< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 21 >

1 ಸೈತಾನನು ಇಸ್ರಾಯೇಲರಿಗೆ ವಿರುದ್ಧ ಎದ್ದು, ಇಸ್ರಾಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದನು.
Adui akainuka dhidi ya Israeli na kumchochea Daudi kuhesabu Israeli.
2 ದಾವೀದನು ಯೋವಾಬನನ್ನೂ ಮತ್ತು ಜನಾಧಿಪತಿಗಳನ್ನೂ ಕರೆದು, “ನನಗೆ ಜನರ ಲೆಕ್ಕ ಗೊತ್ತಾಗುವ ಹಾಗೆ ನೀವು ಬೇರ್ಷೆಬದಿಂದ ದಾನ್ ಊರಿನವರೆಗೂ ಸಂಚರಿಸಿ, ಇಸ್ರಾಯೇಲರನ್ನು ಲೆಕ್ಕ ಮಾಡಿಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.
Daudi akamwabia Yoabu na kwa wakuu wa Jeshi, “Nenda, wahesabu watu wa Israeli kutoka Beerisheba mpaka Dani na uniletee taarifa, ilinijue idadi yao.”
3 ಆಗ ಯೋವಾಬನು, “ನನ್ನ ಒಡೆಯನಾದ ಅರಸನೇ, ಯೆಹೋವನು ತನ್ನ ಪ್ರಜೆಗಳನ್ನು ನೂರರಷ್ಟು ಹೆಚ್ಚಿಸಲಿ. ಅವರೆಲ್ಲರೂ ನನ್ನ ಒಡೆಯನ ದಾಸರಷ್ಟೆ. ಒಡೆಯನು ಇಂಥದ್ದನ್ನು ಅಪೇಕ್ಷಿಸುವುದೇನು? ಇಸ್ರಾಯೇಲರನ್ನು ಅಪರಾಧಕ್ಕೆ ಗುರಿಮಾಡುವುದೇಕೆ” ಎಂದನು.
Yoabu akasema, “Yahweh na afanya jeshi lake mara mia zaidi ya lilivyo. Lakini bwana wangu mfalme, kwani wote hawamtumikii bwana wangu? kwa nini bwana wangu anataka hili? Kwa nini ulete hatia kwa Israeli?”
4 ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ನಡೆಸಿದ್ದರಿಂದ ಅವನು ಹೊರಟುಹೋಗಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಲ್ಲಿ ಸಂಚರಿಸಿ ಯೆರೂಸಲೇಮಿಗೆ ಹಿಂದಿರುಗಿದನು.
Lakini neno la mfalme halikubadilika kwa Yoabu. Hivyo Yoabu akaondoka na kwenda Israeli yote. Kisha akarudi Yerusalemu.
5 ಯೋವಾಬನು ದಾವೀದನಿಗೆ ಒಪ್ಪಿಸಿದ ಜನಗಣತಿಯ ಸಂಖ್ಯೆಯು ಇಸ್ರಾಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಹನ್ನೊಂದು ಲಕ್ಷ ಮತ್ತು ಯೆಹೂದ್ಯರಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ.
Yoabu akatoa taarifa ya idadi ya jumla ya wanaume wa mapambano kwa Daudi. Kulikuwa ndani ya Israeli wanaume 1, 100, 000 walio beba upanga. Yuda peke yake kulikuwa na wanajeshi 470, 000.
6 ಅರಸನ ಅಪ್ಪಣೆಯು ಯೋವಾಬನಿಗೆ ಅಸಹ್ಯವಾಗಿದ್ದುದರಿಂದ ಅವನು ಲೇವಿ ಮತ್ತು ಬೆನ್ಯಾಮೀನ್ ಕುಲಗಳವರ ಜನಗಣತಿಯನ್ನು ಮಾಡಲಿಲ್ಲ.
Lakini Levi na Benjamini hawaku hesabiwa miongoni mwao, kwa kuwa amri ya mfalme ilimuudhi Yoabu.
7 ಜನಗಣತಿ ಮಾಡಿದ್ದು ದೇವರಿಗೆ ಕೆಟ್ಟದ್ದೆಂದು ಕಂಡದ್ದರಿಂದ ಆತನು ಇಸ್ರಾಯೇಲರನ್ನು ಬಾಧಿಸಿದನು.
Mungu alikwazika na hili tendo, akashambulia Israeli.
8 ಆಗ ದಾವೀದನು, “ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾಗಿದ್ದೇನೆ. ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು” ಎಂದು ದೇವರನ್ನು ಪ್ರಾರ್ಥಿಸಿದನು.
Daudi akamwambia Mungu, “Nimetenda dhambi kubwa kwa kufanya hili. Sasa chukua hatia ya mtumishi wako, nimetenda kwa ujinga sana.”
9 ಯೆಹೋವನು ದಾವೀದನ ದರ್ಶಿಯಾದ ಗಾದನಿಗೆ ಹೇಳಿದ್ದೇನೆಂದರೆ,
Yahweh akamwambia Gadi, nabii wa Daudi,
10 ೧೦ ಯೆಹೋವನು ಇಂತೆನ್ನುತ್ತಾನೆ, “ನಾನು ಮೂರು ವಿಧವಾದ ಶಿಕ್ಷೆಯನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂಬುದಾಗಿ ದಾವೀದನಿಗೆ ಹೇಳು” ಎಂದನು.
“Nenda useme kwa Daudi, “Hili ndilo Yahweh anasema: Ninakupa maamuzi matatu. Chagua moja wapo.”
11 ೧೧ ಆಗ ಗಾದನು ದಾವೀದನ ಬಳಿಗೆ ಹೋಗಿ ಅವನಿಗೆ, “ಯೆಹೋವನು ಹೇಳುವುದೇನೆಂದರೆ,
Hivyo Gadi akaenda kwa Daudi na kusema, “Yahweh anasema hivi, 'Chagua moja ya haya:
12 ೧೨ ‘ಮೂರು ವರ್ಷಗಳ ವರೆಗೆ ಬರಗಾಲ ಉಂಟಾಗಬೇಕೋ, ಇಲ್ಲವೆ ನೀನು ಮೂರು ತಿಂಗಳು ನಿನ್ನ ಶತ್ರುಗಳ ಚಿತ್ರಹಿಂಸೆಗೆ ಬಲಿಯಾಗುವುದು ಬೇಕೋ, ಇಲ್ಲವೆ ಇಸ್ರಾಯೇಲರ ಸಮಸ್ತ ಪ್ರಾಂತ್ಯಗಳಲ್ಲಿ ಯೆಹೋವನು ಕಳುಹಿಸಿದ ಸಂಹಾರದೂತನಿಂದ ಉಂಟಾಗುವ ಮೂರು ದಿನಗಳ ಘೋರವ್ಯಾಧಿಯ ರೂಪವಾದ ಯೆಹೋವನ ಶಿಕ್ಷೆ ಬೇಕೋ, ಈ ಮೂರರಲ್ಲಿ ಒಂದನ್ನು ಆರಿಸಿಕೊ’ ಎಂಬುದೇ. ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು ಆಲೋಚಿಸಿ ಹೇಳು” ಎಂದು ಹೇಳಿದನು.
kati ya miaka mitatu ya ukame, miezi mitatu unakimbizwa na adui zako na kupatwa na upanga wao, au siku tatu za upanga wa Yahweh, yani, pigo katika nchi, malaika wa Yahweh akiharibu nchi yote ya Israeli.' Hivyo sasa, amua jibu gani ni mpelekee yeye aliye nituma.”
13 ೧೩ ಅದಕ್ಕೆ ದಾವೀದನು ಗಾದನಿಗೆ, “ನಾನು ಬಲು ಇಕ್ಕಟ್ಟಿನಲ್ಲಿರುತ್ತೇನೆ. ಮನುಷ್ಯರ ಕೈಯಲ್ಲಿ ಬೀಳುವುದಕ್ಕಿಂತ ಯೆಹೋವನ ಹಸ್ತದಲ್ಲಿ ಬೀಳುವುದು ಮೇಲು. ಆತನು ಕೃಪಾಪೂರ್ಣನು” ಎಂದು ಹೇಳಿದನು.
Kisha Daudi akamwambia Gadi, “Nipo katika shida kubwa sana. Acha nianguke katika mikono ya Yahweh kuliko kuangukia mikono ya mwanadamu, sababu matendo yake ya rehema ni makubwa mno.”
14 ೧೪ ಆಗ ಯೆಹೋವನು ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದನು. ಅವರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.
Hivyo Yahweh akatuma pigo Israeli, na watu elfu sabini wakafa.
15 ೧೫ ದೇವರು ಯೆರೂಸಲೇಮನ್ನು ನಾಶಪಡಿಸುವುದಕ್ಕೆ ದೂತರನ್ನು ಕಳುಹಿಸಿದನು. ಆದರೆ ಆ ದೂತನು ನಾಶಪಡಿಸುವುದಕ್ಕಿದ್ದಾಗ ಯೆಹೋವನು ಅದನ್ನು ಕಂಡು ಆ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಟ್ಟು ಸಂಹಾರ ದೂತನಿಗೆ, “ಸಾಕು ನಿನ್ನ ಕೈಯನ್ನು ಹಿಂದೆಗೆ” ಎಂದು ಆಜ್ಞಾಪಿಸಿದನು. ಆಗ ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತನು.
Mungu akatuma malaika Yerusalemu kuiharibu. Wakati alipo taka kuiharibu, Yahweh akatazama na kubadili nia yake kuhusu shambulio. Akasema kwa malaika wa uharibifu, “Imetosha! Rudisha mkono wako.” Wakati huo malaika wa Yahweh alikua amesimama eneo la kupeta la Orinani Myebusi.
16 ೧೬ ದಾವೀದನು ಕಣ್ಣೆತ್ತಿ ನೋಡಿ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನೂ, ಚಾಚಿದ ಕೈಯಲ್ಲಿ ಯೆರೂಸಲೇಮಿಗೆ ವಿರುದ್ಧವಾಗಿ ಹಿರಿದ ಕತ್ತಿಯಿರುವುದನ್ನೂ ಕಂಡಾಗ ಅವನೂ, ಹಿರಿಯರೂ ಗೋಣಿತಟ್ಟನ್ನು ಹೊದ್ದುಕೊಂಡು ಬೋರಲು ಬಿದ್ದರು.
Daudi akatazama juu na kuona malaika wa Yahweh amesimama kati ya nchi na mbingu, akiwa na upanga mkonono mwake akiuelekeza Yerusalemu. Kisha Daudi na wazee, wakiwa wamevaa magunia, wakalala chini uso ukiwa kwenye ardhi.
17 ೧೭ ಮತ್ತು ದಾವೀದನು ದೇವರಿಗೆ, “ಜನರನ್ನು ಲೆಕ್ಕಿಸಬೇಕೆಂದು ಆಜ್ಞಾಪಿಸಿದವನು ನಾನಲ್ಲವೋ. ಮಹಾಪಾಪಮಾಡಿದವನು ನಾನೇ. ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ಯೆಹೋವನೇ, ನನ್ನ ದೇವರೇ, ನಿನ್ನ ಹಸ್ತವು ನಿನ್ನ ಜನರನ್ನು ಬಾಧಿಸುವುದಕ್ಕೆ ಅವರಿಗೆ ವಿರುದ್ಧವಾಗಿರದೆ ನನಗೂ ನನ್ನ ಮನೆಯವರಿಗೂ ವಿರುದ್ಧವಾಗಿರಲಿ” ಎಂದು ಬೇಡಿಕೊಂಡನು.
Daudi akamwambia Mungu, “Sio mimi niliye amuru jeshi kuhesabiwa? Nimefanya hichi kitu kiovu. Lakini hawa kondoo, wamefanya nini? Yahweh Mungu wangu! Acha mkono wako unipige mimi na familia yangu, lakini usiache pigo iliendelee kubaki kwa watu wako.”
18 ೧೮ ಆಗ ಯೆಹೋವನ ದೂತನು ಗಾದನಿಗೆ, “ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುವುದಕ್ಕೆ ಹೋಗಬೇಕು ಎಂದು ದಾವೀದನಿಗೆ ಹೇಳು” ಎಂದು ಆಜ್ಞಾಪಿಸಿದನು.
Hivyo malaika wa Yahweh akamuamuru Gadi kusema kwa Daudi, kwamba Daudi aende juu na kujenga madhabahu ya Yahweh katika eneo la kupeta la Oranani Myebusi.
19 ೧೯ ದಾವೀದನು ಗಾದನ ಮುಖಾಂತರವಾಗಿ ತನಗಾದ ಯೆಹೋವನ ಅಪ್ಪಣೆಯಂತೆ ಹೊರಟನು.
Daudi akaenda kama Gadi alivyo muelekeza cha kufanya kwa jina la Yahweh.
20 ೨೦ ಅಷ್ಟರಲ್ಲಿ ಗೋದಿಯನ್ನು ತುಳಿಸುತ್ತಿದ್ದ ಒರ್ನಾನನು ತಿರುಗಿಕೊಂಡು ದೂತನನ್ನು ನೋಡಿದ್ದನು. ಅವನ ಜೊತೆಯಲ್ಲಿದ್ದ ಅವನ ನಾಲ್ಕು ಮಕ್ಕಳು ಅಡಗಿಕೊಂಡಿದ್ದರು.
Wakati Orinani akipepeta ngano, aligeuka na kumuona malaika. Yeye na wana wake wanne wakajificha.
21 ೨೧ ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡು ಕಣವನ್ನು ಬಿಟ್ಟು ಹೋಗಿ ಅವನಿಗೆ ಅಡ್ಡ ಬಿದ್ದನು.
Wakati Daudi alipo kuja kwa Orinani, Orinani akatazama na kumuona Daudi. Aliacha eneo la kupeta na akamuinamia Daudi uso wake ukiwa kwenye ardhi.
22 ೨೨ ದಾವೀದನು ಅವನಿಗೆ, “ನಿನ್ನ ಕಣವನ್ನೂ ಮತ್ತು ಭೂಮಿಯನ್ನು ನನಗೆ ಕೊಡು, ವ್ಯಾಧಿಯು ಜನರನ್ನು ಬಿಟ್ಟು ಹೋಗುವಂತೆ ನಾನು ಅದರಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುತ್ತೇನೆ. ಪೂರ್ಣಕ್ರಯ ತೆಗೆದುಕೊಂಡು ಅದನ್ನು ಕೊಡು” ಎಂದು ಹೇಳಿದನು.
Kisha Daudi akasema kwa Orinani, “Niuzie hili eneo la kupeta, iliniweze kumjenga Yahweh madhabahu. Nitalipa gharama yote, ili pigo liondolewe kwa watu.”
23 ೨೩ ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ, ಸೌದೆಗೆ ಹಂತೀಕುಂಟೆಗಳೂ, ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ. ಇವೆಲ್ಲವನ್ನೂ ಕೊಡುತ್ತೇನೆ” ಎಂದು ಹೇಳಿದನು.
Orinani wakwambia Daudi, “Chukuwa kama lako, bwana wangu mfalme. Fanya nalo linalo kupendeza. Tazama, nitakupa ng'ombe kwa sadaka ya kuteketeza, vifaa vya kupeta kwa ajili ya mbao, na ngano kwa sadaka ya mbegu; nitakupa yote wewe.”
24 ೨೪ ಅರಸನಾದ ದಾವೀದನು ಒರ್ನಾನನಿಗೆ “ಹಾಗಲ್ಲ ನಾನು ನಿನ್ನಿಂದ ಪೂರ್ಣ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ ನಿನಗೆ ಸೇರಿದ್ದನ್ನು ಕ್ರಯವಿಲ್ಲದೆ ತೆಗೆದುಕೊಂಡು ಯೆಹೋವನಿಗೆ ಯಜ್ಞವಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು.
Mfalme Daudi akamwambia Orinani, “Hapana, nina sisitiza kununua kwa bei yote. Sitachukua kilicho chako na kutoa kama sadaka ya kuteketeza kwa Yahweh kama haitanighramu chochote.”
25 ೨೫ ದಾವೀದನು ಆ ಭೂಮಿಗೋಸ್ಕರ ಅವನಿಗೆ ಆರುನೂರು ಶೆಕಲ್ ಬಂಗಾರವನ್ನು ಕೊಟ್ಟನು.
Hivyo Daudi akalipa shekeli mia sita ya dhahabu kwa hilo eneo.
26 ೨೬ ಅಲ್ಲಿ ದಾವೀದನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ, ಅದರ ಮೇಲೆ ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಅರ್ಪಿಸಿ, ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ, ಆಕಾಶದಿಂದ ಯಜ್ಞವೇದಿಯ ಮೇಲೆ ಬೆಂಕಿಯನ್ನು ಸುರಿಸಿ,
Daudi akajenga madhabahu ya Yahweh pale na kutoa sadaka za kuteketezwa na sadaka za ushirika. Akamuita Yahweh, aliye mjibu kwa moto kutoka mbinguni kwenye madhabahu ya sadaka za kuteketezwa.
27 ೨೭ ಕತ್ತಿಯನ್ನು ಒರೆಯಲ್ಲಿ ಹಾಕಬೇಕೆಂದು ದೂತನಿಗೆ ಆಜ್ಞಾಪಿಸಿದನು. ಅವನು ಹಾಗೆಯೇ ಮಾಡಿದನು.
Kisha Yahweh akampa agizo malaika, na malaika akarudisha upanga kwenye mfuko wake.
28 ೨೮ ಮೋಶೆಯು ಅರಣ್ಯದಲ್ಲಿ ಮಾಡಿಸಿದ ಯೆಹೋವನ ಗುಡಾರ ಮತ್ತು ಯಜ್ಞವೇದಿಯು ಆ ಕಾಲದಲ್ಲಿ ಗಿಬ್ಯೋನಿನ ಪೂಜಾಸ್ಥಳದಲ್ಲಿದ್ದವು.
Daudi alipo ona kuwa Yahweh amemjibu kwenye eneo la kupeta la Orinani Myebusi, alitoa dhabihu pale pale kwa wakati huo.
29 ೨೯ ಆದರೂ ದಾವೀದನು ಯೆಹೋವನ ದೂತನ ಕತ್ತಿಗೆ ಹೆದರಿ ದೇವದರ್ಶನಕ್ಕಾಗಿ ಅಲ್ಲಿಗೆ ಹೋಗಲಾರದೆ, ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಯಜ್ಞವನ್ನು ಅರ್ಪಿಸಿದನು.
Sasa kwa wakati huo, hema la kuabudia la Yahweh, ambalo Musa alilitengeneza nyikani, na madhabahu ya sadaka za kuteketezwa, zilikuwa sehemu ya juu huko Gibeoni.
30 ೩೦ ಆ ಕಾಲದಲ್ಲಿ ದಾವೀದನಿಗೆ ಯೆಹೋವನಿಂದ ಸದುತ್ತರ ದೊರಕಿತು.
Walakini, Daudi hakuweza kwenda huko kumuliza Mungu muelekeo, kwa kuwa alikuwa anaogopa upanga wa malaika wa Yahweh.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 21 >