< Jeremias 5 >

1 Løb i Jerusalems Gader, mærk jer, hvad I ser, og søg på dets Torve, om I kan finde nogen, om der er en, som øver Retfærd, lægger Vind på Sandhed, så jeg kan tilgive dem.
ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡುತ್ತಾ ಅಲ್ಲಿನ ಚೌಕಗಳಲ್ಲಿ ಹುಡುಕಿರಿ; ನ್ಯಾಯವನ್ನು ಕೈಕೊಂಡು ಸತ್ಯವನ್ನು ಅನುಸರಿಸುವ ಒಬ್ಬನಾದರೂ ಇದ್ದಾನೋ? ಇಂತಹ ಸತ್ಪುರುಷನನ್ನು ಕಂಡುಕೊಳ್ಳಬಹುದೇ ಎಂಬುದನ್ನು ನೋಡಿ ನಿಶ್ಚಯಿಸಿರಿ; ಸಿಕ್ಕಿದರೆ ನಾನು ಪಟ್ಟಣವನ್ನು ಕ್ಷಮಿಸುವೆನು.
2 Siger de: "Så sandt HERREN lever", sværger de falsk.
ಜನರು, “ಯೆಹೋವನ ಜೀವದಾಣೆ” ಎಂದರೂ ಆ ಆಣೆಯು ಸುಳ್ಳೇ ಸುಳ್ಳು ಎಂದು ಯೆಹೋವನು ನುಡಿಯುತ್ತಾನೆ.
3 HERRE, dine Øjne ser jo efter Sandhed. Du slog dem, de omvendte sig ikke; du lagde dem øde, de vilde ej tage ved Lære, gjorde Ansigtet hårdere end Flint, vilde ej vende om.
ಯೆಹೋವನೇ, ನಿನ್ನ ಕಣ್ಣುಗಳು ಸತ್ಯದ ಮೇಲೆ ಇರುತ್ತವಲ್ಲಾ; ನೀನು ಹೊಡೆದರೂ ಅವರು ದುಃಖಪಡಲ್ಲಿಲ್ಲ, ಸಂಹರಿಸಿದರೂ ನೀತಿ ಶಿಕ್ಷೆಗೆ ಒಳಪಡಲಿಲ್ಲ. ತಮ್ಮ ಮುಖವನ್ನು ಕಲ್ಲಿಗಿಂತ ಕಠಿನಮಾಡಿಕೊಂಡು ಪಶ್ಚಾತ್ತಾಪಪಡದೆ ಹೋಗಿದ್ದಾರೆ.
4 Da tænkte jeg: "Det er kun Småfolk, Dårer er de, thi de kender ej HERRENs Vej, deres Guds Ret;
ಹೀಗಿರುವಲ್ಲಿ ನಾನು, “ಇವರು ಬಡವರು, ಮೂರ್ಖರು, ಯೆಹೋವನ ಮಾರ್ಗವನ್ನೂ ಮತ್ತು ತಮ್ಮ ದೇವರ ನ್ಯಾಯವಿಧಿಗಳನ್ನೂ ತಿಳಿಯದವರು;
5 jeg vil vende mig til de store og tale med dem, de kender da HERRENs Vej, deres Guds Ret!" Men alle havde sønderbrudt Åget, sprængt deres Bånd.
ನಾನು ದೊಡ್ಡ ಮನುಷ್ಯರ ಬಳಿಗೆ ಹೋಗಿ ಅವರ ಸಂಗಡ ಮಾತನಾಡುವೆನು; ಯೆಹೋವನ ಮಾರ್ಗವು ಮತ್ತು ಅವರ ದೇವರ ನ್ಯಾಯವಿಧಿಗಳೂ ಅವರಿಗೆ ಗೊತ್ತು” ಅಂದುಕೊಂಡೆನು. ಆದರೆ ಈ ದೊಡ್ಡ ಮನುಷ್ಯರು ಒಂದು ಮನಸ್ಸಿನಿಂದ ತಮ್ಮ ಹೆಗಲ ನೊಗವನ್ನು ಮುರಿದು, ಕಣ್ಣಿಗಳನ್ನು ಕಿತ್ತುಬಿಟ್ಟಿದ್ದಾರೆ.
6 Derfor skal en Løve fra Skoven slå dem, en Ulv fra Ødemarken hærge dem, en Panter lure ved Byerne; enhver, som går derfra, rives sønder; thi talrige er deres Synder, mange deres Frafald.
ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವುದು, ಕಾಡಿನ ತೋಳವು ಕೊಳ್ಳೆ ಹೊಡೆಯುವುದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವುದು. ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.
7 Hvor kan jeg vel tilgive dig? Dine Sønner forlod mig og svor ved Guder, som ikke er Guder. Når jeg mætted dem, horede de, slog sig ned i Skøgens Hus;
ಯೆಹೋವನು, “ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆ ತುಂಬಾ ಆಹಾರಕೊಟ್ಟ ಮೇಲೂ ಅವರು ವ್ಯಭಿಚಾರ ಮಾಡಿದರು, ವ್ಯಭಿಚಾರಿಣಿಯರ ಮನೆಗಳಲ್ಲಿ ಗುಂಪುಕೂಡಿದರು.
8 de blev fede, gejle Hingste, de vrinsker hver efter Næstens Hustru.
ಕೊಬ್ಬಿ ಅತ್ತಿತ್ತ ಓಡಾಡುವ ಕುದುರೆಗಳಂತೆ ಅವರಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹೆಂಡತಿಯನ್ನು ನೋಡಿ ಮೋಹಿಸುತ್ತಿದ್ದನು.
9 Skal jeg ikke hjemsøge sligt? så lyder det fra HERREN, skal ikke min Sjæl tage Hævn over sligt et Folk?
ನಾನು ಇವುಗಳಿಗಾಗಿ ದಂಡಿಸಬಾರದೋ? ಇಂತಹ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ” ಎಂದು ಯೆಹೋವನು ನುಡಿಯುತ್ತಾನೆ.
10 Stig op på dets Mure, læg øde, men ikke helt! Ryk Rankerne op, thi HERREN tilhører de ikke.
೧೦“ಚೀಯೋನೆಂಬ ದ್ರಾಕ್ಷಿ ತೋಟದ ಸಾಲುಗಿಡಗಳ ಮೇಲೆ ಬಿದ್ದು ಹಾಳುಮಾಡಿರಿ, ಆದರೆ ನಿರ್ಮೂಲಮಾಡಬೇಡಿರಿ. ಅದರ ರೆಂಬೆಗಳನ್ನು ತೆಗೆದುಹಾಕಿರಿ, ಅವು ಯೆಹೋವನವುಗಳಲ್ಲ.
11 Thi svigefulde er de imod mig, Israels Hus og Judas Hus, så lyder det fra HERREN.
೧೧ಇಸ್ರಾಯೇಲ್ ವಂಶದವರೂ, ಯೆಹೂದ ವಂಶದವರೂ ನನಗೆ ಕೇವಲ ದ್ರೋಹವನ್ನು ಮಾಡಿರುತ್ತಾರೆ ಎಂದು ಯೆಹೋವನು ನುಡಿಯುತ್ತಾನೆ.
12 De fornægter HERREN og siger: "Det betyder intet! Ulykke kommer ej over os, vi skal ikke se Sværd og Hunger;
೧೨ಅವರು ಯೆಹೋವನನ್ನು ಅಲ್ಲಗಳೆದು, ‘ಆತನು ಏನು ಮಾಡುವನು? ನಮಗೆ ಕೇಡುಬಾರದು, ಖಡ್ಗವೂ, ಕ್ಷಾಮವೂ ನಮ್ಮ ಕಣ್ಣಿಗೆ ಬೀಳವು;
13 Profeterne bliver til Vind, Guds Ord er ej i dem; gid Ordet må ramme dem selv!"
೧೩ಪ್ರವಾದಿಗಳು ಬರೀ ಗಾಳಿಯೇ, ದೈವೋಕ್ತಿಯು ಅವರಲ್ಲಿಲ್ಲ; ಅವರಿಗೆ ಹೀಗೆಯೇ ಆಗಲಿ’” ಅಂದುಕೊಂಡಿದ್ದಾರೆ.
14 Derfor, så siger HERREN, Hærskarers Gud: Fordi I siger dette Ord, se, derfor gør jeg mine Ord i din Mund til Ild og dette Folk til Brænde, som Ild skal fortære.
೧೪ಹೀಗಿರಲು ಸೇನಾಧೀಶ್ವರನಾದ ಯೆಹೋವನೆಂಬ ದೇವರು, “ನೀವು ಹೀಗೆ ಅಂದುಕೊಂಡಿದ್ದರಿಂದ ಆಹಾ, ನಾನು ಪ್ರವಾದಿಯ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಯೂ, ಈ ಜನರನ್ನು ಸೌದೆಯನ್ನಾಗಿಯೂ ಮಾಡುವೆನು, ಅದು ಅವರನ್ನು ದಹಿಸಿಬಿಡುವುದು.
15 Se, jeg bringer over eder et Folk fra det fjerne, Israels Hus, så lyder det fra HERREN, et Folk, som er stærkt, et Folk fra Fortids Dage, et Folk, hvis Mål du ej kender, hvis Tale du ikke fatter;
೧೫ಇಗೋ, ಇಸ್ರಾಯೇಲ್ ವಂಶವೇ, ಯೆಹೋವನ ಮಾತನ್ನು ಕೇಳು, ನಾನು ಒಂದು ಜನಾಂಗವನ್ನು ದೂರದಿಂದ ನಿಮ್ಮ ಮೇಲೆ ಬರಮಾಡುವೆನು. ಅದು ತಲತಲಾಂತರಗಳಿಂದ ಸ್ಥಿರವಾದ ಜನಾಂಗ, ಅದರ ಭಾಷೆಯು ನಿನಗೆ ತಿಳಿಯದು, ಅದು ಆಡುವ ಮಾತುಗಳನ್ನು ನೀನು ಗ್ರಹಿಸಲಾರೆ.
16 som en åben Grav er dets kogger, de er alle Kæmper;
೧೬ಅದರ ಬತ್ತಳಿಕೆಯು ಬಾಯ್ದೆರೆದ ಗೋರಿಯೇ, ಅದರ ಭಟರೆಲ್ಲರೂ ಶೂರರೇ.
17 det skal æde dit Korn og dit Brød, det skal æde dine Sønner og Døtte, det skal æde dit Småkvæg og Hornkvæg, det skal æde din Vinstok og dit Figentræ; med Sværd skal de lægge dine Fæstninger øde, dem, som du stoler på.
೧೭ಇವರು ನಿನ್ನ ಬೆಳೆಯನ್ನೂ, ನಿನ್ನ ಆಹಾರವನ್ನೂ, ನಿನ್ನ ಗಂಡು ಮತ್ತು ಹೆಣ್ಣುಮಕ್ಕಳನ್ನೂ, ನಿನ್ನ ದನ ಮತ್ತು ಕುರಿಗಳನ್ನೂ, ನಿನ್ನ ದ್ರಾಕ್ಷಾಲತೆಗಳನ್ನೂ ಹಾಗೂ ಅಂಜೂರದ ಗಿಡಗಳನ್ನೂ ತಿಂದುಬಿಡುವರು. ನಿನ್ನ ಭರವಸೆಯ ಕೋಟೆಕೊತ್ತಲುಗಳ ಪಟ್ಟಣಗಳನ್ನು ಖಡ್ಗದಿಂದ ಹಾಳುಮಾಡುವರು.
18 Men selv i de Dage, lyder det fra HERREN, vil jeg ikke udslette eder.
೧೮ಆದರೆ ಆ ದಿನಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲಮಾಡೆನು, ಇದು ಯೆಹೋವನೆಂಬ ನನ್ನ ನುಡಿ” ಎಂದು ಹೇಳುತ್ತಾನೆ.
19 Og når de siger: "Hvorfor har HERREN vor Gud gjort os alt det?" sig så til dem: "Som I forlod mig og tjente fremmede Guder i eders Land, således skal I tjene som fremmede i et Land, der ikke er eders."
೧೯“ನಮ್ಮ ದೇವರಾದ ಯೆಹೋವನು ಇವುಗಳನ್ನೆಲ್ಲಾ ನಮಗೆ ಏಕೆ ಮಾಡಿದ್ದಾನೆ?” ಎಂದು ನಿನ್ನ ಜನರು ಅನ್ನುವಾಗ ನೀನು ಅವರಿಗೆ, “ನೀವು ಯೆಹೋವನನ್ನು ತೊರೆದು, ಸ್ವದೇಶದಲ್ಲಿ ಅನ್ಯದೇವತೆಗಳನ್ನು ಆರಾಧಿಸಿದ ಹಾಗೆ ಪರದೇಶದಲ್ಲಿ ಅನ್ಯರನ್ನು ಆರಾಧಿಸುವಿರಿ” ಎಂದು ಹೇಳು.
20 Forkynd dette i Jakobs Hus og kundgør det i Juda:
೨೦ಯಾಕೋಬನ ಮನೆತನದೊಳಗೆ ಇದನ್ನು ಸಾರಿರಿ, ಯೆಹೂದದಲ್ಲಿ ಹೀಗೆ ಪ್ರಕಟಿಸಿರಿ,
21 Hør dette, du tåbelige Folk, som er uden Forstand, som har Øjne, men ikke ser, og Ører, men ikke hører:
೨೧ಕಣ್ಣಿದ್ದರೂ ಕಾಣದ, ಕಿವಿ ಇದ್ದರೂ ಕೇಳದ, ಬುದ್ಧಿಯಿಲ್ಲದ ಮೂಢ ಜನರೇ, ಯೆಹೋವನ ಈ ಮಾತನ್ನು ಕೇಳಿರಿ,
22 Vil I ikke frygte mig, lyder det fra HERREN, eller bæve for mit Åsyn? Jeg, som gjorde. Sandet til Havets Grænse, et evigt Skel, som det ikke kan overskride; selv om det bruser, evner det intet; om end dets Bølger larmer, kan de ikke overskride det.
೨೨ನೀವು ನನಗೆ ಅಂಜುವುದಿಲ್ಲವೋ, ನನ್ನೆದುರಿಗೆ ನಡುಗುವುದಿಲ್ಲವೋ? ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದ್ದೇನಷ್ಟೆ. ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.
23 Dette Folk har et trodsigt og genstridigt Hjerte, de faldt fra og gik bort.
೨೩ಈ ಜನರ ಹೃದಯವೋ ನನ್ನ ಅಧೀನ ತಪ್ಪಿ ತಿರುಗಿಬಿದ್ದಿದೆ; ಇವರು ನನ್ನ ಅಧೀನವನ್ನು ಮೀರಿ ಬಿಟ್ಟುಹೋಗಿದ್ದಾರೆ.
24 De siger ikke i deres Hjerte: "Lad os frygte HERREN vor Gud, som giver os Regn, Tidligregn og Sildigregn, til rette Tid og sikrer os Ugerne, da der skal høstes."
೨೪“ಮುಂಗಾರು, ಹಿಂಗಾರು ಅಂತು ಸಕಾಲದ ಮಳೆಯನ್ನು ದಯಪಾಲಿಸಿ, ಸುಗ್ಗಿಯ ಕೆಲವು ವಾರಗಳನ್ನು ನಮಗಾಗಿ ಪ್ರತ್ಯೇಕಪಡಿಸುವ ನಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯಿಡೋಣ” ಎಂದು ಮನದಲ್ಲಿ ಅಂದುಕೊಳ್ಳವುದಿಲ್ಲ.
25 Eders Misgerninger bragte dem i Ulave, eders Synder unddrog eder det gode.
೨೫ನಿಮ್ಮ ಅಪರಾಧಗಳು ನಿಮಗಾಗುವ ಪ್ರಯೋಜನಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮ್ಮ ಒಳಿತನ್ನು ತಡೆದಿದೆ.
26 Thi der findes gudløse i mit Folk; de ligger på Lur, som Fuglefængere dukker de sig; de sætter Fælder, de fanger Mennesker.
೨೬ನನ್ನ ಜನರಲ್ಲಿ ದುಷ್ಟರು ಕಂಡು ಬಂದಿದ್ದಾರೆ; ಬೇಡರು ಹೊಂಚು ಹಾಕುವ ಹಾಗೆ ಹೊಂಚುಹಾಕುತ್ತಾರೆ; ಉರುಳುಗಳನ್ನು ಹಾಕಿ ಮನುಷ್ಯರನ್ನು ಹಿಡಿಯುತ್ತಾರೆ.
27 Som et Bur er fuldt af Fugle, således er deres Huse fulde af Svig; derfor blev de store og rige.
೨೭ಪಂಜರದಲ್ಲಿ ಪಕ್ಷಿಗಳು ತುಂಬಿರುವಂತೆ ಅವರ ಮನೆಗಳಲ್ಲಿ ಮೋಸದ ಫಲವು ತುಂಬಿದೆ; ಇದರಿಂದ ಧನವಂತರಾಗಿದ್ದಾರೆ.
28 De er tykke og fede; og så strømmer de over med onde Ord; de hævder ikke den faderløses Ret, at det måtte gå dem vel, og hjælper ikke de fattige til deres Ret.
೨೮ಕೊಬ್ಬಿ ಢಾಂಭಿಕರಾಗಿದ್ದಾರೆ; ಇದಲ್ಲದೆ ದುಷ್ಕೃತ್ಯಗಳಲ್ಲಿ ನಿಸ್ಸೀಮರಾಗಿದ್ದಾರೆ. ಅನಾಥರ ವೃದ್ಧಿಗಾಗಿ ಅವರ ಪರವಾಗಿ ವ್ಯಾಜ್ಯ ನಡೆಸರು, ದಿಕ್ಕಿಲ್ಲದವರಿಗೆ ನ್ಯಾಯದೊರಕಿಸರು.
29 Skulde jeg ikke hjemsøge sligt? lyder det fra HERREN; skulde min Sjæl da ikke tage Hævn over sligt et Folk?
೨೯ನಾನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ? ಇದು ಯೆಹೋವನಾದ ನನ್ನ ಮಾತು ಎಂಬುದೇ.
30 Gyselige, grufulde Ting går i Svang i Landet;
೩೦ಭೀಕರವೂ, ಅಸಹ್ಯವೂ ಆದ ಸಂಗತಿಯು ದೇಶದಲ್ಲಿ ನಡೆದುಬಂದಿದೆ;
31 Profeterne profeterer Løgn, Præsterne skraber til sig, og mit Folk vil have det så. Men hvad vil I gøre, når Enden kommer?
೩೧ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರ ಹೊಂದಿ ದೊರೆತನ ಮಾಡುತ್ತಾರೆ. ನನ್ನ ಜನರು ಇದನ್ನೇ ಪ್ರೀತಿಸುತ್ತಾರೆ; ಕಟ್ಟಕಡೆಗೆ ನೀವು ಏನು ಮಾಡುವಿರಿ?

< Jeremias 5 >