< ಯೆಶಾಯನು 20 >

1 ಅಸ್ಸೀರಿಯದ ಅರಸನಾದ ಸರ್ಗೋನನು ಕಳುಹಿಸಿದ ವರ್ಷದಲ್ಲಿ ಪ್ರಮುಖ ಸೇನಾಪತಿ, ಅಷ್ಡೋದಿಗೆ ಬಂದು ಅದನ್ನು ಮುತ್ತಿಗೆ ಹಾಕಿ ಆಕ್ರಮಿಸಿಕೊಂಡನು. 2 ಅದೇ ಸಮಯದಲ್ಲಿ ಯೆಹೋವ ದೇವರು ಆಮೋಚನ ಮಗ ಯೆಶಾಯನಿಗೆ, “ನಿನ್ನ ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು. ನಿನ್ನ ಪಾದಗಳಲ್ಲಿರುವ ಕೆರಗಳನ್ನು ತೆಗೆದಿಡು,” ಎಂದು ಹೇಳಿದರು. ಅವನು ಹಾಗೆ ಮಾಡಿ, ಬೆತ್ತಲೆಯಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು. 3 ಆಗ ಯೆಹೋವ ದೇವರು, “ನನ್ನ ಸೇವಕನಾದ ಯೆಶಾಯನು ಈಜಿಪ್ಟ್ ಮತ್ತು ಕೂಷಿಗು, ಗುರುತಾಗಿಯೂ, ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು. 4 ಹಾಗೆಯೇ ಅಸ್ಸೀರಿಯದ ಅರಸನು ಈಜಿಪ್ಟಿನವರನ್ನು ಬಂಧಿಸಿ, ಕೂಷಿನ ಕೈದಿಗಳನ್ನು ಅವರು ದೊಡ್ಡವರಾಗಲೀ, ಸಣ್ಣವರಾಗಲೀ ಬಟ್ಟೆ, ಕೆರಗಳಿಲ್ಲದೆ ಈಜಿಪ್ಟಿನ ಮಾನಭಂಗಕ್ಕೋಸ್ಕರ ಸೆರೆಗೆ ನಡೆಯುವಂತೆ ಮಾಡುವನು. 5 ಆಗ ನನ್ನ ಜನರು ಅವನು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿಮಿತ್ತವಾಗಿಯೂ, ಕೊಚ್ಚಿಕೊಳ್ಳುತ್ತಿದ್ದ ಈಜಿಪ್ಟಿನ ವಿಷಯವಾಗಿಯೂ, ನಿರಾಶರಾಗಿ ನಾಚಿಕೆಪಡುವರು. 6 ಆ ದಿನದಲ್ಲಿ ಕರಾವಳಿಯ ನಿವಾಸಿಗಳು, ‘ಇಗೋ, ಅಸ್ಸೀರಿಯದ ಅರಸರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ, ನಿರೀಕ್ಷಿಸಿದ್ದೆವೋ ಅವರಿಗೆ ಈ ಗತಿ ಬಂತಲ್ಲಾ ಮತ್ತು ನಾವು ತಪ್ಪಿಸಿಕೊಳ್ಳುವುದು ಹೇಗೆ?’ ಎಂದುಕೊಳ್ಳುವರು.”

< ಯೆಶಾಯನು 20 >