< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 3 >

1 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು: ಚೊಚ್ಚಲಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. ಎರಡನೆಯವನು ದಾನಿಯೇಲನು, ಇವನು ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದವನು. 2 ಮೂರನೆಯವನು ಅಬ್ಷಾಲೋಮ್, ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಮಗನು. ನಾಲ್ಕನೆಯವನು ಅದೋನೀಯ. ಇವನು ಹಗ್ಗೀತಳ ಪುತ್ರನು. 3 ಐದನೆಯವನು ಶೆಫಟ್ಯ, ಇವನು ಅಬೀಟಲಳ ಮಗನು. ಆರನೆಯವನು ಇತ್ರಾಮ್. ಇವನು ದಾವೀದನ ಹೆಂಡತಿಯಾದ ಎಗ್ಲಳಿಂದ ಹುಟ್ಟಿದವನು. 4 ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಆರು ಜನರು ಮಕ್ಕಳು ಹುಟ್ಟಿದರು. ಅಲ್ಲಿ ಅವನು ಏಳು ವರ್ಷ ಆರು ತಿಂಗಳು ಆಡಳಿತ ನಡೆಸಿದನು ಮತ್ತು ಯೆರೂಸಲೇಮನ್ನು ಮೂವತ್ತಮೂರು ವರ್ಷ ಆಳಿದನು. 5 ಯೆರೂಸಲೇಮಿನಲ್ಲಿರುವಾಗ ಅವನಿಗೆ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಮಕ್ಕಳು ಅಮ್ಮೀಯೇಲನ ಮಗಳಾದ ಬತ್ಷೂವಳಲ್ಲಿ ಹುಟ್ಟಿದರು. 6 ಇದಲ್ಲದೆ ಇಬ್ಹಾರ್, ಎಲೀಷಾಮ್, ಎಲೀಫೆಲೆಟ್, 7 ನೋಗ, ನೆಫೆಗ್, ಯಾಫೀಯ, 8 ಎಲೀಷಾಮ್, ಎಲ್ಯಾದ್, ಎಲೀಫೆಲೆಟ್ ಎಂಬ ಒಂಬತ್ತು ಮಕ್ಕಳು ಅವನಿಗೆ ಅಲ್ಲಿಯೇ ಹುಟ್ಟಿದರು. 9 ಉಪಪತ್ನಿಯಾರಿಂದಲೂ ಗಂಡು ಮಕ್ಕಳು ಹುಟ್ಟಿದರು. ತಾಮಾರ್ ಎಂಬ ಹೆಣ್ಣುಮಗಳೂ ದಾವೀದನಿಗೆ ಇದ್ದಳು. 10 ೧೦ ಸೊಲೊಮೋನನ ಮಗ ರೆಹಬ್ಬಾಮ; ರೆಹಬ್ಬಾಮನ ಮಗ ಅಬೀಯನು. ಅಬೀಯನ ಮಗ ಆಸ; ಆಸನ ಮಗ ಯೆಹೋಷಾಫಾಟ; 11 ೧೧ ಯೆಹೋಷಾಫಾಟನ ಮಗ ಯೆಹೋರಾಮ್; ಯೆಹೋರಾಮನ ಮಗ ಅಹಜ್ಯನು, ಅಹಜ್ಯನ ಮಗ ಯೋವಾಷನು. 12 ೧೨ ಯೋವಾಷನ ಮಗ ಅಮಚ್ಯ. ಅಮಚ್ಯ ಮಗ ಅಜರ್ಯ; ಅಜರ್ಯನ ಮಗ ಯೋತಾಮ್. 13 ೧೩ ಯೋತಾಮನ ಮಗ ಆಹಾಜ; ಆಹಾಜನ ಮಗ ಹಿಜ್ಕೀಯನು. ಹಿಜ್ಕೀಯನ ಮಗ ಮನಸ್ಸೆಯು. 14 ೧೪ ಮನಸ್ಸೆಯ ಮಗ ಆಮೋನ್; ಆಮೋನನ ಮಗ ಯೋಷೀಯ. 15 ೧೫ ಯೋಷೀಯನ ಮಕ್ಕಳು: ಚೊಚ್ಚಲ ಮಗ ಯೋಹಾನಾನ್, ಎರಡನೆಯವನು ಯೆಹೋಯಾಕೀಮ್, ಮೂರನೆಯವನು ಚಿದ್ಕೀಯ, ನಾಲ್ಕನೆಯವನು ಶಲ್ಲೂಮ್. 16 ೧೬ ಯೆಹೋಯಾಕೀಮನ ಮಗ ಯೆಕೊನ್ಯನು; ಯೆಕೊನ್ಯನ ಮಗ ಚಿದ್ಕೀಯನು. 17 ೧೭ ಬಾಬಿಲೋನಿಯರಿಂದ ಸೆರೆಗೆ ಒಯ್ಯಲ್ಪಟ್ಟ ಯೆಕೊನ್ಯನಿಗೆ ಹುಟ್ಟಿದ ಮಕ್ಕಳು ಶೆಯಲ್ತೀಯೇಲ್, 18 ೧೮ ಮಲ್ಕೀರಾಮ್, ಪೆದಾಯ್, ಶೆನಚ್ಚರ್, ಯೆಕಮ್ಯ, ಹೋಷಾಮ್ ಮತ್ತು ನೆದಬ್ಯ ಎಂಬ ಏಳು ಗಂಡುಮಕ್ಕಳು. 19 ೧೯ ಪೆದಾಯನ ಮಕ್ಕಳು: ಜೆರುಬ್ಬಾಬೆಲ್ ಮತ್ತು ಶಿಮ್ಮೀ. ಜೆರುಬ್ಬಾಬೆಲನ ಮಕ್ಕಳು: ಮೆಷುಲ್ಲಾಮ್ ಮತ್ತು ಹನನ್ಯ. ಶೆಲೋಮೀತ್ ಎಂಬ ಮಗಳೂ ಇದ್ದಳು. 20 ೨೦ ಇವರಲ್ಲದೆ ಪೆದಾಯನಿಗೆ ಹಷುಬ, ಓಹೆಲ್, ಬೆರೆಕ್ಯ, ಹಸದ್ಯ ಮತ್ತು ಯೂಷಬ್ ಹೆಸೆದ್ ಎಂಬ ಐದು ಗಂಡು ಮಕ್ಕಳಿದ್ದರು. 21 ೨೧ ಹನನ್ಯನ ಸಂತಾನದವರು: ಪೆಲಟ್ಯ, ಯೆಶಾಯ ಮತ್ತು ರೆಫಾಯನ ಮಕ್ಕಳಾದ ಅರ್ನಾನ್, ಓಬದ್ಯ ಮತ್ತು ಶೇಕನ್ಯ. 22 ೨೨ ಶೆಕನ್ಯನ ಮಗ ಶೆಮಾಯ. ಶೆಮಾಯನಿಗೆ ಆರು ಗಂಡು ಮಕ್ಕಳು: ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ ಮತ್ತು ಶಾಫಾಟ್. 23 ೨೩ ನೆಯರ್ಯನ ಮೂರು ಗಂಡು ಮಕ್ಕಳು: ಎಲ್ಯೋಗೆನೈ, ಹಿಜ್ಕೀಯ ಮತ್ತು ಅಜ್ರೀಕಾಮ್. 24 ೨೪ ಎಲ್ಯೋಗೆನೈಯನ ಏಳು ಗಂಡು ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ ಮತ್ತು ಅನಾನೀ.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 3 >