< 诗篇 120 >

1 上行(或作登阶,下同)之诗。 我在急难中求告耶和华, 他就应允我。
ಯಾತ್ರಾ ಗೀತೆ. ನನ್ನ ಇಕ್ಕಟ್ಟಿನಲ್ಲಿ ನಾನು ಯೆಹೋವ ದೇವರಿಗೆ ಕೂಗಿದೆನು; ಅವರು ನನಗೆ ಉತ್ತರಕೊಟ್ಟರು.
2 耶和华啊,求你救我脱离说谎的嘴唇和诡诈的舌头!
ಯೆಹೋವ ದೇವರೇ, ನನ್ನ ಪ್ರಾಣವನ್ನು ಸುಳ್ಳು ತುಟಿಯಿಂದಲೂ, ಮೋಸದ ನಾಲಿಗೆಯಿಂದಲೂ ಬಿಡಿಸಿರಿ.
3 诡诈的舌头啊,要给你什么呢? 要拿什么加给你呢?
ಮೋಸದ ನಾಲಿಗೆಯೇ, ದೇವರು ನಿನಗೆ ಏನು ಕೊಡಬೇಕು? ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
4 就是勇士的利箭和罗腾木 的炭火。
ಪರಾಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳಿಂದ ನಿನಗೆ ಶಿಕ್ಷೆಯಾಗುವುದು.
5 我寄居在米设, 住在基达帐棚之中,有祸了!
ಅಯ್ಯೋ, ನಾನು ಮೆಷೆಕಿನಲ್ಲಿ ತಂಗಬೇಕಲ್ಲಾ! ಕೇದಾರಿನ ಗುಡಾರಗಳ ಬಳಿ ವಾಸಮಾಡುತ್ತೇನೆ.
6 我与那恨恶和睦的人许久同住。
ನಾನು ಸಮಾಧಾನವನ್ನು ವಿರೋಧಿಸುವವರ ಮಧ್ಯದಲ್ಲಿ ಬಹುಕಾಲ ಜೀವಿಸಬೇಕಾಯಿತು.
7 我愿和睦, 但我发言,他们就要争战。
ನಾನು ಶಾಂತಿ ಪ್ರಿಯನು; ಆದರೆ ನಾನು ಮಾತಾಡಿದರೆ ಅವರು ಯುದ್ಧಕ್ಕೆ ಬರುತ್ತಾರೆ.

< 诗篇 120 >