< 1 דִּבְרֵי הַיָּמִים 21 >

וַיַּֽעֲמֹ֥ד שָׂטָ֖ן עַל־יִשְׂרָאֵ֑ל וַיָּ֙סֶת֙ אֶת־דָּוִ֔יד לִמְנֹ֖ות אֶת־יִשְׂרָאֵֽל׃ 1
ಸೈತಾನನು ಇಸ್ರಾಯೇಲಿಗೆ ವಿರೋಧವಾಗಿ ಎದ್ದು, ಇಸ್ರಾಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದನು.
וַיֹּ֨אמֶר דָּוִ֤יד אֶל־יֹואָב֙ וְאֶל־שָׂרֵ֣י הָעָ֔ם לְכ֗וּ סִפְרוּ֙ אֶת־יִשְׂרָאֵ֔ל מִבְּאֵ֥ר שֶׁ֖בַע וְעַד־דָּ֑ן וְהָבִ֣יאוּ אֵלַ֔י וְאֵדְעָ֖ה אֶת־מִסְפָּרָֽם׃ 2
ಆದ್ದರಿಂದ ದಾವೀದನು ಯೋವಾಬನನ್ನೂ ಜನರ ಪ್ರಧಾನರನ್ನೂ ಕರೆದು ಅವರಿಗೆ, “ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ, ನೀವು ಹೋಗಿ ಬೇರ್ಷೆಬವು ಮೊದಲುಗೊಂಡು, ದಾನ್ ಊರಿನವರೆಗೆ ಇಸ್ರಾಯೇಲರನ್ನು ಲೆಕ್ಕಿಸಿ, ಅವರ ಲೆಕ್ಕವನ್ನು ನನಗೆ ತೆಗೆದುಕೊಂಡು ಬನ್ನಿರಿ,” ಎಂದನು.
וַיֹּ֣אמֶר יֹואָ֗ב יֹוסֵף֩ יְהוָ֨ה עַל־עַמֹּ֤ו ׀ כָּהֵם֙ מֵאָ֣ה פְעָמִ֔ים הֲלֹא֙ אֲדֹנִ֣י הַמֶּ֔לֶךְ כֻּלָּ֥ם לַאדֹנִ֖י לַעֲבָדִ֑ים לָ֣מָּה יְבַקֵּ֥שׁ זֹאת֙ אֲדֹנִ֔י לָ֛מָּה יִהְיֶ֥ה לְאַשְׁמָ֖ה לְיִשְׂרָאֵֽל׃ 3
ಆಗ ಯೋವಾಬನು, “ಯೆಹೋವ ದೇವರು ತಮ್ಮ ಜನರನ್ನು ಈಗ ಇರುವುದಕ್ಕಿಂತ ನೂರರಷ್ಟಾಗಿ ಹೆಚ್ಚಿಸಲಿ. ಆದರೆ ನನ್ನ ಒಡೆಯನಾದ ಅರಸನೇ, ಅವರೆಲ್ಲರೂ ನನ್ನ ಒಡೆಯನ ಸೇವಕರಲ್ಲವೋ, ನನ್ನ ಒಡೆಯನು ಈ ಕಾರ್ಯವನ್ನು ಅಪೇಕ್ಷಿಸುವುದು ಏಕೆ? ಇದು ಇಸ್ರಾಯೇಲಿನಲ್ಲಿ ಅಪರಾಧಕ್ಕೆ ಕಾರಣವಾಗುವುದು,” ಎಂದನು.
וּדְבַר־הַמֶּ֖לֶךְ חָזַ֣ק עַל־יֹואָ֑ב וַיֵּצֵ֣א יֹואָ֗ב וַיִּתְהַלֵּךְ֙ בְּכָל־יִשְׂרָאֵ֔ל וַיָּבֹ֖א יְרוּשָׁלָֽ͏ִם׃ 4
ಆದರೆ ಅರಸನ ಮಾತೇ ಯೋವಾಬನಿಗೆ ವಿರೋಧವಾಗಿ ಗೆದ್ದಿತು. ಆಗ ಅವನು ಹೊರಟು, ಇಸ್ರಾಯೇಲಿನ ಸಮಸ್ತ ಪ್ರಾಂತಗಳಿಗೆ ಹೋಗಿ, ಯೆರೂಸಲೇಮಿಗೆ ತಿರುಗಿಬಂದನು.
וַיִּתֵּ֥ן יֹואָ֛ב אֶת־מִסְפַּ֥ר מִפְקַד־הָעָ֖ם אֶל־דָּוִ֑יד וַיְהִ֣י כָֽל־יִשְׂרָאֵ֡ל אֶ֣לֶף אֲלָפִים֩ וּמֵאָ֨ה אֶ֤לֶף אִישׁ֙ שֹׁ֣לֵֽף חֶ֔רֶב וִֽיהוּדָ֕ה אַרְבַּע֩ מֵאֹ֨ות וְשִׁבְעִ֥ים אֶ֛לֶף אִ֖ישׁ שֹׁ֥לֵֽף חָֽרֶב׃ 5
ಯೋವಾಬನು ದಾವೀದನಿಗೆ ಕೊಟ್ಟ ಜನರ ಒಟ್ಟು ಲೆಕ್ಕವೇನೆಂದರೆ: ಸಮಸ್ತ ಇಸ್ರಾಯೇಲರಲ್ಲಿ ಖಡ್ಗ ಹಿಡಿಯತಕ್ಕ ಪರಾಕ್ರಮವುಳ್ಳ ಹನ್ನೊಂದು ಲಕ್ಷಮಂದಿ ಇದ್ದರು. ಯೆಹೂದದ ಜನರು ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಇದ್ದರು.
וְלֵוִי֙ וּבִנְיָמִ֔ן לֹ֥א פָקַ֖ד בְּתֹוכָ֑ם כִּֽי־נִתְעַ֥ב דְּבַר־הַמֶּ֖לֶךְ אֶת־יֹואָֽב׃ 6
ಆದರೆ ಲೇವಿಯರನ್ನೂ, ಬೆನ್ಯಾಮೀನರನ್ನೂ ಅವರಲ್ಲಿ ಎಣಿಸಲಿಲ್ಲ. ಏಕೆಂದರೆ ಅರಸನ ಮಾತು ಯೋವಾಬನಿಗೆ ಅಸಹ್ಯಕರವಾಗಿತ್ತು.
וַיֵּ֙רַע֙ בְּעֵינֵ֣י הָאֱלֹהִ֔ים עַל־הַדָּבָ֖ר הַזֶּ֑ה וַיַּ֖ךְ אֶת־יִשְׂרָאֵֽל׃ פ 7
ಇದಲ್ಲದೆ ಈ ಕಾರ್ಯವು ದೇವರ ಸಮ್ಮುಖದಲ್ಲಿ ಕೆಟ್ಟದ್ದಾದದ್ದರಿಂದ, ದೇವರು ಇಸ್ರಾಯೇಲನ್ನು ಶಿಕ್ಷಿಸಿದರು.
וַיֹּ֤אמֶר דָּוִיד֙ אֶל־הָ֣אֱלֹהִ֔ים חָטָ֣אתִֽי מְאֹ֔ד אֲשֶׁ֥ר עָשִׂ֖יתִי אֶת־הַדָּבָ֣ר הַזֶּ֑ה וְעַתָּ֗ה הַֽעֲבֶר־נָא֙ אֶת־עֲוֹ֣ון עַבְדְּךָ֔ כִּ֥י נִסְכַּ֖לְתִּי מְאֹֽד׃ פ 8
ದಾವೀದನು ದೇವರಿಗೆ, “ನಾನು ಈ ಕಾರ್ಯವನ್ನು ಮಾಡಿದ್ದರಿಂದ, ಮಹಾಪಾಪ ಮಾಡಿದೆನು. ನೀವು ದಯಮಾಡಿ ನಿಮ್ಮ ಸೇವಕನ ಅಕ್ರಮವನ್ನು ಪರಿಹರಿಸಿರಿ. ಏಕೆಂದರೆ ನಾನು ಇದರಲ್ಲಿ ಬಹಳ ಬುದ್ಧಿಹೀನನಾಗಿ ನಡೆದೆನು,” ಎಂದನು.
וַיְדַבֵּ֤ר יְהוָה֙ אֶל־גָּ֔ד חֹזֵ֥ה דָוִ֖יד לֵאמֹֽר׃ 9
ಆಗ ಯೆಹೋವ ದೇವರು ದಾವೀದನ ದರ್ಶಿಯಾದ ಗಾದನಿಗೆ,
לֵךְ֩ וְדִבַּרְתָּ֨ אֶל־דָּוִ֜יד לֵאמֹ֗ר כֹּ֚ה אָמַ֣ר יְהוָ֔ה שָׁלֹ֕ושׁ אֲנִ֖י נֹטֶ֣ה עָלֶ֑יךָ בְּחַר־לְךָ֛ אַחַ֥ת מֵהֵ֖נָּה וְאֶֽעֱשֶׂה־לָּֽךְ׃ 10
“ನೀನು ದಾವೀದನ ಬಳಿಗೆ ಹೋಗಿ, ಅವನ ಸಂಗಡ ಮಾತಾಡಿ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನಗೆ ವಿರೋಧವಾಗಿ ಬರಮಾಡಬೇಕೋ ಅದನ್ನು ಆಯ್ದುಕೋ,’ ಎಂದು ಹೇಳು,” ಎಂದರು.
וַיָּ֥בֹא גָ֖ד אֶל־דָּוִ֑יד וַיֹּ֥אמֶר לֹ֛ו כֹּֽה־אָמַ֥ר יְהוָ֖ה קַבֶּל־לָֽךְ׃ 11
ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನೇ ಆಯ್ದುಕೋ,
אִם־שָׁלֹ֨ושׁ שָׁנִ֜ים רָעָ֗ב וְאִם־שְׁלֹשָׁ֨ה חֳדָשִׁ֜ים נִסְפֶּ֥ה מִפְּנֵי־צָרֶיךָ֮ וְחֶ֣רֶב אֹויְבֶ֣ךָ ׀ לְמַשֶּׂגֶת֒ וְאִם־שְׁלֹ֣שֶׁת יָ֠מִים חֶ֣רֶב יְהוָ֤ה וְדֶ֙בֶר֙ בָּאָ֔רֶץ וּמַלְאַ֣ךְ יְהוָ֔ה מַשְׁחִ֖ית בְּכָל־גְּב֣וּל יִשְׂרָאֵ֑ל וְעַתָּ֣ה רְאֵ֔ה מָֽה־אָשִׁ֥יב אֶת־שֹׁלְחִ֖י דָּבָֽר׃ פ 12
ನಿನ್ನ ದೇಶದಲ್ಲಿ ಮೂರು ವರುಷ ಕ್ಷಾಮ ಉಂಟಾಗಬೇಕೋ? ಇಲ್ಲವೆ ಮೂರು ತಿಂಗಳವರೆಗೆ ನಿನ್ನ ಶತ್ರುಗಳ ಹಿಂಸೆಗೆ ಬಲಿಯಾಗುವುದು ಬೇಕೋ? ಇಲ್ಲವೆ ಯೆಹೋವ ದೇವರ ದೂತನು ಇಸ್ರಾಯೇಲಿನ ಸಮಸ್ತ ಪ್ರಾಂತಗಳಲ್ಲಿ ಯೆಹೋವ ದೇವರ ಖಡ್ಗದಿಂದ ಮೂರು ದಿವಸಗಳವರೆಗೆ ಘೋರವ್ಯಾಧಿ ಉಂಟಾಗಬೇಕೋ? ನೀನು ಆರಿಸಿಕೋ. ಈಗ ನನ್ನನ್ನು ಕಳುಹಿಸಿದವರಿಗೆ ನಾನು ಏನು ಉತ್ತರ ತೆಗೆದುಕೊಂಡು ಹೋಗಬೇಕು? ಯೋಚಿಸಿನೋಡು,” ಎಂದನು.
וַיֹּ֧אמֶר דָּוִ֛יד אֶל־גָּ֖ד צַר־לִ֣י מְאֹ֑ד אֶפְּלָה־נָּ֣א בְיַד־יְהוָ֗ה כִּֽי־רַבִּ֤ים רַחֲמָיו֙ מְאֹ֔ד וּבְיַד־אָדָ֖ם אַל־אֶפֹּֽל׃ 13
ಆಗ ದಾವೀದನು ಗಾದನಿಗೆ, “ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಯೆಹೋವ ದೇವರ ಕೈಯಲ್ಲಿಯೇ ಬೀಳುತ್ತೇನೆ. ಏಕೆಂದರೆ ಅವರ ಕರುಣೆಯು ದೊಡ್ಡದು, ಆದರೆ ಮನುಷ್ಯರ ಕೈಯಲ್ಲಿ ಬೀಳಲಾರೆನು,” ಎಂದನು.
וַיִּתֵּ֧ן יְהוָ֛ה דֶּ֖בֶר בְּיִשְׂרָאֵ֑ל וַיִּפֹּל֙ מִיִּשְׂרָאֵ֔ל שִׁבְעִ֥ים אֶ֖לֶף אִֽישׁ׃ 14
ಆದಕಾರಣ ಯೆಹೋವ ದೇವರು ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಕಳುಹಿಸಿದರು. ಆಗ ಇಸ್ರಾಯೇಲರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.
וַיִּשְׁלַח֩ הָאֱלֹהִ֨ים ׀ מַלְאָ֥ךְ ׀ לִֽירוּשָׁלַ͏ִם֮ לְהַשְׁחִיתָהּ֒ וּכְהַשְׁחִ֗ית רָאָ֤ה יְהוָה֙ וַיִּנָּ֣חֶם עַל־הֽ͏ָרָעָ֔ה וַיֹּ֨אמֶר לַמַּלְאָ֤ךְ הַמַּשְׁחִית֙ רַ֔ב עַתָּ֖ה הֶ֣רֶף יָדֶ֑ךָ וּמַלְאַ֤ךְ יְהוָה֙ עֹמֵ֔ד עִם־גֹּ֖רֶן אָרְנָ֥ן הַיְבוּסִֽי׃ ס 15
ಇದಲ್ಲದೆ ಯೆರೂಸಲೇಮನ್ನು ನಾಶಮಾಡುವುದಕ್ಕೆ ದೇವರು ದೂತನನ್ನು ಕಳುಹಿಸಿದರು. ಅವನು ನಾಶಮಾಡುವುದನ್ನು ಯೆಹೋವ ದೇವರು ನೋಡಿ, ಆ ದಂಡನೆಗೋಸ್ಕರ ದುಃಖಪಟ್ಟು, ಜನರನ್ನು ನಾಶಮಾಡುವ ದೂತನಿಗೆ, “ಸಾಕು, ನಿನ್ನ ಕೈಯನ್ನು ಹಿಂದೆಗೆ,” ಎಂದರು. ಆಗ ಯೆಹೋವ ದೇವರ ದೂತನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ನಿಂತಿದ್ದನು.
וַיִּשָּׂ֨א דָוִ֜יד אֶת־עֵינָ֗יו וַיַּ֞רְא אֶת־מַלְאַ֤ךְ יְהוָה֙ עֹמֵ֗ד בֵּ֤ין הָאָ֙רֶץ֙ וּבֵ֣ין הַשָּׁמַ֔יִם וְחַרְבֹּ֤ו שְׁלוּפָה֙ בְּיָדֹ֔ו נְטוּיָ֖ה עַל־יְרוּשָׁלָ֑͏ִם וַיִּפֹּ֨ל דָּוִ֧יד וְהַזְּקֵנִ֛ים מְכֻסִּ֥ים בַּשַּׂקִּ֖ים עַל־פְּנֵיהֶֽם׃ 16
ಆಗ ದಾವೀದನು ತನ್ನ ಕಣ್ಣೆತ್ತಿ ಭೂಮಿಗೂ, ಆಕಾಶಕ್ಕೂ ಮಧ್ಯದಲ್ಲಿ ನಿಂತಿರುವ ಯೆಹೋವ ದೇವರ ದೂತನನ್ನು ಕಂಡನು. ಅವನ ಕೈಯಲ್ಲಿ ಯೆರೂಸಲೇಮಿನ ಮೇಲೆ ಚಾಚಿದ್ದ ಹಿರಿದ ಖಡ್ಗ ಇತ್ತು. ಆಗ ದಾವೀದನೂ, ಇಸ್ರಾಯೇಲಿನ ಹಿರಿಯರೂ ಗೋಣಿತಟ್ಟುಗಳನ್ನು ಹೊದ್ದುಕೊಂಡು ಬೋರಲಾಗಿ ಬಿದ್ದರು.
וַיֹּ֣אמֶר דָּוִ֣יד אֶֽל־הָאֱלֹהִ֡ים הֲלֹא֩ אֲנִ֨י אָמַ֜רְתִּי לִמְנֹ֣ות בָּעָ֗ם וַאֲנִי־ה֤וּא אֲשֶׁר־חָטָ֙אתִי֙ וְהָרֵ֣עַ הֲרֵעֹ֔ותִי וְאֵ֥לֶּה הַצֹּ֖אן מֶ֣ה עָשׂ֑וּ יְהוָ֣ה אֱלֹהַ֗י תְּהִ֨י נָ֤א יָֽדְךָ֙ בִּ֚י וּבְבֵ֣ית אָבִ֔י וּֽבְעַמְּךָ֖ לֹ֥א לְמַגֵּפָֽה׃ ס 17
ದಾವೀದನು ದೇವರಿಗೆ, “ಜನರಲ್ಲಿ ಯುದ್ಧ ವೀರರನ್ನು ಲೆಕ್ಕಮಾಡಲು ಆಜ್ಞಾಪಿಸಿದವನು ನಾನಲ್ಲವೋ? ನಾನೇ ಪಾಪಮಾಡಿದೆನು. ಕುರುಬನಂತಿರುವ ನಾನೇ ಈ ಕೆಟ್ಟದ್ದನ್ನು ಮಾಡಿದೆನು, ಆದರೆ ಕುರಿಗಳಂತಿರುವ ಇವರು ಮಾಡಿದ್ದೇನು? ನನ್ನ ಯೆಹೋವ ದೇವರೇ, ನಿಮ್ಮ ಹಸ್ತವು ನಿಮ್ಮ ಜನರನ್ನು ಬಾಧಿಸದೆ, ನನಗೆ ವಿರೋಧವಾಗಿಯೂ ನನ್ನ ಕುಟುಂಬದ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ,” ಎಂದನು.
וּמַלְאַ֧ךְ יְהוָ֛ה אָמַ֥ר אֶל־גָּ֖ד לֵאמֹ֣ר לְדָוִ֑יד כִּ֣י ׀ יַעֲלֶ֣ה דָוִ֗יד לְהָקִ֤ים מִזְבֵּ֙חַ֙ לַיהוָ֔ה בְּגֹ֖רֶן אָרְנָ֥ן הַיְבֻסִֽי׃ 18
ಆಗ ಯೆಹೋವ ದೇವರ ದೂತನು ಗಾದನಿಗೆ, “ದಾವೀದನು ಹೋಗಿ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟುವ ಹಾಗೆ ದಾವೀದನಿಗೆ ಹೇಳು,” ಎಂದನು.
וַיַּ֤עַל דָּוִיד֙ בִּדְבַר־גָּ֔ד אֲשֶׁ֥ר דִּבֶּ֖ר בְּשֵׁ֥ם יְהוָֽה׃ 19
ಗಾದನು ಯೆಹೋವ ದೇವರ ಹೆಸರಿನಲ್ಲಿ ಹೇಳಿದ ಮಾತಿನ ಪ್ರಕಾರ ದಾವೀದನು ಹೋದನು.
וַיָּ֣שָׁב אָרְנָ֗ן וַיַּרְא֙ אֶת־הַמַּלְאָ֔ךְ וְאַרְבַּ֧עַת בָּנָ֛יו עִמֹּ֖ו מִֽתְחַבְּאִ֑ים וְאָרְנָ֖ן דָּ֥שׁ חִטִּֽים׃ 20
ಒರ್ನಾನನು ಗೋಧಿಯನ್ನು ತುಳಿಸುತ್ತಿರುವಾಗ, ಹಿಂದಕ್ಕೆ ತಿರುಗಿ ದೂತನನ್ನು ಕಂಡದ್ದರಿಂದ ಅವನೂ, ಅವನ ಸಂಗಡ ಇದ್ದ ಅವನ ನಾಲ್ಕು ಮಂದಿ ಪುತ್ರರೂ ಅಡಗಿಕೊಂಡಿದ್ದರು.
וַיָּבֹ֥א דָוִ֖יד עַד־אָרְנָ֑ן וַיַּבֵּ֤ט אָרְנָן֙ וַיַּ֣רְא אֶת־דָּוִ֔יד וַיֵּצֵא֙ מִן־הַגֹּ֔רֶן וַיִּשְׁתַּ֧חוּ לְדָוִ֛יד אַפַּ֖יִם אָֽרְצָה׃ 21
ಆದರೆ ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡನು, ಆಗ ಅವನು ಕಣದಿಂದ ಹೊರಟು, ದಾವೀದನ ಮುಂದೆ ಮುಖ ಕೆಳಗೆಮಾಡಿ ಅಡ್ಡಬಿದ್ದನು.
וַיֹּ֨אמֶר דָּוִ֜יד אֶל־אָרְנָ֗ן תְּנָה־לִּי֙ מְקֹ֣ום הַגֹּ֔רֶן וְאֶבְנֶה־בֹּ֥ו מִזְבֵּ֖חַ לַיהוָ֑ה בְּכֶ֤סֶף מָלֵא֙ תְּנֵ֣הוּ לִ֔י וְתֵעָצַ֥ר הַמַּגֵּפָ֖ה מֵעַ֥ל הָעָֽם׃ 22
ಆಗ ದಾವೀದನು ಒರ್ನಾನನಿಗೆ, “ಈ ವ್ಯಾಧಿಯು, ಜನರನ್ನು ಬಿಟ್ಟುಹೋಗುವಂತೆ ನಾನು ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿಸುವುದಕ್ಕೆ, ಈ ಕಣದ ಸ್ಥಳವನ್ನು ನನಗೆ ಕೊಡು. ಅದನ್ನು ಪೂರ್ಣ ಕ್ರಯಕ್ಕೆ ನನಗೆ ಕೊಡು,” ಎಂದನು.
וַיֹּ֨אמֶר אָרְנָ֤ן אֶל־דָּוִיד֙ קַֽח־לָ֔ךְ וְיַ֛עַשׂ אֲדֹנִ֥י הַמֶּ֖לֶךְ הַטֹּ֣וב בְּעֵינָ֑יו רְאֵה֩ נָתַ֨תִּי הַבָּקָ֜ר לָֽעֹלֹ֗ות וְהַמֹּורִגִּ֧ים לָעֵצִ֛ים וְהַחִטִּ֥ים לַמִּנְחָ֖ה הַכֹּ֥ל נָתָֽתִּי׃ 23
ಒರ್ನಾನನು ದಾವೀದನಿಗೆ, “ನಿನಗಾಗಿ ತೆಗೆದುಕೋ, ಅರಸನಾದ ನನ್ನ ಒಡೆಯನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ. ದಹನಬಲಿಗೋಸ್ಕರ ಎತ್ತುಗಳೂ, ಸೌದೆಗೆ ಹಂತೀಕುಂಟೆ, ಧಾನ್ಯ ಸಮರ್ಪಣೆಗೋಸ್ಕರ ಗೋಧಿ ಕೊಡುವುದಲ್ಲದೆ, ಸಮಸ್ತವನ್ನೂ ಕೊಡುವೆನು,” ಎಂದನು.
וַיֹּ֨אמֶר הַמֶּ֤לֶךְ דָּוִיד֙ לְאָרְנָ֔ן לֹ֕א כִּֽי־קָנֹ֥ה אֶקְנֶ֖ה בְּכֶ֣סֶף מָלֵ֑א כִּ֠י לֹא־אֶשָּׂ֤א אֲשֶׁר־לְךָ֙ לַיהוָ֔ה וְהַעֲלֹ֥ות עֹולָ֖ה חִנָּֽם׃ 24
ಅರಸ ದಾವೀದನು ಒರ್ನಾನನಿಗೆ, “ಹಾಗಲ್ಲ, ನಾನು ನಿನ್ನಿಂದ ಪೂರ್ಣ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನಿನ್ನದನ್ನು ಕ್ರಯವಿಲ್ಲದೆ ತೆಗೆದುಕೊಂಡು, ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಲು ನನಗೆ ಇಷ್ಟವಿಲ್ಲ,” ಎಂದು ಹೇಳಿದನು.
וַיִּתֵּ֥ן דָּוִ֛יד לְאָרְנָ֖ן בַּמָּקֹ֑ום שִׁקְלֵ֣י זָהָ֔ב מִשְׁקָ֖ל שֵׁ֥שׁ מֵאֹֽות׃ 25
ಅಂತೆಯೇ ಆ ಭೂಮಿಗಾಗಿ ಒರ್ನಾನನಿಗೆ ಏಳು ಕಿಲೋಗ್ರಾಂ ಬಂಗಾರವನ್ನು ಕೊಟ್ಟು,
וַיִּבֶן֩ שָׁ֨ם דָּוִ֤יד מִזְבֵּ֙חַ֙ לַיהוָ֔ה וַיַּ֥עַל עֹלֹ֖ות וּשְׁלָמִ֑ים וַיִּקְרָא֙ אֶל־יְהוָ֔ה וַיַּֽעֲנֵ֤הוּ בָאֵשׁ֙ מִן־הַשָּׁמַ֔יִם עַ֖ל מִזְבַּ֥ח הָעֹלָֽה׃ פ 26
ದಾವೀದನು ಯೆಹೋವ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ, ಅದರ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ ಯೆಹೋವ ದೇವರನ್ನು ಪ್ರಾರ್ಥಿಸಿದನು. ಆಗ ಅವರು ಆಕಾಶದಿಂದ ದಹನಬಲಿಪೀಠದ ಮೇಲೆ ಅಗ್ನಿಯಿಂದ ಅವನಿಗೆ ಉತ್ತರಕೊಟ್ಟರು.
וַיֹּ֤אמֶר יְהוָה֙ לַמַּלְאָ֔ךְ וַיָּ֥שֶׁב חַרְבֹּ֖ו אֶל־נְדָנָֽהּ׃ 27
ಯೆಹೋವ ದೇವರು ದೂತನಿಗೆ ಹೇಳಿದ್ದರಿಂದ, ಅವನು ತನ್ನ ಖಡ್ಗವನ್ನು ಒರೆಗೆ ತಿರುಗಿ ಸೇರಿಸಿದನು.
בָּעֵ֣ת הַהִ֔יא בִּרְאֹ֤ות דָּוִיד֙ כִּי־עָנָ֣הוּ יְהוָ֔ה בְּגֹ֖רֶן אָרְנָ֣ן הַיְבוּסִ֑י וַיִּזְבַּ֖ח שָֽׁם׃ 28
ಯೆಹೋವ ದೇವರು ಯೆಬೂಸಿಯನಾದ ಒರ್ನಾನನ ಕಣದಲ್ಲಿ ತನಗೆ ಉತ್ತರ ಕೊಟ್ಟರೆಂದು ದಾವೀದನು ಕಂಡಾಗ, ಅವನು ಅಲ್ಲಿ ಬಲಿಗಳನ್ನು ಅರ್ಪಿಸಿದನು.
וּמִשְׁכַּ֣ן יְ֠הוָה אֲשֶׁר־עָשָׂ֨ה מֹשֶׁ֧ה בַמִּדְבָּ֛ר וּמִזְבַּ֥ח הָעֹולָ֖ה בָּעֵ֣ת הַהִ֑יא בַּבָּמָ֖ה בְּגִבְעֹֽון׃ 29
ಮರುಭೂಮಿಯಲ್ಲಿ ಮೋಶೆಯು ಮಾಡಿದ ಯೆಹೋವ ದೇವರ ಗುಡಾರವೂ, ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು.
וְלֹא־יָכֹ֥ל דָּוִ֛יד לָלֶ֥כֶת לְפָנָ֖יו לִדְרֹ֣שׁ אֱלֹהִ֑ים כִּ֣י נִבְעַ֔ת מִפְּנֵ֕י חֶ֖רֶב מַלְאַ֥ךְ יְהוָֽה׃ ס 30
ದಾವೀದನು ದೇವರ ಹತ್ತಿರ ವಿಚಾರಿಸಲು, ಅದರ ಬಳಿಗೆ ಹೋಗಲಾರದೆ ಇದ್ದನು. ಏಕೆಂದರೆ ಅವನು ಯೆಹೋವ ದೇವರ ದೂತನ ಖಡ್ಗದ ನಿಮಿತ್ತ ಹೆದರಿದ್ದನು.

< 1 דִּבְרֵי הַיָּמִים 21 >