< ಮತ್ತಾಯನು 27 >

1 ಬೆಳಗಾದಾಗ, ಎಲ್ಲಾ ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವುದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.
Ko je prišlo jutro, so se vsi visoki duhovniki in starešine izmed ljudstva posvetovali zoper Jezusa, da ga usmrtijo.
2 ಅವರು ಯೇಸುವನ್ನು ಕಟ್ಟಿ, ಕರೆದುಕೊಂಡು ಹೋಗಿ ರಾಜ್ಯಪಾಲ ಪಿಲಾತನಿಗೆ ಒಪ್ಪಿಸಿದರು.
In ko so ga zvezali, so ga odvedli proč ter ga izročili voditelju Ponciju Pilatu.
3 ಯೇಸುವಿಗೆ ದ್ರೋಹಮಾಡಿದ ಯೂದನು ಗುರುವಿಗೆ ಮರಣ ದಂಡನೆಯ ತೀರ್ಪಾದದ್ದನ್ನು ಕಂಡು ವಿಷಾದಿಸಿ, ಆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಹಿರಿಯರ ಬಳಿಗೆ ಮರಳಿ ತಂದನು.
Potem se je Juda, ki ga je izdal, ko je videl, da je bil obsojen, pokesal in trideset koščkov srebra prinesel nazaj k visokim duhovnikom in starešinam,
4 ಅವನು, “ನಾನು ನಿರಪರಾಧಿಯ ರಕ್ತಕ್ಕೆ ದ್ರೋಹ ಬಗೆದು ಪಾಪಮಾಡಿದ್ದೇನೆ,” ಎಂದನು. ಅದಕ್ಕೆ ಅವರು, “ನಮಗೇನು? ನೀನೇ ಅದನ್ನು ನೋಡಿಕೋ,” ಎಂದರು.
rekoč: »Grešil sem, ker sem izdal nedolžno kri.« Oni pa so rekli: »Kaj je to nam? Ti glej na to.«
5 ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ನೇಣು ಹಾಕಿಕೊಂಡನು.
In srebrne koščke je vrgel v tempelj in odšel ter samega sebe obesil.
6 ಆಗ ಮುಖ್ಯಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು, “ಇವುಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದು ನ್ಯಾಯವಲ್ಲ. ಅದು ರಕ್ತದ ಕ್ರಯವಾಗಿದೆ,” ಎಂದರು.
Visoki duhovniki pa so vzeli koščke srebra in rekli: »Ni zakonito, da jih damo v zakladnico, ker so cena krvi.«
7 ಅವರು ಆಲೋಚನೆ ಮಾಡಿ ಪರದೇಶಿಗಳನ್ನು ಹೂಳಿಡುವುದಕ್ಕೆ ಆ ಹಣದಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು.
In posvetovali so se ter z njimi kupili lončarjevo njivo, da bi v njej pokopavali tujce.
8 ಈ ಕಾರಣದಿಂದ ಆ ಹೊಲವನ್ನು “ರಕ್ತದ ಹೊಲ” ಎಂದು ಈ ದಿನದವರೆಗೆ ಕರೆಯಲಾಗುತ್ತಿದೆ.
Zatorej je bilo to polje do današnjega dne imenovano Njiva krvi.
9 ಹೀಗೆ ಪ್ರವಾದಿ ಯೆರೆಮೀಯನು ಹೇಳಿದ ಮಾತು ನೆರವೇರಿತು. ಅದೇನೆಂದರೆ, “ಇಸ್ರಾಯೇಲಿನ ಮಕ್ಕಳಲ್ಲಿ ಅವರು ಬೆಲೆ ಕಟ್ಟಿದವನ ಬೆಲೆಯಾದ ಮೂವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು,
Tedaj je bilo izpolnjeno to, kar je bilo rečeno po preroku Jeremiju, rekoč: ›In vzeli so trideset koščkov srebra, ceno tistega, ki je bil ocenjen, ki so ga Izraelovi otroci ocenili,
10 ಕರ್ತನು ನನಗೆ ಆಜ್ಞಾಪಿಸಿದಂತೆ ಅವುಗಳನ್ನು, ‘ಕುಂಬಾರನ ಹೊಲ’ ಕೊಳ್ಳಲು ಕೊಟ್ಟರು,” ಎಂಬುದು.
in dali so jih za lončarjevo njivo, kakor mi je določil Gospod.‹
11 ಯೇಸು ರಾಜ್ಯಪಾಲನ ಮುಂದೆ ನಿಂತಿದ್ದರು. ಆಗ ಅವನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ, “ನೀನೇ ಹೇಳುತ್ತಿದ್ದಿ,” ಎಂದರು.
In Jezus je stal pred voditeljem in voditelj ga je vprašal, rekoč: »Ali si ti judovski Kralj?« Jezus mu je rekel: »Ti praviš.«
12 ಆಗ ಮುಖ್ಯಯಾಜಕರೂ ಹಿರಿಯರೂ ಯೇಸುವಿನ ಮೇಲೆ ದೂರು ಹೇಳುತ್ತಿದ್ದರೂ ಅವರು ಏನೂ ಉತ್ತರ ಕೊಡಲಿಲ್ಲ.
In ko je bil obtožen od visokih duhovnikov in starešin, ni ničesar odgovoril.
13 ಆಗ ಪಿಲಾತನು ಯೇಸುವಿಗೆ, “ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುತ್ತಿರುವುದು ನಿನಗೆ ಕೇಳಿಸುವುದಿಲ್ಲವೋ?” ಎಂದನು.
Tedaj mu je Pilat rekel: »Ali ne slišiš, koliko besed pričajo zoper tebe?«
14 ಒಂದು ಮಾತಿಗಾದರೂ ಯೇಸು ಅವನಿಗೆ ಉತ್ತರ ಕೊಡದೆ ಇದ್ದುದರಿಂದ ರಾಜ್ಯಪಾಲನು ಅತ್ಯಾಶ್ಚರ್ಯಪಟ್ಟನು.
Pa mu ni odgovoril niti na eno besedo, tako, da se je voditelj silno čudil.
15 ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯಾಳನ್ನು ರಾಜ್ಯಪಾಲನು ಬಿಟ್ಟುಕೊಡುವ ಪದ್ಧತಿಯಿತ್ತು.
Torej, na ta praznik je imel voditelj navado množici izpustiti jetnika, ki bi ga hotela.
16 ಆ ಸಮಯದಲ್ಲಿ ಬರಬ್ಬನೆಂಬ ಪ್ರಸಿದ್ಧ ಸೆರೆಯಾಳು ಅವರಲ್ಲಿ ಇದ್ದನು.
In takrat so imeli opaznega jetnika, imenovanega Baraba.
17 ಜನಸಮೂಹ ಕೂಡಿಬಂದಿದ್ದಾಗ ಪಿಲಾತನು ಅವರಿಗೆ, “ನಿಮಗೆ ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು.
Ko so bili torej zbrani skupaj, jim je Pilat rekel: »Katerega hočete, da vam izpustim? Baraba ali Jezusa, ki se imenuje Kristus?«
18 ಯೇಸುವನ್ನು ಅವರು ಹೊಟ್ಟೆಕಿಚ್ಚಿನಿಂದ ಒಪ್ಪಿಸಿಕೊಟ್ಟಿದ್ದರೆಂದು ಪಿಲಾತನಿಗೆ ತಿಳಿದಿತ್ತು.
Kajti vedel je, da so mu ga izročili zaradi zavisti.
19 ಪಿಲಾತನು ನ್ಯಾಯಾಸನದ ಮೇಲೆ ಕೂತಿದ್ದಾಗ, ಅವನ ಹೆಂಡತಿಯು ಅವನಿಗೆ, “ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ. ಈ ದಿವಸ ನಾನು ಸ್ವಪ್ನದಲ್ಲಿ ಆತನ ವಿಷಯವಾಗಿ ಬಹಳ ಕಷ್ಟಪಟ್ಟಿದ್ದೇನೆ,” ಎಂದು ಹೇಳಿ ಕಳುಹಿಸಿದಳು.
Ko se je usedel na sodni stol, je njegova žena poslala k njemu, rekoč: »Nič ne imej s tem pravičnim človekom, kajti danes sem v sanjah zaradi njega trpela mnoge stvari.«
20 ಆದರೆ ಮುಖ್ಯಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸುವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹವನ್ನು ಒಡಂಬಡಿಸಿದರು.
Toda visoki duhovniki in starešine so pregovorili množico, da bi zahtevali Baraba in uničili Jezusa.
21 ರಾಜ್ಯಪಾಲನು ಅವರಿಗೆ, “ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಕೊಡಬೇಕೆನ್ನುತ್ತೀರಿ?” ಎಂದು ಕೇಳಲು ಅವರು, “ಬರಬ್ಬನನ್ನು,” ಎಂದರು.
Voditelj je odgovoril in jim rekel: »Katerega od teh dveh hočete, da vam izpustim?« Rekli so: »Baraba.«
22 ಪಿಲಾತನು ಅವರಿಗೆ, “ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಲು ಅವರೆಲ್ಲರೂ, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಹೇಳಿದರು.
Pilat jim reče: »Kaj naj potem storim z Jezusom, ki se imenuje Kristus?« Vsi so mu rekli: »Križan naj bo.«
23 ಆಗ ಪಿಲಾತನು ಅವರಿಗೆ, “ಏಕೆ? ಆತನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಲು ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
In voditelj jim je rekel: »Zakaj, kakšno zlo je storil?« Vendar so še bolj kričali, rekoč: »Križan naj bo.«
24 ಪಿಲಾತನು ತನ್ನ ಯತ್ನ ನಡೆಯಲಿಲ್ಲವೆಂದೂ ಅದಕ್ಕೆ ಬದಲಾಗಿ ಗದ್ದಲವೇ ಹೆಚ್ಚಾಗುತ್ತದೆಂದೂ ನೋಡಿ, ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು, “ಈ ನೀತಿವಂತನ ರಕ್ತದ ವಿಷಯದಲ್ಲಿ ನಾನು ನಿರಪರಾಧಿ, ಇದಕ್ಕೆ ನೀವೇ ಜವಾಬ್ದಾರಿ,” ಎಂದನು.
Ko je Pilat videl, da niti malo ne more prevladati, temveč da je bil toliko bolj storjen nemir, je vzel vodo in svoje roke umil pred množico, rekoč: »Nedolžen sem pri krvi te pravične osebe; vi glejte na to.«
25 ಅದಕ್ಕೆ ಜನರೆಲ್ಲರೂ ಉತ್ತರವಾಗಿ, “ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ,” ಎಂದರು.
Potem so vsi ljudje odgovorili in rekli: »Njegova kri bodi na nas in na naših otrocih.«
26 ಆಗ ಪಿಲಾತನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
Tedaj jim je izpustil Baraba in ko je Jezusa prebičal, ga je izročil, da bi bil križan.
27 ತರುವಾಯ ರಾಜ್ಯಪಾಲನ ಸೈನಿಕರು ಯೇಸುವನ್ನು ರಾಜಭವನದೊಳಕ್ಕೆ ತೆಗೆದುಕೊಂಡುಹೋಗಿ ಸೈನ್ಯದ ಪೂರ್ಣತಂಡವನ್ನು ಯೇಸುವಿನ ಸುತ್ತಲೂ ಕೂಡಿಸಿದರು.
Tedaj so voditeljevi vojaki Jezusa vzeli v skupno dvorano in k njemu zbrali vso četo vojakov.
28 ಅವರು ಯೇಸುವಿನ ಬಟ್ಟೆಗಳನ್ನು ತೆಗೆದುಹಾಕಿ ಕಡುಗೆಂಪು ನಿಲುವಂಗಿಯನ್ನು ಅವರಿಗೆ ತೊಡಿಸಿದರು.
In ga slekli ter mu oblekli škrlatno svečano oblačilo.
29 ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು, ಯೇಸುವಿನ ತಲೆಯ ಮೇಲಿಟ್ಟು, ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ನಮಸ್ಕಾರ!” ಎಂದು ಹೇಳಿ ಯೇಸುವನ್ನು ಹಾಸ್ಯಮಾಡಿದರು.
In ko so spletli krono iz trnja, so jo dali na njegovo glavo in trst v njegovo desnico; in poklekovali so pred njim ter ga zasmehovali, rekoč: »Pozdravljen, judovski Kralj!«
30 ಅವರು ಯೇಸುವಿನ ಮೇಲೆ ಉಗುಳಿ, ಆ ಬೆತ್ತವನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಮತ್ತೆ ಮತ್ತೆ ಹೊಡೆದರು.
In pljuvali so vanj in vzeli trst ter ga udarjali po glavi.
31 ಹೀಗೆ ಹಾಸ್ಯ ಮಾಡಿದ ಮೇಲೆ, ಆ ನಿಲುವಂಗಿಯನ್ನು ಯೇಸುವಿನಿಂದ ತೆಗೆದುಹಾಕಿ ಅವರ ವಸ್ತ್ರವನ್ನು ಹೊದಿಸಿ, ಯೇಸುವನ್ನು ಶಿಲುಬೆಗೆ ಹಾಕುವುದಕ್ಕಾಗಿ ನಡೆಸಿಕೊಂಡು ಹೋದರು.
Potem pa, ko so ga zasmehovali, so z njega slekli svečano oblačilo in nanj nadeli njegova lastna oblačila ter ga odpeljali proč, da ga križajo.
32 ಅವರು ಹೊರಗೆ ಹೋಗುತ್ತಿರುವಾಗ, ಕುರೇನೆ ಗ್ರಾಮದ ಸೀಮೋನನೆಂಬ ಮನುಷ್ಯನನ್ನು ಕಂಡು, ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.
In ko so prišli ven, so našli človeka iz Cirene, Simona po imenu; njega so prisilili, da je nesel njegov križ.
33 ಆಮೇಲೆ ಅವರು “ಗೊಲ್ಗೊಥಾ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಬಂದರು. ಅದರ ಅರ್ಥ “ತಲೆಬುರುಡೆಯ ಸ್ಥಳ” ಎಂಬುದು.
In ko so prišli na kraj, imenovan Golgota, ki se mu reče ›kraj lobanje, ‹
34 ಆಗ ಅವರು ಯೇಸುವಿಗೆ ಕಹಿ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಯೇಸು ಅದನ್ನು ರುಚಿ ನೋಡಿ ಕುಡಿಯಲು ಇಷ್ಟಪಡಲಿಲ್ಲ.
so mu dali piti kisa, pomešanega z žolčem; in ko je le-tega pokusil, ni hotel piti.
35 ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ, ಅವರ ಬಟ್ಟೆಗಳಿಗಾಗಿ ಸೈನಿಕರು ಚೀಟುಹಾಕಿ ಹಂಚಿಕೊಂಡರು
Oni pa so ga križali in metaje žreb razdelili njegove obleke, da bi se lahko izpolnilo, kar je bilo rečeno po preroku: ›Moje obleke so si delili med seboj in za mojo suknjo so metali žrebe.‹
36 ಮತ್ತು ಅವರು ಅಲ್ಲಿ ಕೆಳಗೆ ಕುಳಿತು ಕಾವಲು ಕಾಯುತ್ತಿದ್ದರು.
In sedeli so ter ga tam stražili;
37 ಯೇಸುವಿನ ತಲೆಯ ಮೇಲ್ಭಾಗದಲ್ಲಿ ಅವರ ವಿರುದ್ಧ ದೋಷಾರೋಪಣೆಯನ್ನು ಬರೆದಿಟ್ಟರು. ಅದೇನೆಂದರೆ: ಈತನು ಯೆಹೂದ್ಯರ ಅರಸನಾದ ಯೇಸು.
in nad njegovo glavo so namestili njegovo napisano obtožbo: TA JE JEZUS, JUDOVSKI KRALJ.
38 ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಇನ್ನೊಬ್ಬನನ್ನು ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.
Takrat sta bila tam z njim križana dva tatova, eden na desni roki, drugi pa na levi.
39 ಅಲ್ಲಿ ಹಾದು ಹೋಗುತ್ತಿದ್ದವರು ಯೇಸುವನ್ನು ದೂಷಿಸಿ, ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ,
Tisti pa, ki so hodili mimo, so ga zasramovali in zmajevali s svojimi glavami
40 “ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ, ನೀನು ದೇವಪುತ್ರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ,” ಎಂದರು.
ter govorili: »Ti, ki podiraš tempelj in ga zgradiš v treh dneh, reši samega sebe. Če si Božji Sin, pridi s križa dol.«
41 ಅದೇ ಮೇರೆಗೆ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವನ್ನು ಹಾಸ್ಯಮಾಡಿ,
Podobno so ga zasmehovali tudi visoki duhovniki s pisarji in starešinami ter govorili:
42 “ಈತನು ಬೇರೆಯವರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು! ಈತನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗೆ ಇಳಿದು ಬರಲಿ. ಆಗ ನಾವು ಈತನನ್ನು ನಂಬುವೆವು.
»Rešil je druge; samega sebe ne more rešiti. Če je on Izraelov Kralj, naj sedaj pride dol s križa in mu bomo verjeli.
43 ಈತನು ದೇವರಲ್ಲಿ ಭರವಸೆ ಇಟ್ಟಿದ್ದಾನೆ. ದೇವರಿಗೆ ಈತನಲ್ಲಿ ಇಷ್ಟವಿದ್ದರೆ, ದೇವರೇ ಈತನನ್ನು ಈಗ ಬಿಡಿಸಲಿ, ಏಕೆಂದರೆ ಈತನು, ‘ನಾನು ದೇವಪುತ್ರನು’ ಎಂದು ಹೇಳಿದ್ದಾನೆ,” ಎಂದರು.
Zaupal je v Boga; naj ga sedaj osvobodi, če ga hoče imeti, kajti rekel je: ›Jaz sem Božji Sin.‹«
44 ಯೇಸುವಿನ ಜೊತೆಗೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಸಹ ಅದೇ ರೀತಿಯಾಗಿ ಅವರನ್ನು ನಿಂದಿಸಿದರು.
Prav tako sta ga sramotila tudi tatova, ki sta bila križana z njim.
45 ಆಗ ಮಧ್ಯಾಹ್ನದಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
Od šeste ure je bila torej tema po vsej deželi do devete ure.
46 ಸುಮಾರು ಮೂರು ಗಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ?” ಅಂದರೆ, “ನನ್ನ ದೇವರೇ, ನನ್ನ ದೇವರೇ ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿ ಹೇಳಿದರು.
Okoli devete ure pa je Jezus z močnim glasom zaklical, rekoč: »Elí, Elí, láma sabahtáni?« kar se reče: »Moj Bog, moj Bog, zakaj si me zapustil?«
47 ಆಗ ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈತನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.
Ko so nekateri izmed teh, ki so tam stali, to slišali, so rekli: »Ta človek kliče Elija.«
48 ಕೂಡಲೇ ಅವರಲ್ಲಿ ಒಬ್ಬನು ಓಡಿಹೋಗಿ ಹೀರುವ ವಸ್ತುವಿನಿಂದ ಹುಳಿರಸದಲ್ಲಿ ಅದ್ದಿ ಒಂದು ಕೋಲಿಗೆ ಸಿಕ್ಕಿಸಿ ಯೇಸುವಿಗೆ ಕುಡಿಯುವುದಕ್ಕೆ ಕೊಟ್ಟನು.
In eden izmed njih je nemudoma stekel in vzel gobo ter jo napojil s kisom in jo nataknil na trst ter mu dal piti.
49 ಉಳಿದವರು, “ಇರಲಿ ಬಿಡು, ಎಲೀಯನು ಬಂದು ಈತನನ್ನು ರಕ್ಷಿಸುವನೇನೋ ನೋಡೋಣ,” ಎಂದರು.
Ostali so rekli: »Pústi, naj vidimo, če bo prišel Elija, da ga reši.«
50 ಯೇಸು ತಿರುಗಿ ಗಟ್ಟಿಯಾಗಿ ಕೂಗಿ, ತಮ್ಮ ಆತ್ಮವನ್ನು ಒಪ್ಪಿಸಿಕೊಟ್ಟರು.
Ko je Jezus z močnim glasom ponovno zavpil, je odposlal duha.
51 ಅದೇ ಸಮಯದಲ್ಲಿ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು. ಭೂಮಿಯು ಕಂಪಿಸಿತು. ಬಂಡೆಗಳು ಸೀಳಿಹೋದವು.
In glej, tempeljsko zagrinjalo se je raztrgalo na dvoje od vrha do tal; in zemlja se je stresla in skale so se razklale;
52 ಇದಲ್ಲದೆ ಸಮಾಧಿಗಳು ತೆರೆದುಕೊಂಡವು. ಮರಣ ಹೊಂದಿದ ಅನೇಕ ಭಕ್ತರ ದೇಹಗಳು ಎದ್ದವು.
in grobovi so se odprli; in mnogo teles svetih, ki so spali, je vstalo
53 ಯೇಸು ಪುನರುತ್ಥಾನವಾದ ಮೇಲೆ ಅವರು ಸಮಾಧಿಗಳೊಳಗಿಂದ ಹೊರಗೆ ಬಂದು ಪವಿತ್ರ ಪಟ್ಟಣದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.
in po njegovem vstajenju so prišli iz grobov in odšli v sveto mesto in se mnogim prikazali.
54 ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ಸಂಭವಿಸಿದ್ದೆಲ್ಲವನ್ನೂ ಕಂಡು ಬಹಳವಾಗಿ ಭಯಪಟ್ಟು, “ನಿಜವಾಗಿಯೂ ಈತನು ದೇವಪುತ್ರನಾಗಿದ್ದನು,” ಎಂದರು.
Torej, ko so stotnik in ti, ki so bili z njim, ki so stražili Jezusa, videli potres in te stvari, ki so se zgodile, so se silno bali, rekoč: »Resnično, ta je bil Božji Sin.«
55 ಯೇಸುವನ್ನು ಗಲಿಲಾಯದಿಂದ ಹಿಂಬಾಲಿಸಿ, ಅವರಿಗೆ ಸೇವೆಮಾಡಿದ ಅನೇಕ ಸ್ತ್ರೀಯರು ದೂರದಿಂದ ನೋಡುತ್ತಿದ್ದರು.
Tam je bilo mnogo žensk, ki so zrle od daleč, ki so Jezusu sledile iz Galileje ter mu stregle,
56 ಅವರಲ್ಲಿ ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೆಯ ತಾಯಿ ಮರಿಯಳು ಹಾಗೂ ಜೆಬೆದಾಯನ ಮಕ್ಕಳ ತಾಯಿ ಇದ್ದರು.
med katerimi je bila Marija Magdalena in Marija, Jakobova in Jožefova mati ter mati Zebedejevih otrok.
57 ಸಂಜೆಯಾದಾಗ, ಅರಿಮಥಾಯ ಊರಿನ ಯೋಸೇಫನೆಂಬ ಹೆಸರುಳ್ಳ ಧನವಂತನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು.
Ko je prišel večer, je tja prišel bogataš iz Arimateje, imenovan Jožef, ki je bil tudi sam Jezusov učenec.
58 ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಕೇಳಿಕೊಂಡನು. ಆಗ ಪಿಲಾತನು ದೇಹವನ್ನು ಅವನಿಗೆ ಒಪ್ಪಿಸುವಂತೆ ಅಪ್ಪಣೆಕೊಟ್ಟನು.
Odšel je k Pilatu in prosil za Jezusovo telo. Tedaj je Pilat ukazal, naj bo telo izročeno.
59 ಯೋಸೇಫನು ಆ ದೇಹವನ್ನು ತೆಗೆದುಕೊಂಡ ಮೇಲೆ, ಅದನ್ನು ಶುದ್ಧವಾದ ನಾರುಮಡಿ ಬಟ್ಟೆಯಲ್ಲಿ ಸುತ್ತಿ,
Ko je Jožef vzel telo, ga je ovil v čisto laneno oblačilo
60 ಬಂಡೆಯಲ್ಲಿ ತಾನು ಕೊರೆದಿದ್ದ ತನ್ನ ಹೊಸ ಸಮಾಧಿಯಲ್ಲಿ ಅದನ್ನು ಇಟ್ಟು, ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು.
in ga položil v svojo novo grobnico, ki jo je izklesal v skalo, in k vratom mavzoleja zavalil velik kamen ter odšel.
61 ಅಲ್ಲಿ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು.
In tam sta bili Marija Magdalena in druga Marija, ki sta sedeli nasproti mavzoleju.
62 ಮರುದಿನ, ಅಂದರೆ ಪಸ್ಕಹಬ್ಬದ ಸಿದ್ಧತೆಯ ದಿನ ಕಳೆದ ಮೇಲೆ ಮುಖ್ಯಯಾಜಕರು, ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು,
Torej naslednji dan, ki je sledil dnevu priprave, so visoki duhovniki in farizeji skupaj prišli k Pilatu,
63 “ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿರುವಾಗ, ‘ಮೂರು ದಿನಗಳಾದ ಮೇಲೆ ನಾನು ತಿರುಗಿ ಏಳುವೆನು,’ ಎಂದು ಹೇಳಿದ್ದು ನಮಗೆ ನೆನಪಿದೆ.
rekoč: »Gospod, spominjamo se, da je ta slepar, medtem ko je bil še živ, rekel: ›Po treh dneh bom ponovno vstal.‹
64 ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ಆತನನ್ನು ಕದ್ದುಕೊಂಡು ಹೋಗಿ, ಯೇಸು ಸತ್ತವರೊಳಗಿಂದ ಎದ್ದಿದ್ದಾನೆ ಎಂದು ಜನರಿಗೆ ಹೇಳಿಯಾರು. ಆಗ ಮೊದಲನೆಯ ಮೋಸಕ್ಕಿಂತ ಕಡೆಯ ಮೋಸವು ಕೆಡುಕಾದೀತು. ಆದಕಾರಣ ಮೂರನೆಯ ದಿನದವರೆಗೆ ಸಮಾಧಿಯನ್ನು ಭದ್ರಪಡಿಸುವಂತೆ ಅಪ್ಪಣೆಕೊಡಬೇಕು,” ಎಂದರು.
Ukaži torej, da bo mavzolej zavarovan do tretjega dne, da ne pridejo ponoči njegovi učenci ter ga skrivaj odnesejo in rečejo ljudem: ›Obujen je od mrtvih; ‹ tako bo zadnja prevara hujša kakor prva.«
65 ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲಾ, ಹೋಗಿ ನಿಮಗೆ ತಿಳಿದಮಟ್ಟಿಗೆ ಅದನ್ನು ಭದ್ರಪಡಿಸಿರಿ,” ಎಂದನು.
Pilat jim je rekel: »Imate stražo; pojdite svojo pot, naredite to tako varno kakor lahko.«
66 ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ ಕಲ್ಲಿಗೆ ಮುದ್ರೆಹಾಕಿ, ಕಾವಲನ್ನು ಇಟ್ಟರು.
Tako so šli in zapečatili kamen ter postavili stražo in mavzolej naredili varen.

< ಮತ್ತಾಯನು 27 >