< ಆಮೋಸನು 7 >

1 ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಹಿಂಗಾರು ಮಳೆ ಬಿದ್ದು, ಪೈರು ಸೊಂಪಾಗುವುದಕ್ಕೆ ಆರಂಭವಾದಾಗ, ಅಂದರೆ ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ, ಬೆಳೆಯು ವೃದ್ಧಿಯಾಗುತ್ತಿದ್ದಾಗ, ಇಗೋ ಯೆಹೋವ ದೇವರು, ಮಿಡತೆಗಳನ್ನು ಉಂಟುಮಾಡಿದರು.
主耶和华指示我一件事:为王割菜之后,菜又发生;刚发生的时候,主造蝗虫。
2 ಅವು ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು, “ಸಾರ್ವಭೌಮ ಯೆಹೋವ ದೇವರೇ, ಲಾಲಿಸು, ನನ್ನನ್ನು ಮನ್ನಿಸು. ಯಾಕೋಬ ಜನಾಂಗ ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗ,” ಎಂದು ವಿಜ್ಞಾಪಿಸಿಕೊಂಡೆನು.
蝗虫吃尽那地的青物,我就说:“主耶和华啊,求你赦免;因为雅各微弱,他怎能站立得住呢?”
3 ಯೆಹೋವ ದೇವರು ಇದನ್ನು ಕುರಿತು ಮನಮರುಗಿ, “ಈ ದರ್ಶನ ನೆರವೇರುವುದಿಲ್ಲ,” ಎಂದರು.
耶和华就后悔说:“这灾可以免了。”
4 ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಸಾರ್ವಭೌಮ ಯೆಹೋವ ದೇವರು ಬೆಂಕಿಯಿಂದ ನ್ಯಾಯತೀರ್ಪು ಮಾಡುವುದಕ್ಕೆ ಕರೆದರು. ಅದು ದೊಡ್ಡ ಅಗಾಧವನ್ನು ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.
主耶和华又指示我一件事:他命火来惩罚以色列,火就吞灭深渊,险些将地烧灭。
5 ಆಗ ನಾನು, “ಸಾರ್ವಭೌಮ ಯೆಹೋವ ದೇವರೇ, ನಿಲ್ಲಿಸಿಬಿಡಿರಿ,” ಎಂದು ಬೇಡಿಕೊಳ್ಳುತ್ತೇನೆ. “ಯಾಕೋಬನು ಹೇಗೆ ಬದುಕುಳಿಯುತ್ತಾನೆ? ಅವನು ತುಂಬಾ ಚಿಕ್ಕವನು,” ಎಂದು ಮೊರೆಯಿಟ್ಟೆನು.
我就说:“主耶和华啊,求你止息;因为雅各微弱,他怎能站立得住呢?”
6 ಆಗ ಸಾರ್ವಭೌಮ ಯೆಹೋವ ದೇವರು ಇದನ್ನು ಕುರಿತು ಮನಮರುಗಿ, “ಈ ದರ್ಶನ ನೆರವೇರುವುದಿಲ್ಲ,” ಎಂದರು.
耶和华就后悔说:“这灾也可免了。”
7 ಆತನು ನನಗೆ ಹೀಗೆ ತೋರಿಸಿದನು. ಯೆಹೋವ ದೇವರು ನೂಲುಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದರು. ಆತನ ಕೈಯಲ್ಲಿ ನೂಲುಗುಂಡು ಇತ್ತು.
他又指示我一件事:有一道墙是按准绳建筑的,主手拿准绳站在其上。
8 ಯೆಹೋವ ದೇವರು ನನಗೆ, “ಆಮೋಸನೇ, ಏನನ್ನು ನೋಡುತ್ತಿರುವೆ?” ಎಂದು ಕೇಳಿದರು. ಆಗ ನಾನು, “ನೂಲುಗುಂಡು,” ಎಂದೆನು. ನಂತರ ಯೆಹೋವ ದೇವರು ಹೇಳಿದ್ದೇನೆಂದರೆ, “ನೋಡು, ನಾನು ನನ್ನ ಜನರಾದ ಇಸ್ರಾಯೇಲರ ಮಧ್ಯದಲ್ಲಿ ನೂಲುಗುಂಡನ್ನು ಇಡುತ್ತೇನೆ. ಇನ್ನು ಮೇಲೆ ಅವರನ್ನು ದಾಟಿ ಹೋಗುವುದಿಲ್ಲ.
耶和华对我说:“阿摩司啊,你看见什么?”我说:“看见准绳。”主说:“我要吊起准绳在我民以色列中,我必不再宽恕他们。
9 “ಇಸಾಕನ ಉನ್ನತ ಪೂಜಾಸ್ಥಳಗಳು ನಾಶವಾಗುವುವು. ಇಸ್ರಾಯೇಲಿನ ಪರಿಶುದ್ಧ ಸ್ಥಳಗಳು ಹಾಳಾಗುವುವು. ನಾನು ಖಡ್ಗದೊಂದಿಗೆ ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು.”
以撒的邱坛必然凄凉;以色列的圣所必然荒废。我必兴起,用刀攻击耶罗波安的家。”
10 ಆಗ ಬೇತೇಲಿನ ಯಾಜಕನಾದ ಅಮಚ್ಯನು, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ ಕಳುಹಿಸಿ ಹೇಳಿದ್ದೇನೆಂದರೆ: “ಆಮೋಸನು ಇಸ್ರಾಯೇಲಿನ ಮನೆತನದವರ ಮಧ್ಯದಲ್ಲಿ ನಿನಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ. ದೇಶವು ಅವನ ಎಲ್ಲಾ ಮಾತುಗಳನ್ನು ತಾಳಲಾರದು.
伯特利的祭司亚玛谢打发人到以色列王耶罗波安那里,说:“阿摩司在以色列家中图谋背叛你;他所说的一切话,这国担当不起;
11 ಆಮೋಸನು ಹೇಳಿದ್ದೇನೆಂದರೆ: “ಯಾರೊಬ್ಬಾಮನು ಖಡ್ಗದಿಂದ ಸಾಯುವನೆಂದೂ ಇಸ್ರಾಯೇಲರು ನಿಶ್ಚಯವಾಗಿ ತಮ್ಮ ಸ್ವದೇಶದಿಂದ ಸೆರೆಯಾಗಿ ಕರೆದೊಯ್ಯುವರು.”
因为阿摩司如此说:‘耶罗波安必被刀杀;以色列民定被掳去离开本地。’”
12 ಅನಂತರ ಅಮಚ್ಯನು ಆಮೋಸನಿಗೆ ಹೇಳಿದ್ದೇನೆಂದರೆ: “ದರ್ಶಿಯೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲಿ ದುಡಿದು ರೊಟ್ಟಿ ತಿಂದು ಅಲ್ಲಿಯೇ ಪ್ರವಾದಿಸು.
亚玛谢又对阿摩司说:“你这先见哪,要逃往犹大地去,在那里糊口,在那里说预言,
13 ಆದರೆ ಇನ್ನು ಮೇಲೆ ಬೇತೇಲಿನಲ್ಲಿ ಪ್ರವಾದಿಸಬೇಡ. ಏಕೆಂದರೆ ಅದು ಅರಸನ ಪರಿಶುದ್ಧ ಸ್ಥಾನವಾಗಿಯೂ, ರಾಜ್ಯದ ಆಲಯವಾಗಿಯೂ ಇದೆ,” ಎಂದನು.
却不要在伯特利再说预言;因为这里有王的圣所,有王的宫殿。”
14 ಆಗ ಆಮೋಸನು ಅಮಚ್ಯನಿಗೆ ಉತ್ತರವಾಗಿ, “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನೂ ಅತ್ತಿಹಣ್ಣುಗಳನ್ನು ಕೂಡಿಸುವವನೂ ಆಗಿದ್ದೆನು,” ಎಂದನು.
阿摩司对亚玛谢说:“我原不是先知,也不是先知的门徒。我是牧人,又是修理桑树的。
15 ನಾನು ಕುರಿಯ ಹಿಂಡನ್ನು ಹಿಂಬಾಲಿಸುವ ವೇಳೆಯಲ್ಲಿ, ಯೆಹೋವ ದೇವರು ನನ್ನನ್ನು ಕರೆದು ಹೇಳಿದ್ದೇನೆಂದರೆ: “ನೀನು ಹೋಗಿ ನನ್ನ ಜನರಾದ ಇಸ್ರಾಯೇಲರಿಗೆ ಪ್ರವಾದಿಸು.”
耶和华选召我,使我不跟从羊群,对我说:‘你去向我民以色列说预言。’
16 ಹೀಗಿರುವುದರಿಂದ ನೀನು ಈಗ ಯೆಹೋವ ದೇವರ ವಾಕ್ಯವನ್ನು ಕೇಳು: ಇಸ್ರಾಯೇಲಿಗೆ ಪ್ರವಾದನೆ ಮಾಡಬೇಡವೆಂದೂ, ಇಸಾಕನ ಮನೆತನಕ್ಕೆ ವಿರೋಧವಾಗಿ ಖಂಡನೆ ಮಾಡಬಾರದೆಂದೂ ನೀನು ಹೇಳುವೆಯಲ್ಲಾ.
亚玛谢啊,现在你要听耶和华的话。你说:‘不要向以色列说预言,也不要向以撒家滴下预言。’
17 ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ: “‘ನಿನ್ನ ಹೆಂಡತಿ ಪಟ್ಟಣದಲ್ಲಿ ವ್ಯಭಿಚಾರಿಣಿಯಾಗುವಳು. ನಿನ್ನ ಪುತ್ರ ಪುತ್ರಿಯರೂ ಖಡ್ಗದಿಂದ ಬೀಳುವರು. ನಿನ್ನ ದೇಶವನ್ನು ಅಳೆಯಲಾಗುತ್ತದೆ ಮತ್ತು ವಿಭಾಗಿಸಲಾಗುತ್ತದೆ. ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ. ಇಸ್ರಾಯೇಲ್ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಕರೆದೊಯ್ಯಲಾಗುವುದು.’”
所以耶和华如此说:‘你的妻子必在城中作妓女;你的儿女必倒在刀下。你的地必有人用绳子量了分取;你自己必死在污秽之地。以色列民定被掳去离开本地。’”

< ಆಮೋಸನು 7 >