លព្ធះ។
8 ಅವಿವಾಹಿತರನ್ನೂ ಮತ್ತು ವಿಧವೆಯರನ್ನೂ ಕುರಿತು ನಾನು ಹೇಳುವುದೇನಂದರೆ, ನಾನಿರುವಂತೆಯೆ ಇರುವುದು ಅವರಿಗೆ ಒಳ್ಳೆಯದು.
អបរម៑ អក្ឫតវិវាហាន៑ វិធវាឝ្ច ប្រតិ មមៃតន្និវេទនំ មមេវ តេឞាមវស្ថិតិ រ្ភទ្រា;
9 ಅವರು ಸಂಯಮಯಿಲ್ಲದವರಾದರೆ ಮದುವೆಮಾಡಿಕೊಳ್ಳಲಿ. ಯಾಕೆಂದರೆ ಕಾಮತಾಪಪಡುವುದಕ್ಕಿಂತ ಮದುವೆಮಾಡಿಕೊಳ್ಳುವುದು ಉತ್ತಮ.
កិញ្ច យទិ តៃរិន្ទ្រិយាណិ និយន្តុំ ន ឝក្យន្តេ តហ៌ិ វិវាហះ ក្រិយតាំ យតះ កាមទហនាទ៑ វ្យូឍត្វំ ភទ្រំ។
10 ೧೦ ವಿವಾಹಿತರಿಗೆ ನನ್ನ ಅಪ್ಪಣೆ ಅಲ್ಲ ಕರ್ತನ ಆಜ್ಞೆಯು ಏನೆಂದರೆ, ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು.
យេ ច ក្ឫតវិវាហាស្តេ មយា នហិ ប្រភុនៃវៃតទ៑ អាជ្ញាប្យន្តេ។
11 ೧೧ ಒಂದು ವೇಳೆ ಅಗಲಿದರೂ ಮದುವೆಯಾಗದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಂಧಾನವಾಗಿರಬೇಕು ಮತ್ತು ಗಂಡನು ಹೆಂಡತಿಗೆ ವಿಚ್ಛೇದನ ನೀಡಬಾರದು.
ភាយ៌្យា ភត៌្ត្ឫតះ ប្ឫថក៑ ន ភវតុ។ យទិ វា ប្ឫថគ្ភូតា ស្យាត៑ តហ៌ិ និវ៌ិវាហា តិឞ្ឋតុ ស្វីយបតិនា វា សន្ទធាតុ ភត៌្តាបិ ភាយ៌្យាំ ន ត្យជតុ។
12 ೧೨ ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತಲ್ಲ ಆದರೆ ನಾನು ಹೇಳುವುದೇನಂದರೆ, ಒಬ್ಬ ಸಹೋದರನಿಗೆ ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು.
ឥតរាន៑ ជនាន៑ ប្រតិ ប្រភុ រ្ន ព្រវីតិ កិន្ត្វហំ ព្រវីមិ; កស្យចិទ៑ ភ្រាតុយ៌ោឞិទ៑ អវិឝ្វាសិនី សត្យបិ យទិ តេន សហវាសេ តុឞ្យតិ តហ៌ិ សា តេន ន ត្យជ្យតាំ។
13 ೧೩ ಹಾಗೆಯೇ ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು.
តទ្វត៑ កស្យាឝ្ចិទ៑ យោឞិតះ បតិរវិឝ្វាសី សន្នបិ យទិ តយា សហវាសេ តុឞ្យតិ តហ៌ិ ស តយា ន ត្យជ្យតាំ។
14 ೧೪ ಯಾಕೆಂದರೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯ ನಿಮಿತ್ತ ಪವಿತ್ರನಾದನು ಮತ್ತು ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನ ನಿಮಿತ್ತ ಪವಿತ್ರಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ಪವಿತ್ರರೇ ಆಗಿದ್ದಾರೆ.
យតោៜវិឝ្វាសី ភត៌្តា ភាយ៌្យយា បវិត្រីភូតះ, តទ្វទវិឝ្វាសិនី ភាយ៌្យា ភត៌្រា បវិត្រីភូតា; នោចេទ៑ យុឞ្មាកមបត្យាន្យឝុចីន្យភវិឞ្យន៑ កិន្ត្វធុនា តានិ បវិត្រាណិ សន្តិ។
15 ೧೫ ಆದರೆ ಕ್ರಿಸ್ತ ನಂಬಿಕೆಯಿಲ್ಲದ ಸಂಗಾತಿಯು ಅಗಲಬೇಕೆಂದಿದ್ದರೆ ಅಗಲಿಹೋಗಲಿ ಇಂಥಾ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಬದ್ಧರಲ್ಲ. ಸಮಾಧಾನದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ.
អវិឝ្វាសី ជនោ យទិ វា ប្ឫថគ៑ ភវតិ តហ៌ិ ប្ឫថគ៑ ភវតុ; ឯតេន ភ្រាតា ភគិនី វា ន និពធ្យតេ តថាបិ វយមីឝ្វរេណ ឝាន្តយេ សមាហូតាះ។
16 ೧೬ ಸ್ತ್ರೀಯೇ, ನೀನು ನಿನ್ನ ಗಂಡನನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು? ಪುರುಷನೇ, ನೀನು ನಿನ್ನ ಹೆಂಡತಿಯನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು?
ហេ នារិ តវ ភត៌្តុះ បរិត្រាណំ ត្វត្តោ ភវិឞ្យតិ ន វេតិ ត្វយា កិំ ជ្ញាយតេ? ហេ នរ តវ ជាយាយាះ បរិត្រាណំ ត្វត្តេ ភវិឞ្យតិ ន វេតិ ត្វយា កិំ ជ្ញាយតេ?
17 ೧೭ ಆದರೆ ಕರ್ತನು ಪ್ರತಿಯೊಬ್ಬನಿಗೆ ನೇಮಿಸಿರುವ ಜವಾಬ್ದಾರಿಗೂ ಹಾಗೂ ದೇವರು ಅವರನ್ನು ಯಾವುದಕ್ಕೆ ಕರೆದನೋ ಅದಕ್ಕೂ ಸರಿಯಾಗಿ ಜೀವಿಸಲಿ. ಹೀಗೆ ಎಲ್ಲಾ ಸಭೆಗಳಲ್ಲಿಯೂ ಅನುಸರಿಸಿಬೇಕೆಂದು ನಾನು ಅಜ್ಞಾಪಿಸುತ್ತೇನೆ.
ឯកៃកោ ជនះ បរមេឝ្វរាល្លព្ធំ យទ៑ ភជតេ យស្យាញ្ចាវស្ថាយាម៑ ឦឝ្វរេណាហ្វាយិ តទនុសារេណៃវាចរតុ តទហំ សវ៌្វសមាជស្ថាន៑ អាទិឝាមិ។
18 ೧೮ ದೇವರು ಕರೆದ ಕಾಲದಲ್ಲಿ ಯಾವನಾದರೂ ಸುನ್ನತಿಯುಳ್ಳವನಾಗಿದ್ದನೋ ಅವನು ಸುನ್ನತಿಯಿಲ್ಲದವನಂತಾಗಬಾರದು. ದೇವರು ಕರೆದಾಗ ಯಾವನಾದರೂ ಸುನ್ನತಿಯಿಲ್ಲದವನಾಗಿದ್ದಾನೋ ಅವನು ಸುನ್ನತಿಮಾಡಿಸಿಕೊಳ್ಳಬಾರದು.
ឆិន្នត្វគ៑ ភ្ឫត្វា យ អាហូតះ ស ប្រក្ឫឞ្ដត្វក៑ ន ភវតុ, តទ្វទ៑ អឆិន្នត្វគ៑ ភូត្វា យ អាហូតះ ស ឆិន្នត្វក៑ ន ភវតុ។
19 ೧೯ ಸುನ್ನತಿ ಇರುವುದೋ ಸುನ್ನತಿ ಇಲ್ಲದಿರುವುದೋ ಪ್ರಾಮುಖ್ಯವಲ್ಲ. ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಮುಖ್ಯವಾಗಿದೆ.
ត្វក្ឆេទះ សារោ នហិ តទ្វទត្វក្ឆេទោៜបិ សារោ នហិ កិន្ត្វីឝ្វរស្យាជ្ញានាំ បាលនមេវ។
20 ೨೦ ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಬೇಕು.
យោ ជនោ យស្យាមវស្ថាយាមាហ្វាយិ ស តស្យាមេវាវតិឞ្ឋតាំ។
21 ೨೧ ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದರ ಕುರಿತು ಚಿಂತಿಸಬೇಡ ಆದರೆ ಬಿಡುಗಡೆ ಹೊಂದುವುದಕ್ಕೆ ಸಾಧ್ಯವಾಗುವುದಾದರೆ ನೀನು ಸ್ವತಂತ್ರನಾಗು.
ទាសះ សន៑ ត្វំ កិមាហូតោៜសិ? តន្មា ចិន្តយ, តថាច យទិ ស្វតន្ត្រោ ភវិតុំ ឝក្នុយាស្តហ៌ិ តទេវ វ្ឫណុ។
22 ೨೨ ಯಾವನಾದರೂ ದಾಸನಾಗಿದ್ದು ಕರ್ತನಿಂದ ಕರೆಯಲ್ಪಟ್ಟಿರುವನೋ ಅವನು ಕರ್ತನ ಮೂಲಕ ಬಿಡುಗಡೆ ಹೊಂದಿರುವ ಸ್ವತಂತ್ರನಾಗಿದ್ದಾನೆ. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದಾಗ ಕರೆಯಲ್ಪಟ್ಟಿರುವನೋ ಅವನು ಕ್ರಿಸ್ತನಿಗೆ ದಾಸನು.
យតះ ប្រភុនាហូតោ យោ ទាសះ ស ប្រភោ រ្មោចិតជនះ។ តទ្វទ៑ តេនាហូតះ ស្វតន្ត្រោ ជនោៜបិ ខ្រីឞ្ដស្យ ទាស ឯវ។
23 ೨೩ ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು. ಮನುಷ್ಯರಿಗೆ ದಾಸರಾಗಬೇಡಿರಿ.
យូយំ មូល្យេន ក្រីតា អតោ ហេតោ រ្មានវានាំ ទាសា មា ភវត។
24 ೨೪ ಸಹೋದರರೇ, ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ನೆಲೆಗೊಂಡಿರಲಿ.
ហេ ភ្រាតរោ យស្យាមវស្ថាយាំ យស្យាហ្វានមភវត៑ តយា ស ឦឝ្វរស្យ សាក្ឞាត៑ តិឞ្ឋតុ។
25 ೨೫ ಅವಿವಾಹಿತರಾದ ಕನ್ಯೆಯರನ್ನು ಕುರಿತಂತೆ ಕರ್ತನಿಂದ ಬಂದ ಆಜ್ಞೆ ನನಗೆ ಯಾವುದೂ ಇಲ್ಲ. ಆದರೆ ನಾನು ನಂಬಿಗಸ್ತನಾಗಿರುವುದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ.
អបរម៑ អក្ឫតវិវាហាន៑ ជនាន៑ ប្រតិ ប្រភោះ កោៜប្យាទេឝោ មយា ន លព្ធះ កិន្តុ ប្រភោរនុកម្បយា វិឝ្វាស្យោ ភូតោៜហំ យទ៑ ភទ្រំ មន្យេ តទ៑ វទាមិ។
26 ೨೬ ಈಗಿನ ಕಷ್ಟ ಕಾಲದ ನಿಮಿತ್ತ ಇದ್ದ ಹಾಗೆಯೇ ಇರುವುದು ಒಳ್ಳೆಯದೆಂದು ನಾನು ಭಾವಿಸುತ್ತೇನೆ.
វត៌្តមានាត៑ ក្លេឝសមយាត៑ មនុឞ្យស្យានូឍត្វំ ភទ្រមិតិ មយា ពុធ្យតេ។
27 ೨೭ ನೀನು ವಿವಾಹಿತನಾಗಿರುವುದಾದರೆ ಬಿಡುಗಡೆಯಾಗುವುದಕ್ಕೆ ಪ್ರಯತ್ನಿಸಬೇಡ. ನೀನು ಅವಿವಾಹಿತನಾಗಿರುವುದಾದರೆ ಹೆಂಡತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬೇಡ.
ត្វំ កិំ យោឞិតិ និពទ្ធោៜសិ តហ៌ិ មោចនំ ប្រាប្តុំ មា យតស្វ។ កិំ វា យោឞិតោ មុក្តោៜសិ? តហ៌ិ ជាយាំ មា គវេឞយ។
28 ೨೮ ಒಂದು ವೇಳೆ ನೀನು ಮದುವೆ ಮಾಡಿಕೊಂಡರೂ ಅದು ಪಾಪವಲ್ಲ. ಕನ್ನಿಕೆಯು ಮದುವೆ ಮಾಡಿಕೊಂಡರೂ ಪಾಪವಲ್ಲ. ಆದರೆ ಮದುವೆಮಾಡಿಕೊಂಡವರಿಗೆ ಅನೇಕ ಕಷ್ಟಗಳು ಸಂಭವಿಸುವವು. ಇದು ನಿಮಗೆ ಉಂಟಾಗಬಾರದೆಂಬುದೇ ನನ್ನ ಅಪೇಕ್ಷೆಯಾಗಿದೆ.
វិវាហំ កុវ៌្វតា ត្វយា កិមបិ នាបារាធ្យតេ តទ្វទ៑ វ្យូហ្យមានយា យុវត្យាបិ កិមបិ នាបរាធ្យតេ តថាច តាទ្ឫឝៅ ទ្វៅ ជនៅ ឝារីរិកំ ក្លេឝំ លប្ស្យេតេ កិន្តុ យុឞ្មាន៑ ប្រតិ មម ករុណា វិទ្យតេ។
29 ೨೯ ಸಹೋದರರೇ, ನಾನು ಹೇಳುವುದೇನಂದರೆ, ಸಮಯವು ಅತಿಕಡಿಮೆಯಿರುವುದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ,
ហេ ភ្រាតរោៜហមិទំ ព្រវីមិ, ឥតះ បរំ សមយោៜតីវ សំក្ឞិប្តះ,
30 ೩೦ ಅಳುವವರು ಅಳದಂತೆಯೂ, ಸಂತೋಷಪಡುವವರು ಸಂತೋಷಪಡದವರಂತೆಯೂ, ಕೊಂಡುಕೊಳ್ಳುವವರು ಏನೂ ಇಲ್ಲದವರಂತೆಯೂ,
អតះ ក្ឫតទារៃរក្ឫតទារៃរិវ រុទទ្ភិឝ្ចារុទទ្ភិរិវ សានន្ទៃឝ្ច និរានន្ទៃរិវ ក្រេត្ឫភិឝ្ចាភាគិភិរិវាចរិតវ្យំ
31 ೩೧ ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು. ಯಾಕೆಂದರೆ ಈ ಪ್ರಪಂಚದ ಆಡಂಬರವು ಗತಿಸಿ ಹೋಗುತ್ತದೆ.
យេ ច សំសារេ ចរន្តិ តៃ រ្នាតិចរិតវ្យំ យត ឥហលេកស្យ កៅតុកោ វិចលតិ។
32 ೩೨ ಆದರೆ ನೀವು ಚಿಂತೆಯಿಲ್ಲದವರಾಗಿರಬೇಕೆಂಬುದೇ ನನ್ನ ಇಷ್ಟ. ಮದುವೆಯಾಗದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.
កិន្តុ យូយំ យន្និឝ្ចិន្តា ភវេតេតិ មម វាញ្ឆា។ អក្ឫតវិវាហោ ជនោ យថា ប្រភុំ បរិតោឞយេត៑ តថា ប្រភុំ ចិន្តយតិ,
33 ೩೩ ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾನೆ ಅವನು ಆಸಕ್ತಿಗಳಲ್ಲಿ ಭಿನ್ನತೆಯುಳ್ಳವನಾಗಿದ್ದಾನೆ.
កិន្តុ ក្ឫតវិវាហោ ជនោ យថា ភាយ៌្យាំ បរិតោឞយេត៑ តថា សំសារំ ចិន្តយតិ។
34 ೩೪ ಅದರಂತೆ ಮುತೈದೆಗೂ, ಕನ್ನಿಕೆಗೂ ವ್ಯತ್ಯಾಸವುಂಟು. ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಹೇಗೆ ಪವಿತ್ರಳಾಗಿರಬೇಕೆಂದು ಕರ್ತನ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ. ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ.
តទ្វទ៑ ឩឍយោឞិតោ ៜនូឍា វិឝិឞ្យតេ។ យានូឍា សា យថា កាយមនសោះ បវិត្រា ភវេត៑ តថា ប្រភុំ ចិន្តយតិ យា ចោឍា សា យថា ភត៌្តារំ បរិតោឞយេត៑ តថា សំសារំ ចិន្តយតិ។
35 ೩೫ ನಾನು ನಿಮಗೆ ನಿರ್ಬಂಧ ಏರಬೇಕೆಂದು ಇದನ್ನು ಹೇಳುತ್ತಿಲ್ಲ. ನೀವು ಚಂಚಲ ಚಿತ್ತರಾಗದೆ ಕರ್ತನಿಗೆ ಮಾನ್ಯತೆಯುಳ್ಳವರಾಗಿ, ನಿಷ್ಠೆಯುಳ್ಳವರಾಗಿ ನಡೆದುಕೊಳ್ಳಬೇಕೆಂದು ನಿಮ್ಮ ಪ್ರಯೋಜನಕ್ಕೋಸ್ಕರವೇ ಹೇಳುತ್ತಿದ್ದೇನೆ.
អហំ យទ៑ យុឞ្មាន៑ ម្ឫគពន្ធិន្យា បរិក្ឞិបេយំ តទត៌្ហំ នហិ កិន្តុ យូយំ យទនិន្ទិតា ភូត្វា ប្រភោះ សេវនេៜពាធម៑ អាសក្តា ភវេត តទត៌្ហមេតានិ សវ៌្វាណិ យុឞ្មាកំ ហិតាយ មយា កថ្យន្តេ។
36 ೩೬ ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಯ ಪ್ರಾಯ ಕಳೆದುಹೋಗುತ್ತದಲ್ಲಾ ಮದುವೆಮಾಡುವುದು ಅವಶ್ಯವೆಂದು ಅವನಿಗೆ ತೋರಿದರೆ ತನ್ನಿಷ್ಟದಂತೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ.
កស្យចិត៑ កន្យាយាំ យៅវនប្រាប្តាយាំ យទិ ស តស្យា អនូឍត្វំ និន្ទនីយំ វិវាហឝ្ច សាធយិតវ្យ ឥតិ មន្យតេ តហ៌ិ យថាភិលាឞំ ករោតុ, ឯតេន កិមបិ នាបរាត្ស្យតិ វិវាហះ ក្រិយតាំ។
37 ೩೭ ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿ ಕೊಂಡರೆ ಅವನು ಹಾಗೆಯೇ ಮಾಡುವುದು ಒಳ್ಳೆಯದು.
កិន្តុ ទុះខេនាក្លិឞ្ដះ កឝ្ចិត៑ បិតា យទិ ស្ថិរមនោគតះ ស្វមនោៜភិលាឞសាធនេ សមត៌្ហឝ្ច ស្យាត៑ មម កន្យា មយា រក្ឞិតវ្យេតិ មនសិ និឝ្ចិនោតិ ច តហ៌ិ ស ភទ្រំ កម៌្ម ករោតិ។
38 ೩೮ ಹಾಗಾದರೆ ತನ್ನ ಮಗಳನ್ನು ಮದುವೆಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ, ಮದುವೆಮಾಡಿಕೊಡದೆ ಇರುವವನು ಇನ್ನೂ ಒಳ್ಳೆಯದನ್ನು ಮಾಡುತ್ತಿದ್ದಾನೆ.
អតោ យោ វិវាហំ ករោតិ ស ភទ្រំ កម៌្ម ករោតិ យឝ្ច វិវាហំ ន ករោតិ ស ភទ្រតរំ កម៌្ម ករោតិ។
39 ೩೯ ಮುತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಮರಣಹೊಂದಿದ್ದರೆ ಆಕೆಯು ಬೇಕಾದವನನ್ನು ಮದುವೆಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಕರ್ತನಲ್ಲಿ ವಿಶ್ವಾಸಿಯಾದವನನ್ನು ಮಾತ್ರ ಆಗಬೇಕು.
យាវត្កាលំ បតិ រ្ជីវតិ តាវទ៑ ភាយ៌្យា វ្យវស្ថយា និពទ្ធា តិឞ្ឋតិ កិន្តុ បត្យៅ មហានិទ្រាំ គតេ សា មុក្តីភូយ យមភិលឞតិ តេន សហ តស្យា វិវាហោ ភវិតុំ ឝក្នោតិ, កិន្ត្វេតត៑ កេវលំ ប្រភុភក្តានាំ មធ្យេ។
40 ೪೦ ಆದರೂ ಮದುವೆಮಾಡಿಕೊಳ್ಳದೆ ಹಾಗೆ ಇರುವುದು ಆಕೆಗೆ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರ ಆತ್ಮವುಂಟೆಂದು ಭಾವಿಸುತ್ತೇನೆ.
តថាច សា យទិ និឞ្បតិកា តិឞ្ឋតិ តហ៌ិ តស្យាះ ក្ឞេមំ ភវិឞ្យតីតិ មម ភាវះ។ អបរម៑ ឦឝ្វរស្យាត្មា មមាប្យន្ត រ្វិទ្យត ឥតិ មយា ពុធ្យតេ។

< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 7 >