< מִיכָה 2 >

ה֧וֹי חֹֽשְׁבֵי־אָ֛וֶן וּפֹ֥עֲלֵי רָ֖ע עַל־מִשְׁכְּבוֹתָ֑ם בְּא֤וֹר הַבֹּ֙קֶר֙ יַעֲשׂ֔וּהָ כִּ֥י יֶשׁ־לְאֵ֖ל יָדָֽם׃ 1
ತಮ್ಮ ಹಾಸಿಗೆಯಲ್ಲಿ ಮಲಗಿರುವಾಗಲೇ ಅನ್ಯಾಯವನ್ನು ಯೋಚಿಸಿ, ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ. ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೇ.
וְחָמְד֤וּ שָׂדוֹת֙ וְגָזָ֔לוּ וּבָתִּ֖ים וְנָשָׂ֑אוּ וְעָֽשְׁקוּ֙ גֶּ֣בֶר וּבֵית֔וֹ וְאִ֖ישׁ וְנַחֲלָתֽוֹ׃ פ 2
ಹೊಲಗದ್ದೆಗಳನ್ನು ದುರಾಶೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಮನೆಗಳನ್ನು ಲೋಭದಿಂದ ಅಪಹರಿಸುತ್ತಾರೆ. ಮನೆಯನ್ನೂ, ಮನೆಯವನನ್ನೂ ಮತ್ತು ಅವನ ಸ್ವತ್ತನ್ನೂ ತುಳಿದುಬಿಡುತ್ತಾರೆ.
לָכֵ֗ן כֹּ֚ה אָמַ֣ר יְהוָ֔ה הִנְנִ֥י חֹשֵׁ֛ב עַל־הַמִּשְׁפָּחָ֥ה הַזֹּ֖את רָעָ֑ה אֲ֠שֶׁר לֹֽא־תָמִ֨ישׁוּ מִשָּׁ֜ם צַוְּארֹֽתֵיכֶ֗ם וְלֹ֤א תֵֽלְכוּ֙ רוֹמָ֔ה כִּ֛י עֵ֥ת רָעָ֖ה הִֽיא׃ 3
ಆದಕಾರಣ ಯೆಹೋವನು ಇಂತೆನ್ನುತ್ತಾನೆ, “ಇಗೋ ಈ ವಂಶಕ್ಕೆ ನಾನೇ ಕೇಡನ್ನು ಕಲ್ಪಿಸುತ್ತೇನೆ, ಅದರ ಭಾರದಿಂದ ನಿಮ್ಮ ಕುತ್ತಿಗೆಗಳನ್ನು ತಪ್ಪಿಸಿಕೊಳ್ಳಲಾರಿರಿ, ನೀವು ತಲೆಯೆತ್ತಿ ನಡೆಯುವುದಕ್ಕಾಗದು. ಅದು ಕೆಟ್ಟ ಕಾಲವೇ ಸರಿ.
בַּיּ֨וֹם הַה֜וּא יִשָּׂ֧א עֲלֵיכֶ֣ם מָשָׁ֗ל וְנָהָ֨ה נְהִ֤י נִֽהְיָה֙ אָמַר֙ שָׁד֣וֹד נְשַׁדֻּ֔נוּ חֵ֥לֶק עַמִּ֖י יָמִ֑יר אֵ֚יךְ יָמִ֣ישׁ לִ֔י לְשׁוֹבֵ֥ב שָׂדֵ֖ינוּ יְחַלֵּֽק׃ 4
ಆ ದಿನದಲ್ಲಿ ಜನರು ನಿಮ್ಮ ವಿಷಯವಾಗಿ ಅಪಹಾಸ್ಯ ಮಾಡಿ ಲಾವಣಿಕಟ್ಟಿ ಹಾಡುವರು. ‘ಅಯ್ಯೋ, ನಾವು ತೀರಾ ಸೂರೆಹೋದೆವಲ್ಲಾ ಯೆಹೋವನು ನಮ್ಮವರ ಸ್ವತ್ತನ್ನು ಪರಾಧೀನಮಾಡುತ್ತಿದ್ದಾನೆ. ಅಯ್ಯೋ, ಅದನ್ನು ನಮ್ಮಿಂದ ತೊಲಗಿಸಿದ್ದಾನಲ್ಲಾ, ನಮ್ಮ ಭೂಮಿಯನ್ನು ದೇವದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ’” ಎಂದು ಶೋಕಗೀತವಾಗಿ ಹಾಡುವರು.
לָכֵן֙ לֹֽא־יִֽהְיֶ֣ה לְךָ֔ מַשְׁלִ֥יךְ חֶ֖בֶל בְּגוֹרָ֑ל בִּקְהַ֖ל יְהוָֽה׃ 5
ಹೀಗಿರಲು ಯೆಹೋವನ ಸಭೆಯವರ ಭೂಮಿಯ ಮೇಲೆ ಚೀಟು ಹಾಕಿ ನೂಲೆಳೆಯಲಿಕ್ಕೆ ನಿಮ್ಮಲ್ಲಿ ಯಾರೂ ಇರುವುದಿಲ್ಲ.
אַל־תַּטִּ֖פוּ יַטִּיפ֑וּן לֹֽא־יַטִּ֣פוּ לָאֵ֔לֶּה לֹ֥א יִסַּ֖ג כְּלִמּֽוֹת׃ 6
ಆಹಾ, ಆ ಕೆಡುಕರು “ಪ್ರವಾದನೆ ಮಾಡಬೇಡಿರಿ. ಇಂಥ ವಿಷಯಗಳಲ್ಲಿ ಪ್ರವಾದನೆಯನ್ನು ಎತ್ತಬಾರದು, ದೂಷಣೆಗಳು ತೊಲಗುವುದೇ ಇಲ್ಲ” ಎಂದು ಪ್ರವಾದನೆ ಮಾಡುತ್ತಾರೆ.
הֶאָמ֣וּר בֵּֽית־יַעֲקֹ֗ב הֲקָצַר֙ ר֣וּחַ יְהוָ֔ה אִם־אֵ֖לֶּה מַעֲלָלָ֑יו הֲל֤וֹא דְבָרַ֨י יֵיטִ֔יבוּ עִ֖ם הַיָּשָׁ֥ר הוֹלֵֽךְ׃ 7
ಯಾಕೋಬ ವಂಶವೇ, “ಯೆಹೋವನ ಆತ್ಮವು ತಾಳ್ಮೆಯಿಲ್ಲದ್ದೋ? ಇಂಥ ಕೃತ್ಯಗಳು ಆತನವೋ” ಎಂದು ಏಕೆ ಹೇಳುತ್ತೀ? ನನ್ನ ನುಡಿಗಳು ಸನ್ಮಾರ್ಗಿಗಳಿಗೆ ಹಿತಕರವಷ್ಟೇ.
וְאֶתְמ֗וּל עַמִּי֙ לְאוֹיֵ֣ב יְקוֹמֵ֔ם מִמּ֣וּל שַׂלְמָ֔ה אֶ֖דֶר תַּפְשִׁט֑וּן מֵעֹבְרִ֣ים בֶּ֔טַח שׁוּבֵ֖י מִלְחָמָֽה׃ 8
ನನ್ನ ಜನರೋ ಕೆಲವು ಕಾಲದಿಂದ ಶತ್ರುಗಳಾಗಿ ಎದ್ದಿದ್ದಾರೆ. ಜಗಳವನ್ನೊಲ್ಲದೆ ನಿರ್ಭಯವಾಗಿ ಹೋಗಿ ಬರುವವರ ಮೇಲಂಗಿಯನ್ನು ಕಿತ್ತುಕೊಳ್ಳುತ್ತೀರಿ.
נְשֵׁ֤י עַמִּי֙ תְּגָ֣רְשׁ֔וּן מִבֵּ֖ית תַּֽעֲנֻגֶ֑יהָ מֵעַל֙ עֹֽלָלֶ֔יהָ תִּקְח֥וּ הֲדָרִ֖י לְעוֹלָֽם׃ 9
ನನ್ನ ಜನರ ಸ್ತ್ರೀಯರನ್ನು, ಅವರ ಪ್ರಿಯವಾದ ಮನೆಗಳಿಂದ ತಳ್ಳಿಹಾಕುತ್ತೀರಿ. ಅವರ ಸಣ್ಣ ಮಕ್ಕಳಿಗೆ ನನ್ನ ಆಶೀರ್ವಾದದ ಹಕ್ಕನ್ನು ಇನ್ನೆಂದಿಗೂ ಸಿಕ್ಕದಂತೆ ತಪ್ಪಿಸುತ್ತೀರಿ.
ק֣וּמוּ וּלְכ֔וּ כִּ֥י לֹא־זֹ֖את הַמְּנוּחָ֑ה בַּעֲב֥וּר טָמְאָ֛ה תְּחַבֵּ֖ל וְחֶ֥בֶל נִמְרָֽץ׃ 10
೧೦ಏಳಿರಿ, ತೊಲಗಿರಿ, ಈ ದೇಶವು ನಿಮ್ಮ ಸುಖವಸತಿಯಾಗದು. ನಾಶನವನ್ನು, ವಿಪರೀತ ನಾಶನವನ್ನು ಉಂಟುಮಾಡುವ ಹೊಲಸು ಇದಕ್ಕೆ ಅಂಟಿಕೊಂಡಿದೆ.
לוּ־אִ֞ישׁ הֹלֵ֥ךְ ר֙וּחַ֙ וָשֶׁ֣קֶר כִּזֵּ֔ב אַטִּ֣ף לְךָ֔ לַיַּ֖יִן וְלַשֵּׁכָ֑ר וְהָיָ֥ה מַטִּ֖יף הָעָ֥ם הַזֶּֽה׃ 11
೧೧ಗಾಳಿಯನ್ನೂ, ಮೋಸವನ್ನೂ ಹಿಂಬಾಲಿಸುವ ಸುಳ್ಳುಗಾರನೊಬ್ಬನು, “ನಾನು ದ್ರಾಕ್ಷಾರಸ, ಮಧ್ಯಗಳ ವಿಷಯವಾಗಿ ನಿನಗೆ ಪ್ರವಾದನೆ ಮಾಡುವೆನು” ಎಂದು ಹೇಳಿದರೆ, ಈ ಜನರು ಅಂಥವನನ್ನು ಪ್ರವಾದಿಯನ್ನಾಗಿ ಸ್ವೀಕರಿಸಿಕೊಳ್ಳುವರು.
אָסֹ֨ף אֶאֱסֹ֜ף יַעֲקֹ֣ב כֻּלָּ֗ךְ קַבֵּ֤ץ אֲקַבֵּץ֙ שְׁאֵרִ֣ית יִשְׂרָאֵ֔ל יַ֥חַד אֲשִׂימֶ֖נּוּ כְּצֹ֣אן בָּצְרָ֑ה כְּעֵ֙דֶר֙ בְּת֣וֹךְ הַדָּֽבְר֔וֹ תְּהִימֶ֖נָה מֵאָדָֽם׃ 12
೧೨ಯಾಕೋಬೇ ನಿನ್ನವರೆಲ್ಲರನ್ನು ಒಂದುಗೂಡಿಸುವೆನು. ಇಸ್ರಾಯೇಲಿನ ಉಳಿದ ಜನರನ್ನು ಒಟ್ಟಿಗೆ ಸೇರಿಸುವೆನು. ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗೆ ಇಡುವೆನು. ಹುಲ್ಲುಗಾವಲಿನ ಮಧ್ಯದಲ್ಲಿನ ಮಂದೆಯ ಹಾಗೆ ಗುಂಪು ಕೂಡಿಸುವೆನು. ಜನರು ದೊಡ್ಡ ಶಬ್ದಮಾಡುವರು.
עָלָ֤ה הַפֹּרֵץ֙ לִפְנֵיהֶ֔ם פָּֽרְצוּ֙ וַֽיַּעֲבֹ֔רוּ שַׁ֖עַר וַיֵּ֣צְאוּ ב֑וֹ וַיַּעֲבֹ֤ר מַלְכָּם֙ לִפְנֵיהֶ֔ם וַיהוָ֖ה בְּרֹאשָֽׁם׃ פ 13
೧೩ಹೊಡೆದು ಹೋಗುವವನು ಅವರ ಮುಂದೆ ಹೊರಟಿದ್ದಾನೆ. ಅವರೂ ಬಾಗಿಲನ್ನು ಒಡೆದು ನುಗ್ಗಿ ಹೊರಟಿದ್ದಾರೆ. ಅವರ ಅರಸನು ಅವರ ಮುಂದೆ ತೆರಳಿದ್ದಾನೆ. ಯೆಹೋವನು ಅವರ ಮುಂಭಾಗದಲ್ಲಿ ನಡೆಯುತ್ತಿದ್ದಾನೆ.

< מִיכָה 2 >