< 詩篇 11 >

1 われヱホバに依賴めり なんぢら何ぞわが霊魂にむかひて鳥のごとくなんぢの山にのがれよといふや
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರಲ್ಲಿ ನಾನು ಆಶ್ರಯಿಸಿದ್ದೇನೆ. ಹಾಗಾದರೆ, “ಒಂದು ಪಕ್ಷಿಯಂತೆ ನಿನ್ನ ಪರ್ವತಕ್ಕೆ ಹಾರಿ ಹೋಗು,” ಎಂದು ನೀವು ನನಗೆ ಹೇಗೆ ಹೇಳುವಿರಿ?
2 視よあしきものは暗處にかくれ心なほきものを射んとて弓をはり絃に矢をつがふ
“ಇಗೋ, ದುಷ್ಟರು ತಮ್ಮ ಬಿಲ್ಲು ಬಗ್ಗಿಸಿ; ಬಾಣವನ್ನು ಬಿಲ್ಲಿಗೆ ಹೂಡಿ, ಯಥಾರ್ಥ ಹೃದಯವುಳ್ಳವರ ಮೇಲೆ ಗುಪ್ತವಾಗಿ ಎಸೆಯುವುದಕ್ಕೆ ಸಿದ್ಧಮಾಡಿದ್ದಾರೆ.
3 基みなやぶれたらんには義者なにをなさんや
ಅಸ್ತಿವಾರಗಳೇ ಕೆಡವುತ್ತಿರಲು, ನೀತಿವಂತನು ಏನು ಮಾಡಲು ಸಾಧ್ಯ?”
4 ヱホバはその聖宮にいます ヱホバの寳座は天にありその目はひとのこを鑒 その眼瞼はかれらをこころみたまふ
ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದಲ್ಲಿ ಇದ್ದಾರೆ; ಯೆಹೋವ ದೇವರು ತಮ್ಮ ಪರಲೋಕ ಸಿಂಹಾಸನದಲ್ಲಿ ಇದ್ದಾರೆ. ಅವರು ಭೂಮಿಯಲ್ಲಿ ಪ್ರತಿಯೊಬ್ಬರನ್ನು ಗಮನಿಸುತ್ತಾರೆ; ಅವರ ಕಣ್ಣುಗಳು ಮಾನವರೆಲ್ಲರನ್ನು ಪರಿಶೋಧಿಸುತ್ತವೆ.
5 ヱホバは義者をこころむ そのみこころは惡きものと強暴をこのむ者とをにくみ
ಯೆಹೋವ ದೇವರು ನೀತಿವಂತನನ್ನು ಪರೀಕ್ಷಿಸುತ್ತಾರೆ, ಆದರೆ ಅವರು ದುಷ್ಟರನ್ನೂ ಹಿಂಸಾತ್ಮಕರನ್ನೂ ವಿರೋಧಿಸುತ್ತಾರೆ.
6 羂をあしきもののうへに降したまはん火と硫磺ともゆる風とはかれらの酒杯にうくべきものなり
ಅವರು ದುಷ್ಟರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಸುರಿಸಲಿ; ಇವೇ ದುಷ್ಟರ ಪಾಲಾಗಿರಲಿ.
7 ヱホバはただしき者にして義きことを愛したまへばなり 直きものはその聖顔をあふぎみん
ಏಕೆಂದರೆ ಯೆಹೋವ ದೇವರು ನೀತಿಯುಳ್ಳವರು. ಅವರು ನ್ಯಾಯವನ್ನು ಪ್ರೀತಿಸುತ್ತಾರೆ; ಯಥಾರ್ಥರು ಅವರ ಮುಖವನ್ನು ದೃಷ್ಟಿಸುವರು.

< 詩篇 11 >