< أعمال 25 >

فَلَمَّا قَدِمَ فَسْتُوسُ إِلَى ٱلْوِلَايَةِ صَعِدَ بَعْدَ ثَلَاثَةِ أَيَّامٍ مِنْ قَيْصَرِيَّةَ إِلَى أُورُشَلِيمَ. ١ 1
ಫೆಸ್ತನು ಅಧಿಕಾರ ವಹಿಸಿಕೊಂಡು, ಮೂರು ದಿನಗಳಾದ ನಂತರ ಕೈಸರೈಯದಿಂದ ಯೆರೂಸಲೇಮಿಗೆ ಹೋದನು.
فَعَرَضَ لَهُ رَئِيسُ ٱلْكَهَنَةِ وَوُجُوهُ ٱلْيَهُودِ ضِدَّ بُولُسَ، وَٱلْتَمَسُوا مِنْهُ ٢ 2
ಅಲ್ಲಿ ಮುಖ್ಯಯಾಜಕನೂ, ಯೆಹೂದ್ಯರಲ್ಲಿ ಪ್ರಮುಖರೂ, ಅವನಿಗೆ ಪೌಲನ ಮೇಲೆ ದೂರು ಹೇಳಿ,
طَالِبِينَ عَلَيْهِ مِنَّةً، أَنْ يَسْتَحْضِرَهُ إِلَى أُورُشَلِيمَ، وَهُمْ صَانِعُونَ كَمِينًا لِيَقْتُلُوهُ فِي ٱلطَّرِيقِ. ٣ 3
ನೀನು ದಯಮಾಡಿ ಅವನನ್ನು ಯೆರೂಸಲೇಮಿಗೆ ಕಳುಹಿಸಬೇಕೆಂದು ಪೌಲನ ಕೇಡಿಗಾಗಿ ಬಲವಾದ ಬಿನ್ನಹವನ್ನು ಮಾಡಿದರು. ಏಕೆಂದರೆ, ದಾರಿಯಲ್ಲಿ ಅವನನ್ನು ಕೊಲ್ಲುವುದಕ್ಕಾಗಿ ಹೊಂಚುಹಾಕಿಕೊಂಡಿದ್ದರು.
فَأَجَابَ فَسْتُوسُ أَنْ يُحْرَسَ بُولُسُ فِي قَيْصَرِيَّةَ، وَأَنَّهُ هُوَ مُزْمِعٌ أَنْ يَنْطَلِقَ عَاجِلًا. ٤ 4
ಫೆಸ್ತನು ಅವರಿಗೆ; ಪೌಲನು ಕೈಸರೈಯದಲ್ಲಿ ಸೆರೆಮನೆಯೊಳಗಿದ್ದಾನೆ, ನಾನೇ ಬೇಗ ಅಲ್ಲಿಗೆ ಹೊರಟು ಹೋಗಬೇಕೆಂದಿದ್ದೇನೆ.
وَقَالَ: «فَلْيَنْزِلْ مَعِي ٱلَّذِينَ هُمْ بَيْنَكُمْ مُقْتَدِرُونَ. وَإِنْ كَانَ فِي هَذَا ٱلرَّجُلِ شَيْءٌ فَلْيَشْتَكُوا عَلَيْهِ». ٥ 5
ಆದಕಾರಣ ನಿಮ್ಮಲ್ಲಿ ಪ್ರಮುಖರು, ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅಪವಾದ ಏನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು.
وَبَعْدَ مَا صَرَفَ عِنْدَهُمْ أَكْثَرَ مِنْ عَشَرَةِ أَيَّامٍ ٱنْحَدَرَ إِلَى قَيْصَرِيَّةَ. وَفِي ٱلْغَدِ جَلَسَ عَلَى كُرْسِيِّ ٱلْوِلَايَةِ وَأَمَرَ أَنْ يُؤْتَى بِبُولُسَ. ٦ 6
ಅವನು ಯೆರುಸಲೇಮಿನಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿನಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು, ಪೌಲನನ್ನು ಕರತರಬೇಕೆಂದು ಅಪ್ಪಣೆಮಾಡಿದನು.
فَلَمَّا حَضَرَ، وَقَفَ حَوْلَهُ ٱلْيَهُودُ ٱلَّذِينَ كَانُوا قَدِ ٱنْحَدَرُوا مِنْ أُورُشَلِيمَ، وَقَدَّمُوا عَلَى بُولُسَ دَعَاوِيَ كَثِيرَةً وَثَقِيلَةً لَمْ يَقْدِرُوا أَنْ يُبَرْهِنُوهَا. ٧ 7
ಅವನು ಬಂದ ಮೇಲೆ ಯೆರೂಸಲೇಮಿನಿಂದ ಬಂದಿದ್ದ ಯೆಹೂದ್ಯರು, ಅವನ ಸುತ್ತಲು ನಿಂತುಕೊಂಡು ತಾವು ಸಾಬೀತುಪಡಿಸಲಾರದ ಅನೇಕ ದೊಡ್ಡ ದೊಡ್ಡ ತಪ್ಪುಗಳನ್ನು ಹೊರಿಸುತ್ತಿರಲು,
إِذْ كَانَ هُوَ يَحْتَجُّ: «أَنِّي مَا أَخْطَأْتُ بِشَيْءٍ، لَا إِلَى نَامُوسِ ٱلْيَهُودِ وَلَا إِلَى ٱلْهَيْكَلِ وَلَا إِلَى قَيْصَرَ». ٨ 8
ಪೌಲನು; “ಯೆಹೂದ್ಯರ ಧರ್ಮಶಾಸ್ತ್ರದ ವಿಷಯದಲ್ಲಾಗಲಿ, ದೇವಾಲಯದ ವಿಷಯದಲ್ಲಾಗಲಿ, ಚಕ್ರವರ್ತಿಯ ವಿಷಯದಲ್ಲಾಗಲಿ ನಾನು ಯಾವ ತಪ್ಪನ್ನೂ ಮಾಡಲಿಲ್ಲವೆಂದು” ಪ್ರತ್ಯುತ್ತರ ಹೇಳಿದನು.
وَلَكِنَّ فَسْتُوسَ إِذْ كَانَ يُرِيدُ أَنْ يُودِعَ ٱلْيَهُودَ مِنَّةً، أَجَابَ بُولُسَ قَائِلًا: «أَتَشَاءُ أَنْ تَصْعَدَ إِلَى أُورُشَلِيمَ لِتُحَاكَمَ هُنَاكَ لَدَيَّ مِنْ جِهَةِ هَذِهِ ٱلْأُمُورِ؟». ٩ 9
ಆದರೆ ಫೆಸ್ತನು ಯೆಹೂದ್ಯರ ಪ್ರೀತಿಯನ್ನು ಸಂಪಾದಿಸಿಕೊಳ್ಳಬೇಕೆಂದು ಅಪೇಕ್ಷಿಸಿ ಪೌಲನನ್ನು; “ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಈ ಕಾರ್ಯಗಳ ವಿಷಯವಾಗಿ ನನ್ನ ಮುಂದೆ ವಿಚಾರಿಸಲ್ಪಡುವುದಕ್ಕೆ ನಿನಗೆ ಮನಸ್ಸುಂಟೋ?” ಎಂದು ಕೇಳಲು, ಪೌಲನು;
فَقَالَ بُولُسُ: «أَنَا وَاقِفٌ لَدَى كُرْسِيِّ وِلَايَةِ قَيْصَرَ حَيْثُ يَنْبَغِي أَنْ أُحَاكَمَ. أَنَا لَمْ أَظْلِمِ ٱلْيَهُودَ بِشَيْءٍ، كَمَا تَعْلَمُ أَنْتَ أَيْضًا جَيِّدًا. ١٠ 10
೧೦“ನಾನು ಕೈಸರನ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ; ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ಯೆಹೂದ್ಯರಿಗೆ ನಾನು ಅನ್ಯಾಯವೇನೂ ಮಾಡಲಿಲ್ಲ; ಅದು ನಿನಗೂ ಚೆನ್ನಾಗಿ ತಿಳಿದೇ ಇದೆ.
لِأَنِّي إِنْ كُنْتُ آثِمًا، أَوْ صَنَعْتُ شَيْئًا يَسْتَحِقُّ ٱلْمَوْتَ، فَلَسْتُ أَسْتَعْفِي مِنَ ٱلْمَوْتِ. وَلَكِنْ إِنْ لَمْ يَكُنْ شَيْءٌ مِمَّا يَشْتَكِي عَلَيَّ بِهِ هَؤُلَاءِ، فَلَيْسَ أَحَدٌ يَسْتَطِيعُ أَنْ يُسَلِّمَنِي لَهُمْ. إِلَى قَيْصَرَ أَنَا رَافِعٌ دَعْوَايَ!». ١١ 11
೧೧ನಾನು ಅನ್ಯಾಯ ಮಾಡಿದವನಾಗಿ ಮರಣದಂಡನೆಗೆ ಕಾರಣವಾದ ಏನನ್ನಾದರೂ ಮಾಡಿದ್ದೇಯಾದರೆ ಮರಣ ದಂಡನೆಯನ್ನು ನಿರಾಕರಿಸುವುದಿಲ್ಲ. ಆದರೆ ಇವರು ನನ್ನ ಮೇಲೆ ಹೊರಿಸುವ ಅಪವಾದಗಳು ಪೊಳ್ಳಾಗಿದ್ದ ಪಕ್ಷದಲ್ಲಿ, ಯಾರೂ ನನ್ನನ್ನು ಇವರ ಕೈಗೊಪ್ಪಿಸಲಾಗದು. ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ” ಎಂದನು.
حِينَئِذٍ تَكَلَّمَ فَسْتُوسُ مَعَ أَرْبَابِ ٱلْمَشُورَةِ، فَأَجَابَ: «إِلَى قَيْصَرَ رَفَعْتَ دَعْوَاكَ. إِلَى قَيْصَرَ تَذْهَبُ!». ١٢ 12
೧೨ಆಗ, ಫೆಸ್ತನು ತನ್ನ ಸಭೆಯವರ ಸಂಗಡ ಸಮಾಲೋಚನೆಮಾಡಿದ ಮೇಲೆ ಪೌಲನಿಗೆ; “ನೀನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಎಂದೆಯಲ್ಲಾ, ಆದುದರಿಂದ ಕೈಸರನ ಬಳಿಗೇ ಹೋಗಬೇಕು” ಎಂದು ಹೇಳಿದನು.
وَبَعْدَمَا مَضَتْ أَيَّامٌ أَقْبَلَ أَغْرِيبَاسُ ٱلْمَلِكُ وَبَرْنِيكِي إِلَى قَيْصَرِيَّةَ لِيُسَلِّمَا عَلَى فَسْتُوسَ. ١٣ 13
೧೩ಕೆಲವು ದಿನಗಳು ಕಳೆದನಂತರ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ, ಫೆಸ್ತನನ್ನು ಭೇಟಿಯಾಗುವುದಕ್ಕೆ ಕೈಸರೈಯಕ್ಕೆ ಬಂದರು.
وَلَمَّا كَانَا يَصْرِفَانِ هُنَاكَ أَيَّامًا كَثِيرَةً، عَرَضَ فَسْتُوسُ عَلَى ٱلْمَلِكِ أَمْرَ بُولُسَ، قَائِلًا: «يُوجَدُ رَجُلٌ تَرَكَهُ فِيلِكْسُ أَسِيرًا، ١٤ 14
೧೪ಅವರು ಅನೇಕ ದಿನಗಳು ಅಲ್ಲಿ ತಂಗಿರಲಾಗಿ ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿ ಹೇಳಿದ್ದೇನಂದರೆ; “ಫೇಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ.
وَعَرَضَ لِي عَنْهُ رُؤَسَاءُ ٱلْكَهَنَةِ وَمَشَايِخُ ٱلْيَهُودِ لَمَّا كُنْتُ فِي أُورُشَلِيمَ طَالِبِينَ حُكْمًا عَلَيْهِ. ١٥ 15
೧೫ನಾನು ಯೆರೂಸಲೇಮಿನಲ್ಲಿದ್ದಾಗ, ಯೆಹೂದ್ಯರ ಮುಖ್ಯಯಾಜಕರೂ, ಹಿರಿಯರೂ ಅವನ ವಿಷಯವಾಗಿ ನನಗೆ ದೂರುಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು.
فَأَجَبْتُهُمْ أَنْ لَيْسَ لِلرُّومَانِيِّينَ عَادَةٌ أَنْ يُسَلِّمُوا أَحَدًا لِلْمَوْتِ قَبْلَ أَنْ يَكُونَ ٱلْمَشْكُوُّ عَلَيْهِ مُواجَهَةً مَعَ ٱلْمُشْتَكِينَ، فَيَحْصُلُ عَلَى فُرْصَةٍ لِلِٱحْتِجَاجِ عَنِ ٱلشَّكْوَى. ١٦ 16
೧೬“ನಾನು ಅವರಿಗೆ; ಪ್ರತಿವಾದಿಯು ವಾದಿಗಳಿಗೆ, ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಆರೋಪಿಸಿದ ದೋಷದ ವಿಷಯದಲ್ಲಿ ಪ್ರತಿವಾದಮಾಡುವುದಕ್ಕೆ ಎಡೆಕೊಡದೆ, ಅವನನ್ನು ಒಪ್ಪಿಸಿಬಿಡುವುದು ರೋಮಾಯರ ಪದ್ಧತಿಯಲ್ಲವೆಂದು” ಹೇಳಿದೆನು.
فَلَمَّا ٱجْتَمَعُوا إِلَى هُنَا جَلَسْتُ مِنْ دُونِ إِمْهَالٍ فِي ٱلْغَدِ عَلَى كُرْسِيِّ ٱلْوِلَايَةِ، وَأَمَرْتُ أَنْ يُؤْتَى بِٱلرَّجُلِ. ١٧ 17
೧೭ಅವರು ಇಲ್ಲಿಗೆ ಕೂಡಿಬಂದಾಗ ನಾನು ಸ್ವಲ್ಪವೂ ತಡಮಾಡದೆ ಮರುದಿನವೇ ನ್ಯಾಯಸ್ಥಾನದ ಮೇಲೆ ಕುಳಿತುಕೊಂಡು ಆ ಮನುಷ್ಯನನ್ನು ಕರತರಬೇಕೆಂದು ಅಪ್ಪಣೆಕೊಟ್ಟೆನು.
فَلَمَّا وَقَفَ ٱلْمُشْتَكُونَ حَوْلَهُ، لَمْ يَأْتُوا بِعِلَّةٍ وَاحِدَةٍ مِمَّا كُنْتُ أَظُنُّ. ١٨ 18
೧೮ತಪ್ಪು ಹೊರಿಸುವವರು ನಿಂತುಕೊಂಡು ನಾನು ಭಾವಿಸಿದ್ದ ಅಪರಾಧಗಳಲ್ಲಿ ಒಂದನ್ನಾದರೂ ಅವನ ಮೇಲೆ ಹೊರಿಸದೆ,
لَكِنْ كَانَ لَهُمْ عَلَيْهِ مَسَائِلُ مِنْ جِهَةِ دِيَانَتِهِمْ، وَعَنْ وَاحِدٍ ٱسْمُهُ يَسُوعُ قَدْ مَاتَ، وَكَانَ بُولُسُ يَقُولُ: إِنَّهُ حَيٌّ. ١٩ 19
೧೯ಅವರ ಮತದ ವಿಷಯದಲ್ಲಿಯೂ, ಜೀವಿಸಿದ್ದಾನೆ ಎಂದು, ಪೌಲನು ಹೇಳುವ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ, ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು.
وَإِذْ كُنْتُ مُرْتَابًا فِي ٱلْمَسْأَلَةِ عَنْ هَذَا قُلْتُ: أَلَعَلَّهُ يَشَاءُ أَنْ يَذْهَبَ إِلَى أُورُشَلِيمَ، وَيُحَاكَمَ هُنَاكَ مِنْ جِهَةِ هَذِهِ ٱلْأُمُورِ؟ ٢٠ 20
೨೦ಇಂಥ ಕಾರ್ಯಗಳನ್ನು ಹೇಗೆ ವಿಚಾರಣೆಮಾಡಬೇಕೆಂಬುದು ನನಗೆ ತೋಚದೆ; ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಇವುಗಳ ವಿಷಯವಾಗಿ ವಿಚಾರಣೆಹೊಂದುವುದಕ್ಕೆ ನಿನಗೆ ಮನಸ್ಸುಂಟೋ? ಎಂದು ನಾನು ಕೇಳಿದೆ.
وَلَكِنْ لَمَّا رَفَعَ بُولُسُ دَعْوَاهُ لِكَيْ يُحْفَظَ لِفَحْصِ أُوغُسْطُسَ، أَمَرْتُ بِحِفْظِهِ إِلَى أَنْ أُرْسِلَهُ إِلَى قَيْصَرَ». ٢١ 21
೨೧ಅದಕ್ಕೆ ಪೌಲನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುವ ತನಕ, ತನ್ನನ್ನು ಕಾಯಬೇಕೆಂದು ಕೇಳಿಕೊಂಡಾಗ ನಾನು ಕೈಸರನ ಬಳಿಗೆ ಕಳುಹಿಸುವ ತನಕ, ಅವನನ್ನು ಕಾಯುವುದಕ್ಕೆ ಅಪ್ಪಣೆಕೊಟ್ಟೆನು ಎಂದು ಹೇಳಿದನು.
فَقَالَ أَغْرِيبَاسُ لِفَسْتُوسَ: «كُنْتُ أُرِيدُ أَنَا أَيْضًا أَنْ أَسْمَعَ ٱلرَّجُلَ». فَقَالَ: «غَدًا تَسْمَعُهُ». ٢٢ 22
೨೨ಅದಕ್ಕೆ ಅಗ್ರಿಪ್ಪನು; “ಆ ಮನುಷ್ಯನು ಹೇಳಿಕೊಳ್ಳುವುದನ್ನು ಕೇಳುವುದಕ್ಕೆ ನನಗೂ ಮನಸ್ಸಿದೆ” ಎಂದು ಹೇಳಲು, ಫೆಸ್ತನು; “ನಾಳೆ ಕೇಳಬಹುದು” ಎಂದನು.
فَفِي ٱلْغَدِ لَمَّا جَاءَ أَغْرِيبَاسُ وَبَرْنِيكِي فِي ٱحْتِفَالٍ عَظِيمٍ، وَدَخَلَا إِلَى دَارِ ٱلِٱسْتِمَاعِ مَعَ ٱلْأُمَرَاءِ وَرِجَالِ ٱلْمَدِينَةِ ٱلْمُقَدَّمِينَ، أَمَرَ فَسْتُوسُ فَأُتِيَ بِبُولُسَ. ٢٣ 23
೨೩ಮರುದಿನ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಂಗಣದೊಳಗೆ ಸೇರಿಬಂದಾಗ ಫೆಸ್ತನು ಅಪ್ಪಣೆ ಕೊಡಲು, ಪೌಲನನ್ನು ಕರತಂದರು.
فَقَالَ فَسْتُوسُ: «أَيُّهَا ٱلْمَلِكُ أَغْرِيبَاسُ وَٱلرِّجَالُ ٱلْحَاضِرُونَ مَعَنَا أَجْمَعُونَ، أَنْتُمْ تَنْظُرُونَ هَذَا ٱلَّذِي تَوَسَّلَ إِلَيَّ مِنْ جِهَتِهِ كُلُّ جُمْهُورِ ٱلْيَهُودِ فِي أُورُشَلِيمَ وَهُنَا، صَارِخِينَ أَنَّهُ لَا يَنْبَغِي أَنْ يَعِيشَ بَعْدُ. ٢٤ 24
೨೪ಆಗ ಫೆಸ್ತನು; “ಅಗ್ರಿಪ್ಪರಾಜನೇ, ನಮ್ಮ ಸಂಗಡ ಕೂಡಿಬಂದಿರುವ ಎಲ್ಲಾ ಜನರೇ, ಈ ಮನುಷ್ಯನನ್ನು ನೋಡುತ್ತೀರಲ್ಲಾ, ಇವನ ವಿಷಯದಲ್ಲಿ ಯೆಹೂದ್ಯರೆಲ್ಲರೂ, ಇವನು ಇನ್ನು ಮೇಲೆ ಬದುಕಬಾರದೆಂದು ಕೂಗುತ್ತಾ ಯೆರೂಸಲೇಮಿನಲ್ಲಿಯೂ, ಇಲ್ಲಿಯೂ ನನ್ನನ್ನು ಬೇಡಿಕೊಂಡರು.
وَأَمَّا أَنَا فَلَمَّا وَجَدْتُ أَنَّهُ لَمْ يَفْعَلْ شَيْئًا يَسْتَحِقُّ ٱلْمَوْتَ، وَهُوَ قَدْ رَفَعَ دَعْوَاهُ إِلَى أُوغُسْطُسَ، عَزَمْتُ أَنْ أُرْسِلَهُ. ٢٥ 25
೨೫ಇವನು ಮರಣದಂಡನೆಗೆ ಕಾರಣವಾದದ್ದೇನೂ ಮಾಡಲಿಲ್ಲವೆಂದು ನನಗೆ ಕಂಡುಬಂದಿತು. ಅವನೇ ಕೈಸರನಿಗೆ ವಿಜ್ಞಾಪನೆಮಾಡಿಕೊಂಡದ್ದರಿಂದ, ಇವನನ್ನು ಕೈಸರನ ಬಳಿಗೆ ಕಳುಹಿಸುವುದಕ್ಕೆ ತೀರ್ಮಾನಿಸಿದೆನು.
وَلَيْسَ لِي شَيْءٌ يَقِينٌ مِنْ جِهَتِهِ لِأَكْتُبَ إِلَى ٱلسَّيِّدِ. لِذَلِكَ أَتَيْتُ بِهِ لَدَيْكُمْ، وَلَا سِيَّمَا لَدَيْكَ أَيُّهَا ٱلْمَلِكُ أَغْرِيبَاسُ، حَتَّى إِذَا صَارَ ٱلْفَحْصُ يَكُونُ لِي شَيْءٌ لِأَكْتُبَ. ٢٦ 26
೨೬ಆದರೆ ಇವನ ಕುರಿತಾಗಿ ಕೈಸರನಿಗೆ ಬರೆಯುವುದಕ್ಕೆ ನಿರ್ದಿಷ್ಟವಾದ ಕಾರಣವೇನೂ ಕಂಡು ಬರಲಿಲ್ಲ. ಸೆರೆಯಲ್ಲಿರುವವನ ವಿರುದ್ಧ ಆರೋಪಿಸಿರುವ ದೋಷಗಳನ್ನು ಸೂಚಿಸದೆ, ಅವನನ್ನು ಕಳುಹಿಸುವುದು ಯುಕ್ತವಲ್ಲವೆಂದು ನನಗೆ ತೋರುತ್ತದೆ.
لِأَنِّي أَرَى حَمَاقَةً أَنْ أُرْسِلَ أَسِيرًا وَلَا أُشِيرَ إِلَى ٱلدَّعَاوِي ٱلَّتِي عَلَيْهِ». ٢٧ 27
೨೭ಆದುದರಿಂದ ವಿಚಾರಣೆಯಾದ ಮೇಲೆ ಬರೆಯುವುದಕ್ಕೆ ಏನಾದರೂ ಸಿಕ್ಕೀತೆಂದು, ಇವನನ್ನು ನಿಮ್ಮ ಮುಂದೆ ಮುಖ್ಯವಾಗಿ ಅಗ್ರಿಪ್ಪರಾಜನೇ ನಿನ್ನ ಮುಂದೆ ಕರೆಯಿಸಿದ್ದೇನೆ” ಅಂದನು.

< أعمال 25 >