< ಕೀರ್ತನೆಗಳು 13 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ಎಷ್ಟರವರೆಗೆ ನನ್ನನ್ನು ಮರೆಯುವಿರಿ? ಎಂದೆಂದಿಗೂ ನನ್ನನ್ನು ಮರೆಯುವಿರೋ? ಎಷ್ಟರವರೆಗೆ ನಿಮ್ಮ ಮುಖವನ್ನು ನನ್ನಿಂದ ಮರೆಮಾಡುವಿರಿ? 2 ಇನ್ನೆಷ್ಟರವರೆಗೆ ನನ್ನ ಆಲೋಚನೆಗಳೊಂದಿಗೆ ನಾನು ಹೋರಾಡುತ್ತಿರಬೇಕು? ದಿನನಿತ್ಯವು ನಾನು ನನ್ನ ಹೃದಯದಲ್ಲಿ ನೊಂದಿರಬೇಕೆ? ಇನ್ನೆಷ್ಟರವರೆಗೆ ನನ್ನ ಶತ್ರುವು ನನ್ನ ಮೇಲೆ ಜಯ ಹೊಂದಿರಬೇಕು? 3 ನನ್ನ ದೇವರಾದ ಯೆಹೋವ ದೇವರೇ, ನನ್ನನ್ನು ನೋಡಿ ನನಗೆ ಸದುತ್ತರ ಕೊಡಿರಿ. ನನಗೆ ಮರಣ ನಿದ್ರೆ ಉಂಟಾಗದಂತೆ ನನ್ನ ಕಣ್ಣುಗಳನ್ನು ಬೆಳಗಿಸಿರಿ. 4 “ನಾನು ಅವನನ್ನು ಸೋಲಿಸಿದ್ದೇನೆ,” ಎಂದು ನನ್ನ ಶತ್ರು ಹೇಳದಿರಲಿ, ನಾನು ಬೀಳುವಾಗ ನನ್ನ ಶತ್ರುಗಳು ಆನಂದಿಸದಿರಲಿ. 5 ನಾನಾದರೋ ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೇನೆ. ನಿಮ್ಮ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾಸಪಡುವುದು. 6 ನಾನು ಯೆಹೋವ ದೇವರಿಗೆ ಸ್ತುತಿ ಹಾಡುವೆನು, ಏಕೆಂದರೆ ಅವರು ನನಗೆ ಒಳ್ಳೆಯವರಾಗಿದ್ದಾರೆ.

< ಕೀರ್ತನೆಗಳು 13 >