< ಕೀರ್ತನೆಗಳು 87 >

1 ಕೋರಹೀಯರ ಕೀರ್ತನೆ; ಗೀತೆ. ಯೆಹೋವನು ಸ್ಥಾಪಿಸಿದ ಪಟ್ಟಣವು ಪರಿಶುದ್ಧ ಪರ್ವತದ ಮೇಲಿದೆ.
Шта је сам основао на горама светим,
2 ಆತನು ಯಾಕೋಬ್ ವಂಶದವರ ಎಲ್ಲಾ ನಿವಾಸಗಳಿಗಿಂತ, ಚೀಯೋನಿನ ದ್ವಾರಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ.
Врата сионска љуби Господ више свих станова Јаковљевих,
3 ದೇವನಗರವೇ, ನಿನ್ನ ವಿಷಯವಾದ ಗೌರವೋಕ್ತಿಯೇನೆಂದರೆ,
Славно казују за Тебе, граде Божји!
4 “ರಹಬ, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ ಫಿಲಿಷ್ಟಿಯ, ತೂರ್, ಕೂಷ್, ಜನಾಂಗಗಳು ಅಲ್ಲೇ ಹುಟ್ಟಿದವು” ಎಂಬುದೇ.
"Међу оне, који ме знају, бројаћу Мисир и Вавилон. Гле и Филистеји и Тир с етиопском онде су се родили."
5 ಇದರಿಂದ ಚೀಯೋನೇ ಪ್ರತಿಯೊಂದು ಜನಾಂಗದ ಜನ್ಮನಗರವೆಂದು ಹೇಳಲ್ಪಡುವುದು; ಅದನ್ನು ಪರಾತ್ಪರನಾದ ದೇವರು ತಾನೇ ಸ್ಥಿರಪಡಿಸುವನು.
О Сиону ће се говорити: Тај се и тај родио у њему; сам Вишњи утврђује га.
6 ಯೆಹೋವನು ಜನಾಂಗಗಳ ಪಟ್ಟಿಯನ್ನು ಮಾಡುವಾಗ, “ಪ್ರತಿಯೊಂದರ ವಿಷಯ ಇದು ಅಲ್ಲಿಯೇ ಹುಟ್ಟಿದ್ದು” ಎಂದು ಬರೆಯುವನು. (ಸೆಲಾ)
Господ ће у препису народа завикати: Овај се родио у њему.
7 ಇವರು ಹಾಡುತ್ತಾ, ಕುಣಿಯುತ್ತಾ, “ನನ್ನ ಜೀವಜಲದ ಒರತೆಗಳೆಲ್ಲಾ ನಿನ್ನಲ್ಲಿಯೇ ಇವೆ” ಎಂದು ಹೇಳುವರು.
И који певају и веселе се, сви су извори моји у Теби.

< ಕೀರ್ತನೆಗಳು 87 >