< ಸಮುವೇಲನು - ಪ್ರಥಮ ಭಾಗ 19 >

1 ಸೌಲನು ತನ್ನ ಮಗ ಯೋನಾತಾನ ಮತ್ತು ತನ್ನ ಸಮಸ್ತ ಸೇವಕರಿಗೆ ದಾವೀದನನ್ನು ಕೊಲ್ಲಬೇಕೆಂದು ಹೇಳಿದನು. ಆದರೆ ಸೌಲನ ಮಗನಾದ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.
ထို့ကြောင့် ရှောလုသည် ဒါဝိဒ်ကို သတ်စေခြင်းငှါ၊ သားတော် ယောနသန်နှင့် မိမိကျွန်အပေါင်း တို့ကို မှာထားလေ၏။
2 ಯೋನಾತಾನನು ದಾವೀದನನ್ನು, “ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದು ಹುಡುಕುತ್ತಾನೆ. ನೀನು ನಾಳೆ ಬೆಳಗಿನವರೆಗೆ ಎಚ್ಚರಿಕೆಯಾಗಿದ್ದು, ಮರೆಯಾದ ಸ್ಥಳಗಳಲ್ಲಿ ಅಡಗಿಕೋ.
သားတော် ယောနသန်သည် ဒါဝိဒ်ကို အလွန်ချစ်၍၊ ငါ့အဘရှောလုသည် သင့်ကို သတ်ခြင်းငှါ ရှာကြံ၏။ သို့ဖြစ်၍ နံနက်တိုင်အောင် ကိုယ်ကို သတိပြုသဖြင့် ဆိတ်ကွယ်ရာအရပ်၌ ပုန်းရှောင်၍ နေပါလော့။
3 ಆಗ ನನ್ನ ತಂದೆಯ ಬಳಿಯಲ್ಲಿ ನಿಂತುಕೊಂಡು, ನಿನಗೋಸ್ಕರ ನನ್ನ ತಂದೆಯ ಸಂಗಡ ಮಾತನಾಡಿ, ನಾನು ನೋಡುವುದನ್ನು ಹೊರಟುಬಂದು ನೀನು ಇರುವ ಹೊಲದಲ್ಲಿ ನಿನಗೆ ತಿಳಿಸುವೆನು,” ಎಂದನು.
ငါထွက်၍ သင်ရှိရာတော၌ ငါ့အဘထံ ခစားလျက်၊ သင့်အမှု၌ စကားပြောမည်။ တွေမြင်သမျှကို သင့်အား ငါပြန်ကြားမည်ဟု ဒါဝိဒ်အား ပြောဆို၏။
4 ಹಾಗೆಯೇ ಯೋನಾತಾನನು ತನ್ನ ತಂದೆ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೆಯದನ್ನು ಮಾತನಾಡಿ ಅವನಿಗೆ, “ಅರಸನು ತನ್ನ ಸೇವಕನಾದ ದಾವೀದನಿಗೆ ದ್ರೋಹಮಾಡದೆ ಇರಲಿ. ಏಕೆಂದರೆ ಅವನು ನಿನಗೆ ದ್ರೋಹಮಾಡಲಿಲ್ಲ. ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ.
ယောနသန်သည် အဘရှောလုထံ၌၊ ဒါဝိဒ်ဘက်မှာပြော၍၊ ရှင်ဘုရင်သည် ကျွန်တော်ဒါဝိဒ်ကို မပြစ်မှားပါစေနှင့်။ သူသည် ကိုယ်တော်ကို မပြစ်မှားပါ။ ကိုယ်တော်၌ အလွန်ကျေးဇူးပြုပါပြီ။
5 ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಫಿಲಿಷ್ಟಿಯನನ್ನು ಹೊಡೆದನು. ಯೆಹೋವ ದೇವರು ಸಮಸ್ತ ಇಸ್ರಾಯೇಲರಿಗೋಸ್ಕರ ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ನೀನೂ ಕಂಡು ಸಂತೋಷಪಟ್ಟೆ. ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರ್ದೋಷಿಯ ರಕ್ತಕ್ಕೆ ವಿರೋಧವಾಗಿ ಅಪರಾಧವನ್ನು ಮಾಡುವುದೇಕೆ?” ಎಂದನು.
မိမိအသက်ကို မနှမြောဘဲ ဖိလိတ္တိလူကိုသတ်၍ ထာဝရဘုရားသည် ဣသရေလအမျိုးတမျိုးလုံးအဘို့ ကြီးစွာသော ကယ်တင်ခြင်း ကျေးဇူးကို ပြုတော်မူ၏။ ကိုယ်တော်သည် မြင်၍ ဝမ်းမြောက်ပါ၏။ သို့ဖြစ်၍ အကြောင်းမရှိဘဲ ဒါဝိဒ်ကို သတ်သဖြင့် အဘယ်ကြောင့် အပြစ်မရှိသောသူ၏ အသက်ကို သတ်သောအပြစ် သင့်ရောက်စေချင်ပါသနည်းဟု အဘရှောလုအားဆိုသော်၊
6 ಆಗ ಸೌಲನು ಯೋನಾತಾನನ ಮಾತನ್ನು ಕೇಳಿ, “ಯೆಹೋವ ದೇವರಾಣೆ ಅವನು ಕೊಲೆಯಾಗುವುದಿಲ್ಲ,” ಎಂದನು.
ရှောလုသည် ယောနသန်၏ စကားကို နားထောင်၍၊ ထာဝရဘုရား အသက်ရှင်တော်မူသည်အတိုင်း၊ သူသည် အသေမခံရဟု ကျိန်ဆိုလေ၏။
7 ಆಗ ಯೋನಾತಾನನು ದಾವೀದನನ್ನು ಕರೆದು, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿ, ದಾವೀದನನ್ನು ಸೌಲನ ಬಳಿಗೆ ಕರೆತಂದನು. ಅವನು ಮುಂಚಿನ ಹಾಗೆಯೇ ಸೌಲನ ಬಳಿಯಲ್ಲಿ ಇದ್ದನು.
ယောနသန်သည် ဒါဝိဒ်ကို ခေါ်၍ အကြောင်းအရာ၊ အလုံးစုံတို့ကို ပြောပြီးမှ၊ ရှောလုထံသို့သွင်းပြန်၍ အထံတော်၌ အရင်နေသကဲ့သို့ နေရ၏။
8 ತಿರುಗಿ ಯುದ್ಧ ಉಂಟಾಯಿತು. ಆಗ ದಾವೀದನು ಹೊರಟು, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರನ್ನು ಸಾಹಸದಿಂದ ಹೊಡೆದನು. ಅವರು ಅವನ ಎದುರಿನಿಂದ ಓಡಿಹೋದರು.
တဖန်စစ်မှုပေါ်ပြန်သောအခါ၊ ဒါဝိဒ်ထွက်၍ ဖိလိတ္တိလူတို့ကို တိုက်လျက်၊ ကြီးစွာသော လုပ်ကြံ ခြင်းအားဖြင့် သတ်၍ သူတို့သည် ပြေးကြ၏။
9 ಸೌಲನು ತನ್ನ ಕೈಯಲ್ಲಿ ಈಟಿಯನ್ನು ಹಿಡಿದು, ತನ್ನ ಮನೆಯೊಳಗೆ ಕುಳಿತಿರುವಾಗ, ಯೆಹೋವ ದೇವರಿಂದ ಕಳುಹಿಸಲಾದ ದುರಾತ್ಮವು ಅವನ ಮೇಲೆ ಬಂತು. ದಾವೀದನು ತನ್ನ ಕೈಯಿಂದ ಕಿನ್ನರಿ ಬಾರಿಸಿದನು.
ရှောလုသည် လှံတို့ကို ကိုင်၍နန်းတော်၌ ထိုင်စဉ်တွင်၊ ထာဝရဘုရားထံတော်မှ ဆိုးသောဝိညာဉ် သက်ရောက်၍၊ ဒါဝိဒ်သည် စောင်းတီးလျက်နေသောအခါ၊
10 ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಹುಡುಕಿದನು. ಆದರೆ ದಾವೀದನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಅವನ ಈಟಿಯು ಗೋಡೆಯಲ್ಲಿ ಹತ್ತಿಕೊಳ್ಳುವಂತೆ ಹೊಡೆದನು. ದಾವೀದನು ಓಡಿಹೋಗಿ ಆ ರಾತ್ರಿಯಲ್ಲಿ ತಪ್ಪಿಸಿಕೊಂಡನು.
၁၀သူ့ကိုလှံတိုနှင့် ထရံနားမှာ ထိုးစမ်းသော်လည်း၊ အထံတော်မှ ရှောင်ပြေးသဖြင့် လှံတိုသည် ထရံကို စူးလျက် နေ၏။ ဒါဝိဒ်သည် ပြေး၍ ထိုညဉ့်ကို လွတ်ရ၏။
11 ಆದರೆ ದಾವೀದನನ್ನು ಕಾದುಕೊಂಡಿದ್ದು, ಉದಯದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ, ನಾಳೆ ಹತನಾಗುವಿ,” ಎಂದು ಹೇಳಿ
၁၁ရှောလုသည် သူ့ကို စောင့်၍ နံနက်ချိန်၌ သတ်စေခြင်းငှါ သူ့အိမ်သို့လူကို လွှတ်စေ၏။ ဒါဝိဒ်မယား မိခါလက၊ သင်သည် ယနေ့ညမှာ ကိုယ်အသက်ကို မကယ်မလျှင်၊ နက်ဖြန်နေ့၌ အသေခံရလိမ့်မည်ဟု ဆိုလျက်၊
12 ದಾವೀದನನ್ನು ಕಿಟಿಕಿಯ ಮಾರ್ಗವಾಗಿ ಇಳಿಸಿಬಿಡಲು ಅವನು ತಪ್ಪಿಸಿಕೊಂಡು ಓಡಿಹೋದನು.
၁၂ဒါဝိဒ်ကို ပြတင်းပေါက်မှ လျှော့ချ၍ သူသည် အလွတ်ထွက်ပြေးလေ၏။
13 ತರುವಾಯ ಮೀಕಲಳು ಒಂದು ವಿಗ್ರಹವನ್ನು ತೆಗೆದುಕೊಂಡು, ಮಂಚದ ಮೇಲೆ ಮಲಗಿಸಿ, ಅದರ ತಲೆ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ, ಅದನ್ನು ವಸ್ತ್ರದಿಂದ ಮುಚ್ಚಿದಳು.
၁၃မိခါလသည်လည်း၊ တေရပ်ရုပ်တုကို ယူ၍ ခုတင်ပေါ်မှာ ထားပြီးလျှင်၊ ဆိတ်မွေးဖြင့်ရက်သော ကုလားကာနှင့် ခေါင်းရင်းရှေ့၌ ကာ၍ စောင်နှင့် ခြုံလေ၏။
14 ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದಾಗ, ಮೀಕಲಳು ಅವರಿಗೆ, “ಅವನು ಖಾಯಿಲೆಯಲ್ಲಿದ್ದಾನೆ,” ಎಂದಳು.
၁၄ဒါဝိဒ်ကို ဘမ်းဆီးစေခြင်းငှါ ရှောလု စေလွှတ်သောလုလင် ရောက်သောအခါ၊ ဒါဝိဒ်နာ၍ နေပါသည်ဟု မယားပြောဆို၏။
15 ತಿರುಗಿ ಸೌಲನು ದಾವೀದನನ್ನು ನೋಡುವುದಕ್ಕೋಸ್ಕರ ದೂತರನ್ನು ಕಳುಹಿಸಿ, “ಅವನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ,” ಎಂದನು.
၁၅ရှောလုကလည်း၊ သူ့ကို ငါသတ်မည်အကြောင်း ခုတင်နှင့်တကွ ဆောင်ခဲ့ကြဟု ဒါဝိဒ်ကို အကြည့်အရှု စေလွှတ်၍၊
16 ಹಾಗೆಯೇ ಸೇವಕರು ಬಂದು ಕಂಡಾಗ, ವಿಗ್ರಹವು ಮಂಚದ ಮೇಲೆ ಇತ್ತು. ಅದರ ತಲೆಗೆ ಒಂದು ಆಡಿನ ಉಣ್ಣೆಯ ತಲೆದಿಂಬು ಇತ್ತು.
၁၆တမန်တို့သည်ဝင်ကြသောအခါ ဆိတ်မွေးနှင့် ရက်သော ကုလားကာနှင့် ခေါင်းရင်းရှေ့၌ ကာလျက်၊ ခုတင်မှာ တေရပ်ရုပ်တု ရှိပါသည်တကား။
17 ಆಗ ಸೌಲನು ಮೀಕಲಳಿಗೆ, “ನೀನು ಈ ಪ್ರಕಾರ ನನಗೆ ಮೋಸಮಾಡಿ, ನನ್ನ ಶತ್ರುವನ್ನು ಕಳುಹಿಸಿದ್ದೇನು? ಅವನು ತಪ್ಪಿಸಿಕೊಂಡನಲ್ಲಾ,” ಎಂದನು. ಆಗ ಮೀಕಲಳು ಸೌಲನಿಗೆ ಉತ್ತರವಾಗಿ, “ಅವನು ನನಗೆ, ‘ನಾನು ನಿನ್ನನ್ನು ಕೊಂದು ಹಾಕುವುದು ಏಕೆ? ನನ್ನನ್ನು ಹೋಗಗೊಡಿಸು,’ ಎಂದು ಹೇಳಿದನು,” ಎಂದಳು.
၁၇ရှောလုကလည်း ငါ့ကို လှည့်စား၍ အဘယ်ကြောင့် ရန်သူကို လွှတ်လိုက်သနည်း။ ယခုလွတ်အောင် ပြေးပါပြီတကားဟု မိခါလအားပြောဆိုလျှင်၊ မိခါလက ငါသွားမည်။ သို့မဟုတ် သင့်ကို ငါသတ်မည်ဟု သူပြောပါသည်ဟု ရှောလုအား ပြန်လျှောက်လေ၏။
18 ಹೀಗೆಯೇ ದಾವೀದನು ಓಡಿಹೋಗಿ ತಪ್ಪಿಸಿಕೊಂಡು ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು, ಸೌಲನು ತನಗೆ ಮಾಡಿದ್ದನ್ನೆಲ್ಲಾ ಅವನಿಗೆ ತಿಳಿಸಿದನು. ಅವನೂ ಸಮುಯೇಲನೂ ಹೋಗಿ ನಯೋತಿನಲ್ಲಿ ವಾಸವಾಗಿದ್ದರು.
၁၈ထိုသို့ ဒါဝိဒ် ပြေး၍ ရှောလုလက်မှ လွတ်သဖြင့်၊ ရှမွေလရှိရာ ရာမမြို့သို့ ရောက်လေ၏။ ရှောလု ပြုလေသမျှတို့ကို ပြန်ကြားပြီးမှ၊ ရှမွေလသည် သွား၍ နာယုတ်ရွာမှာ နေ၏။
19 ಆಗ, “ದಾವೀದನು ರಾಮದ ನಯೋತಿನಲ್ಲಿ ಇದ್ದಾನೆ,” ಎಂದು ಸೌಲನಿಗೆ ಗೊತ್ತಾಯಿತು.
၁၉ဒါဝိဒ်သည် ရာမမြို့နယ်၊ နာယုတ်ရွာမှာ ရှိကြောင်းကို ရှောလုသည် ကြား၍၊
20 ಆದ್ದರಿಂದ ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದನು. ಪ್ರವಾದಿಗಳ ಗುಂಪು ಪ್ರವಾದಿಸುವುದನ್ನೂ ಅವರ ಮೇಲೆ ಯಜಮಾನನಾಗಿರುವ ಸಮುಯೇಲನು ನಿಂತಿರುವುದನ್ನೂ ಕಂಡಾಗ, ದೇವರ ಆತ್ಮ ಸೌಲನ ದೂತರ ಮೇಲೆ ಬಂದಿತು, ಅವರೂ ಸಹ ಪ್ರವಾದಿಸಿದರು.
၂၀ဒါဝိဒ်ကို ဘမ်းဆီးစေခြင်းငှါ စေလွှတ်ပြန်၏။ ပရာဖက် အပေါင်းအသင်းတို့သည် ပရောဖက်ပြုလျက်၊ ရှမွေလစီရင်လျက်နေသည်ကို တမန်တို့သည် တွေ့မြင်သောအခါ၊ ဘုရားသခင်၏ ဝိညာဉ်တော်သည် ရှောလု၏ တမန်တော်တို့အပေါ်မှာ သက်ရောက်၍၊ သူတို့သည်လည်း ပရောဖက်ပြုရကြ၏။
21 ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ, ಅವನು ಬೇರೆ ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು. ಮೂರನೆಯ ಸಾರಿ ಸೌಲನು ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು.
၂၁ထိုသိတင်းကို ရှောလုသည်ကြားလျှင် အခြားသောသူတို့ကို စေလွှတ်၍၊ သူတို့သည်လည်း ပရောဖက် ပြုရကြ၏။တတိယအကြိမ် ရှောလုသည် စေလွှတ်၍၊ ထို့အတူပြုကြရ၏။
22 ಆಗ ಸೌಲನು ತಾನೇ ರಾಮಕ್ಕೆ ಹೋದನು. ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, ಸಮುಯೇಲನೂ ದಾವೀದನೂ ಎಲ್ಲಿದ್ದಾರೆ ಎಂದು ಕೇಳಿದನು. ಆಗ ಒಬ್ಬನು, “ಅವರು ರಾಮದ ನಯೋತಿನಲ್ಲಿದ್ದಾರೆ,” ಎಂದನು.
၂၂ထိုအခါ ကိုယ်တိုင်ရာမမြို့သို့ သွား၍၊ စေခုရွာ၌ရှိသော ရေတွင်းကြီးသို့ရောက်သော်၊ ရှမွေလနှင့် ဒါဝိဒ်တို့သည် အဘယ်မှာရှိသနည်းဟု မေးလျှင်၊ ရာမမြို့နယ်၊ နာယုတ်ရွာမှာ ရှိပါသည်ဟု ကြားလျှောက်လေသော်၊
23 ಹಾಗೆಯೇ ಅವನು ರಾಮದ ನಯೋತಿಗೆ ಹೋದನು. ಆಗ ದೇವರ ಆತ್ಮ ಮೇಲೆ ಬರಲು, ಅವನು ರಾಮದ ನಯೋತಿಗೆ ಸೇರುವವರೆಗೂ ಪ್ರವಾದಿಸುತ್ತಾ ಬಂದನು.
၂၃ထိုအရပ်သို့သွား၍၊ ဘုရားသခင်၏ဝိညာဉ်တော်သည် သူ့အပေါ်မှာ သက်ရောက်သဖြင့်၊ နာယုတ်ရွာ တိုင်အောင် ပရောဖက်ပြုလျက်သွားလေ၏။
24 ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ, ತಾನೂ ಹಾಗೆಯೇ ಸಮುಯೇಲನ ಮುಂದೆ ಪ್ರವಾದಿಸಿದನು. ಆ ದಿನ ಹಗಲೆಲ್ಲವೂ, ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದ್ದರಿಂದ, “ಸೌಲನು ಕೂಡ ಪ್ರವಾದಿಗಳಲ್ಲಿ ಒಬ್ಬನಾಗಿದ್ದಾನೆಯೇ?” ಎಂಬ ಮಾತು ಪ್ರಚಲಿತವಾಯಿತು.
၂၄အဝတ်တော်ကိုလည်း ချွတ်၍၊ ရှမွေလရှေ့မှာ ထိုအတူပရောဖက်ပြုလျက်၊ အဝတ်မပါဘဲ တနေ့နှင့် တညဉ့် လဲလျက်နေ၏။ ထိုကြောင့် ရှောလုသည်လည်း ပရောဖက်တို့၌ ပါသလောဟု ဆိုလေ့ရှိကြ၏။

< ಸಮುವೇಲನು - ಪ್ರಥಮ ಭಾಗ 19 >