< זְכַרְיָה 13 >

בַּיֹּ֣ום הַה֗וּא יִֽהְיֶה֙ מָקֹ֣ור נִפְתָּ֔ח לְבֵ֥ית דָּוִ֖יד וּלְיֹשְׁבֵ֣י יְרֽוּשָׁלָ֑͏ִם לְחַטַּ֖את וּלְנִדָּֽה׃ 1
“ಆ ದಿವಸದಲ್ಲಿ ದಾವೀದನ ಮನೆತನದವರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಅವರ ಪಾಪದಿಂದ ಮತ್ತು ಅಶುದ್ಧತೆಯಿಂದ ಶುದ್ಧೀಕರಿಸಲು ಒಂದು ಬುಗ್ಗೆಯು ತೆರೆಯಲಾಗುವುದು.
וְהָיָה֩ בַיֹּ֨ום הַה֜וּא נְאֻ֣ם ׀ יְהוָ֣ה צְבָאֹ֗ות אַכְרִ֞ית אֶת־שְׁמֹ֤ות הָֽעֲצַבִּים֙ מִן־הָאָ֔רֶץ וְלֹ֥א יִזָּכְר֖וּ עֹ֑וד וְגַ֧ם אֶת־הַנְּבִיאִ֛ים וְאֶת־ר֥וּחַ הַטֻּמְאָ֖ה אַעֲבִ֥יר מִן־הָאָֽרֶץ׃ 2
“ಆ ದಿನದಲ್ಲಿ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು. ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಪ್ರವಾದಿಗಳನ್ನೂ, ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿಹೋಗುವಂತೆ ಮಾಡುವೆನು.
וְהָיָ֗ה כִּֽי־יִנָּבֵ֣א אִישׁ֮ עֹוד֒ וְאָמְר֣וּ אֵ֠לָיו אָבִ֨יו וְאִמֹּ֤ו יֹֽלְדָיו֙ לֹ֣א תִֽחְיֶ֔ה כִּ֛י שֶׁ֥קֶר דִּבַּ֖רְתָּ בְּשֵׁ֣ם יְהוָ֑ה וּדְקָרֻ֜הוּ אָבִ֧יהוּ וְאִמֹּ֛ו יֹלְדָ֖יו בְּהִנָּבְאֹֽו׃ 3
ಯಾವನಾದರೂ ಇನ್ನು ಪ್ರವಾದಿಸಿದರೆ, ಅವನ ಹೆತ್ತವರಾದ ತಂದೆತಾಯಿಗಳು ಅವನಿಗೆ, ‘ನೀನು ಬದುಕಬಾರದು, ಏಕೆಂದರೆ ಯೆಹೋವ ದೇವರ ಹೆಸರಿನಲ್ಲಿ ಸುಳ್ಳು ಹೇಳುತ್ತೀ,’ ಎಂದು ಹೇಳುವರು. ಅವನು ಪ್ರವಾದಿಸುವಾಗ ಅವನ ತಂದೆತಾಯಿಗಳು ಅವನನ್ನು ಇರಿದುಬಿಡುವರು.
וְהָיָ֣ה ׀ בַּיֹּ֣ום הַה֗וּא יֵבֹ֧שׁוּ הַנְּבִיאִ֛ים אִ֥ישׁ מֵחֶזְיֹנֹ֖ו בְּהִנָּֽבְאֹתֹ֑ו וְלֹ֧א יִלְבְּשׁ֛וּ אַדֶּ֥רֶת שֵׂעָ֖ר לְמַ֥עַן כַּחֵֽשׁ׃ 4
“ಆ ದಿವಸದಲ್ಲಿ, ಪ್ರವಾದಿಗಳು ಪ್ರವಾದಿಸುವಾಗ, ಅವರು ತಮ್ಮ ತಮ್ಮ ದರ್ಶನಗಳಿಗೆ ನಾಚಿಕೆಪಡುವರು. ಅವರು ಮೋಸಗೊಳಿಸಲು ಪ್ರವಾದಿಯ ಒರಟಾದ ವಸ್ತ್ರವನ್ನು ಧರಿಸುವುದಿಲ್ಲ.
וְאָמַ֕ר לֹ֥א נָבִ֖יא אָנֹ֑כִי אִישׁ־עֹבֵ֤ד אֲדָמָה֙ אָנֹ֔כִי כִּ֥י אָדָ֖ם הִקְנַ֥נִי מִנְּעוּרָֽי׃ 5
ಆದರೆ ಅವನು, ‘ನಾನು ಪ್ರವಾದಿಯಲ್ಲ, ನಾನು ಹೊಲದಲ್ಲಿ ವ್ಯವಸಾಯ ಮಾಡುವವನು, ಚಿಕ್ಕಂದಿನಿಂದ ನಾನು ಗುಲಾಮನಾಗಿದ್ದೇನೆ,’ ಎಂದು ಹೇಳುವನು.
וְאָמַ֣ר אֵלָ֔יו מָ֧ה הַמַּכֹּ֛ות הָאֵ֖לֶּה בֵּ֣ין יָדֶ֑יךָ וְאָמַ֕ר אֲשֶׁ֥ר הֻכֵּ֖יתִי בֵּ֥ית מְאַהֲבָֽי׃ ס 6
ಆಗ ಒಬ್ಬನು ಅವನಿಗೆ, ‘ನಿನ್ನ ಕೈಗಳಲ್ಲಿರುವ ಈ ಗಾಯಗಳು ಏನು?’ ಎಂದು ಕೇಳಿದರೆ, ಅವನು, ‘ನನ್ನ ಸ್ನೇಹಿತರ ಮನೆಯಲ್ಲಿ ನನಗುಂಟಾದ ಗಾಯಗಳೇ,’ ಅನ್ನುವನು.
חֶ֗רֶב עוּרִ֤י עַל־רֹעִי֙ וְעַל־גֶּ֣בֶר עֲמִיתִ֔י נְאֻ֖ם יְהוָ֣ה צְבָאֹ֑ות הַ֤ךְ אֶת־הָֽרֹעֶה֙ וּתְפוּצֶ֣יןָ הַצֹּ֔אן וַהֲשִׁבֹתִ֥י יָדִ֖י עַל־הַצֹּעֲרִֽים׃ 7
“ಖಡ್ಗವೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ ಎಚ್ಚರವಾಗು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಕುರುಬನನ್ನು ಹೊಡೆ, ಆಗ ಕುರಿಗಳು ಚದರಿಹೋಗುವುವು. ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.
וְהָיָ֤ה בְכָל־הָאָ֙רֶץ֙ נְאֻם־יְהוָ֔ה פִּֽי־שְׁנַ֣יִם בָּ֔הּ יִכָּרְת֖וּ יִגְוָ֑עוּ וְהַשְּׁלִשִׁ֖ית יִוָּ֥תֶר בָּֽהּ׃ 8
ಯೆಹೋವ ದೇವರು ಹೀಗೆ ಹೇಳುತ್ತಾರೆ, ಸಮಸ್ತ ದೇಶದಲ್ಲಿ ಮೂರರಲ್ಲಿ ಎರಡು ಪಾಲು ಹತರಾಗಿ ನಾಶವಾಗುವರು. ಆದರೆ ಮೂರನೆಯ ಪಾಲು, ಅದರಲ್ಲಿ ಉಳಿಯುವರು.
וְהֵבֵאתִ֤י אֶת־הַשְּׁלִשִׁית֙ בָּאֵ֔שׁ וּצְרַפְתִּים֙ כִּצְרֹ֣ף אֶת־הַכֶּ֔סֶף וּבְחַנְתִּ֖ים כִּבְחֹ֣ן אֶת־הַזָּהָ֑ב ה֣וּא ׀ יִקְרָ֣א בִשְׁמִ֗י וַֽאֲנִי אֶעֱנֶ֣ה אֹתֹ֔ו אָמַ֙רְתִּי֙ עַמִּ֣י ה֔וּא וְה֥וּא יֹאמַ֖ר יְהוָ֥ה אֱלֹהָֽי׃ ס 9
ಈ ಮೂರನೆಯ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ, ಬೆಳ್ಳಿಯನ್ನು ಶುದ್ಧ ಮಾಡುವಂತೆ ಶುದ್ಧಮಾಡುವೆನು. ಬಂಗಾರವನ್ನು ಶೋಧಿಸುವ ಪ್ರಕಾರ ಅವರನ್ನು ಶೋಧಿಸುವೆನು. ಅವರು ನನ್ನ ಹೆಸರನ್ನು ಕರೆಯುವರು. ನಾನು ಅವರಿಗೆ ಉತ್ತರಕೊಡುವೆನು. ನಾನು, ‘ಇವರು ನನ್ನ ಜನರೆಂದು ಹೇಳುವೆನು,’ ‘ಯೆಹೋವ ದೇವರು ನಮ್ಮ ದೇವರು’ ಎಂದು ಅವರು ಹೇಳುವರು,” ಎಂದು ಹೇಳುತ್ತೇನೆ.

< זְכַרְיָה 13 >