< Псалми 124 >

1 Да није био Господ с нама, нека рече Израиљ,
ಯಾತ್ರಾಗೀತೆ; ದಾವೀದನದು. “ಯೆಹೋವನು ನಮಗಿಲ್ಲದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?”, ಎಂದು ಇಸ್ರಾಯೇಲರೇ ಹೇಳಲಿ.
2 Да није био Господ с нама, кад људи усташе на нас,
ನರ ಮನುಷ್ಯರು ನಮಗೆ ವಿರುದ್ಧವಾಗಿ ಎದ್ದಾಗ, ಯೆಹೋವನು ನಮಗಿಲ್ಲದಿದ್ದರೆ,
3 Живе би нас прождрли, кад се распали гнев њихов на нас;
“ನಿಶ್ಚಯವಾಗಿ ಅವರು ಕೋಪದಿಂದ ಉರಿಗೊಂಡು, ನಮ್ಮನ್ನು ಜೀವಸಹಿತ ನುಂಗಿಬಿಡುತ್ತಿದ್ದರು;
4 Потопила би нас вода, река би покрила душу нашу;
ನಿಶ್ಚಯವಾಗಿ ಪ್ರವಾಹವು ನಮ್ಮನ್ನು ಬಡಿದುಕೊಂಡು ಹೋಗುತ್ತಿತ್ತು; ನದಿಯು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತಿತ್ತು;
5 Покрила би душу нашу силна вода.
ಮೀರಿದ ಪ್ರವಾಹವು ನಮ್ಮನ್ನು ಮುಳುಗಿಸಿಬಿಡುತ್ತಿತ್ತು.”
6 Благословен Господ, који нас не даде зубима њиховим да нас растржу!
ಯೆಹೋವನಿಗೆ ಕೊಂಡಾಟವಾಗಲಿ; ಆತನು ನಮ್ಮನ್ನು ಅವರ ಹಲ್ಲುಗಳಿಗೆ ಸೀಳಿಬಿಡಲು ಕೊಡಲಿಲ್ಲ.
7 Душа се наша избави као птица из замке ловачке; замка се раскиде, и ми се избависмо.
ನಮ್ಮ ಜೀವವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು.
8 Помоћ је наша у имену Господњем, који је створио небо и земљу.
ಭೂಮಿ, ಆಕಾಶಗಳನ್ನು ಉಂಟುಮಾಡಿದ, ಯೆಹೋವನ ನಾಮದಲ್ಲಿ ನಮಗೆ ರಕ್ಷಣೆಯಾಗುವುದು.

< Псалми 124 >