< 2 שְׁמוּאֵל 17 >

וַיֹּ֥אמֶר אֲחִיתֹ֖פֶל אֶל־אַבְשָׁלֹ֑ם אֶבְחֲרָ֣ה נָּ֗א שְׁנֵים־עָשָׂ֥ר אֶ֙לֶף֙ אִ֔ישׁ וְאָק֛וּמָה וְאֶרְדְּפָ֥ה אַחֲרֵי־דָוִ֖ד הַלָּֽיְלָה׃ 1
ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆಯ್ದುಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು.
וְאָבֹ֣וא עָלָ֗יו וְה֤וּא יָגֵ֙עַ֙ וּרְפֵ֣ה יָדַ֔יִם וְהַֽחֲרַדְתִּ֣י אֹתֹ֔ו וְנָ֖ס כָּל־הָעָ֣ם אֲשֶׁר־אִתֹּ֑ו וְהִכֵּיתִ֥י אֶת־הַמֶּ֖לֶךְ לְבַדֹּֽו׃ 2
ಅವನು ದಣಿದು ಅವನ ಕೈ ದುರ್ಬಲವಾಗಿರುವಾಗ, ಹೋಗಿ ಅವನ ಮೇಲೆ ಬಿದ್ದು ಅವನನ್ನು ಹೆದರಿಸುವೆನು. ಆಗ ಅವನ ಸಂಗಡ ಇರುವ ಜನರೆಲ್ಲರು ಓಡಿಹೋಗುವರು.
וְאָשִׁ֥יבָה כָל־הָעָ֖ם אֵלֶ֑יךָ כְּשׁ֣וּב הַכֹּ֔ל הָאִישׁ֙ אֲשֶׁ֣ר אַתָּ֣ה מְבַקֵּ֔שׁ כָּל־הָעָ֖ם יִהְיֶ֥ה שָׁלֹֽום׃ 3
ಆಗ ನಾನು ಅರಸನನ್ನು ಮಾತ್ರ ಹೊಡೆದು, ಜನರೆಲ್ಲರನ್ನು ತಿರುಗಿ ನಿನ್ನ ಬಳಿಗೆ ತೆಗೆದುಕೊಂಡು ಬರುವೆನು. ನೀನು ಹುಡುಕುವವನು ಸಿಕ್ಕಿದರೆ, ಜನರೆಲ್ಲರು ಹಿಂದಿರುಗಿದ ಹಾಗೆ ಆಗುವುದು. ಜನರೆಲ್ಲರು ಸಮಾಧಾನವಾಗಿರುವರು,” ಎಂದನು.
וַיִּישַׁ֥ר הַדָּבָ֖ר בְּעֵינֵ֣י אַבְשָׁלֹ֑ם וּבְעֵינֵ֖י כָּל־זִקְנֵ֥י יִשְׂרָאֵֽל׃ ס 4
ಈ ಮಾತು ಅಬ್ಷಾಲೋಮನ ದೃಷ್ಟಿಗೂ, ಇಸ್ರಾಯೇಲಿನ ಸಮಸ್ತ ಹಿರಿಯರ ದೃಷ್ಟಿಗೂ ಒಳ್ಳೆಯದಾಗಿ ತೋರಿತು.
וַיֹּ֙אמֶר֙ אַבְשָׁלֹ֔ום קְרָ֣א נָ֔א גַּ֖ם לְחוּשַׁ֣י הָאַרְכִּ֑י וְנִשְׁמְעָ֥ה מַה־בְּפִ֖יו גַּם־הֽוּא׃ 5
ಆದರೆ ಅಬ್ಷಾಲೋಮನು, “ಅರ್ಕಿಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ,” ಎಂದನು.
וַיָּבֹ֣א חוּשַׁי֮ אֶל־אַבְשָׁלֹום֒ וַיֹּאמֶר֩ אַבְשָׁלֹ֨ום אֵלָ֜יו לֵאמֹ֗ר כַּדָּבָ֤ר הַזֶּה֙ דִּבֶּ֣ר אֲחִיתֹ֔פֶל הֲנַעֲשֶׂ֖ה אֶת־דְּבָרֹ֑ו אִם־אַ֖יִן אַתָּ֥ה דַבֵּֽר׃ ס 6
ಹೂಷೈ ಅಬ್ಷಾಲೋಮನ ಬಳಿಗೆ ಬಂದಾಗ, ಅಬ್ಷಾಲೋಮನು ಅವನಿಗೆ, “ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ ನೀನು ಮಾತನಾಡು,” ಎಂದನು.
וַיֹּ֥אמֶר חוּשַׁ֖י אֶל־אַבְשָׁלֹ֑ום לֹֽא־טֹובָ֧ה הָעֵצָ֛ה אֲשֶׁר־יָעַ֥ץ אֲחִיתֹ֖פֶל בַּפַּ֥עַם הַזֹּֽאת׃ 7
ಆಗ ಹೂಷೈ ಅಬ್ಷಾಲೋಮನಿಗೆ, “ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೆಯದಲ್ಲ,” ಎಂದನು.
וַיֹּ֣אמֶר חוּשַׁ֗י אַתָּ֣ה יָ֠דַעְתָּ אֶת־אָבִ֨יךָ וְאֶת־אֲנָשָׁ֜יו כִּ֧י גִבֹּרִ֣ים הֵ֗מָּה וּמָרֵ֥י נֶ֙פֶשׁ֙ הֵ֔מָּה כְּדֹ֥ב שַׁכּ֖וּל בַּשָּׂדֶ֑ה וְאָבִ֙יךָ֙ אִ֣ישׁ מִלְחָמָ֔ה וְלֹ֥א יָלִ֖ין אֶת־הָעָֽם׃ 8
ಹೂಷೈ, “ನಿನ್ನ ತಂದೆಯೂ, ಅವನ ಮನುಷ್ಯರೂ ಪರಾಕ್ರಮಶಾಲಿಗಳು. ಅವರು ಅಡವಿಯಲ್ಲಿ ಮರಿಗಳನ್ನು ಕಳೆದುಕೊಂಡ ಕರಡಿಯ ಹಾಗೆಯೇ ಕೋಪವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು. ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವುದಿಲ್ಲ.
הִנֵּ֨ה עַתָּ֤ה הֽוּא־נֶחְבָּא֙ בְּאַחַ֣ת הַפְּחָתִ֔ים אֹ֖ו בְּאַחַ֣ד הַמְּקֹומֹ֑ת וְהָיָ֗ה כִּנְפֹ֤ל בָּהֶם֙ בַּתְּחִלָּ֔ה וְשָׁמַ֤ע הַשֹּׁמֵ֙עַ֙ וְאָמַ֔ר הָֽיְתָה֙ מַגֵּפָ֔ה בָּעָ֕ם אֲשֶׁ֖ר אַחֲרֵ֥י אַבְשָׁלֹֽם׃ 9
ಅವನು ಈಗ ಒಂದು ಗವಿಯಲ್ಲಾದರೂ, ಒಂದು ಸ್ಥಳದಲ್ಲಾದರೂ ಅಡಗಿಕೊಂಡಿದ್ದಾನೆ. ಮೊದಲೇ ಇವರಲ್ಲಿ ಕೆಲವರು ಸತ್ತರೆ, ಅದನ್ನು ಕೇಳುವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು.
וְה֣וּא גַם־בֶּן־חַ֗יִל אֲשֶׁ֥ר לִבֹּ֛ו כְּלֵ֥ב הָאַרְיֵ֖ה הִמֵּ֣ס יִמָּ֑ס כִּֽי־יֹדֵ֤עַ כָּל־יִשְׂרָאֵל֙ כִּי־גִבֹּ֣ור אָבִ֔יךָ וּבְנֵי־חַ֖יִל אֲשֶׁ֥ר אִתֹּֽו׃ 10
ಆಗ ಸಿಂಹ ಹೃದಯರಾದ ಪರಾಕ್ರಮಶಾಲಿಯ ಹೃದಯವು ಸಹ ಸಂಪೂರ್ಣ ಕರಗುವುದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ, ಅವನ ಸಂಗಡ ಇರುವವರು ಪರಾಕ್ರಮಶಾಲಿಗಳೆಂದೂ ಇಸ್ರಾಯೇಲರೆಲ್ಲರು ಬಲ್ಲರು.
כִּ֣י יָעַ֗צְתִּי הֵ֠אָסֹף יֵאָסֵ֨ף עָלֶ֤יךָ כָל־יִשְׂרָאֵל֙ מִדָּן֙ וְעַד־בְּאֵ֣ר שֶׁ֔בַע כַּחֹ֥ול אֲשֶׁר־עַל־הַיָּ֖ם לָרֹ֑ב וּפָנֶ֥יךָ הֹלְכִ֖ים בַּקְרָֽב׃ 11
“ನಾನು ಹೇಳುವ ಆಲೋಚನೆ ಏನೆಂದರೆ, ದಾನಿನಿಂದ ಬೇರ್ಷೆಬದವರೆಗೂ ವಾಸವಾಗಿರುವ ಇಸ್ರಾಯೇಲರೊಳಗಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ನಿನ್ನ ಬಳಿಯಲ್ಲಿ ಕೂಡಿಸಿ, ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.
וּבָ֣אנוּ אֵלָ֗יו בְּאַחַת (בְּאַחַ֤ד) הַמְּקֹומֹת֙ אֲשֶׁ֣ר נִמְצָ֣א שָׁ֔ם וְנַ֣חְנוּ עָלָ֔יו כַּאֲשֶׁ֛ר יִפֹּ֥ל הַטַּ֖ל עַל־הָאֲדָמָ֑ה וְלֹֽא־נֹ֥ותַר בֹּ֛ו וּבְכָל־הָאֲנָשִׁ֥ים אֲשֶׁר־אִתֹּ֖ו גַּם־אֶחָֽד׃ 12
ಆಗ ನಾವು ಅವನನ್ನು ಕಂಡುಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು, ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ, ಅವನ ಸಂಗಡ ಇರುವ ಸಮಸ್ತ ಜನರಲ್ಲಿ ಒಬ್ಬನಾದರೂ ಉಳಿಯುವುದಿಲ್ಲ.
וְאִם־אֶל־עִיר֙ יֵֽאָסֵ֔ף וְהִשִּׂ֧יאוּ כָֽל־יִשְׂרָאֵ֛ל אֶל־הָעִ֥יר הַהִ֖יא חֲבָלִ֑ים וְסָחַ֤בְנוּ אֹתֹו֙ עַד־הַנַּ֔חַל עַ֛ד אֲשֶֽׁר־לֹא־נִמְצָ֥א שָׁ֖ם גַּם־צְרֹֽור׃ פ 13
ಅವನು ಒಂದು ಪಟ್ಟಣದಲ್ಲಿ ಹೊಕ್ಕಿರುವುದಾದರೆ, ಇಸ್ರಾಯೇಲರೆಲ್ಲರೂ ಆ ಪಟ್ಟಣಕ್ಕೆ ಹಗ್ಗಗಳನ್ನು ತಂದುಹಾಕಿದ ತರುವಾಯ, ನಾವು ಒಂದು ಹರಳಾದರೂ ಅಲ್ಲಿ ಉಳಿಯದಂತೆ ಆ ಊರನ್ನು ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿಬಿಡೋಣ,” ಎಂದನು.
וַיֹּ֤אמֶר אַבְשָׁלֹום֙ וְכָל־אִ֣ישׁ יִשְׂרָאֵ֔ל טֹובָ֗ה עֲצַת֙ חוּשַׁ֣י הָאַרְכִּ֔י מֵעֲצַ֖ת אֲחִיתֹ֑פֶל וַיהוָ֣ה צִוָּ֗ה לְהָפֵ֞ר אֶת־עֲצַ֤ת אֲחִיתֹ֙פֶל֙ הַטֹּובָ֔ה לְבַעֲב֗וּר הָבִ֧יא יְהוָ֛ה אֶל־אַבְשָׁלֹ֖ום אֶת־הָרָעָֽה׃ ס 14
ಆಗ ಅಬ್ಷಾಲೋಮನೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ, “ಅಹೀತೋಫೆಲನ ಆಲೋಚನೆಗಿಂತ ಅರ್ಕಿಯನಾದ ಹೂಷೈಯ ಆಲೋಚನೆ ಒಳ್ಳೆಯದು,” ಎಂದರು. ಏಕೆಂದರೆ ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೆಯ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ಯೆಹೋವ ದೇವರು ಹಾಗೆ ನೇಮಿಸಿದ್ದರು.
וַיֹּ֣אמֶר חוּשַׁ֗י אֶל־צָדֹ֤וק וְאֶל־אֶבְיָתָר֙ הַכֹּ֣הֲנִ֔ים כָּזֹ֣את וְכָזֹ֗את יָעַ֤ץ אֲחִיתֹ֙פֶל֙ אֶת־אַבְשָׁלֹ֔ם וְאֵ֖ת זִקְנֵ֣י יִשְׂרָאֵ֑ל וְכָזֹ֥את וְכָזֹ֖את יָעַ֥צְתִּי אָֽנִי׃ 15
ಹೂಷೈಯು ಯಾಜಕರಾದ ಚಾದೋಕನಿಗೂ, ಅಬಿಯಾತರನಿಗೂ, “ಅಹೀತೋಫೆಲನು ಅಬ್ಷಾಲೋಮನಿಗೂ, ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು.
וְעַתָּ֡ה שִׁלְח֣וּ מְהֵרָה֩ וְהַגִּ֨ידוּ לְדָוִ֜ד לֵאמֹ֗ר אַל־תָּ֤לֶן הַלַּ֙יְלָה֙ בְּעַֽרְבֹ֣ות הַמִּדְבָּ֔ר וְגַ֖ם עָבֹ֣ור תַּעֲבֹ֑ור פֶּ֚ן יְבֻלַּ֣ע לַמֶּ֔לֶךְ וּלְכָל־הָעָ֖ם אֲשֶׁ֥ר אִתֹּֽו׃ 16
ಆದ್ದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀವು ಈ ರಾತ್ರಿ ಅಡವಿಯಲ್ಲಿ ನದಿ ದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡಿ; ಶೀಘ್ರವಾಗಿ ನದಿದಾಟಿ ಮುಂದೆ ಹೋಗಬೇಡಿ; ಇಲ್ಲವಾದರೆ ನೀವೂ, ನಿಮ್ಮ ಜನರೂ ನಾಶವಾಗುವಿರಿ,’ ಎಂದು ಹೇಳಿ ಕಳುಹಿಸಿರಿ,” ಎಂದನು.
וִיהֹונָתָ֨ן וַאֲחִימַ֜עַץ עֹמְדִ֣ים בְּעֵין־רֹגֵ֗ל וְהָלְכָ֤ה הַשִּׁפְחָה֙ וְהִגִּ֣ידָה לָהֶ֔ם וְהֵם֙ יֵֽלְכ֔וּ וְהִגִּ֖ידוּ לַמֶּ֣לֶךְ דָּוִ֑ד כִּ֣י לֹ֥א יוּכְל֛וּ לְהֵרָאֹ֖ות לָבֹ֥וא הָעִֽירָה׃ 17
ಯೋನಾತಾನನೂ, ಅಹೀಮಾಚನೂ ಏನ್ ರೋಗೆಲ್ ಎಂಬಲ್ಲಿ ಇದ್ದರು. ಒಬ್ಬ ಸೇವಕಿ ಹೋಗಿ ಅವರಿಗೆ ತಿಳಿಸಬೇಕಾಗಿತ್ತು. ಅನಂತರ ಅವರು ಹೋಗಿ ಅರಸನಾದ ದಾವೀದನಿಗೆ ಹೇಳಬೇಕಾಗಿತ್ತು. ಏಕೆಂದರೆ ಪಟ್ಟಣದಲ್ಲಿ ಪ್ರವೇಶಿಸುವುದನ್ನು ಬೇರೆಯವರು ನೋಡುವ ಗಂಡಾಂತರಕ್ಕೆ ಒಳಗಾಗಲು ಅಪೇಕ್ಷಿಸಿರಲಿಲ್ಲ.
וַיַּ֤רְא אֹתָם֙ נַ֔עַר וַיַּגֵּ֖ד לְאַבְשָׁלֹ֑ם וַיֵּלְכוּ֩ שְׁנֵיהֶ֨ם מְהֵרָ֜ה וַיָּבֹ֣אוּ ׀ אֶל־בֵּֽית־אִ֣ישׁ בְּבַחוּרִ֗ים וְלֹ֥ו בְאֵ֛ר בַּחֲצֵרֹ֖ו וַיֵּ֥רְדוּ שָֽׁם׃ 18
ಆದರೆ ಒಬ್ಬ ಹುಡುಗನು ಅವರನ್ನು ಕಂಡು ಅಬ್ಷಾಲೋಮನಿಗೆ ತಿಳಿಸಿದನು. ಆದ್ದರಿಂದ ಅವರಿಬ್ಬರು ಶೀಘ್ರವಾಗಿ ಹೋಗಿ, ಬಹುರೀಮಿನಲ್ಲಿರುವ ಒಬ್ಬ ಮನುಷ್ಯನ ಮನೆಯಲ್ಲಿ ಪ್ರವೇಶಿಸಿ, ಅವನ ಅಂಗಳದಲ್ಲಿರುವ ಬಾವಿಯಲ್ಲಿ ಇಳಿದರು.
וַתִּקַּ֣ח הָאִשָּׁ֗ה וַתִּפְרֹ֤שׂ אֶת־הַמָּסָךְ֙ עַל־פְּנֵ֣י הַבְּאֵ֔ר וַתִּשְׁטַ֥ח עָלָ֖יו הָֽרִפֹ֑ות וְלֹ֥א נֹודַ֖ע דָּבָֽר׃ 19
ಆಗ ಆ ಮನೆಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿದಳು. ಈ ಕಾರ್ಯ ಯಾರಿಗೂ ತಿಳಿಯದೆ ಹೋಯಿತು.
וַיָּבֹ֣אוּ עַבְדֵי֩ אַבְשָׁלֹ֨ום אֶֽל־הָאִשָּׁ֜ה הַבַּ֗יְתָה וַיֹּֽאמְרוּ֙ אַיֵּ֗ה אֲחִימַ֙עַץ֙ וִיהֹ֣ונָתָ֔ן וַתֹּ֤אמֶר לָהֶם֙ הָֽאִשָּׁ֔ה עָבְר֖וּ מִיכַ֣ל הַמָּ֑יִם וַיְבַקְשׁוּ֙ וְלֹ֣א מָצָ֔אוּ וַיָּשֻׁ֖בוּ יְרוּשָׁלָֽ͏ִם׃ ס 20
ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು, “ಅಹೀಮಾಚನೂ, ಯೋನಾತಾನನೂ ಎಲ್ಲಿ,” ಎಂದು ಕೇಳಿದರು. ಅವಳು ಅವರಿಗೆ, “ಹಳ್ಳವನ್ನು ದಾಟಿಹೋದರು,” ಎಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂದಿರುಗಿದರು.
וַיְהִ֣י ׀ אַחֲרֵ֣י לֶכְתָּ֗ם וֽ͏ַיַּעֲלוּ֙ מֵֽהַבְּאֵ֔ר וַיֵּ֣לְכ֔וּ וַיַּגִּ֖דוּ לַמֶּ֣לֶךְ דָּוִ֑ד וַיֹּאמְר֣וּ אֶל־דָּוִ֗ד ק֣וּמוּ וְעִבְר֤וּ מְהֵרָה֙ אֶת־הַמַּ֔יִם כִּי־כָ֛כָה יָעַ֥ץ עֲלֵיכֶ֖ם אֲחִיתֹֽפֶל׃ 21
ಇವರು ಹೋದ ತರುವಾಯ, ಅವರು ಬಾವಿಯೊಳಗಿಂದ ಏರಿಹೋಗಿ, ಅರಸನಾದ ದಾವೀದನಿಗೆ, “ನೀನು ಶೀಘ್ರವಾಗಿ ಎದ್ದು ನದಿಯನ್ನು ದಾಟಿ ಹೋಗು; ಏಕೆಂದರೆ ಈ ಪ್ರಕಾರ ಅಹೀತೋಫೆಲನು ನಿನಗೆ ವಿರೋಧವಾಗಿ ಆಲೋಚನೆ ಹೇಳಿದ್ದಾನೆ,” ಎಂದರು.
וַיָּ֣קָם דָּוִ֗ד וְכָל־הָעָם֙ אֲשֶׁ֣ר אִתֹּ֔ו וַיַּעַבְר֖וּ אֶת־הַיַּרְדֵּ֑ן עַד־אֹ֣ור הַבֹּ֗קֶר עַד־אַחַד֙ לֹ֣א נֶעְדָּ֔ר אֲשֶׁ֥ר לֹא־עָבַ֖ר אֶת־הַיַּרְדֵּֽן׃ 22
ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ಎದ್ದು ಯೊರ್ದನನ್ನು ದಾಟಿದರು. ಉದಯವಾದಾಗ ದಾಟಬೇಕಾದವರು ಒಬ್ಬರಾದರೂ ಉಳಿದಿರಲಿಲ್ಲ.
וַאֲחִיתֹ֣פֶל רָאָ֗ה כִּ֣י לֹ֣א נֶעֶשְׂתָה֮ עֲצָתֹו֒ וַיַּחֲבֹ֣שׁ אֶֽת־הַחֲמֹ֗ור וַיָּ֜קָם וַיֵּ֤לֶךְ אֶל־בֵּיתֹו֙ אֶל־עִירֹ֔ו וַיְצַ֥ו אֶל־בֵּיתֹ֖ו וַיֵּחָנַ֑ק וַיָּ֕מָת וַיִּקָּבֵ֖ר בְּקֶ֥בֶר אָבִֽיו׃ ס 23
ಆದರೆ ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ, ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ, ತನ್ನ ಪಟ್ಟಣದಲ್ಲಿರುವ ತನ್ನ ಮನೆಗೆ ಹೋದನು. ಅವನು ಮನೆಯನ್ನು ಕ್ರಮಪಡಿಸಿ, ಉರುಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.
וְדָוִ֖ד בָּ֣א מַחֲנָ֑יְמָה וְאַבְשָׁלֹ֗ם עָבַר֙ אֶת־הַיַּרְדֵּ֔ן ה֕וּא וְכָל־אִ֥ישׁ יִשְׂרָאֵ֖ל עִמֹּֽו׃ 24
ದಾವೀದನು ಮಹನಯಿಮಿಗೆ ಬಂದನು. ಇದಲ್ಲದೆ ಅಬ್ಷಾಲೋಮನೂ, ಅವನ ಸಂಗಡ ಇಸ್ರಾಯೇಲ್ ಮನುಷ್ಯರೂ ಯೊರ್ದನನ್ನು ದಾಟಿದರು.
וְאֶת־עֲמָשָׂ֗א שָׂ֧ם אַבְשָׁלֹ֛ם תַּ֥חַת יֹואָ֖ב עַל־הַצָּבָ֑א וַעֲמָשָׂ֣א בֶן־אִ֗ישׁ וּשְׁמֹו֙ יִתְרָ֣א הַיִּשְׂרְאֵלִ֔י אֲשֶׁר־בָּא֙ אֶל־אֲבִיגַ֣ל בַּת־נָחָ֔שׁ אֲחֹ֥ות צְרוּיָ֖ה אֵ֥ם יֹואָֽב׃ 25
ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯಾಗಿ ಇಟ್ಟಿದ್ದನು. ಈ ಅಮಾಸನು ಇಸ್ರಾಯೇಲನಾದ ಇತ್ರನ ಮಗನು. ಈ ಇತ್ರನು ನಾಹಾಷನ ಮಗಳೂ, ಯೋವಾಬನ ತಾಯಿಯೂ, ಚೆರೂಯಳ ಸಹೋದರಿಯೂ ಆದ ಅಬೀಗೈಲಳನ್ನು ಮದುವೆಯಾಗಿದ್ದನು.
וַיִּ֤חַן יִשְׂרָאֵל֙ וְאַבְשָׁלֹ֔ם אֶ֖רֶץ הַגִּלְעָֽד׃ ס 26
ಇಸ್ರಾಯೇಲರೂ, ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ದಂಡಿಳಿದರು.
וַיְהִ֕י כְּבֹ֥וא דָוִ֖ד מַחֲנָ֑יְמָה וְשֹׁבִ֨י בֶן־נָחָ֜שׁ מֵרַבַּ֣ת בְּנֵֽי־עַמֹּ֗ון וּמָכִ֤יר בֶּן־עַמִּיאֵל֙ מִלֹּ֣א דְבָ֔ר וּבַרְזִלַּ֥י הַגִּלְעָדִ֖י מֵרֹגְלִֽים׃ 27
ದಾವೀದನು ಮಹನಯಿಮಿಗೆ ಬಂದಾಗ, ಅಮ್ಮೋನಿಯರ ರಬ್ಬಾ ಪಟ್ಟಣದ ನಾಹಾಷನ ಮಗ ಶೋಬಿಯೂ, ಲೋದೆಬಾರು ಊರಿನವನಾಗಿರುವ ಅಮ್ಮಿಯೇಲನ ಮಗ ಮಾಕೀರನೂ, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈಯೂ
מִשְׁכָּ֤ב וְסַפֹּות֙ וּכְלִ֣י יֹוצֵ֔ר וְחִטִּ֥ים וּשְׂעֹרִ֖ים וְקֶ֣מַח וְקָלִ֑י וּפֹ֥ול וַעֲדָשִׁ֖ים וְקָלִֽי׃ 28
ಹಾಸಿಗೆಗಳನ್ನು, ಬಟ್ಟಲುಗಳನ್ನು, ಮಡಕೆ, ಗೋಧಿ, ಜವೆಗೋಧಿ, ಹಿಟ್ಟು, ಹುರಿದ ಕಾಳು ಅವರೆ, ಅಲಸಂದಿ,
וּדְבַ֣שׁ וְחֶמְאָ֗ה וְצֹאן֙ וּשְׁפֹ֣ות בָּקָ֔ר הִגִּ֧ישׁוּ לְדָוִ֛ד וְלָעָ֥ם אֲשֶׁר־אִתֹּ֖ו לֶאֱכֹ֑ול כִּ֣י אָמְר֔וּ הָעָ֗ם רָעֵ֛ב וְעָיֵ֥ף וְצָמֵ֖א בַּמִּדְבָּֽר׃ 29
ಹುರಿದ ಕಡಲೆ, ಜೇನುತುಪ್ಪ, ಬೆಣ್ಣೆ, ಕುರಿ, ಹಸುವಿನ ಗಿಣ್ಣು ಇವುಗಳನ್ನು ದಾವೀದನಿಗೂ, ಅವನ ಸಂಗಡ ಇದ್ದ ಜನರಿಗೂ ತಿನ್ನುವುದಕ್ಕೆ ತಂದರು. ಏಕೆಂದರೆ, “ಮರುಭೂಮಿಯಲ್ಲಿ ಜನರು ಹಸಿದು ದಣಿದು ದಾಹಗೊಂಡಿರುವರು,” ಎಂದುಕೊಂಡರು.

< 2 שְׁמוּאֵל 17 >