< II Samuela 19 >

1 I zawiadomiono Joaba: Oto król płacze i lamentuje z powodu Absaloma.
ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ವರ್ತಮಾನವು ಯೋವಾಬನಿಗೆ ಮುಟ್ಟಿತು.
2 Tak więc zwycięstwo tego dnia zamieniło się w żałobę dla całego ludu. Lud bowiem usłyszał w tym dniu, jak mówiono: Król ubolewa nad swoim synem.
ಅರಸನು ಮಗನಿಗೊಸ್ಕರ ಪ್ರಲಾಪಿಸುತ್ತಿದ್ದಾನೆ ಎಂದು ಎಲ್ಲಾ ಜನರಿಗೂ ಗೊತ್ತಾದುದರಿಂದ, ಅವರ ಜಯಘೋಷವು ಗೋಳಾಟವಾಯಿತು.
3 I lud wkradał się tego dnia, gdy wchodzili do miasta, tak jak wkrada się lud, który jest okryty hańbą i ucieka z bitwy.
ಜನರು ಆ ದಿನ ಯುದ್ಧದಲ್ಲಿ ಸೋತು ಓಡಿ ಬಂದವರೋ ಎಂಬಂತೆ ನಾಚಿಕೆಯಿಂದ ಕಳ್ಳತನದಿಂದ ಊರನ್ನು ಪ್ರವೇಶಿಸಿದರು.
4 A król zasłonił swoją twarz i wołał donośnym głosem: Mój synu, Absalomie, Absalomie, mój synu, mój synu!
ಅರಸನು ತನ್ನ ಮುಖವನ್ನು ಮುಚ್ಚಿಕೊಂಡು, “ನನ್ನ ಮಗನಾದ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನೇ!” ಎಂದು ಬಹಳವಾಗಿ ಗೋಳಾಡಿದನು.
5 Wtedy Joab wszedł do króla do domu i powiedział: Okryłeś dziś wstydem twarze wszystkich swoich sług, którzy dzisiaj ocalili twoje życie, życie twoich synów i córek oraz życie twoich żon i nałożnic.
ಯೋವಾಬನು ಅರಸನ ಬಳಿಗೆ ಹೋಗಿ ಅವನಿಗೆ, “ನಿನ್ನನ್ನೂ, ನಿನ್ನ ಗಂಡು ಹೆಣ್ಣು ಮಕ್ಕಳನ್ನೂ, ಹೆಂಡತಿಯರನ್ನೂ, ಉಪಪತ್ನಿಯರನ್ನೂ ರಕ್ಷಿಸಿದಂಥ ನಿನ್ನ ಸೈನಿಕರನ್ನು ಈ ಹೊತ್ತು ಅಪಮಾನಪಡಿಸಿದಿ.
6 Miłujesz tych, którzy cię nienawidzą, a nienawidzisz tych, którzy cię miłują. Pokazałeś bowiem dziś, że dowódcy i słudzy są dla ciebie niczym. Gdyż dzisiaj poznałem, że gdyby Absalom przeżył, a my wszyscy dziś poleglibyśmy, to by ci się bardzo spodobało.
ನೀನು ಶತ್ರುಗಳನ್ನು ಪ್ರೀತಿಸುವವನೂ, ಮಿತ್ರರನ್ನು ದ್ವೇಷಿಸುವವನೂ ಆಗಿದ್ದೀ. ನೀನು ನಿನ್ನ ಸೇನಾಧಿಪತಿಗಳನ್ನೂ, ಸೈನಿಕರನ್ನೂ ಲಕ್ಷಿಸುವವನಲ್ಲವೆಂದು ಈಗ ತೋರಿಸಿಕೊಟ್ಟೆ. ಇದರಿಂದ ಈ ದಿನ ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೆ ಉಳಿದಿದ್ದರೆ ನಿನಗೆ ಸಂತೋಷವಾಗುತ್ತಿತ್ತೆಂದು ತಿಳಿಯಬೇಕಷ್ಟೆ.
7 Teraz wstań więc, wyjdź i przemów łagodnie do swoich sług. Przysięgam bowiem na PANA, że jeśli nie wyjdziesz, nikt nie pozostanie przy tobie tej nocy, a będzie to gorsze niż całe zło, jakie spotkało cię od twej młodości aż dotąd.
ಈಗ ಎದ್ದು ಹೋಗಿ ನಿನ್ನ ಸೇವಕರನ್ನು ದಯೆಯಿಂದ ಮಾತನಾಡಿಸು. ಯೆಹೋವನಾಣೆ, ನೀನು ಹೀಗೆ ಮಾಡದಿದ್ದರೆ ಸಾಯಂಕಾಲವಾಗುವಷ್ಟರಲ್ಲಿ ಎಲ್ಲರೂ ನಿನ್ನನ್ನು ಬಿಟ್ಟು ಹೋಗುವರು. ಯೌವನ ಕಾಲದಿಂದ ಈ ವರೆಗೆ ನಿನಗೆ ಬಂದ ಎಲ್ಲಾ ಕೇಡುಗಳಲ್ಲಿ ಇದೇ ಹೆಚ್ಚಿನದಾಗಿರುವುದು” ಎಂದು ಹೇಳಿದನು.
8 Wtedy król wstał i zasiadł w bramie. Zawiadomiono cały lud: Oto król zasiadł w bramie. I cały lud stawił się przed królem. Izraelici zaś uciekli, każdy do swego namiotu.
ಆಗ ಅರಸನು ಎದ್ದು ಬಂದು ಊರಬಾಗಿಲಲ್ಲಿ ಕುಳಿತುಕೊಂಡನು. ಇಗೋ, ಅರಸನು ಬಂದು ಊರಬಾಗಿಲಲ್ಲಿ ಕುಳಿತುಕೊಂಡಿದ್ದಾನೆಂಬ ಸುದ್ದಿಯು ಪ್ರಜೆಗಳಿಗೆ ಮುಟ್ಟಿದಾಗ ಅವರೆಲ್ಲರೂ ಅವನ ಮುಂದೆ ನೆರೆದು ಬಂದರು.
9 I cały lud, we wszystkich pokoleniach, rozprawiał [ze sobą]: Król wyrwał nas z rąk naszych wrogów i on nas wyrwał z rąk Filistynów, a teraz uciekł z ziemi przed Absalomem.
ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ನಿವಾಸಗಳಿಗೆ ಓಡಿ ಹೋಗಿದ್ದರು. ಇಸ್ರಾಯೇಲರ ಕುಲಗಳ ಎಲ್ಲಾ ಜನರು ತಮ್ಮತಮ್ಮೊಳಗೆ ಜಗಳವಾಡಿ “ಅರಸನಾದ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಗೂ, ಬೇರೆ ಎಲ್ಲಾ ವೈರಿಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡಿದನು. ಆದರೆ ಅವನು ಅಬ್ಷಾಲೋಮನ ದೆಸೆಯಿಂದ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು.
10 Lecz Absalom, którego namaściliśmy nad sobą, zginął w bitwie. Czemu więc teraz nic nie mówicie o sprowadzeniu króla z powrotem?
೧೦ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತನು. ಹೀಗಿರುವಲ್ಲಿ ಅರಸನಾದ ದಾವೀದನನ್ನು ತಿರುಗಿ ಕರೆದುಕೊಂಡು ಬರಬಾರದೇಕೆ? ಸುಮ್ಮನೆ ಕುಳಿತಿರುವುದೇಕೆ?” ಎಂದು ಮಾತನಾಡಿಕೊಂಡರು.
11 Posłał więc król Dawid do kapłanów Sadoka i Abiatara taką wiadomość: Powiedzcie starszym Judy: Dlaczego macie być ostatni przy sprowadzeniu króla z powrotem do jego domu? Słowa całego Izraela doszły bowiem do króla, do jego domu.
೧೧ಇಸ್ರಾಯೇಲರು ಈ ಪ್ರಕಾರ ಮಾತನಾಡಿಕೊಂಡ ವರ್ತಮಾನವು ದಾವೀದನಿಗೆ ಮುಟ್ಟಿತು. ಅವನು ಯಾಜಕರಾದ ಚಾದೋಕ್ ಮತ್ತು ಎಬ್ಯಾತಾರರಿಗೆ, “ನೀವು ನನ್ನ ಹೆಸರಿನಲ್ಲಿ ಯೆಹೂದ ಕುಲದ ಹಿರಿಯರಿಗೆ, ‘ಅರಸನಾದ ನನ್ನನ್ನು ತಿರುಗಿ ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ತಡಮಾಡುತ್ತಿರುವುದೇಕೆ?
12 Jesteście moimi braćmi, moją kością i moim ciałem. Dlaczego więc macie być ostatnimi przy sprowadzeniu króla?
೧೨ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರಾಗಿರುತ್ತೀರಿ. ಆದುದರಿಂದ ನನ್ನನ್ನು ಕರೆದುಕೊಂಡು ಹೋಗುವುದರಲ್ಲಿ ನೀವು ತಡಮಾಡುತ್ತಿರುವುದು ಒಳ್ಳೆಯದಲ್ಲ’ ಎಂದು ಹೇಳಿರಿ.
13 [A] do Amasy powiedzcie: Czy nie jesteś moją kością i moim ciałem? Niech Bóg mi to uczyni i tamto dorzuci, jeśli nie będziesz dowódcą wojska przede mną po wszystkie dni na miejsce Joaba.
೧೩ಅಮಾಸನಿಗೆ, ‘ನೀನು ನನಗೆ ರಕ್ತಸಂಬಂಧಿಯಾಗಿದ್ದೀ. ನಾನು ಯೋವಾಬನ ಬದಲಿಗೆ ನಿನ್ನನ್ನೇ ನಿತ್ಯ ಸೇನಾಧಿಪತಿಯನ್ನಾಗಿ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ’ ಎಂಬುದಾಗಿಯೂ ತಿಳಿಸಿರಿ” ಎಂದು ಹೇಳಿ ಕಳುಹಿಸಿದನು.
14 W ten sposób ujął serce wszystkich ludzi Judy jakby jednego człowieka, dlatego posłali do króla wiadomość: Wracaj razem ze wszystkimi swoimi sługami.
೧೪ಆಗ ಯೆಹೂದ್ಯರೆಲ್ಲರೂ ಏಕಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ, “ನೀನು ಮತ್ತು ನಿನ್ನ ಎಲ್ಲಾ ಸೇವಕರೂ ಹಿಂದಿರುಗಿ ಬನ್ನಿರಿ” ಎಂದು ಹೇಳಿಕಳುಹಿಸಿದರು.
15 Król wrócił więc i przybył nad Jordan. A lud Judy wyruszył do Gilgal, aby wyjść królowi na spotkanie i przeprowadzić króla przez Jordan.
೧೫ಅರಸನು ಸ್ವದೇಶಕ್ಕೆ ಹೋಗಬೇಕೆಂದು ಹೊರಟು ಯೊರ್ದನಿಗೆ ಬಂದಾಗ ಯೆಹೂದ ಕುಲದವರು ಅವನನ್ನು ಎದುರುಗೊಳ್ಳುವುದಕ್ಕೂ, ಯೊರ್ದನ್ ನದಿಯನ್ನು ದಾಟಿಸುವುದಕ್ಕೂ ಗಿಲ್ಗಾಲಿಗೆ ಬಂದರು.
16 Pospieszył się także Szimei, syn Gery, Beniaminita z Bachurim, i wyruszył z ludem Judy na spotkanie króla Dawida.
೧೬ಬೆನ್ಯಾಮೀನ ಕುಲದ ಗೇರನ ಮಗನೂ ಬಹುರೀಮಿನವನೂ ಆದ ಶಿಮ್ಮಿಯು ಅವಸರದಿಂದ ಬಂದು ಅರಸನಾದ ದಾವೀದನನ್ನು ಎದುರುಗೊಳ್ಳುವುದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು.
17 A było z nim tysiąc mężczyzn z Beniamina oraz Siba, sługa domu Saula, wraz ze swoimi piętnastoma synami i dwudziestoma sługami. I przeprawili się przez Jordan do króla.
೧೭ಅವನ ಜೊತೆಯಲ್ಲಿ ಸಾವಿರ ಬೆನ್ಯಾಮೀನ್ಯರಿದ್ದರು. ಇದಲ್ಲದೆ ಸೌಲನ ಮನೆಯ ಸೇವಕನಾದ ಚೀಬನು ತನ್ನ ಹದಿನೈದು ಮಂದಿ ಮಕ್ಕಳನ್ನೂ, ಇಪ್ಪತ್ತು ಸೇವಕರನ್ನೂ ಕರೆದುಕೊಂಡು ಅರಸನ ಮುಂದೆಯೆ ಪೂರ್ಣಾಸಕ್ತಿಯಿಂದ ಯೊರ್ದನ್ ಹೊಳೆಯಲ್ಲಿಳಿದು
18 Przepłynęła też tratwa, aby przewieziono dom króla i aby mogła służyć do czegokolwiek, co wydaje mu się słuszne. A Szimei, syn Gery, upadł przed królem, gdy się przeprawił przez Jordan.
೧೮ಅರಸನ ಮನೆಯವರನ್ನು ದಾಟಿಸುವುದಕ್ಕೋಸ್ಕರವೂ, ಅವರಿಗೆ ಬೇಕಾದ ಸಹಾಯ ಮಾಡುವುದಕ್ಕೋಸ್ಕರವೂ ದಡದಿಂದ ದಡಕ್ಕೆ ಹೋಗುತ್ತಾ, ಬರುತ್ತಾ ಇದ್ದನು. ಅರಸನು ಯೊರ್ದನ್ ನದಿಯನ್ನು ದಾಟಿಬಂದ ಕೂಡಲೆ ಗೇರನ ಮಗನಾದ ಶಿಮ್ಮಿಯು ಸಾಷ್ಟಾಂಗ ನಮಸ್ಕಾರ ಮಾಡಿ ಅವನಿಗೆ,
19 I powiedział do króla: Niech mój pan nie poczyta mi nieprawości i niech nie wspomina na to, co lekkomyślnie uczynił twój sługa tego dnia, gdy mój pan, król, wychodził z Jerozolimy, i nie bierze sobie tego do serca.
೧೯“ನನ್ನ ಒಡೆಯನು ನನ್ನನ್ನು ಅಪರಾಧಿಯೆಂದೆಣಿಸದಿರಲಿ. ನನ್ನ ಅರಸನು ಯೆರೂಸಲೇಮನ್ನು ಬಿಟ್ಟು ಹೋಗುವಾಗ ನಾನು ಮೂರ್ಖತನದಿಂದ ಮಾಡಿದ್ದನ್ನೆಲ್ಲಾ ಲಕ್ಷಿಸದಿರಲಿ.
20 Twój sługa wie bowiem, że zgrzeszył. A oto dziś przyszedłem pierwszy z całego domu Józefa, aby wyjść na spotkanie mojego pana, króla.
೨೦ಒಡೆಯನೇ, ನಿನ್ನ ಸೇವಕನಾದ ನಾನು ಪಾಪಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದ್ದರಿಂದಲೆ ನಾನು ಈ ಹೊತ್ತು ಅರಸನನ್ನು ಎದುರುಗೊಳ್ಳುವುದಕ್ಕೆ ಎಲ್ಲಾ ಯೋಸೇಫ್ಯರಲ್ಲಿ ಮೊದಲಿಗನಾಗಿ ಬಂದಿದ್ದೇನೆ” ಎಂದು ಹೇಳಿದನು.
21 Wtedy odezwał się Abiszaj, syn Serui, i zapytał: Czy Szimei nie powinien zostać zabity za to, że przeklął pomazańca PANA?
೨೧ಚೆರೂಯಳ ಮಗನಾದ ಅಬೀಷೈಯು, “ಯೆಹೋವನ ಅಭಿಷಿಕ್ತನನ್ನು ಶಪಿಸಿದ್ದಕ್ಕಾಗಿ ಶಿಮ್ಮಿಗೆ ಮರಣದಂಡನೆಯಾಗಬೇಕಲ್ಲವೇ” ಎಂದನು.
22 Ale Dawid odpowiedział: Co ja mam z wami, synowie Serui, że dziś jesteście dla mnie przeciwnikami? Czy dziś ktoś powinien ponieść śmierć w Izraelu? Czyż nie wiem, że ja dzisiaj [zostałem] królem nad Izraelem?
೨೨ಅದಕ್ಕೆ ದಾವೀದನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ, ನೀವು ನನಗೆ ಯಾಕೆ ಶತ್ರುಗಳಾಗಬೇಕು? ಈ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಒಬ್ಬನಿಗೆ ಮರಣದಂಡನೆಯಾಗುವುದು ಸರಿಯೋ? ನಾನು ಇಸ್ರಾಯೇಲರ ಅರಸನೆಂಬುದು ಈಹೊತ್ತು ಸ್ಪಷ್ಟವಾಗಿ ಗೊತ್ತಾಯಿತು” ಎಂದು ನುಡಿದನು.
23 I król powiedział do Szimejego: Nie umrzesz. I król mu to przysiągł.
೨೩ಅನಂತರ ಅರಸನು ಶಿಮ್ಮಿಗೆ, “ನಿನಗೆ ಮರಣದಂಡನೆ ಆಗುವುದಿಲ್ಲ” ಎಂದು ಪ್ರಮಾಣಮಾಡಿ ಹೇಳಿದನು.
24 Także Mefiboszet, syn Saula, wyszedł królowi na spotkanie. Nie mył on nóg ani nie strzygł brody, ani nie prał swoich szat od dnia odejścia króla aż do dnia, w którym wrócił w pokoju.
೨೪ತರುವಾಯ ಸೌಲನ ಮೊಮ್ಮಗನಾದ ಮೆಫೀಬೋಶೆತನು ಅರಸನನ್ನು ಎದುರುಗೊಳ್ಳುವುದಕ್ಕಾಗಿ ಬಂದನು. ಅರಸನು ಯೆರೂಸಲೇಮನ್ನು ಬಿಟ್ಟಂದಿನಿಂದ ಸುರಕ್ಷಿತವಾಗಿ ಹಿಂದಿರುಗುವ ವರೆಗೂ ಇವನು ತನ್ನ ಕಾಲುಗಳನ್ನು ತೊಳೆದುಕೊಂಡಿರಲಿಲ್ಲ, ಮೀಸೆಯನ್ನು ಕತ್ತರಿಸಿರಲಿಲ್ಲ, ಬಟ್ಟೆಯನ್ನು ಒಗೆಸಿಕೊಂಡಿರಲಿಲ್ಲ.
25 I kiedy przybył na spotkanie króla w Jerozolimie, zapytał go król: Dlaczego nie poszedłeś ze mną, Mefiboszecie?
೨೫ಇವನು ಯೆರೂಸಲೇಮಿನಿಂದ ಅರಸನ ದರ್ಶನಕ್ಕೆ ಬಂದಾಗ ಅರಸನು, “ಮೆಫೀಬೋಶೆತನೇ, ನೀನು ನನ್ನ ಸಂಗಡ ಯಾಕೆ ಬರಲಿಲ್ಲ?” ಎಂದು ಕೇಳಿದನು.
26 A [on] mu odpowiedział: Mój panie, królu, mój sługa mnie oszukał. Twój sługa bowiem powiedział: Osiodłam sobie osła, żeby na nim pojechać z królem, gdyż twój sługa jest kulawy.
೨೬ಅವನು, “ನನ್ನ ಒಡೆಯನೇ, ಅರಸನೇ, ನನ್ನ ಸೇವಕನು ನನ್ನನ್ನು ವಂಚಿಸಿದನು. ಕುಂಟನಾದ ನಾನು ಅವನಿಗೆ ‘ಕತ್ತೆಗೆ ತಡಿಹಾಕು. ನಾನು ಕುಳಿತುಕೊಂಡು ಅರಸನ ಜೊತೆಯಲ್ಲಿ ಹೋಗಬೇಕು’ ಎಂದು ಆಜ್ಞಾಪಿಸಿದೆನು.
27 On zaś oczernił twego sługę przed moim panem, królem. Lecz mój pan, król, jest jak anioł Boga. Uczyń więc, co jest dobre w twoich oczach.
೨೭ಅವನು ಹಾಗೆ ಮಾಡದೆ ನನ್ನ ಒಡೆಯನಾದ ಅರಸನ ಬಳಿಗೆ ಬಂದು ನನ್ನ ವಿಷಯದಲ್ಲಿ ಚಾಡಿಹೇಳಿದನು. ಅರಸನು ದೇವದೂತನ ಹಾಗಿರುತ್ತಾನೆ. ತನಗೆ ಸರಿಕಂಡದ್ದನ್ನು ಮಾಡಲಿ.
28 Wszyscy bowiem z domu mego ojca byliśmy godni śmierci przed moim panem, królem. A [jednak] ty posadziłeś twego sługę między tymi, którzy jadają u twego stołu. Jakie mam więc prawo skarżenia się jeszcze przed królem?
೨೮ನನ್ನ ತಂದೆಯ ಮನೆಯವರೆಲ್ಲರೂ ಅರಸನಾದ ನನ್ನ ಒಡೆಯನ ದೃಷ್ಟಿಯಲ್ಲಿ ಮರಣಕ್ಕೆ ಪಾತ್ರರಾಗಿದ್ದರು. ಆದರೂ ಅವನು ತನ್ನ ಸೇವಕನಾದ ನನ್ನನ್ನು ಭೋಜನಕ್ಕೆ ತನ್ನ ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡನು. ಅರಸನಿಗೆ ಹೆಚ್ಚಾಗಿ ಮೊರೆಯಿಡುವುದಕ್ಕೆ ನಾನೇನು ಯೋಗ್ಯನೋ?” ಎಂದು ಉತ್ತರ ಕೊಟ್ಟನು.
29 Wtedy król powiedział mu: Po co jeszcze mówisz o swoich sprawach? Już powiedziałem: Ty i Siba podzielcie się polem.
೨೯ಆಗ ಅರಸನು ಅವನಿಗೆ, “ಹೆಚ್ಚು ಮಾತು ಯಾಕೆ? ನೀನೂ ಮತ್ತು ಚೀಬನೂ ಹೊಲವನ್ನು ಭಾಗಮಾಡಿಕೊಳ್ಳಬೇಕೆಂಬುದೇ ನನ್ನ ತೀರ್ಪು” ಎಂದು ಹೇಳಿದನು.
30 A Mefiboszet powiedział do króla: Niech nawet weźmie wszystko, skoro mój pan, król, wrócił w pokoju do swego domu.
೩೦ಅದಕ್ಕೆ ಮೆಫೀಬೋಶೆತನು, “ಚೀಬನು ಎಲ್ಲವನ್ನು ತಾನೆ ತೆಗೆದುಕೊಂಡರೂ, ತೆಗೆದುಕೊಳ್ಳಲಿ. ನನ್ನ ಒಡೆಯನಾದ ಅರಸನು ತನ್ನ ಮನೆಗೆ ಸುರಕ್ಷಿತನಾಗಿ ಬಂದದ್ದೇ ಸಾಕು” ಎಂದನು.
31 Również Barzillaj Gileadczyk przybył z Rogelim, przeprawił się z królem przez Jordan, aby go odprowadzić za Jordan.
೩೧ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವನು ಅರಸನನ್ನು ಸಾಗಕಳುಹಿಸುವುದಕ್ಕಾಗಿ ರೋಗೆಲೀಮಿನಿಂದ ಯೊರ್ದನಿಗೆ ಬಂದಿದ್ದನು.
32 A Barzillaj był bardzo stary, miał osiemdziesiąt lat. On to zaopatrywał króla, dopóki przebywał w Machanaim, bo był bardzo bogatym człowiekiem.
೩೨ಇವನು ಎಂಬತ್ತು ವರ್ಷದ ಮುದುಕನು. ಇವನು ಬಹು ಶ್ರೀಮಂತನಾಗಿದ್ದುದರಿಂದ ದಾವೀದನು ಮಹನಯಿಮಿನಲ್ಲಿದ್ದ ಕಾಲದಲ್ಲೆಲ್ಲಾ ಅವನ ಜೀವನಕ್ಕೆ ಬೇಕಾದದ್ದನ್ನು ಇವನೇ ಒದಗಿಸಿಕೊಡುತ್ತಿದ್ದನು.
33 Król powiedział do Barzillaja: Chodź ze mną, a będę cię utrzymywał u siebie w Jerozolimie.
೩೩ಅರಸನು ಬರ್ಜಿಲ್ಲೈಗೆ, “ನನ್ನ ಜೊತೆಯಲ್ಲಿ ನದಿಯ ಆಚೆಗೆ ಬಾ, ನಾನು ಯೆರೂಸಲೇಮಿನಲ್ಲಿ ನಿನ್ನನ್ನು ಹತ್ತಿರವೇ ಇಟ್ಟುಕೊಂಡು ಸಂರಕ್ಷಿಸುತ್ತೇನೆ” ಎಂದನು.
34 Lecz Barzillaj odpowiedział królowi: Ile lat życia mi pozostało, żebym miał iść z królem do Jerozolimy?
೩೪ಅದಕ್ಕೆ ಬರ್ಜಿಲ್ಲೈಯು, “ಇಷ್ಟು ವಯಸ್ಸು ಕಳೆದವನಾದ ನಾನು ಅರಸನ ಸಂಗಡ ಯೆರೂಸಲೇಮಿಗೆ ಬರುವುದು ಹೇಗೆ
35 Mam dzisiaj osiemdziesiąt lat. Czy mogę rozróżnić między dobrem a złem? Czy twój sługa poczuje smak tego, co je albo pije? Czy mogę jeszcze słuchać głosu śpiewaków i śpiewaczek? Po co więc twój sługa miałby być jeszcze ciężarem dla swego pana, króla?
೩೫ಈಗ ನಾನು ಎಂಬತ್ತು ವರ್ಷದವನು. ಒಳ್ಳೆಯದು, ಕೆಟ್ಟದ್ದು ಇವುಗಳ ಭೇದವು ನನಗಿನ್ನು ತಿಳಿಯುವುದೋ? ನಿನ್ನ ಸೇವಕನಾದ ನನಗೆ ಅನ್ನಪಾನಗಳ ರುಚಿಯು ಗೊತ್ತಾಗುವುದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? ನಾನು ನನ್ನ ಒಡೆಯನಾದ ಅರಸನಿಗೆ ಯಾಕೆ ಹೊರೆಯಾಗಿರಬೇಕು?
36 Twój sługa pójdzie jeszcze trochę za Jordan z królem. Czemu król miałby mi dawać taką nagrodę?
೩೬ಹೊಳೆದಾಟಿ ಸ್ವಲ್ಪ ದೂರ ನಿನ್ನ ಸಂಗಡ ಬರುತ್ತೇನೆ. ಅರಸನಾದ ನೀನು ನನಗೇಕೆ ಇಂಥ ಉಪಕಾರ ಮಾಡಬೇಕು?
37 Pozwól, proszę, twemu słudze powrócić, abym umarł w swoim mieście, przy grobie swego ojca i swej matki. Lecz oto twój sługa Kimham, niech on pójdzie z moim panem, królem. Uczyń mu to, co jest dobre w twoich oczach.
೩೭ದಯವಿಟ್ಟು ನಿನ್ನ ಸೇವಕನಾದ ನನಗೆ ಹಿಂದಿರುಗಿ ಹೋಗುವುದಕ್ಕೆ ಅಪ್ಪಣೆಯಾಗಲಿ. ನಾನು ನನ್ನ ತಂದೆತಾಯಿಗಳ ಸಮಾಧಿಯಿರುವ ಸ್ವಂತ ಊರಿಗೆ ಹೋಗಿ ಅಲ್ಲೇ ಸಾಯುವೆನು. ಇಗೋ ಇಲ್ಲಿ ನಿನ್ನ ಸೇವಕನಾದ ಕಿಮ್ಹಾಮನಿರುತ್ತಾನೆ. ನನ್ನ ಒಡೆಯನಾದ ಅರಸನು ಇವನನ್ನು ಕರೆದುಕೊಂಡು ಹೋಗಿ ತನ್ನ ಇಷ್ಟವಿದ್ದಂತೆ ಇವನಿಗೆ ದಯೆತೋರಿಸಲಿ” ಎಂದನು.
38 Król odpowiedział: Niech idzie ze mną Kimham, a ja mu uczynię to, co będzie dobre w twoich oczach. A czegokolwiek będziesz sobie życzył ode mnie, to uczynię.
೩೮ಅದಕ್ಕೆ ಅರಸನು, “ಕಿಮ್ಹಾಮನು ನನ್ನ ಸಂಗಡ ಬರಲಿ. ಅವನಿಗೆ ನಿನ್ನ ಇಷ್ಟದಂತೆ ದಯೆತೋರಿಸುವೆನು. ಇನ್ನು ಏನೇನು ಮಾಡಬೇಕೆನ್ನುತ್ತಿಯೋ ಅದೆಲ್ಲವನ್ನೂ ಮಾಡುತ್ತೇನೆ” ಎಂದು ಹೇಳಿದನು.
39 I cały lud przeprawił się przez Jordan. Gdy król przeprawił się, pocałował król Barzillaja i błogosławił mu. Ten zaś wrócił do swego miejsca.
೩೯ಎಲ್ಲಾ ಜನರೂ ನದಿದಾಟಿದರು. ಅರಸನು ನದಿ ದಾಟಿದ ಮೇಲೆ ಬರ್ಜಿಲ್ಲೈಯನ್ನು ಮುದ್ದಿಟ್ಟು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಊರಿಗೆ ಹೋದನು.
40 Potem król udał się do Gilgal, poszedł też z nim Kimham. Cały lud Judy towarzyszył królowi, a także połowa ludu Izraela.
೪೦ಅರಸನು ಕಿಮ್ಹಾಮನೊಡನೆ ಗಿಲ್ಗಾಲಿಗೆ ತೆರಳಿದನು. ಎಲ್ಲಾ ಯೆಹೂದ್ಯರೂ, ಇಸ್ರಾಯೇಲರಲ್ಲಿ ಅರ್ಧ ಜನರೂ ಅರಸನನ್ನು ಕರೆದುಕೊಂಡು ಹೋದರು.
41 A oto wszyscy ludzie Izraela przyszli do króla i zapytali go: Czemu nasi bracia, ludzie z Judy, wykradli cię i przeprowadzili króla i jego dom przez Jordan wraz ze wszystkimi ludźmi Dawida?
೪೧ಆಗ ಇಸ್ರಾಯೇಲರೆಲ್ಲರೂ ಅರಸನ ಮುಂದೆ ಬಂದು ಅವನನ್ನು, “ನಮ್ಮ ಸಹೋದರರಾದ ಯೆಹೂದ್ಯರು ನಮಗೆ ತಿಳಿಸದೆ ತಾವೆ ಹೋಗಿ ಅರಸನನ್ನೂ, ಅವನ ಮನೆಯವರನ್ನೂ, ಅವನೊಡನೆ ಇದ್ದ ಜನರನ್ನೂ ಯೊರ್ದನ್ ನದಿ ದಾಟಿಸಿ ಕರೆದುಕೊಂಡು ಬಂದದ್ದೇಕೆ?” ಎಂದು ಕೇಳಿದರು.
42 I wszyscy ludzie Judy odpowiedzieli ludziom Izraela: Ponieważ król jest z nami spokrewniony. A dlaczego gniewacie się z tego powodu? Czy król [za to] dawał nam jeść albo czy obdarował nas [jakimś] darem?
೪೨ಅದಕ್ಕೆ ಯೆಹೂದ್ಯರು ಇಸ್ರಾಯೇಲರಿಗೆ, “ಅರಸನು ನಮಗೆ ಸಮೀಪದ ಬಂಧು. ನೀವು ಅದಕ್ಕಾಗಿ ಕೋಪಗೊಳ್ಳುವುದೇಕೆ? ನಾವೇನು ಅರಸನ ಹಣದಿಂದ ಊಟಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ?” ಎಂದು ಉತ್ತರ ಕೊಟ್ಟರು.
43 Wtedy ludzie Izraela odpowiedzieli ludziom Judy: Mamy w królu dziesięć części, toteż mamy większe prawo do Dawida niż wy. Dlaczego nas lekceważyliście? Czy nie my pierwsi mówiliśmy o sprowadzeniu z powrotem swego króla? Ale słowa ludzi Judy były surowsze niż słowa ludzi Izraela.
೪೩ಆಗ ಇಸ್ರಾಯೇಲರು ಯೆಹೂದ್ಯರಿಗೆ, “ಅರಸನಲ್ಲಿ ನಮಗೆ ಹತ್ತು ಪಾಲು ಉಂಟಲ್ಲಾ, ದಾವೀದನ ವಿಷಯದಲ್ಲೂ ನಮಗೆ ಹೆಚ್ಚು ಹಕ್ಕು ಉಂಟು. ಹೀಗಿರುವುದರಿಂದ ನೀವು ನಮ್ಮನ್ನು ಕಡೆಗಾಣಿಸಿದ್ದೇಕೆ? ನಮ್ಮ ಅರಸನನ್ನು ಕರೆದುಕೊಂಡು ಬರುವ ವಿಷಯದಲ್ಲಿ ಮೊದಲು ಮಾತನಾಡಿದವರು ನಾವಲ್ಲವೋ?” ಎಂದರು. ಇಸ್ರಾಯೇಲರ ಮಾತುಗಳಿಗಿಂತ ಯೆಹೂದ್ಯರ ಮಾತುಗಳು ಕಠಿಣವಾಗಿದ್ದವು.

< II Samuela 19 >