< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 3 >

1 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು: ಚೊಚ್ಚಲಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. ಎರಡನೆಯವನು ದಾನಿಯೇಲನು, ಇವನು ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದವನು.
Sasa hawa ndio wana wa Daudi waliozaliwa kwake huko Hebroni: mzaliwa wa kwanza alikuwa Amnoni, kwa Ahinoamu kutoka Yezreeli; wa pili alikuwa Danieli, kwa Abigaili kutoka Karmeli;
2 ಮೂರನೆಯವನು ಅಬ್ಷಾಲೋಮ್, ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಮಗನು. ನಾಲ್ಕನೆಯವನು ಅದೋನೀಯ. ಇವನು ಹಗ್ಗೀತಳ ಪುತ್ರನು.
watatu alikuwa Absalomu, ambaye mama yake alikuwa ni Maaka, binti wa Talmai mfalme wa Geshuri. Wanne alikuwa ni Adoniya mwana wa Hagithi;
3 ಐದನೆಯವನು ಶೆಫಟ್ಯ, ಇವನು ಅಬೀಟಲಳ ಮಗನು. ಆರನೆಯವನು ಇತ್ರಾಮ್. ಇವನು ದಾವೀದನ ಹೆಂಡತಿಯಾದ ಎಗ್ಲಳಿಂದ ಹುಟ್ಟಿದವನು.
watano alikuwa ni Shefatia kwa Abitali, wasita alikuwa ni Ithraeamu kwa Egla mkewe.
4 ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಆರು ಜನರು ಮಕ್ಕಳು ಹುಟ್ಟಿದರು. ಅಲ್ಲಿ ಅವನು ಏಳು ವರ್ಷ ಆರು ತಿಂಗಳು ಆಡಳಿತ ನಡೆಸಿದನು ಮತ್ತು ಯೆರೂಸಲೇಮನ್ನು ಮೂವತ್ತಮೂರು ವರ್ಷ ಆಳಿದನು.
Hawa sita walizaliwa kwa Daudi huko Hebroni, alipo tawala miaka saba na miezi sita. Kisha akatawala miaka thelathini na mitatu huko Yerusalemu.
5 ಯೆರೂಸಲೇಮಿನಲ್ಲಿರುವಾಗ ಅವನಿಗೆ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಮಕ್ಕಳು ಅಮ್ಮೀಯೇಲನ ಮಗಳಾದ ಬತ್ಷೂವಳಲ್ಲಿ ಹುಟ್ಟಿದರು.
Hawa wana wa nne, kwa Bathshua binti wa Amieli, walizaliwa kwake huko Yerusalemu: Shamua, Nathani, na Sulemani.
6 ಇದಲ್ಲದೆ ಇಬ್ಹಾರ್, ಎಲೀಷಾಮ್, ಎಲೀಫೆಲೆಟ್,
Wana tisa wengine wa Daudi walikuwa ni: Ibhari, Elishua, Elipeleti,
7 ನೋಗ, ನೆಫೆಗ್, ಯಾಫೀಯ,
Noga, Nefegi, Yafia,
8 ಎಲೀಷಾಮ್, ಎಲ್ಯಾದ್, ಎಲೀಫೆಲೆಟ್ ಎಂಬ ಒಂಬತ್ತು ಮಕ್ಕಳು ಅವನಿಗೆ ಅಲ್ಲಿಯೇ ಹುಟ್ಟಿದರು.
Elishama, na Elifeleti.
9 ಉಪಪತ್ನಿಯಾರಿಂದಲೂ ಗಂಡು ಮಕ್ಕಳು ಹುಟ್ಟಿದರು. ತಾಮಾರ್ ಎಂಬ ಹೆಣ್ಣುಮಗಳೂ ದಾವೀದನಿಗೆ ಇದ್ದಳು.
Hawa walikuwa wana wa Daudi, pasipo kuwehesababu wana wa masuria wake. Tamari alikuwa dada yao.
10 ೧೦ ಸೊಲೊಮೋನನ ಮಗ ರೆಹಬ್ಬಾಮ; ರೆಹಬ್ಬಾಮನ ಮಗ ಅಬೀಯನು. ಅಬೀಯನ ಮಗ ಆಸ; ಆಸನ ಮಗ ಯೆಹೋಷಾಫಾಟ;
Mwana wa Sulemani alikuwa ni Rehoboamu. Mwana wa Rehoboamu alikuwa Abiya. Mwana wa Abiya alikuwa Asa. Mwana wa Asa alikuwa Yehoshafati.
11 ೧೧ ಯೆಹೋಷಾಫಾಟನ ಮಗ ಯೆಹೋರಾಮ್; ಯೆಹೋರಾಮನ ಮಗ ಅಹಜ್ಯನು, ಅಹಜ್ಯನ ಮಗ ಯೋವಾಷನು.
Mwana wa Yehoshafati alikuwa Yoramu. Mwana wa Yoramu alikuwa Ahazia. Mwana wa Ahazia alikuwa Yoashi.
12 ೧೨ ಯೋವಾಷನ ಮಗ ಅಮಚ್ಯ. ಅಮಚ್ಯ ಮಗ ಅಜರ್ಯ; ಅಜರ್ಯನ ಮಗ ಯೋತಾಮ್.
Mwana wa Yoashi alikuwa Amazia. Mwana wa Amazia alikuwa Azaria. Mwana wa Azaria alikuwa Yothamu.
13 ೧೩ ಯೋತಾಮನ ಮಗ ಆಹಾಜ; ಆಹಾಜನ ಮಗ ಹಿಜ್ಕೀಯನು. ಹಿಜ್ಕೀಯನ ಮಗ ಮನಸ್ಸೆಯು.
Mwana wa Yothamu alikuwa Ahazi. Mwana wa Ahazi alikuwa Hezekia. Mwana wa Hezekia alikuwa Manase.
14 ೧೪ ಮನಸ್ಸೆಯ ಮಗ ಆಮೋನ್; ಆಮೋನನ ಮಗ ಯೋಷೀಯ.
Mwana wa Manase alikuwa Amoni. Mwana wa Amoni alikuwa Yosia.
15 ೧೫ ಯೋಷೀಯನ ಮಕ್ಕಳು: ಚೊಚ್ಚಲ ಮಗ ಯೋಹಾನಾನ್, ಎರಡನೆಯವನು ಯೆಹೋಯಾಕೀಮ್, ಮೂರನೆಯವನು ಚಿದ್ಕೀಯ, ನಾಲ್ಕನೆಯವನು ಶಲ್ಲೂಮ್.
Wana wa Yosia aliyekuwa mzaliwa wake wa kwanza ni Yohana, wapili Yehoyakimu, mwanae watatu Sedekia, na mwanae wanne Shalumu.
16 ೧೬ ಯೆಹೋಯಾಕೀಮನ ಮಗ ಯೆಕೊನ್ಯನು; ಯೆಕೊನ್ಯನ ಮಗ ಚಿದ್ಕೀಯನು.
Wana wa Yehoyakimu walikuwa Yehoyakini na Sedekia.
17 ೧೭ ಬಾಬಿಲೋನಿಯರಿಂದ ಸೆರೆಗೆ ಒಯ್ಯಲ್ಪಟ್ಟ ಯೆಕೊನ್ಯನಿಗೆ ಹುಟ್ಟಿದ ಮಕ್ಕಳು ಶೆಯಲ್ತೀಯೇಲ್,
Wana wa YehoYakini, mateka, walikuwa Shealtieli,
18 ೧೮ ಮಲ್ಕೀರಾಮ್, ಪೆದಾಯ್, ಶೆನಚ್ಚರ್, ಯೆಕಮ್ಯ, ಹೋಷಾಮ್ ಮತ್ತು ನೆದಬ್ಯ ಎಂಬ ಏಳು ಗಂಡುಮಕ್ಕಳು.
Malkiramu, Pedaya, Shenezari, Yekamia, Hoshama, na Nedabia.
19 ೧೯ ಪೆದಾಯನ ಮಕ್ಕಳು: ಜೆರುಬ್ಬಾಬೆಲ್ ಮತ್ತು ಶಿಮ್ಮೀ. ಜೆರುಬ್ಬಾಬೆಲನ ಮಕ್ಕಳು: ಮೆಷುಲ್ಲಾಮ್ ಮತ್ತು ಹನನ್ಯ. ಶೆಲೋಮೀತ್ ಎಂಬ ಮಗಳೂ ಇದ್ದಳು.
Wana wa Pedaya walikuwa Zerubabeli na Shimei. Wana wa Zerubabeli walikuwa Meshulamu na Hanania; Shelomithi alikuwa dada yao.
20 ೨೦ ಇವರಲ್ಲದೆ ಪೆದಾಯನಿಗೆ ಹಷುಬ, ಓಹೆಲ್, ಬೆರೆಕ್ಯ, ಹಸದ್ಯ ಮತ್ತು ಯೂಷಬ್ ಹೆಸೆದ್ ಎಂಬ ಐದು ಗಂಡು ಮಕ್ಕಳಿದ್ದರು.
Wanae watano walikuwa Hashuba, Oheli, Berekia, Hasadia, na Yushabu Hesedi.
21 ೨೧ ಹನನ್ಯನ ಸಂತಾನದವರು: ಪೆಲಟ್ಯ, ಯೆಶಾಯ ಮತ್ತು ರೆಫಾಯನ ಮಕ್ಕಳಾದ ಅರ್ನಾನ್, ಓಬದ್ಯ ಮತ್ತು ಶೇಕನ್ಯ.
Wana wa Hanania walikuwa Pelatia na Yeshaya. Mwanawe alikuwa Refaya, na uzao wake zaidi walikuwa ni Arnani, Obadia, na Shekania.
22 ೨೨ ಶೆಕನ್ಯನ ಮಗ ಶೆಮಾಯ. ಶೆಮಾಯನಿಗೆ ಆರು ಗಂಡು ಮಕ್ಕಳು: ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ ಮತ್ತು ಶಾಫಾಟ್.
Mwana wa Shekania alikuwa Shemaya. Wana wa Shemaya walikuwa Hatushi, Igali, Baria, Nearia, na Shafati.
23 ೨೩ ನೆಯರ್ಯನ ಮೂರು ಗಂಡು ಮಕ್ಕಳು: ಎಲ್ಯೋಗೆನೈ, ಹಿಜ್ಕೀಯ ಮತ್ತು ಅಜ್ರೀಕಾಮ್.
Wana watatu wa Nearia walikuwa Elioenai, Hizekia, na Azrikamu.
24 ೨೪ ಎಲ್ಯೋಗೆನೈಯನ ಏಳು ಗಂಡು ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ ಮತ್ತು ಅನಾನೀ.
Wana saba wa Elioenai walikuwa Hodavia, Eliashibu, Pelaya, Akubu, Yohana, Delaya, na Anani.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 3 >