< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 24 >

1 ಆರೋನನ ಪುತ್ರರಲ್ಲಿ ವರ್ಗಗಳಾಗಿ ವಿಭಾಗ ಆದವರು ಇವರೇ. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್ ಮತ್ತು ಈತಾಮಾರ್. 2 ಆದರೆ ನಾದಾಬ್ ಮತ್ತು ಅಬೀಹೂ ತಮ್ಮ ತಂದೆಗಿಂತ ಮುಂಚೆ ಸತ್ತು ಮಕ್ಕಳಿಲ್ಲದೆ ಇದ್ದುದರಿಂದ ಎಲಿಯಾಜರನೂ, ಈತಾಮಾರನೂ ಯಾಜಕ ಸೇವೆ ಮಾಡಿದರು. 3 ಆದ್ದರಿಂದ ದಾವೀದನು ಎಲಿಯಾಜರನ ಮಕ್ಕಳಲ್ಲಿ ಚಾದೋಕನಿಗೂ, ಈತಾಮಾರನ ಮಕ್ಕಳಲ್ಲಿ ಅಹೀಮೆಲೆಕನಿಗೂ ಅವರ ಸೇವೆಯಲ್ಲಿರುವ ಪದ್ದತಿಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು. 4 ಈತಾಮಾರನ ಪುತ್ರರಿಗಿಂತ ಎಲಿಯಾಜರನ ಪುತ್ರರಲ್ಲಿ ಮುಖ್ಯಸ್ಥರು ಹೆಚ್ಚಾಗಿದ್ದುದರಿಂದ, ಅವರು ಸಹ ಹೀಗೆಯೇ ವಿಭಾಗಿಸಿದ್ದರು. ಎಲಿಯಾಜರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಹದಿನಾರು ಮಂದಿ ಮುಖ್ಯಸ್ಥರು. ಈತಾಮಾರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಎಂಟು ಮಂದಿ ಮುಖ್ಯಸ್ಥರು. 5 ಇವರು ಸಹ ಚೀಟುಹಾಕುವ ಮೂಲಕ ನಿಷ್ಪಕ್ಷಪಾತವಾಗಿ ವಿಭಾಗವಾಗಿದ್ದರು. ಏಕೆಂದರೆ ಪರಿಶುದ್ಧ ಸ್ಥಾನದ ಪ್ರಧಾನರೂ, ದೇವರ ಪ್ರಧಾನರೂ ಎಲಿಯಾಜರನ ಪುತ್ರರೂ, ಈತಾಮಾರನ ಪುತ್ರರೂ ಇದ್ದರು. 6 ಇದಲ್ಲದೆ ಲೇವಿಯರಲ್ಲಿ ಒಬ್ಬನಾದಂಥ ನೆತನೆಯೇಲ್ ಇವನ ಮಗ ಲೇಖಕನಾದ ಶೆಮಾಯನು ಅರಸನ ಮುಂದೆಯೂ; ಪ್ರಧಾನರು, ಯಾಜಕನಾದ ಚಾದೋಕನು, ಅಬಿಯಾತರನ ಮಗ ಅಹೀಮೆಲೆಕನು, ಯಾಜಕರ ಲೇವಿಯರ ಪಿತೃಗಳ ಮುಖ್ಯಸ್ಥರ ಮುಂದೆಯೂ ಅವರ ಹೆಸರುಗಳನ್ನು ಬರೆದನು. ಎಲಿಯಾಜರನಿಗೋಸ್ಕರ ಒಂದು ಶ್ರೇಷ್ಠ ಮನೆ ತೆಗೆದುಕೊಳ್ಳಲಾಯಿತು. ಅದರಂತೆಯೇ, ಈತಾಮಾರನಿಗೋಸ್ಕರವೂ ಒಂದು ತೆಗೆದುಕೊಳ್ಳಲಾಯಿತು. 7 ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು; ಎರಡನೆಯದು ಯೆದಾಯನಿಗೆ, 8 ಮೂರನೆಯದು ಹಾರಿಮನಿಗೆ; ನಾಲ್ಕನೆಯದು ಸೆಯೋರೀಮನಿಗೆ; 9 ಐದನೆಯದು ಮಲ್ಕೀಯನಿಗೆ; ಆರನೆಯದು ಮಿಯಾಮಿನನಿಗೆ; 10 ಏಳನೆಯದು ಹಕ್ಕೋಚನಿಗೆ; ಎಂಟನೆಯದು ಅಬೀಯನಿಗೆ; 11 ಒಂಬತ್ತನೆಯದು ಯೆಷೂವನಿಗೆ; ಹತ್ತನೆಯದು ಶೇಕನ್ಯನಿಗೆ; 12 ಹನ್ನೊಂದನೆಯದು ಎಲ್ಯಾಷೀಬನಿಗೆ; ಹನ್ನೆರಡನೆಯದು ಯಾಕೀಮನಿಗೆ, 13 ಹದಿಮೂರನೆಯದು ಹುಪ್ಪನಿಗೆ; ಹದಿನಾಲ್ಕನೆಯದು ಯೆಷೆಬಾಬನಿಗೆ; 14 ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ; 15 ಹದಿನೇಳನೆಯದು ಹೇಜೀರನಿಗೆ; ಹದಿನೆಂಟನೆಯದು ಹಪಿಚ್ಚೇಚನಿಗೆ; 16 ಹತ್ತೊಂಬತ್ತನೆಯದು ಪೆತಹ್ಯನಿಗೆ; ಇಪ್ಪತ್ತನೆಯದು ಯೆಹೆಜ್ಕೇಲನಿಗೆ; 17 ಇಪ್ಪತ್ತೊಂದನೆಯದು ಯಾಕೀನನಿಗೆ; ಇಪ್ಪತ್ತೆರಡನೆಯದು ಗಾಮೂಲನಿಗೆ; 18 ಇಪ್ಪತ್ಮೂರನೆಯದು ದೆಲಾಯನಿಗೆ; ಇಪ್ಪತ್ನಾಲ್ಕನೆಯದು ಮಾಜ್ಯನಿಗೆ. 19 ಇವೇ ಇಸ್ರಾಯೇಲಿನ ದೇವರಾದ ಯೆಹೋವ ದೇವರು ತಮ್ಮ ತಂದೆ ಆರೋನನಿಗೆ ಆಜ್ಞಾಪಿಸಿದ ಹಾಗೆ, ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ, ಯೆಹೋವ ದೇವರ ಮನೆಯಲ್ಲಿ ಸೇವೆ ಮಾಡುವುದಕ್ಕೆ ಬರಬೇಕಾದ ಅವರ ನಿಯಮಗಳು. 20 ಲೇವಿಯ ವಂಶಜರಲ್ಲಿ ಉಳಿದವರು ಯಾರೆಂದರೆ: ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾಯೇಲನ ಪುತ್ರರಲ್ಲಿ ಯೆಹ್ದೆಯಾಹನು. 21 ರೆಹಬ್ಯನನ್ನು ಕುರಿತು: ರೆಹಬ್ಯನ ಪುತ್ರರಲ್ಲಿ ಇಷೀಯನು ಮೊದಲನೆಯವನು. 22 ಇಚ್ಹಾರರಲ್ಲಿ ಶೆಲೋಮೋತನು ಮೊದಲನೆಯವನು. ಶೆಲೋಮೋತನ ಪುತ್ರರಲ್ಲಿ ಯಹತನು. 23 ಹೆಬ್ರೋನನ ಪುತ್ರರಲ್ಲಿ ಯೆರೀಯನು ಮೊದಲನೆಯವನು; ಎರಡನೆಯವನು ಅಮರ್ಯ; ಮೂರನೆಯವನು ಯಹಜಿಯೇಲ್; ನಾಲ್ಕನೆಯವನು ಯೆಕಮ್ಮಾಮ್. 24 ಉಜ್ಜೀಯೇಲನ ಕುಮಾರರಲ್ಲಿ ಮೀಕನು; ಮೀಕನ ಪುತ್ರರಲ್ಲಿ ಶಾಮೀರನು. 25 ಮೀಕನ ಸಹೋದರನು ಇಷೀಯನು; ಇಷೀಯನ ಪುತ್ರರಲ್ಲಿ ಜೆಕರ್ಯ. 26 ಮೆರಾರೀಯ ಪುತ್ರರಲ್ಲಿ ಮಹ್ಲೀ, ಮೂಷೀ; ಯಾಜ್ಯನ ಮಗನು ಬೆನೋನು. 27 ಮೆರಾರೀಯ ಪುತ್ರರಲ್ಲಿ ಯಾಜ್ಯನಿಗೆ ಬೆನೋ, ಶೋಹಮ್, ಜಕ್ಕೂರ್, ಇಬ್ರೀ ಎಂಬ ಪುತ್ರರಿದ್ದರು. 28 ಮಹ್ಲೀಯನಿಗೆ ಎಲಿಯಾಜರನು ಹುಟ್ಟಿದನು; ಎಲಿಯಾಜರನಿಗೆ ಪುತ್ರರಿರಲಿಲ್ಲ. 29 ಕೀಷನಿಂದ ಯೆರಹ್ಮೇಲನು. 30 ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೀಮೋತ್. ಇವರು ತಮ್ಮ ಕುಟುಂಬಗಳ ಪ್ರಕಾರ ಲೇವಿಯರ ಪುತ್ರರಾಗಿದ್ದರು. 31 ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ, ಚಾದೋಕನು, ಅಹೀಮೆಲೆಕನು, ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ, ಆರೋನನ ಪುತ್ರರಾದ ತಮ್ಮ ಸಹೋದರರಿಗೆ ಎದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಕಿರಿಯ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 24 >