< ಮೀಕನು 1 >

1 ಯೆಹೂದದ ಅರಸನಾದ ಯೋಥಾಮ, ಆಹಾಜ ಮತ್ತು ಹಿಜ್ಕೀಯ ಇವರ ಕಾಲದಲ್ಲಿ ಸಮಾರ್ಯದ ಮತ್ತು ಯೆರೂಸಲೇಮಿನ ವಿಷಯವಾಗಿ ಮೋರೆಷೆತ್ ಊರಿನವನಾದ ಮೀಕನಿಗೆ ಕೇಳಿ ಬಂದ ಯೆಹೋವನ ವಾಕ್ಯ.
Реч Господња која дође Михеју Моресећанину за времена Јоатама, Ахаза и Језекије, царева Јудиних, што виде за Самарију и за Јерусалим.
2 ಜನಾಂಗಗಳೇ, ನೀವೆಲ್ಲರೂ ಕೇಳಿರಿ. ಭೂಮಂಡಲವೇ, ಭೂಮಿಯಲ್ಲಿರುವ ಸಮಸ್ತರೇ, ಕಿವಿಗೊಡಿರಿ, ಕರ್ತನಾದ ಯೆಹೋವನು ತನ್ನ ಪವಿತ್ರಾಲಯದೊಳಗಿಂದ ನಿಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತಾನೆ.
Чујте, сви народи, слушај, земљо и шта је на њој, и Господ Бог да вам је сведок, Господ из свете цркве своје.
3 ಇಗೋ ಯೆಹೋವನು ತನ್ನ ಸ್ಥಾನದಿಂದ ಹೊರಟು ಇಳಿದುಬರುತ್ತಿದ್ದಾನೆ. ಭೂಮಿಯ ಉನ್ನತಪ್ರದೇಶಗಳಲ್ಲಿ ನಡೆಯುತ್ತಾನೆ.
Јер, гле, Господ излази из места свог, и сићи ће, и ходиће по висинама земаљским.
4 ಬೆಂಕಿಗೆ ಎದುರು ಕರಗುವ ಮೇಣದಂತೆಯೂ ಮತ್ತು ಇಳಿಜಾರು ಪ್ರದೇಶದಲ್ಲಿ ರಭಸವಾಗಿ ಹರಿಯುವ ನೀರಿನಂತೆ ಕಣಿವೆಗಳು, ಪರ್ವತಗಳು ಆತನ ಮುಂದೆ ಸೀಳಿ ಕರಗಿ ಕೊಚ್ಚಿಹೊಗುತ್ತಿವೆ.
И горе ће се растопити пред Њим, и долине ће се расести, као восак од огња и као вода што тече низ стрмен.
5 ಇದಕ್ಕೆಲ್ಲಾ ಕಾರಣ ಯಾಕೋಬಿನ ದ್ರೋಹ ಮತ್ತು ಇಸ್ರಾಯೇಲ್ ವಂಶದ ಪಾಪಗಳೇ. ಯಾಕೋಬಿನ ದ್ರೋಹವೇನು? ಸಮಾರ್ಯವಲ್ಲವೇ! ಯೆಹೂದದ ಕೆಟ್ಟ ಪೂಜಾಸ್ಥಾನಗಳು ಯಾವುವು? ಯೆರೂಸಲೇಮಲ್ಲವೇ!
Све је то за злочинство Јаковљево и за грехе дома Израиљевог. Које је злочинство Јаковљево? Није ли Самарија? Које су висине Јудине? Није ли Јерусалим?
6 ಆದಕಾರಣ ನಾನು ಸಮಾರ್ಯವನ್ನು ಹೊಲದಲ್ಲಿನ ಹಾಳು ದಿಬ್ಬವನ್ನಾಗಿಯೂ, ದ್ರಾಕ್ಷಿಯ ತೋಟದ ಮಡಿಗಳನ್ನಾಗಿಯೂ ಮಾಡುವೆನು. ಅದರ ಕಲ್ಲುಗಳನ್ನು ತಗ್ಗಿಗೆ ಸುರಿದುಬಿಡುವೆನು. ಅದರ ಅಸ್ತಿವಾರಗಳನ್ನು ಬಯಲನ್ನಾಗಿ ಮಾಡುವೆನು.
Зато ћу учинити од Самарије гомилу у пољу да се саде виногради, и побацаћу камење њено у долину и открићу јој темеље.
7 ಅದರ ಎರಕದ ಬೊಂಬೆಗಳನ್ನೆಲ್ಲಾ ಪುಡಿಪುಡಿ ಮಾಡುವೆನು. ಅದರ ಸಮಸ್ತ ಸಂಪಾದನೆಯು ಸುಟ್ಟುಹೋಗುವುದು. ಅದರ ಸಕಲ ವಿಗ್ರಹಗಳನ್ನು ಹಾಳುಮಾಡುವೆನು. ಅದು ವೇಶ್ಯಾವಾಟಿಕೆಯಿಂದ ಸಂಪಾದನೆಯಾಗಿ ಕೂಡಿಸಿಟ್ಟುಕೊಂಡವುಗಳು ಹಾಗೂ ವೇಶ್ಯಾವಾಟಿಕೆಯ ಸಂಪಾದನೆಯಾಗಿಯೇ ಪರರ ಪಾಲಾಗುವವು.
И сви резани ликови њени разбиће се, и сви ће се дарови њени сажећи огњем, и све ћу идоле њене потрти, јер од плате курварске накупи, и опет ће бити плата курварска.
8 ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು, ಬರಿಗಾಲಾಗಿಯೂ, ಬೆತ್ತಲೆಯಾಗಿಯೂ ನಡೆದಾಡುವೆನು. ನರಿಗಳಂತೆ ಅರಚಿಕೊಳ್ಳುವೆನು. ಉಷ್ಟ್ರಪಕ್ಷಿಗಳ ಹಾಗೆ ಕಿರಿಚಿಕೊಳ್ಳುವೆನು.
Зато ћу плакати и ридати; ходићу свучен и го, плакаћу као змајеви и тужићу као сове.
9 ಸಮಾರ್ಯಕ್ಕೆ ಬಿದ್ದ ಪೆಟ್ಟು ಗುಣಪಡಿಸಲಾಗದು. ಅದು ಯೆಹೂದಕ್ಕೂ ತಾಕಿದೆ. ನನ್ನ ಜನರ ಆಲೋಚನಾಸ್ಥಾನವಾದ ಯೆರೂಸಲೇಮಿಗೆ ಮುಟ್ಟಿದೆ.
Јер јој се ране не могу исцелити, дођоше до Јуде, допреше до врата мог народа, до Јерусалима.
10 ೧೦ ಇದನ್ನು ಗತ್ ಊರಿನಲ್ಲಿ ತಿಳಿಸಬೇಡಿರಿ, ಅಳಲೇಬೇಡಿರಿ, ಬೇತ್ಲೆಯಪ್ರದಲ್ಲಿ ಧೂಳಿನೊಳಗೆ ಹೊರಳಾಡಿರಿ.
Не јављајте у Гату, не плачите; у Вит-Афри ваљај се по праху.
11 ೧೧ ಶಾಫೀರಿನವರೇ, ಬೆತ್ತಲೆಯಾಗಿ ಅವಮಾನಪಟ್ಟು ತೊಲಗಿರಿ. ಚಾನಾನಿನವರು ಹೊರಡರು. ಬೇತೆಚೇಲಿನ ಗೋಳಾಟವು ಅದರ ಬೆಂಬಲವನ್ನು ನಿಮಗೆ ತಪ್ಪಿಸುವುದು.
Изађи, становнице сафирска, с голом срамотом; становница сананска неће изаћи; жалост вет-езилска неће вам дати станка.
12 ೧೨ ಕೇಡು ಯೆಹೋವನಿಂದ ಹೊರಟು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ತಮಗೆ ಮೇಲುಂಟಾಗುವುದಿಲ್ಲವೋ ಎಂದು ವೇದನೆಪಡುತ್ತಾರೆ.
Јер становница маротска тужи за својим добром. Јер сиђе зло од Господа до врата јерусалимских.
13 ೧೩ ಲಾಕೀಷಿನವರೇ ಅಶ್ವಗಳನ್ನು ರಥಕ್ಕೆ ಕಟ್ಟಿರಿ. ನಿಮ್ಮ ಊರೇ ಚೀಯೋನ್ ನಗರಿಯ ಪಾಪಕ್ಕೆ ಮೂಲ, ಹೌದು ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿಬಂದವು.
Упрегни брзе коње у кола, становнице лахиска, која си почетак греху кћери сионској, јер се у теби нађоше злочинства Израиљева.
14 ೧೪ ಆದಕಾರಣ ನೀವು ಮೋರೆಷತ್ ಗತ್ ಊರಿಗೆ ಬಳುವಳಿ ಕೊಡಬೇಕಾಗುವುದು. ಅಕ್ಜೀಬಿನ ಮನೆಗಳಿಂದ ಇಸ್ರಾಯೇಲಿನ ಅರಸರಿಗೆ ಮೋಸವಾಗುವುದು.
Зато пошаљи дарове Моресету гатском; домови ахсивски превариће цареве Израиљеве.
15 ೧೫ ಮಾರೇಷದವರೇ, ನಿಮ್ಮನ್ನು ವಶಮಾಡಿಕೊಳ್ಳತಕ್ಕವನನ್ನು ಇನ್ನು ನಿಮ್ಮ ಬಳಿಗೆ ಬರಮಾಡುವೆನು. ಇಸ್ರಾಯೇಲಿನ ನಾಯಕರು ಅದುಲ್ಲಾಮ್ ಪಟ್ಟಣಕ್ಕೆ ಸೇರುವುದು.
Још ћу ти довести наследника, становнице мариска; доћи ће до Одолама, славе Израиљеве.
16 ೧೬ ಯೆಹೂದವೇ, ನಿನ್ನಿಂದ ಸೆರೆಹೋಗಿರುವ ನಿನ್ನ ಮುದ್ದು ಮಕ್ಕಳಿಗಾಗಿ ಕ್ಷೌರಮಾಡಿಸಿಕೋ ಮತ್ತು ತಲೆಬೋಳಿಸಿಕೋ. ನಿನ್ನ ಬೋಳುತನವನ್ನು ರಣಹದ್ದಿನ ಹಾಗೆ ವಿಸ್ತರಿಸಿಕೋ.
Начини се ћелава и острижи се за милом децом својом; рашири ћелу своју као орао, јер се воде од тебе у ропство.

< ಮೀಕನು 1 >