< ಯೋಹಾನನು 19 >

1 ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಕೊರಡೆಯಿಂದ ಹೊಡೆಸಿದನು.
Then Pilate took Jesus and whipped him.
2 ಸೈನಿಕರು ಮುಳ್ಳಿನ ಕಿರೀಟವನ್ನು ಹೆಣೆದು ಅವರ ತಲೆಯ ಮೇಲಿಟ್ಟು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ತೊಡಿಸಿ,
The soldiers weaved a crown of thorns. They put it on the head of Jesus and dressed him with a purple garment.
3 “ಯೆಹೂದ್ಯರ ಅರಸನೇ, ನಮಸ್ಕಾರ!” ಎಂದು ಹೇಳಿ ಯೇಸುವಿನ ಕೆನ್ನೆಗೆ ಹೊಡೆದರು.
They came to him and said, “Hail, King of the Jews!” and they struck him.
4 ಆಗ ಪಿಲಾತನು ತಿರುಗಿ ಹೊರಗೆ ಹೋಗಿ ಯೆಹೂದ್ಯರ ಗುಂಪಿಗೆ, “ಇಗೋ, ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲವೆಂದು ನೀವು ತಿಳಿದುಕೊಳ್ಳುವಂತೆ ಆತನನ್ನು ನಿಮ್ಮ ಬಳಿಗೆ ತರುತ್ತೇನೆ,” ಎಂದನು.
Then Pilate went outside again and said to them, “See, I am bringing him outside to you so that you will know that I find no guilt in him.”
5 ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿಕೊಂಡವರಾಗಿ ಹೊರಗೆ ಬಂದರು. ಪಿಲಾತನು ಅವರಿಗೆ, “ಇಗೋ, ಆ ಮನುಷ್ಯನು ಇವನೇ!” ಎಂದನು.
So Jesus came out, wearing the crown of thorns and the purple garment. Pilate said to them, “Look, here is the man!”
6 ಮುಖ್ಯಯಾಜಕರೂ ಕಾವಲಾಳುಗಳೂ ಯೇಸುವನ್ನು ನೋಡಿದಾಗ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು!” ಎಂದು ಕೂಗಿದರು. ಅದಕ್ಕೆ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡುಹೋಗಿ ಶಿಲುಬೆಗೆ ಹಾಕಿರಿ. ಏಕೆಂದರೆ ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ,” ಎಂದನು.
When therefore the chief priests and the officers saw Jesus, they cried out and said, “Crucify him, crucify him!” Pilate said to them, “Take him yourselves and crucify him, for I find no guilt in him.”
7 ಯೆಹೂದ್ಯ ನಾಯಕರು ಅವನಿಗೆ, “ನಮಗೆ ಒಂದು ನಿಯಮವಿದೆ, ಆ ನಿಯಮದ ಪ್ರಕಾರ ಅವನು ಸಾಯಲೇಬೇಕು. ಏಕೆಂದರೆ ಅವನು ತನ್ನನ್ನು ದೇವರ ಪುತ್ರನನ್ನಾಗಿ ಮಾಡಿಕೊಂಡಿದ್ದಾನೆ,” ಎಂದರು.
The Jews answered him, “We have a law, and according to that law he has to die because he claimed to be the Son of God.”
8 ಪಿಲಾತನು ಈ ಮಾತನ್ನು ಕೇಳಿದಾಗ ಬಹಳವಾಗಿ ಭಯಪಟ್ಟನು.
When Pilate heard this statement, he was even more afraid,
9 ತಿರುಗಿ ತನ್ನ ನಿವಾಸದೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು. ಆದರೆ ಯೇಸು ಅವನಿಗೆ ಉತ್ತರ ಕೊಡಲಿಲ್ಲ.
and he entered the government headquarters again and said to Jesus, “Where do you come from?” But Jesus gave him no answer.
10 ಆಗ ಪಿಲಾತನು ಯೇಸುವಿಗೆ, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವುದಕ್ಕೂ ನಿನ್ನನ್ನು ಶಿಲುಬೆಗೆ ಹಾಕಿಸುವುದಕ್ಕೂ ನನಗೆ ಅಧಿಕಾರವು ಉಂಟೆಂದು ನಿನಗೆ ತಿಳಿಯದೋ?” ಎಂದು ಕೇಳಿದನು.
Then Pilate said to him, “Are you not speaking to me? Do you not know that I have power to release you, and power to crucify you?”
11 ಅದಕ್ಕೆ ಯೇಸು, “ಪರಲೋಕದಿಂದ ನಿನಗೆ ಕೊಟ್ಟ ಹೊರತು ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ,” ಎಂದು ಉತ್ತರಕೊಟ್ಟರು.
Jesus answered him, “You do not have any power over me except for what has been given to you from above. Therefore, he who gave me over to you has a greater sin.”
12 ಇದನ್ನು ಕೇಳಿದಾಗಿಂದ ಪಿಲಾತನು ಯೇಸುವನ್ನು ಬಿಡಿಸಲು ಪ್ರಯತ್ನಿಸಿದನು. ಆದರೆ ಯೆಹೂದ್ಯ ನಾಯಕರು, “ನೀನು ಈ ಮನುಷ್ಯನನ್ನು ಬಿಡುಗಡೆ ಮಾಡಿದರೆ, ನೀನು ಕೈಸರನ ಮಿತ್ರನಲ್ಲ. ತನ್ನನ್ನು ತಾನೇ ಅರಸನನ್ನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧವಾಗಿ ಮಾತನಾಡುವವನಾಗಿದ್ದಾನೆ,” ಎಂದು ಕೂಗಿ ಹೇಳಿದರು.
At this answer, Pilate tried to release him, but the Jews cried out, saying, “If you release this man, you are not a friend of Caesar. Everyone who makes himself a king speaks against Caesar.”
13 ಪಿಲಾತನು ಆ ಮಾತುಗಳನ್ನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದನು. ಹೀಬ್ರೂ ಭಾಷೆಯಲ್ಲಿ “ಗಬ್ಬಥಾ” ಎಂದು ಕರೆಯಲಾದ “ಕಲ್ಲು ಹಾಸಿದ ಕಟ್ಟೆ” ಎಂಬ ಕಟ್ಟೆಯ ಮೇಲಿದ್ದ ನ್ಯಾಯಾಸನದ ಮೇಲೆ ಕುಳಿತುಕೊಂಡನು.
When Pilate heard these words, he brought Jesus out and sat down in the judgment seat in a place called “The Pavement,” but in Hebrew, “Gabbatha.”
14 ಅದು ಪಸ್ಕಹಬ್ಬಕ್ಕೆ ಸಿದ್ಧಮಾಡುವ ದಿನದ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು,” ಎಂದನು.
Now it was the day of preparation for the Passover, at about the sixth hour. Pilate said to the Jews, “See, here is your king!”
15 ಆದರೆ ಅವರು, “ಆತನನ್ನು ಕೊಲ್ಲಿಸು ಕೊಲ್ಲಿಸು! ಆತನನ್ನು ಶಿಲುಬೆಗೆ ಹಾಕು!” ಎಂದು ಕೂಗಿದರು. ಅದಕ್ಕೆ ಪಿಲಾತನು ಅವರಿಗೆ, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಬೇಕೆ?” ಎಂದು ಕೇಳಿದನು. ಆಗ ಮುಖ್ಯಯಾಜಕರು, “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ,” ಎಂದು ಉತ್ತರಕೊಟ್ಟರು.
They cried out, “Away with him, away with him; crucify him!” Pilate said to them, “Should I crucify your King?” The chief priests answered, “We have no king but Caesar.”
16 ಆಗ ಪಿಲಾತನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕಾಗಿ ಅವರಿಗೆ ಒಪ್ಪಿಸಿದನು. ಅವರು ಯೇಸುವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋದರು.
Then Pilate gave Jesus over to them to be crucified.
17 ಯೇಸು ತಮ್ಮ ಶಿಲುಬೆಯನ್ನು ತಾವೇ ಹೊತ್ತುಕೊಂಡು “ತಲೆಬುರುಡೆಯ ಸ್ಥಳ” ಎಂಬ ಸ್ಥಳಕ್ಕೆ ಹೋದರು. ಅದು ಅರಮಾಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಅರ್ಥ.
Then they took Jesus, and he went out, carrying the cross for himself, to the place called “The Place of a Skull,” which in Hebrew is called “Golgotha.”
18 ಅಲ್ಲಿ ಯೇಸುವನ್ನೂ ಅವರ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಗೂ ಮತ್ತೊಬ್ಬನನ್ನು ಅವರ ಎಡಗಡೆಗೂ ಇಟ್ಟರು.
They crucified Jesus there, and with him two other men, one on each side, with Jesus in the middle.
19 ಪಿಲಾತನು ಒಂದು ಫಲಕದ ಮೇಲೆ ಶಿರೋನಾಮವನ್ನು ಬರೆಸಿ, ಅದನ್ನು ಶಿಲುಬೆಯ ಮೇಲಿಟ್ಟಿದ್ದನು. ಅದೇನಂದರೆ: ಯೆಹೂದ್ಯರ ಅರಸನಾದ ನಜರೇತಿನ ಯೇಸು.
Pilate also wrote a sign and put it on the cross. There it was written: JESUS OF NAZARETH, THE KING OF THE JEWS.
20 ಈ ಫಲಕವನ್ನು ಯೆಹೂದ್ಯರಲ್ಲಿ ಅನೇಕರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಗೇರಿಸಿದ ಆ ಸ್ಥಳವು ಪಟ್ಟಣಕ್ಕೆ ಸಮೀಪವಾಗಿತ್ತು. ಇದು ಹೀಬ್ರೂ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು.
Many of the Jews read this sign because the place where Jesus was crucified was near the city. The sign was written in Hebrew, in Latin, and in Greek.
21 ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “ಯೆಹೂದ್ಯರ ಅರಸನೆಂದು ಬರೆಯಬೇಡ, ‘ತಾನು ಯೆಹೂದ್ಯರ ಅರಸನು ಎಂದು ಹೇಳಿಕೊಂಡವನು’ ಎಂದು ಬರೆ,” ಎಂದರು.
Then the chief priests of the Jews said to Pilate, “Do not write, 'The King of the Jews,' but rather, 'This one said, “I am King of the Jews.”'”
22 ಪಿಲಾತನು, “ನಾನು ಬರೆದದ್ದು ಬರೆದಾಯಿತು,” ಎಂದು ಉತ್ತರಕೊಟ್ಟನು.
Pilate answered, “What I have written I have written.”
23 ಸೈನಿಕರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರ ವಸ್ತ್ರಗಳನ್ನು ತೆಗೆದು ಪ್ರತಿಯೊಬ್ಬ ಸೈನಿಕನಿಗೆ ಒಂದೊಂದು ಭಾಗದಂತೆ ನಾಲ್ಕು ಭಾಗಗಳನ್ನಾಗಿ ಹಂಚಿಕೊಂಡರು. ಅವರ ಒಳ ಅಂಗಿಯನ್ನು ಸಹ ತೆಗೆದುಕೊಂಡರು. ಆ ಒಳ ಅಂಗಿಯು ಹೊಲಿಗೆ ಇಲ್ಲದೆ ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.
When the soldiers crucified Jesus, they took his clothes, divided them into four shares, one for each of them; and also the tunic. Now the tunic was seamless, woven in one piece from the top.
24 ಆದ್ದರಿಂದ ಅವರು, “ನಾವು ಅದನ್ನು ಹರಿಯುವುದು ಬೇಡ. ಆದರೆ ಅದು ಯಾರಿಗಾಗುವುದೋ ಎಂದು ನೋಡುವುದಕ್ಕಾಗಿ ಚೀಟು ಹಾಕಿಕೊಳ್ಳೋಣ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಹೀಗೆ, “ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲುಮಾಡಿಕೊಂಡರು. ನನ್ನ ಒಳ ಅಂಗಿಗಾಗಿ ಚೀಟುಹಾಕಿದರು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರುವಂತೆ, ಸೈನಿಕರು ಚೀಟುಹಾಕಿ ಪಾಲುಮಾಡಿಕೊಂಡರು.
Then they said to each other, “Let us not tear it, but instead let us cast lots for it to decide whose it will be.” This happened so that the scripture would be fulfilled which said, “They divided my garments among themselves and cast lots for my clothing.” This is what the soldiers did.
25 ಯೇಸುವಿನ ಶಿಲುಬೆಯ ಬಳಿಯಲ್ಲಿ ಅವರ ತಾಯಿಯೂ ಅವರ ತಾಯಿಯ ಸಹೋದರಿಯೂ ಕ್ಲೋಪನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು.
Now standing beside Jesus' cross were his mother, his mother's sister, Mary the wife of Clopas, and Mary Magdalene.
26 ಯೇಸು ತಮ್ಮ ತಾಯಿಯೂ ತಾವು ಪ್ರೀತಿಸಿದ ಶಿಷ್ಯನೂ ಹತ್ತಿರದಲ್ಲಿ ನಿಂತಿರುವುದನ್ನು ಕಂಡು ತಮ್ಮ ತಾಯಿಗೆ, “ಅಮ್ಮಾ, ಇಗೋ, ನಿನ್ನ ಮಗನು,” ಎಂದರು.
When Jesus saw his mother and the disciple whom he loved standing nearby, he said to his mother, “Woman, see, your son!”
27 ಆಮೇಲೆ ಯೇಸು ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿಯು,” ಎಂದರು. ಆ ಸಮಯದಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲಿ ಇರಿಸಿಕೊಂಡನು.
Then he said to the disciple, “See, your mother!” From that hour the disciple took her to his own home.
28 ಇದಾದ ಮೇಲೆ ಯೇಸು ಈಗ ಎಲ್ಲವೂ ಪೂರ್ತಿಯಾಗಿದೆಯೆಂದು ತಿಳಿದು, ಪವಿತ್ರ ವೇದದ ವಾಕ್ಯವು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದರು.
After this, knowing that everything was now completed and so that the scriptures would be fulfilled, Jesus said, “I am thirsty.”
29 ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಹೀರುವ ಪದಾರ್ಥವನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಯೇಸುವಿನ ಬಾಯಿಗೆ ಇಟ್ಟರು.
A container full of sour wine was placed there, so they put a sponge full of the sour wine on a hyssop staff and lifted it up to his mouth.
30 ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆಬಾಗಿ ತಮ್ಮ ಆತ್ಮವನ್ನು ಒಪ್ಪಿಸಿಕೊಟ್ಟರು.
When Jesus had taken the sour wine, he said, “It is finished.” He bowed his head and gave up his spirit.
31 ಅದು ಪಸ್ಕಹಬ್ಬದ ಸಿದ್ಧತೆಯ ದಿನವಾಗಿತ್ತು. ಮರುದಿನ ವಿಶೇಷ ಸಬ್ಬತ್ ದಿನದಲ್ಲಿ ದೇಹಗಳು ಶಿಲುಬೆಯ ಮೇಲೆ ಇರಬಾರದೆಂದು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಯೆಹೂದ್ಯ ನಾಯಕರು ಪಿಲಾತನನ್ನು ಕೇಳಿಕೊಂಡರು.
Then the Jews, because it was the day of preparation, and so that the bodies would not remain on the cross during the Sabbath (for that Sabbath was especially important), asked Pilate to break their legs and to remove them.
32 ಅದರಂತೆ ಸೈನಿಕರು ಬಂದು ಯೇಸುವಿನ ಜೊತೆಯಲ್ಲಿ ಶಿಲುಬೆಗೇರಿಸಲಾಗಿದ್ದ ಮೊದಲನೆಯವನ ಕಾಲುಗಳನ್ನೂ ಮತ್ತೊಬ್ಬನ ಕಾಲುಗಳನ್ನೂ ಮುರಿದರು.
Then the soldiers came and broke the legs of the first man and of the second man who had been crucified with Jesus.
33 ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಯೇಸು ಆಗಲೇ ಸತ್ತಿರುವುದನ್ನು ಕಂಡು ಅವರ ಕಾಲುಗಳನ್ನು ಮುರಿಯಲಿಲ್ಲ.
When they came to Jesus, they saw that he was already dead, so they did not break his legs.
34 ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಯೇಸುವಿನ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಹೊರಗೆ ಬಂದವು.
However, one of the soldiers pierced his side with a spear, and immediately blood and water came out.
35 ಇದನ್ನು ಕಣ್ಣಾರೆ ಕಂಡವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವಾದದ್ದು, ನೀವು ಸಹ ನಂಬುವಂತೆ ತಾನು ಹೇಳಿರುವುದು ಸತ್ಯವೆಂದು ಅವನು ಬಲ್ಲನು.
The one who saw this has testified, and his testimony is true. He knows that what he said is true so that you would also believe.
36 ಏಕೆಂದರೆ, “ಯೇಸುವಿನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರುವಂತೆಯೇ ಇವೆಲ್ಲಾ ಸಂಭವಿಸಿದವು.
For these things happened in order to fulfill scripture, “Not one of his bones will be broken.”
37 ಮತ್ತೊಂದು ಪವಿತ್ರ ವೇದದ ವಾಕ್ಯವು, “ತಾವು ಇರಿದವನನ್ನು ಅವರು ನೋಡುವರು,” ಎಂದು ಹೇಳುತ್ತದೆ.
Again, another scripture says, “They will look at him whom they pierced.”
38 ತರುವಾಯ ಯೆಹೂದ್ಯರ ಭಯದ ನಿಮಿತ್ತದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆಕೊಡಲು ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.
After these things, Joseph of Arimathea, since he was a disciple of Jesus (but secretly for fear of the Jews), asked Pilate if he could take away the body of Jesus. Pilate gave him permission. So Joseph came and took away his body.
39 ಇದಲ್ಲದೆ ಮೊದಲು ಒಂದು ಸಾರಿ ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ, ಅಗರುಗಳನ್ನು, ಸುಗಂಧದ್ರವ್ಯ ಬೆರೆಸಿದ ಮಿಶ್ರಣವನ್ನು, ಮೂವತ್ತು ಕಿಲೋಗ್ರಾಮಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು.
Nicodemus also came, he who at first had come to Jesus by night. He brought a mixture of myrrh and aloes, about one hundred litras in weight.
40 ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಳುವ ಪದ್ಧತಿಯ ಪ್ರಕಾರ ಅದನ್ನು ಸುಗಂಧದ್ರವ್ಯಗಳೊಂದಿಗೆ ನಾರುಬಟ್ಟೆಗಳಲ್ಲಿ ಸುತ್ತಿದರು.
So they took the body of Jesus and wrapped it in linen cloths with the spices, as was the custom of the Jews to bury bodies.
41 ಯೇಸು ಶಿಲುಬೆಗೇರಿಸಿದ ಸ್ಥಳದಲ್ಲಿ ಒಂದು ತೋಟವಿತ್ತು. ಆ ತೋಟದಲ್ಲಿ ಯಾರನ್ನೂ ಇಡದೆ ಇದ್ದ ಒಂದು ಹೊಸ ಸಮಾಧಿಯಿತ್ತು.
Now in the place where he was crucified there was a garden; and in the garden was a new tomb in which no person had yet been buried.
42 ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದದ್ದರಿಂದಲೂ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವನ್ನು ಅಲ್ಲಿಯೇ ಸಮಾಧಿಮಾಡಿದರು.
Because it was the day of preparation for the Jews and because the tomb was close by, they laid Jesus in it.

< ಯೋಹಾನನು 19 >