< 詩篇 15 >

1 ダビデの歌 主よ、あなたの幕屋にやどるべき者はだれですか、あなたの聖なる山に住むべき者はだれですか。
ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮ ಪರಿಶುದ್ಧ ಗುಡಾರದಲ್ಲಿ ವಾಸಿಸುವವರು ಯಾರು? ನಿಮ್ಮ ಪರಿಶುದ್ಧ ಪರ್ವತದಲ್ಲಿ ಬಾಳುವವರು ಯಾರು?
2 直く歩み、義を行い、心から真実を語る者、
ದೋಷವಿಲ್ಲದವರಾಗಿ ಜೀವಿಸಿ, ನೀತಿಯನ್ನು ನಡೆಸಿ, ತಮ್ಮ ಹೃದಯದಿಂದ ಸತ್ಯವನ್ನಾಡುವವರೇ;
3 その舌をもってそしらず、その友に悪をなさず、隣り人に対するそしりを取りあげず、
ಅವರ ನಾಲಿಗೆಯು ಚಾಡಿ ಹೇಳುವುದಿಲ್ಲ, ತಮ್ಮ ನೆರೆಯವರಿಗೆ ಕೇಡುಮಾಡುವುದಿಲ್ಲ, ಇತರರನ್ನು ನಿಂದಿಸುವುದೂ ಇಲ್ಲ;
4 その目は神に捨てられた者を卑しめ、主を恐れる者を尊び、誓った事は自分の損害になっても変えることなく、
ಅವರು ದುಷ್ಟರ ಸಹವಾಸ ಇಲ್ಲದವರೂ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವರೂ ನಷ್ಟವಾದರೂ ಕೊಟ್ಟ ಮಾತನ್ನು ತಪ್ಪದೇ, ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳದವರೂ ಆಗಿರಬೇಕು.
5 利息をとって金銭を貸すことなく、まいないを取って罪のない者の不利をはかることをしない人である。これらの事を行う者はとこしえに動かされることはない。
ಅವರು ಬಡವರಿಗೆ ಸಾಲ ಕೊಟ್ಟು ಬಡ್ಡಿಕೇಳದವರೂ; ನಿರಪರಾಧಿಯ ಕೇಡಿಗಾಗಿ ಲಂಚ ತೆಗೆದುಕೊಳ್ಳದವರೂ ಆಗಿರಬೇಕು. ಈ ರೀತಿಯಾಗಿ ಬಾಳುವವರು ಎಂದಿಗೂ ಕದಲುವುದಿಲ್ಲ.

< 詩篇 15 >