< 1 Corinthians 16 >

1 Now about “collecting money for fellow-believers.” I'm giving you the same instructions for you to follow as I did to the churches in Galatia.
ಈಗ ದೇವಜನರಿಗೋಸ್ಕರ ಹಣ ಕೂಡಿಸಿಡುವುದನ್ನು ಕುರಿತು: ನಾನು ಗಲಾತ್ಯದ ಸಭೆಗಳಿಗೆ ಹೇಳಿದ್ದನ್ನೇ ನೀವೂ ಮಾಡಿರಿ.
2 On the first day of the week everybody should set aside some money you've earned. I don't want there to be any collections to have to be made when I'm with you.
ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಆದಾಯಕ್ಕೆ ತಕ್ಕಂತೆ ವಾರದ ಮೊದಲನೆಯ ದಿನದಲ್ಲಿ ಕೂಡಿಟ್ಟುಕೊಂಡಿರಲಿ. ಹೀಗೆ ಮಾಡಿದರೆ, ನಾನು ಬಂದಾಗ ನೀವು ಹಣ ಕೂಡಿಸುವ ಅವಶ್ಯವಿರುವುದಿಲ್ಲ.
3 When I get there I will write recommendation letters for whoever you choose, and they will take your donation to Jerusalem.
ನಾನು ನಿಮ್ಮಲ್ಲಿಗೆ ಬಂದಾಗ, ನೀವು ಯಾರನ್ನು ಅನುಮೋದಿಸುವಿರೋ, ಅವರಿಗೆ ಪತ್ರ ಕೊಟ್ಟು ನಿಮ್ಮ ಕೊಡುಗೆಯನ್ನು ತೆಗೆದುಕೊಂಡು ಯೆರೂಸಲೇಮಿಗೆ ಹೋಗುವಂತೆ ಕಳುಹಿಸುವೆನು.
4 If it works out for me to go too, they can come with me.
ನಾನು ಸಹ ಹೋಗುವುದು ಯುಕ್ತವಾಗಿದ್ದರೆ, ಅವರು ನನ್ನೊಂದಿಗೆ ಬರಲಿ.
5 After I've been to Macedonia, I plan to come and visit you. I pass that way through Macedonia
ಮಕೆದೋನ್ಯವನ್ನು ದಾಟಿದ ಮೇಲೆ, ಅದೇ ಮಾರ್ಗವಾಗಿ ನಾನು ಪುನಃ ನಿಮ್ಮ ಬಳಿಗೆ ಬರುವೆನು.
6 and I may stay with you for a while, perhaps spend the winter, and then you can send me on my way to wherever I'm headed.
ಬಹುಶಃ ನಾನು ಸ್ವಲ್ಪ ಸಮಯ ನಿಮ್ಮೊಂದಿಗೆ ಇದ್ದ ಮೇಲೆ ಅಥವಾ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮೊಂದಿಗೆ ಕಳೆಯಲು ಬಯಸುತ್ತೇನೆ. ಹೀಗೆ ನಾನು ಹೋಗಬೇಕಾದ ಸ್ಥಳಗಳಲ್ಲಿ ನೀವು ನನಗೆ ಸಹಾಯ ಮಾಡಬಹುದು.
7 This time I don't want to come and see you for just a short time. I hope I can stay for a while with you, if that's what the Lord permits.
ನಾನು ಹಾದುಹೋಗುವಾಗ, ನಿಮ್ಮನ್ನು ಸ್ವಲ್ಪ ಸಮಯ ಮಾತ್ರ ಸಂದರ್ಶಿಸುವುದಕ್ಕೆ ನನಗೆ ಇಷ್ಟವಿಲ್ಲ. ಕರ್ತನು ಅನುಮತಿಸಿದರೆ, ನಿಮ್ಮ ಬಳಿಯಲ್ಲಿ ಬಂದು ಹೆಚ್ಚುಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ.
8 However, I will stay on at Ephesus until Pentecost,
ಆದರೆ ಐವತ್ತು ದಿನಗಳ ಹಬ್ಬದ ತನಕ ಎಫೆಸದಲ್ಲಿರುವೆನು.
9 because a tremendous door of opportunity has opened up for me there, though there are plenty who oppose me.
ಏಕೆಂದರೆ, ಪರಿಣಾಮಕಾರಿಯಾದ ಸೇವೆಗೆ ದೊಡ್ಡದಾಗಿ ಬಾಗಿಲು ನನಗೆ ತೆರೆದಿದೆ, ಬಹಳ ಜನ ವಿರೋಧಿಗಳೂ ಇದ್ದಾರೆ.
10 Now if Timothy arrives, make sure that he has nothing to fear by being with you, for he's working for the Lord just as I am.
ನನ್ನ ಹಾಗೆಯೇ ತಿಮೊಥೆ ಕರ್ತನ ಸೇವೆ ಮಾಡುತ್ತಿದ್ದಾನೆ. ಅವನು ಬಂದರೆ, ಅವನು ನಿಮ್ಮೊಂದಿಗಿರುವಾಗ ಅವನಿಗೆ ಯಾವ ಭಯವೂ ಇಲ್ಲದಂತೆ ನೋಡಿಕೊಳ್ಳಿರಿ.
11 Don't let anyone look down on him. Cheerfully send him on his way so he can come and see me—the brothers and sisters and I are waiting for him.
ಯಾರೂ ಅವನನ್ನು ಹೀನಾಯವಾಗಿ ಕಾಣಬಾರದು. ಆದರೆ ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ಎದುರು ನೋಡುತ್ತಿದ್ದೇನೆ.
12 As for our brother Apollos: I urged him to go and see you together with the other believers, but he wasn't willing to go at the moment. He'll come and visit when he gets the chance.
ಈಗ ನಮ್ಮ ಸಹೋದರನಾದ ಅಪೊಲ್ಲೋಸನ ವಿಷಯವೇನೆಂದರೆ, ಅವನು ಇತರ ಸಹೋದರರೊಂದಿಗೆ ನಿಮ್ಮ ಬಳಿಗೆ ಬರಬೇಕೆಂದು ಅವನಿಗೆ ಬಹಳವಾಗಿ ಕೇಳಿಕೊಂಡೆನು. ಆದರೆ ಈಗ ಬರುವುದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿಲ್ಲ. ಅವನು ತನಗೆ ಸಂದರ್ಭ ಸಿಕ್ಕಿದಾಗ ಬರುವನು.
13 Stay alert. Stand firm in your trust in God. Take courage. Be strong.
ಎಚ್ಚರವಾಗಿರಿ, ವಿಶ್ವಾಸದಲ್ಲಿ ಸ್ಥಿರವಾಗಿ ನಿಲ್ಲಿರಿ, ಧೈರ್ಯವಾಗಿರಿ, ಬಲಗೊಳ್ಳಿರಿ.
14 Whatever you do, do it in love.
ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.
15 You know that Stephanas and his family were among the first converts in Achaia, and they dedicated themselves to helping God's people. I'm pleading with you, my brothers and sisters,
ಸ್ತೆಫನನ ಕುಟುಂಬದವರು ಅಖಾಯದಲ್ಲಿ ಪ್ರಥಮವಾಗಿ ವಿಶ್ವಾಸಿಗಳಾದವರು ಎಂಬುದನ್ನು ನೀವು ಬಲ್ಲಿರಿ. ಅವರು ದೇವಜನರಿಗೆ ಸೇವೆ ಮಾಡುವುದಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರಾಗಿದ್ದಾರೆ.
16 to respect their leadership, and everyone who helps the work with such dedication.
ಪ್ರಿಯರೇ, ನೀವು ಇಂಥವರಿಗೂ ಈ ಸೇವೆಯಲ್ಲಿ ಅವರೊಂದಿಗೆ ಪ್ರಯಾಸಪಡುವವರಿಗೂ ವಿಧೇಯರಾಗಿರಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
17 I'm delighted that Stephanas, Fortunatas, and Achaicus have arrived here, for they did what you weren't able to.
ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದುದರಿಂದ ನನಗೆ ಸಂತೋಷವಾಯಿತು. ನೀವಿಲ್ಲದ್ದ ಕೊರತೆಯನ್ನು ಅವರು ನನಗೆ ಒದಗಿಸಿದ್ದಾರೆ.
18 They have been a great source of encouragement to me, and to you. People like that deserve your recognition.
ಅವರು ನನ್ನ ಆತ್ಮವನ್ನೂ, ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ನೀವು ಇಂಥವರನ್ನು ಸನ್ಮಾನಿಸಿರಿ.
19 The churches of Asia send their greetings. Aquila and Priscilla, along with the church that meets in their home, send their best wishes.
ಏಷ್ಯಾದ ಸೀಮೆಯ ಸಭೆಗಳವರು ನಿಮ್ಮನ್ನು ವಂದಿಸುತ್ತಾರೆ. ಅಕ್ವಿಲನೂ ಮತ್ತು ಪ್ರಿಸ್ಕಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ನಿಮ್ಮನ್ನು ಹೃದಯಪೂರ್ವಕವಾಗಿ ವಂದಿಸುತ್ತಾರೆ.
20 All the brothers and sisters here send their greetings. Greet one another affectionately.
ಸಹೋದರರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು, ಒಬ್ಬರನ್ನೊಬ್ಬರು ವಂದಿಸಿರಿ.
21 I Paul write this greeting with my own hand.
ಪೌಲನೆಂಬ ನಾನು, ಸ್ವಂತ ಕೈಯಿಂದ ಈ ವಂದನೆಯನ್ನು ಬರೆದಿದ್ದೇನೆ.
22 Anyone who doesn't love the Lord should be excluded from the church. Come Lord!
ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ, ಅವನು ಶಾಪಗ್ರಸ್ತನಾಗಲಿ! ಕರ್ತನೇ, ಬಾ!
23 May the grace of our Lord Jesus Christ be with you.
ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೊಂದಿಗಿರಲಿ.
24 My love to all of you in Christ Jesus. Amen.
ಕ್ರಿಸ್ತ ಯೇಸುವಿನಲ್ಲಿ ನನ್ನ ಪ್ರೀತಿಯು ನಿಮ್ಮೆಲ್ಲರೊಂದಿಗೆ ಇದೆ. ಆಮೆನ್.

< 1 Corinthians 16 >