< যিহিস্কেল ভাববাদীর বই 31 >

1 তারপর, বাবিলে আমাদের বন্দিত্বের সময়ে একাদশ বছরের তৃতীয় মাসে, মাসের প্রথম দিনের, সদাপ্রভুর এই বাক্য আমার কাছে এল এবং বলল,
ಹನ್ನೊಂದನೆಯ ವರ್ಷದ, ಮೂರನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
2 মানুষের সন্তান, মিশর-রাজ ফরৌণকে ও তার চারিদিকের লোকেদেরকে বল, তুমি তোমার মহিমায় কার মত?
“ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನೊಂದಿಗೂ ಮತ್ತು ಅವನ ಸಮೂಹದೊಂದಿಗೂ ಮಾತನಾಡಿ, “‘ನೀನು ನಿನ್ನ ದೊಡ್ಡಸ್ತಿಕೆಯಲ್ಲಿ ಯಾರಿಗೆ ಸಮಾನವಾಗಿರುವೆ?
3 দেখ, অশূর লিবানোনের এরস করব সুন্দর শাখা প্রশাখা, বিরাট উচ্চতায় বনে সামিয়ানা করব এবং গাছের চূড়া শাখার ওপরে থাকবে।
ಅಸ್ಸೀರಿಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವದಾರು ಆಗಿದೆ. ಅದರ ನೆರಳು ದಟ್ಟವಾಗಿದೆ, ಬಹಳ ಎತ್ತರವಾಗಿದೆ, ಅದರ ತುದಿಯು ದಟ್ಟವಾದ ಕೊಂಬೆಗಳ ನಡುವೆಯಿತ್ತು.
4 সে জলে বড় হয়েছিল ও জলে উঁচু হয়েছিল; তার চারপাশে নদী বয়ে যেত কারণ সে মাঠের সব গাছের কাছে খাল কাটা ছিল।
ಅದನ್ನು ಜಲಪ್ರವಾಹಗಳು ಬೆಳೆಸಿದವು, ಆಳವಾದ ಬುಗ್ಗೆಗಳು ಅದನ್ನು ಎತ್ತರಕ್ಕೆ ಬೆಳೆಸಿದವು. ಅವುಗಳ ತೊರೆಗಳು ಅದರ ಬುಡದ ಸುತ್ತಲೂ ಹರಿದು ತಮ್ಮ ಕಾಲುವೆಗಳನ್ನು ಹೊಲದ ಎಲ್ಲಾ ಮರಗಳಿಗೆ ಕಳುಹಿಸಿದವು.
5 মাঠের সব গাছের থেকে তার দৈর্ঘ্য সব চেয়ে উঁচু ছিল এবং তার ডালপালা অনেক ছিল; তার ডালপালা অনেক লম্বা ছিল কারণ প্রচুর জলের জন্য সেগুলো বেড়েছিল।
ಆದ್ದರಿಂದ ಅದರ ಎತ್ತರವು ಬಯಲಿನ ಎಲ್ಲಾ ಮರಗಳಿಗಿಂತ ಎತ್ತರವಾಗಿತ್ತು. ಅದು ಹಬ್ಬಿದ್ದುದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದ ಅದರ ಕೊಂಬೆಗಳು ಅಧಿಕವಾದವು; ಅದರ ರೆಂಬೆಗಳು ಉದ್ದವಾದವು.
6 তার ডালে আকাশের সব পাখি বাসা বাঁধত এবং তার শাখার নীচে মাঠের সব পশু প্রসব করত এবং তার ছায়াতে সব মহাজাতি বাস করত।
ಅದರ ಕೊಂಬೆಗಳಲ್ಲಿ ಆಕಾಶದ ಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು. ಅದರ ರೆಂಬೆಗಳ ಕೆಳಗೆ ಬಯಲಿನ ಎಲ್ಲಾ ಮೃಗಗಳು ಮರಿಗಳಿಗೆ ಜನ್ಮ ಕೊಟ್ಟವು. ಅದರ ಕೆಳಗೆ ನೆರಳಿನಲ್ಲಿ ಎಲ್ಲಾ ಮಹಾಜನಾಂಗಗಳು ವಾಸಮಾಡಿದವು.
7 কারণ সে মহত্বে সুন্দর ছিল, ডালের লম্বায়, সুন্দর ছিল, কারণ তার শেকড় প্রচুর জলের মধ্যে ছিল।
ಹೀಗೆ ಅದರ ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ನೀಳವಾದ ಕೊಂಬೆಗಳಿಂದ ಸುಂದರವಾಗಿತ್ತು. ಏಕೆಂದರೆ ಅದರ ಬೇರು ಸಾಕಷ್ಟು ನೀರಿನ ಆಸರೆ ಪಡೆದಿತ್ತು.
8 ঈশ্বরের বাগানে এরস গাছের সঙ্গে কোন গাছ সমান করা যেত না, দেবদারু গাছের ডালপালায় তার সমান ছিল না এবং অর্ম্মন গাছ সব তার মত শাখাবিশিষ্ট ছিল না; ঈশ্বরের বাগানের কোন গাছের সৌন্দর্যের সঙ্গে অন্য গাছের তুলনা ছিল না।
ದೇವರ ತೋಟದ ದೇವದಾರುಗಳು ಅದನ್ನು ಮರೆಮಾಡಲಿಲ್ಲ. ತುರಾಯಿ ಮರಗಳು ಅದರ ಕೊಂಬೆಗಳಿಗೆ ಸಮವಾಗಲಿಲ್ಲ. ಆಲದ ಮರಗಳು ಅದರ ರೆಂಬೆಗಳಷ್ಟೂ ಇಲ್ಲ. ಆ ದೇವರ ತೋಟದ ಯಾವುದೇ ಮರವು ಇದರ ಸೌಂದರ್ಯಕ್ಕೆ ಸಮವಾಗಿಲ್ಲ.
9 আমি অনেক শাখা দিয়ে তাকে সুন্দর করেছিলাম, এদনে ঈশ্বরের বাগানের সবগাছ তার ওপরে ঈর্ষা করত।
ನಾನು ಅದನ್ನು ಅದರ ಕೊಂಬೆಗಳ ಸಮೂಹದಿಂದ ಸುಂದರಗೊಳಿಸಿದೆನು. ಅದರಿಂದ ದೇವರ ತೋಟದಲ್ಲಿನ ಏದೆನಿನ ಮರಗಳೆಲ್ಲಾ ಅದರ ಮೇಲೆ ಹೊಟ್ಟೆಕಿಚ್ಚು ಪಟ್ಟವು.
10 ১০ তাই প্রভু সদাপ্রভু একথা বলেন, কারণ এটা লম্বায় খুবই উঁচু এবং কারণ সে তার গাছকে সব শাখার ওপরে তুলল এবং তার হৃদয় সেই উচ্চতায় তুলল
“‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಅವನು ಎತ್ತರವಾಗಿ ಬೆಳೆದು ತನ್ನ ತುದಿ ಮೋಡಗಳನ್ನು ಮುಟ್ಟುವಷ್ಟು ನೀಳವಾಗಿದ್ದುದರ ಬಗ್ಗೆ ಗರ್ವಪಟ್ಟನು.
11 ১১ তাই আমি তাকে জাতিদের মধ্যে সব চেয়ে শক্তিশালী শাসকের হাতে সমর্পণ করলাম, এই শাসক তার বিরুদ্ধে কাজ করবে এবং তার দুষ্টতার কারণে তাকে তাড়াবে।
ಆದ್ದರಿಂದ ನಾನು ಅವನನ್ನು ಜನಾಂಗಗಳಲ್ಲಿ ಶೂರನಾದ ಒಬ್ಬನ ಕೈಗೆ ಕೊಟ್ಟಿದ್ದೇನೆ. ಇವನು ನಿಶ್ಚಯವಾಗಿ ಅದನ್ನು ದಂಡಿಸುತ್ತಾನೆ ಅದರ ದುಷ್ಟತ್ವದ ನಿಮಿತ್ತ ನಾನು ಅದನ್ನು ತಳ್ಳಿಹಾಕಿದ್ದೇನೆ.
12 ১২ বিদেশীরা যারা জাতিদের মধ্যে আতঙ্ক ছিল তাকে কেটে ফেলল এবং তারপর তাকে ছেড়ে দিল। তার শাখা পর্বতের ওপরে এবং উপত্যকায় পড়ে থাকল এবং তার শাখা পৃথিবীর জলপ্রবাহে ভেঙে পড়ল। তারপর পৃথিবীর সব জাতি তার ছায়া থেকে চলে গেল এবং তাকে ছেড়ে গেল।
ಜನಾಂಗಗಳಲ್ಲಿ ಭಯಂಕರವಾದ ವಿದೇಶಿಯರು ಅದನ್ನು ಕಡಿದುಹಾಕುವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅದರ ಕೊಂಬೆಗಳು ಬೀಳುವುವು. ದೇಶದ ಹಳ್ಳಗಳಲ್ಲೆಲ್ಲಾ ಅದರ ರೆಂಬೆಗಳು ಮುರಿದು ಹೋಗುವುವು. ಭೂಮಿಯ ಜನಗಳೆಲ್ಲಾ ಅದರ ನೆರಳಿನಿಂದ ದೂರ ಸರಿದು ಅದನ್ನು ಬಿಟ್ಟುಬಿಡುವರು.
13 ১৩ আকাশের সব পাখিরা তার গুঁড়ির ওপরে বিশ্রাম নেবে এবং তার শাখার ওপরে মাঠের সব পশু বসে থাকবে।
ಕೆಳಗೆ ಬಿದ್ದ ಮರದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವುವು. ಎಲ್ಲಾ ಕಾಡುಮೃಗಗಳು ಅದರ ರೆಂಬೆಗಳ ಬಳಿಯಲ್ಲಿರುವುವು.
14 ১৪ অন্য কোন জলের কাছের গাছ এত বড় আর লম্বা হয়নি যাতে তাদের গাছ অন্য গাছের থেকে উঁচুঁ, কারণ অন্যগাছ জল পান করে বড় ও লম্বা হয়েছে। কারণ তাদেরকে মৃত্যুতে সমর্পণ করা হবে, পৃথিবীর নিচের অংশে মানুষের সন্তানদের মধ্যে যারা গর্তের সমর্পিত হয়েছে।
ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗುಲಿಸದೆ ಇರುವುದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವುವು. ಅವುಗಳಿಗೆ ಅಧೋಲೋಕವೇ ಗತಿಯಾಗುವುದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವುವು.
15 ১৫ প্রভু সদাপ্রভু এ কথা বলেন, যেদিন সে পাতালে নেমে গেল আমি পৃথিবীতে শোক নিয়ে এলাম। আমি তাকে গভীর জলে ঢেকে দিলাম এবং সমুদ্র জলকে ধরে রাখলাম। আমি বিশাল জলরাশিকে ধরে রাখলাম এবং আমি তার জন্য লিবানোনকে শোকার্ত করলাম, তাই মাঠের গাছ সব তার জন্য জীর্ন হল। (Sheol h7585)
“‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮಾಧಿಗೆ ಇಳಿದ ದಿನದಲ್ಲಿ ನಾನು ಆಳವಾದ ಬುಗ್ಗೆಗಳನ್ನು ದುಃಖದಿಂದ ಮುಚ್ಚಿದೆನು; ನಾನು ಅದರ ಪ್ರವಾಹವನ್ನು ತಡೆಹಿಡಿದೆನು. ಮಹಾಜಲವನ್ನು ನಿಲ್ಲಿಸಿದೆನು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಿಡುವಂತೆ ಮಾಡಿದೆನು. ಬಯಲಿನ ಮರಗಳೆಲ್ಲಾ ಕುಗ್ಗಿಹೋದವು. (Sheol h7585)
16 ১৬ যখন আমি তাকে পাতালের গর্তে যাওয়া লোকেদের কাছে ফেলে দিলাম তখন তার পতনের শব্দে জাতিদেরকে কম্পিত করলাম এবং আমি সান্ত্বনা দিলাম পৃথিবীর নিচের অংশের এদনের সব গাছকে, লিবানোনের উৎকৃষ্ট এবং শ্রেষ্ঠ জলপায়ী গাছকে। (Sheol h7585)
ನಾನು ಅದನ್ನು ಕುಳಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು. ಅಧೋಲೋಕದ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವುವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿಕೊಂಡವು. (Sheol h7585)
17 ১৭ কারণ তারাও তার সঙ্গে পাতালে গেল যাকে তরোয়াল দ্বারা মারা হয়েছিল, এগুলো তার শক্তিশালী লোকছিল সেই জাতিগুলো যারা তার ছায়ায় বাস করত। (Sheol h7585)
ಇದಲ್ಲದೆ, ಅದಕ್ಕೆ ತೋಳಬಲವಾಗಿ ಜನಾಂಗಗಳ ಮಧ್ಯೆ ಅದರ ನೆರಳನ್ನು ಆಶ್ರಯಿಸಿದವರು, ಅದರೊಂದಿಗೆ ಪಾತಾಳಕ್ಕಿಳಿದು, ಖಡ್ಗಹತರ ಜೊತೆಗೆ ಸೇರಿದರು. (Sheol h7585)
18 ১৮ এদনের কোন গাছগুলো তোমার প্রতাপে ও মহত্বে সমান? কারণ এদনের গাছগুলোর সঙ্গে তোমাকেও পৃথিবীর নিচের অংশে আনা হবে অচ্ছিন্নত্বক‌দের মধ্য থেকে, তুমি তাদের সঙ্গে বাস করবে যারা তরোয়াল দ্বারা নিহত হয়েছিল। এ সেই ফরৌণ এবং সব তার লোক; এটা প্রভু সদাপ্রভু বলেন।
“‘ನೀನು ಹೀಗೆ ಘನತೆಯಿಂದಲೂ ದೊಡ್ಡಸ್ತಿಕೆಯಿಂದಲೂ ಏದೆನಿನ ಯಾವ ಮರಗಳಿಗೆ ಸಮನಾಗಿರುವೆ? ಆದರೂ ನೀನು ಏದೆನಿನ ಮರಗಳ ಸಂಗಡ ಭೂಮಿಯ ಕೆಳಭಾಗಗಳಿಗೆ ದೂಡಿದವನಾಗುವೆ. ಸುನ್ನತಿಯಿಲ್ಲದವರ ಮಧ್ಯದಲ್ಲಿ ಖಡ್ಗದಿಂದ ಹತರಾದವರ ಸಂಗಡ ಮಲಗುವೆ. “‘ಇದೇ ಫರೋಹನನೂ ಅವನ ಎಲ್ಲಾ ಜನಸಮೂಹವೂ ಆಗಿವೆ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”

< যিহিস্কেল ভাববাদীর বই 31 >