< שְׁמֹות 23 >

לֹ֥א תִשָּׂ֖א שֵׁ֣מַע שָׁ֑וְא אַל־תָּ֤שֶׁת יָֽדְךָ֙ עִם־רָשָׁ֔ע לִהְיֹ֖ת עֵ֥ד חָמָֽס׃ ס 1
“ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ದುರುದ್ದೇಶಪೂರಿತ ಸಾಕ್ಷಿಯಾಗುವ ಮೂಲಕ ದುಷ್ಟರಿಗೆ ಸಹಾಯಮಾಡಬೇಡ.
לֹֽא־תִהְיֶ֥ה אַחֲרֵֽי־רַבִּ֖ים לְרָעֹ֑ת וְלֹא־תַעֲנֶ֣ה עַל־רִ֗ב לִנְטֹ֛ת אַחֲרֵ֥י רַבִּ֖ים לְהַטֹּֽת׃ 2
“ಕೆಟ್ಟದ್ದನ್ನು ಮಾಡುವವರು ಬಹುಮಂದಿ ಆದರೂ ನೀವು ಅವರನ್ನು ಹಿಂಬಾಲಿಸಬೇಡ. ಬಹುಮಂದಿಯೊಂದಿಗೆ ನ್ಯಾಯಕ್ಕೆ ವಿರುದ್ಧವಾಗಿ ವ್ಯಾಜ್ಯದಲ್ಲಿ ಸಾಕ್ಷಿಕೊಡಬೇಡ.
וְדָ֕ל לֹ֥א תֶהְדַּ֖ר בְּרִיבֹֽו׃ ס 3
ಬಡವನಿಗೂ ವ್ಯಾಜ್ಯದಲ್ಲಿ ಮುಖದಾಕ್ಷಿಣ್ಯ ಮಾಡಬೇಡ.
כִּ֣י תִפְגַּ֞ע שֹׁ֧ור אֹֽיִבְךָ֛ אֹ֥ו חֲמֹרֹ֖ו תֹּעֶ֑ה הָשֵׁ֥ב תְּשִׁיבֶ֖נּוּ לֹֽו׃ ס 4
“ನೀವು ವೈರಿಯ ಎತ್ತಾಗಲಿ, ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗುವಾಗ, ಅದು ನಿಮಗೆ ಸಿಕ್ಕಿದರೆ ನೀವು ಅದನ್ನು ಖಂಡಿತವಾಗಿ ತಿರುಗಿ ಅವನಿಗೆ ತಂದುಕೊಡಬೇಕು.
כִּֽי־תִרְאֶ֞ה חֲמֹ֣ור שֹׂנַאֲךָ֗ רֹבֵץ֙ תַּ֣חַת מַשָּׂאֹ֔ו וְחָדַלְתָּ֖ מֵעֲזֹ֣ב לֹ֑ו עָזֹ֥ב תַּעֲזֹ֖ב עִמֹּֽו׃ ס 5
ನಿಮ್ಮನ್ನು ಹಗೆ ಮಾಡುವವನ ಕತ್ತೆಯು ತನ್ನ ಹೊರೆಯ ಕೆಳಗೆ ಬಿದ್ದಿರುವುದನ್ನು ನೀವು ಕಂಡಾಗ, ಅವನಿಗೆ ಸಹಾಯ ಮಾಡುವುದಕ್ಕೆ ಮನಸ್ಸಿಲ್ಲದಿದ್ದರೂ ನೀವು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು.
לֹ֥א תַטֶּ֛ה מִשְׁפַּ֥ט אֶבְיֹנְךָ֖ בְּרִיבֹֽו׃ 6
“ಬಡವನ ವ್ಯಾಜ್ಯದಲ್ಲಿ ನ್ಯಾಯವನ್ನು ತಪ್ಪಿಸಿ ತೀರ್ಪುಕೊಡಬಾರದು.
מִדְּבַר־שֶׁ֖קֶר תִּרְחָ֑ק וְנָקִ֤י וְצַדִּיק֙ אַֽל־תַּהֲרֹ֔ג כִּ֥י לֹא־אַצְדִּ֖יק רָשָֽׁע׃ 7
ಸುಳ್ಳಿನ ವಿಷಯಗಳಿಂದ ನೀವು ದೂರವಿರಬೇಕು. ನಿರಪರಾಧಿ, ನೀತಿವಂತ ಆದ ವ್ಯಕ್ತಿಗೆ ಮರಣದಂಡನೆ ವಿಧಿಸಬಾರದು. ಅಂಥ ದುಷ್ಕೃತ್ಯ ಮಾಡಿದವನಿಗೆ ನಾನು ಶಿಕ್ಷೆ ವಿಧಿಸದೆ ಬಿಡುವುದಿಲ್ಲ.
וְשֹׁ֖חַד לֹ֣א תִקָּ֑ח כִּ֤י הַשֹּׁ֙חַד֙ יְעַוֵּ֣ר פִּקְחִ֔ים וִֽיסַלֵּ֖ף דִּבְרֵ֥י צַדִּיקִֽים׃ 8
“ಲಂಚವನ್ನು ತೆಗೆದುಕೊಳ್ಳಬಾರದು. ಏಕೆಂದರೆ ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ, ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ತಪ್ಪಿಸುತ್ತದೆ.
וְגֵ֖ר לֹ֣א תִלְחָ֑ץ וְאַתֶּ֗ם יְדַעְתֶּם֙ אֶת־נֶ֣פֶשׁ הַגֵּ֔ר כִּֽי־גֵרִ֥ים הֱיִיתֶ֖ם בְּאֶ֥רֶץ מִצְרָֽיִם׃ 9
“ಪರದೇಶಿಯರನ್ನು ಪೀಡಿಸಬಾರದು. ಏಕೆಂದರೆ ಈಜಿಪ್ಟ್ ದೇಶದಲ್ಲಿ ನೀವೂ ಪರದೇಶಿಗಳಾದ್ದಿರಷ್ಟೇ, ಅಂಥವರ ಮನೋವ್ಯಥೆಯನ್ನು ನಿಮಗೆ ತಿಳಿದಿದೆ.
וְשֵׁ֥שׁ שָׁנִ֖ים תִּזְרַ֣ע אֶת־אַרְצֶ֑ךָ וְאָסַפְתָּ֖ אֶת־תְּבוּאָתָֽהּ׃ 10
“ಆರು ವರ್ಷ ನಿಮ್ಮ ಭೂಮಿಗೆ ಬೀಜ ಹಾಕಿ, ಅದರ ಬೆಳೆಯನ್ನು ಕೂಡಿಸಬೇಕು.
וְהַשְּׁבִיעִ֞ת תִּשְׁמְטֶ֣נָּה וּנְטַשְׁתָּ֗הּ וְאָֽכְלוּ֙ אֶבְיֹנֵ֣י עַמֶּ֔ךָ וְיִתְרָ֕ם תֹּאכַ֖ל חַיַּ֣ת הַשָּׂדֶ֑ה כֵּֽן־תַּעֲשֶׂ֥ה לְכַרְמְךָ֖ לְזֵיתֶֽךָ׃ 11
ಆದರೆ ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು, ಅದನ್ನು ಬೀಳುಬಿಡಬೇಕು. ಆಗ ನಿಮ್ಮ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ. ಅವರು ಬಿಟ್ಟದ್ದನ್ನು ಕಾಡುಮೃಗಗಳು ತಿನ್ನಲಿ. ನಿಮ್ಮ ದ್ರಾಕ್ಷಿತೋಟದ, ಓಲಿವ್ ಮರಗಳ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು.
שֵׁ֤שֶׁת יָמִים֙ תַּעֲשֶׂ֣ה מַעֲשֶׂ֔יךָ וּבַיֹּ֥ום הַשְּׁבִיעִ֖י תִּשְׁבֹּ֑ת לְמַ֣עַן יָנ֗וּחַ שֹֽׁורְךָ֙ וַחֲמֹרֶ֔ךָ וְיִנָּפֵ֥שׁ בֶּן־אֲמָתְךָ֖ וְהַגֵּֽר׃ 12
“ಆರು ದಿವಸ ನೀವು ನಿಮ್ಮ ಕೆಲಸಗಳನ್ನು ಮಾಡಬೇಕು. ಏಳನೆಯ ದಿನದಲ್ಲಿ ನೀವು, ನಿಮ್ಮ ಎತ್ತು ಮತ್ತು ನಿಮ್ಮ ಕತ್ತೆ ವಿಶ್ರಮಿಸಿಕೊಳ್ಳಬೇಕು. ಇದಲ್ಲದೆ ನಿಮ್ಮ ಮನೆಯಲ್ಲಿ ಜನಿಸಿದ ದಾಸದಾಸಿಯರೂ ಪರದೇಶಸ್ಥರೂ ದಣಿವು ಆರಿಸಿಕೊಳ್ಳಲಿ.
וּבְכֹ֛ל אֲשֶׁר־אָמַ֥רְתִּי אֲלֵיכֶ֖ם תִּשָּׁמֵ֑רוּ וְשֵׁ֨ם אֱלֹהִ֤ים אֲחֵרִים֙ לֹ֣א תַזְכִּ֔ירוּ לֹ֥א יִשָּׁמַ֖ע עַל־פִּֽיךָ׃ 13
“ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಜಾಗರೂಕತೆಯಿಂದ ಕೈಗೊಳ್ಳಬೇಕು. ಬೇರೆ ದೇವರುಗಳ ಹೆಸರನ್ನು ಎತ್ತಬೇಡ. ಅದನ್ನು ಉಚ್ಚರಿಸಲೂ ಬೇಡ.
שָׁלֹ֣שׁ רְגָלִ֔ים תָּחֹ֥ג לִ֖י בַּשָּׁנָֽה׃ 14
“ವರ್ಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡಬೇಕು.
אֶת־חַ֣ג הַמַּצֹּות֮ תִּשְׁמֹר֒ שִׁבְעַ֣ת יָמִים֩ תֹּאכַ֨ל מַצֹּ֜ות כּֽ͏ַאֲשֶׁ֣ר צִוִּיתִ֗ךָ לְמֹועֵד֙ חֹ֣דֶשׁ הָֽאָבִ֔יב כִּי־בֹ֖ו יָצָ֣אתָ מִמִּצְרָ֑יִם וְלֹא־יֵרָא֥וּ פָנַ֖י רֵיקָֽם׃ 15
“ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ಅಬೀಬ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳವರೆಗೆ ನಾನು ನಿಮಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ನೀವು ಆ ತಿಂಗಳಲ್ಲೇ ಈಜಿಪ್ಟಿನಿಂದ ಹೊರಗೆ ಬಂದಿದ್ದೀರಿ. “ಒಬ್ಬರೂ ಕಾಣಿಕೆಯಿಲ್ಲದೆ ಬರಿಗೈಯಿಂದ ನನ್ನ ಸನ್ನಿಧಿಗೆ ಬರಬಾರದು.
וְחַ֤ג הַקָּצִיר֙ בִּכּוּרֵ֣י מַעֲשֶׂ֔יךָ אֲשֶׁ֥ר תִּזְרַ֖ע בַּשָּׂדֶ֑ה וְחַ֤ג הָֽאָסִף֙ בְּצֵ֣את הַשָּׁנָ֔ה בְּאָסְפְּךָ֥ אֶֽת־מַעֲשֶׂ֖יךָ מִן־הַשָּׂדֶֽה׃ 16
“ನೀವು ಬಿತ್ತಿದ ಹೊಲದಲ್ಲಿ ಪ್ರಥಮ ಫಲವು ದೊರೆತಾಗ ಸುಗ್ಗಿ ಹಬ್ಬವನ್ನು ಆಚರಿಸಬೇಕು. “ಹೊಲತೋಟಗಳ ಬೆಳೆಯನ್ನು ಕೂಡಿಸುವಾಗ ಅಂದರೆ, ವರ್ಷದ ಕೊನೆಯಲ್ಲಿ ಫಲಸಂಗ್ರಹದ ಹಬ್ಬವನ್ನು ಆಚರಿಸಬೇಕು.
שָׁלֹ֥שׁ פְּעָמִ֖ים בַּשָּׁנָ֑ה יֵרָאֶה֙ כָּל־זְכ֣וּרְךָ֔ אֶל־פְּנֵ֖י הָאָדֹ֥ן ׀ יְהוָֽה׃ 17
“ವರ್ಷಕ್ಕೆ ಮೂರು ಸಾರಿ ನಿಮ್ಮಲ್ಲಿರುವ ಪುರುಷರೆಲ್ಲಾ ಸಾರ್ವಭೌಮ ಯೆಹೋವ ದೇವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
לֹֽא־תִזְבַּ֥ח עַל־חָמֵ֖ץ דַּם־זִבְחִ֑י וְלֹֽא־יָלִ֥ין חֵֽלֶב־חַגִּ֖י עַד־בֹּֽקֶר׃ 18
“ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. “ಯಾವುದೇ ಹಬ್ಬದ ಅರ್ಪಣೆಯಲ್ಲಿ ಕೊಬ್ಬನ್ನು ಬೆಳಗಿನವರೆಗೆ ಇಟ್ಟುಕೊಳ್ಳಬಾರದು.
רֵאשִׁ֗ית בִּכּוּרֵי֙ אַדְמָ֣תְךָ֔ תָּבִ֕יא בֵּ֖ית יְהוָ֣ה אֱלֹהֶ֑יךָ לֹֽא־תְבַשֵּׁ֥ל גְּדִ֖י בַּחֲלֵ֥ב אִמֹּֽו׃ ס 19
“ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಅತ್ಯುತ್ತಮವಾದದ್ದನ್ನು ನಿಮ್ಮ ಯೆಹೋವ ದೇವರ ಆಲಯಕ್ಕೆ ತರಬೇಕು. “ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.
הִנֵּ֨ה אָנֹכִ֜י שֹׁלֵ֤חַ מַלְאָךְ֙ לְפָנֶ֔יךָ לִשְׁמָרְךָ֖ בַּדָּ֑רֶךְ וְלַהֲבִ֣יאֲךָ֔ אֶל־הַמָּקֹ֖ום אֲשֶׁ֥ר הֲכִנֹֽתִי׃ 20
“ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವುದಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ತರುವುದಕ್ಕೋಸ್ಕರವೂ ನಾನು ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ.
הִשָּׁ֧מֶר מִפָּנָ֛יו וּשְׁמַ֥ע בְּקֹלֹ֖ו אַל־תַּמֵּ֣ר בֹּ֑ו כִּ֣י לֹ֤א יִשָּׂא֙ לְפִשְׁעֲכֶ֔ם כִּ֥י שְׁמִ֖י בְּקִרְבֹּֽו׃ 21
ಅವನ ವಿಷಯದಲ್ಲಿ ಜಾಗ್ರತೆಯಾಗಿದ್ದು, ಅವನ ಮಾತಿಗೆ ವಿಧೇಯರಾಗಿರಿ. ಅವನಿಗೆ ಕೋಪವನ್ನೆಬ್ಬಿಸಬೇಡಿರಿ. ಏಕೆಂದರೆ ನನ್ನ ಹೆಸರು ಅವನಲ್ಲಿ ಇರುವುದರಿಂದ ಅವನು ನಿಮ್ಮ ದ್ರೋಹಗಳನ್ನು ಮನ್ನಿಸುವುದಿಲ್ಲ.
כִּ֣י אִם־שָׁמֹ֤עַ תִּשְׁמַע֙ בְּקֹלֹ֔ו וְעָשִׂ֕יתָ כֹּ֖ל אֲשֶׁ֣ר אֲדַבֵּ֑ר וְאָֽיַבְתִּי֙ אֶת־אֹ֣יְבֶ֔יךָ וְצַרְתִּ֖י אֶת־צֹרְרֶֽיךָ׃ 22
ಅವನ ಮಾತಿಗೆ ನೀವು ನಿಜವಾಗಿಯೂ ವಿಧೇಯರಾಗಿ ನಾನು ಹೇಳಿದ್ದನ್ನೆಲ್ಲಾ ನೀವು ಮಾಡಿದರೆ, ನಿಮ್ಮ ಶತ್ರುಗಳಿಗೆ ನಾನು ಶತ್ರುವಾಗಿಯೂ ನಿಮ್ಮ ವಿರೋಧಿಗಳಿಗೆ ನಾನು ವಿರೋಧಿಯಾಗಿಯೂ ಇರುವೆನು.
כִּֽי־יֵלֵ֣ךְ מַלְאָכִי֮ לְפָנֶיךָ֒ וֶהֱבִֽיאֲךָ֗ אֶל־הָֽאֱמֹרִי֙ וְהַ֣חִתִּ֔י וְהַפְּרִזִּי֙ וְהַֽכְּנַעֲנִ֔י הַחִוִּ֖י וְהַיְבוּסִ֑י וְהִכְחַדְתִּֽיו׃ 23
ಏಕೆಂದರೆ ನನ್ನ ದೂತನು ನಿಮ್ಮ ಮುಂದೆ ಹೋಗಿ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಮತ್ತು ಯೆಬೂಸಿಯರು ಇರುವ ದೇಶಕ್ಕೆ ನಿಮ್ಮನ್ನು ಬರಮಾಡುವನು. ಅವರನ್ನು ನಾನು ನಿರ್ಮೂಲ ಮಾಡುವೆನು.
לֹֽא־תִשְׁתַּחֲוֶ֤ה לֵאלֹֽהֵיהֶם֙ וְלֹ֣א תָֽעָבְדֵ֔ם וְלֹ֥א תַעֲשֶׂ֖ה כְּמַֽעֲשֵׂיהֶ֑ם כִּ֤י הָרֵס֙ תְּהָ֣רְסֵ֔ם וְשַׁבֵּ֥ר תְּשַׁבֵּ֖ר מַצֵּבֹתֵיהֶֽם׃ 24
ಅವರ ದೇವರುಗಳಿಗೆ ನೀವು ಅಡ್ಡಬೀಳಲೂಬಾರದು, ಅವುಗಳನ್ನು ಆರಾಧಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ, ಅವರನ್ನು ನಿರ್ಮೂಲ ಮಾಡಿಬಿಟ್ಟು, ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದುಹಾಕಬೇಕು.
וַעֲבַדְתֶּ֗ם אֵ֚ת יְהוָ֣ה אֱלֹֽהֵיכֶ֔ם וּבֵרַ֥ךְ אֶֽת־לַחְמְךָ֖ וְאֶת־מֵימֶ֑יךָ וַהֲסִרֹתִ֥י מַחֲלָ֖ה מִקִּרְבֶּֽךָ׃ 25
ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡಬೇಕು. ಆಗ ಆತನು ನಿಮ್ಮ ಆಹಾರವನ್ನೂ ನೀರನ್ನೂ ಆಶೀರ್ವದಿಸುವನು. ನಾನು ವ್ಯಾಧಿಯನ್ನು ನಿಮ್ಮ ಮಧ್ಯದಿಂದ ತೊಲಗಿಸಿಬಿಡುವೆನು.
לֹ֥א תִהְיֶ֛ה מְשַׁכֵּלָ֥ה וַעֲקָרָ֖ה בְּאַרְצֶ֑ךָ אֶת־מִסְפַּ֥ר יָמֶ֖יךָ אֲמַלֵּֽא׃ 26
ಗರ್ಭ ಸ್ರಾವವಾಗಲಿ, ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವುದಿಲ್ಲ. ನಾನು ನಿಮಗೆ ಸಂಪೂರ್ಣವಾದ ಆಯುಷ್ಯವನ್ನು ಅನುಗ್ರಹಿಸುವೆನು.
אֶת־אֵֽימָתִי֙ אֲשַׁלַּ֣ח לְפָנֶ֔יךָ וְהַמֹּתִי֙ אֶת־כָּל־הָעָ֔ם אֲשֶׁ֥ר תָּבֹ֖א בָּהֶ֑ם וְנָתַתִּ֧י אֶת־כָּל־אֹיְבֶ֛יךָ אֵלֶ֖יךָ עֹֽרֶף׃ 27
“ನೀವು ಹೋಗುವ ಎಲ್ಲ ಜಾಗಗಳಲ್ಲಿಯೂ ನನ್ನ ಮೇಲಿನ ಭೀತಿಯನ್ನು ನಿಮ್ಮನ್ನು ಎದುರಿಸುವ ಜನರಲ್ಲಿ ಉಂಟುಮಾಡಿಸಿ, ಕಳವಳವನ್ನು ಉಂಟುಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿಸುವಂತೆ ಮಾಡುವೆನು.
וְשָׁלַחְתִּ֥י אֶת־הַצִּרְעָ֖ה לְפָנֶ֑יךָ וְגֵרְשָׁ֗ה אֶת־הַחִוִּ֧י אֶת־הַֽכְּנַעֲנִ֛י וְאֶת־הַחִתִּ֖י מִלְּפָנֶֽיךָ׃ 28
ಹಿವ್ವಿಯರು, ಕಾನಾನ್ಯರು ಮತ್ತು ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳಹಿಸುವೆನು.
לֹ֧א אֲגָרְשֶׁ֛נּוּ מִפָּנֶ֖יךָ בְּשָׁנָ֣ה אֶחָ֑ת פֶּן־תִּהְיֶ֤ה הָאָ֙רֶץ֙ שְׁמָמָ֔ה וְרַבָּ֥ה עָלֶ֖יךָ חַיַּ֥ת הַשָּׂדֶֽה׃ 29
ಭೂಮಿಯು ಬರಿದಾಗದಂತೆಯೂ ಕಾಡುಮೃಗಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರ್ಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ
מְעַ֥ט מְעַ֛ט אֲגָרְשֶׁ֖נּוּ מִפָּנֶ֑יךָ עַ֚ד אֲשֶׁ֣ר תִּפְרֶ֔ה וְנָחַלְתָּ֖ אֶת־הָאָֽרֶץ׃ 30
ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿಸಿಕೊಳ್ಳುವವರೆಗೆ ಸ್ವಲ್ಪ ಸ್ವಲ್ಪವಾಗಿ ಹೊರಡಿಸುತ್ತಿರುವೆನು.
וְשַׁתִּ֣י אֶת־גְּבֻלְךָ֗ מִיַּם־סוּף֙ וְעַד־יָ֣ם פְּלִשְׁתִּ֔ים וּמִמִּדְבָּ֖ר עַד־הַנָּהָ֑ר כִּ֣י ׀ אֶתֵּ֣ן בְּיֶדְכֶ֗ם אֵ֚ת יֹשְׁבֵ֣י הָאָ֔רֶץ וְגֵרַשְׁתָּ֖מֹו מִפָּנֶֽיךָ׃ 31
“ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದವರೆಗೆ ಮರುಭೂಮಿಯಿಂದ ನದಿಯವರೆಗೂ ನಿಮ್ಮ ಮೇರೆಗಳನ್ನು ನೇಮಿಸುವೆನು. ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವಿರಿ.
לֹא־תִכְרֹ֥ת לָהֶ֛ם וְלֵאלֹֽהֵיהֶ֖ם בְּרִֽית׃ 32
ಅವರ ಸಂಗಡ, ಅವರ ದೇವರುಗಳ ಸಂಗಡ ಯಾವ ಒಡಂಬಡಿಕೆಯನ್ನು ಮಾಡಿಕೊಳ್ಳಬಾರದು.
לֹ֤א יֵשְׁבוּ֙ בְּאַרְצְךָ֔ פֶּן־יַחֲטִ֥יאוּ אֹתְךָ֖ לִ֑י כִּ֤י תַעֲבֹד֙ אֶת־אֱלֹ֣הֵיהֶ֔ם כִּֽי־יִהְיֶ֥ה לְךָ֖ לְמֹוקֵֽשׁ׃ פ 33
ನನಗೆ ವಿರೋಧವಾಗಿ ನೀವು ಪಾಪಮಾಡದಂತಾಗಬೇಕಾದರೆ, ಅವರು ನಿಮ್ಮ ದೇಶದಲ್ಲಿ ವಾಸವಾಗಿರಬಾರದು. ಏಕೆಂದರೆ ನೀವು ಅವರ ದೇವರುಗಳನ್ನು ಆರಾಧಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವುದು.”

< שְׁמֹות 23 >