< ಲೂಕನು 5 >

1 ಒಮ್ಮೆ ಯೇಸು ಗೆನೆಜರೇತ್ ಸರೋವರದ ದಡದಲ್ಲಿ ನಿಂತಿದ್ದಾಗ ಜನರು ಗುಂಪಾಗಿ ಬಂದು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಆತನನ್ನು ಸುತ್ತುವರೆದು ನೂಕಾಡುತ್ತಿದ್ದರು.
అనన్తరం యీశురేకదా గినేషరథ్దస్య తీర ఉత్తిష్ఠతి, తదా లోకా ఈశ్వరీయకథాం శ్రోతుం తదుపరి ప్రపతితాః|
2 ಯೇಸು ಆ ಸರೋವರದ ದಡದಲ್ಲಿದ್ದ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.
తదానీం స హ్దస్య తీరసమీపే నౌద్వయం దదర్శ కిఞ్చ మత్స్యోపజీవినో నావం విహాయ జాలం ప్రక్షాలయన్తి|
3 ಆ ದೋಣಿಗಳಲ್ಲಿ, ಸೀಮೋನನ ದೋಣಿಯನ್ನು ಯೇಸು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು.
తతస్తయోర్ద్వయో ర్మధ్యే శిమోనో నావమారుహ్య తీరాత్ కిఞ్చిద్దూరం యాతుం తస్మిన్ వినయం కృత్వా నౌకాయాముపవిశ్య లోకాన్ ప్రోపదిష్టవాన్|
4 ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ ಮೀನುಹಿಡಿಯಲು ನಿಮ್ಮ ಬಲೆಗಳನ್ನು ಬೀಸಿರಿ” ಎಂದು ಹೇಳಿದನು.
పశ్చాత్ తం ప్రస్తావం సమాప్య స శిమోనం వ్యాజహార, గభీరం జలం గత్వా మత్స్యాన్ ధర్త్తుం జాలం నిక్షిప|
5 ಅದಕ್ಕೆ ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯತ್ನಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಬೀಸುತ್ತೇವೆ” ಅಂದನು.
తతః శిమోన బభాషే, హే గురో యద్యపి వయం కృత్స్నాం యామినీం పరిశ్రమ్య మత్స్యైకమపి న ప్రాప్తాస్తథాపి భవతో నిదేశతో జాలం క్షిపామః|
6 ಅವರು ಬಲೆಗಳನ್ನು ಬೀಸಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಬಲೆಗೆ ಸಿಕ್ಕಿಕೊಂಡಿದ್ದರ ಪರಿಣಾಮ ಬಲೆಗಳು ಹರಿದುಹೋಗುವಂತ್ತಿದವು.
అథ జాలే క్షిప్తే బహుమత్స్యపతనాద్ ఆనాయః ప్రచ్ఛిన్నః|
7 ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸಂಗಡಿಗರನ್ನೂ ಕರೆದು, ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು, ಅವು ಮುಳುಗುವ ಹಾಗಾದವು.
తస్మాద్ ఉపకర్త్తుమ్ అన్యనౌస్థాన్ సఙ్గిన ఆయాతుమ్ ఇఙ్గితేన సమాహ్వయన్ తతస్త ఆగత్య మత్స్యై ర్నౌద్వయం ప్రపూరయామాసు ర్యై ర్నౌద్వయం ప్రమగ్నమ్|
8 ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು, “ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗು” ಅಂದನು.
తదా శిమోన్పితరస్తద్ విలోక్య యీశోశ్చరణయోః పతిత్వా, హే ప్రభోహం పాపీ నరో మమ నికటాద్ భవాన్ యాతు, ఇతి కథితవాన్|
9 ಏಕೆಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ಆಶ್ಚರ್ಯಪಟ್ಟಿದ್ದರು.
యతో జాలే పతితానాం మత్స్యానాం యూథాత్ శిమోన్ తత్సఙ్గినశ్చ చమత్కృతవన్తః; శిమోనః సహకారిణౌ సివదేః పుత్రౌ యాకూబ్ యోహన్ చేమౌ తాదృశౌ బభూవతుః|
10 ೧೦ ಸೀಮೋನನ ಸಂಗಡಿಗರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಹಾಗೆಯೇ ಆಶ್ಚರ್ಯಪಟ್ಟರು. ಯೇಸು ಸೀಮೋನನಿಗೆ, “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗಿರುವಿ” ಎಂದು ಹೇಳಿದನು.
తదా యీశుః శిమోనం జగాద మా భైషీరద్యారభ్య త్వం మనుష్యధరో భవిష్యసి|
11 ೧೧ ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಮತ್ತು ಎಲ್ಲವನ್ನು ಬಿಟ್ಟು ಅಂದಿನಿಂದ ಯೇಸುವನ್ನು ಹಿಂಬಾಲಿಸಿದರು.
అనన్తరం సర్వ్వాసు నౌసు తీరమ్ ఆనీతాసు తే సర్వ్వాన్ పరిత్యజ్య తస్య పశ్చాద్గామినో బభూవుః|
12 ೧೨ ಆತನು ಒಂದಾನೊಂದು ಊರಿನಲ್ಲಿದ್ದಾಗ ಮೈಯೆಲ್ಲಾ ಕುಷ್ಠರೋಗ ತುಂಬಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಸಾಷ್ಟಾಂಗವೆರಗಿ, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು.
తతః పరం యీశౌ కస్మింశ్చిత్ పురే తిష్ఠతి జన ఏకః సర్వ్వాఙ్గకుష్ఠస్తం విలోక్య తస్య సమీపే న్యుబ్జః పతిత్వా సవినయం వక్తుమారేభే, హే ప్రభో యది భవానిచ్ఛతి తర్హి మాం పరిష్కర్త్తుం శక్నోతి|
13 ೧೩ ಆತನು ಕೈನೀಡಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು, ಶುದ್ಧನಾಗು” ಅಂದನು. ಕೂಡಲೆ ಅವನ ಕುಷ್ಠವು ವಾಸಿಯಾಯಿತು.
తదానీం స పాణిం ప్రసార్య్య తదఙ్గం స్పృశన్ బభాషే త్వం పరిష్క్రియస్వేతి మమేచ్ఛాస్తి తతస్తత్క్షణం స కుష్ఠాత్ ముక్తః|
14 ೧೪ ಆಗ ಆತನು ಅವನಿಗೆ, “ನೀನು ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ಆಜ್ಞಾಪಿಸಿರುವ ಕಾಣಿಕೆಯನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು, ಅದು ಜನರಿಗೆ ಸಾಕ್ಷಿಯಾಗಲಿ” ಎಂದು ಅಪ್ಪಣೆಕೊಟ್ಟನು.
పశ్చాత్ స తమాజ్ఞాపయామాస కథామిమాం కస్మైచిద్ అకథయిత్వా యాజకస్య సమీపఞ్చ గత్వా స్వం దర్శయ, లోకేభ్యో నిజపరిష్కృతత్వస్య ప్రమాణదానాయ మూసాజ్ఞానుసారేణ ద్రవ్యముత్మృజస్వ చ|
15 ೧೫ ಆದರೂ ಆತನ ಸುದ್ದಿಯು ಮತ್ತಷ್ಟು ಹಬ್ಬಿತು, ಮತ್ತು ಜನರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ, ತಮ್ಮ ತಮ್ಮ ರೋಗರುಜಿನಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ, ಗುಂಪುಗುಂಪಾಗಿ ಬಂದು ಸೇರಿದರು.
తథాపి యీశోః సుఖ్యాతి ర్బహు వ్యాప్తుమారేభే కిఞ్చ తస్య కథాం శ్రోతుం స్వీయరోగేభ్యో మోక్తుఞ్చ లోకా ఆజగ్ముః|
16 ೧೬ ಆದರೆ ಯೇಸು ಜನರಿಂದ ಪ್ರತ್ಯೇಕಿಸಿಕೊಂಡು ನಿರ್ಜನ ಪ್ರದೇಶಗಳಿಗೆ ಹೋಗಿ ಪ್ರಾರ್ಥನೆಯನ್ನು ಮಾಡುತ್ತಿದ್ದನು.
అథ స ప్రాన్తరం గత్వా ప్రార్థయాఞ్చక్రే|
17 ೧೭ ಒಮ್ಮೆ ಆತನು ಉಪದೇಶಮಾಡುತ್ತಿರಲು ಗಲಿಲಾಯ ಮತ್ತು ಯೂದಾಯದ ಎಲ್ಲಾ ಗ್ರಾಮಗಳಿಂದಲೂ ಯೆರೂಸಲೇಮಿನಿಂದಲೂ ಬಂದಿದ್ದ ಫರಿಸಾಯರೂ ಧರ್ಮೋಪದೇಶಕರೂ ಆತನ ಹತ್ತಿರ ಕುಳಿತುಕೊಂಡಿದ್ದರು. ಮತ್ತು ಅವರನ್ನು ಗುಣಮಾಡುವ ದೇವರ ಶಕ್ತಿಯು ಆತನಲ್ಲಿತ್ತು.
అపరఞ్చ ఏకదా యీశురుపదిశతి, ఏతర్హి గాలీల్యిహూదాప్రదేశయోః సర్వ్వనగరేభ్యో యిరూశాలమశ్చ కియన్తః ఫిరూశిలోకా వ్యవస్థాపకాశ్చ సమాగత్య తదన్తికే సముపవివిశుః, తస్మిన్ కాలే లోకానామారోగ్యకారణాత్ ప్రభోః ప్రభావః ప్రచకాశే|
18 ೧೮ ಹೀಗಿರುವಲ್ಲಿ ಕೆಲವು ಮಂದಿ ಗಂಡಸರು ಒಬ್ಬ ಪಾರ್ಶ್ವವಾಯು ರೋಗಿಯನ್ನು ದೋಲಿಯಲ್ಲಿ ಹೊತ್ತುಕೊಂಡು ಬಂದರು. ಅವನನ್ನು ಒಳಗೆ ತೆಗೆದುಕೊಂಡು ಹೋಗಿ ಆತನ ಮುಂದೆ ಇರಿಸಬೇಕೆಂದು ಪ್ರಯತ್ನಿಸಿದರು.
పశ్చాత్ కియన్తో లోకా ఏకం పక్షాఘాతినం ఖట్వాయాం నిధాయ యీశోః సమీపమానేతుం సమ్ముఖే స్థాపయితుఞ్చ వ్యాప్రియన్త|
19 ೧೯ ಜನರ ಗುಂಪು ದಟ್ಟವಾಗಿದ್ದ ಕಾರಣ ಅವನನ್ನು ಒಳಗೆ ತೆಗೆದುಕೊಂಡುಹೋಗುವ ಮಾರ್ಗವನ್ನು ಕಾಣದೆ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯ ಸಹಿತವಾಗಿ ಜನರ ನಡುವೆ ಯೇಸುವಿನ ಮುಂದೆ ಇಳಿಸಿದರು.
కిన్తు బహుజననివహసమ్వాధాత్ న శక్నువన్తో గృహోపరి గత్వా గృహపృష్ఠం ఖనిత్వా తం పక్షాఘాతినం సఖట్వం గృహమధ్యే యీశోః సమ్ముఖే ఽవరోహయామాసుః|
20 ೨೦ ಯೇಸು ಅವರ ನಂಬಿಕೆಯನ್ನು ನೋಡಿ, “ಸ್ನೇಹಿತನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಅಂದನು.
తదా యీశుస్తేషామ్ ఈదృశం విశ్వాసం విలోక్య తం పక్షాఘాతినం వ్యాజహార, హే మానవ తవ పాపమక్షమ్యత|
21 ೨೧ ಅದಕ್ಕೆ ಆ ಶಾಸ್ತ್ರಿಗಳೂ ಮತ್ತು ಫರಿಸಾಯರೂ, “ದೇವದೂಷಣೆಯ ಮಾತನಾಡುವ ಇವನು ಎಷ್ಟರವನು? ಪಾಪಗಳನ್ನು ಕ್ಷಮಿಸಲು ದೇವರೊಬ್ಬನಿಂದ ಹೊರತು ಮತ್ತಾರಿಂದಾದೀತು?” ಎಂದು ಅಂದುಕೊಳ್ಳುತ್ತಿದ್ದರು.
తస్మాద్ అధ్యాపకాః ఫిరూశినశ్చ చిత్తైరిత్థం ప్రచిన్తితవన్తః, ఏష జన ఈశ్వరం నిన్దతి కోయం? కేవలమీశ్వరం వినా పాపం క్షన్తుం కః శక్నోతి?
22 ೨೨ ಆದರೆ ಅವರು ಹಾಗಂದುಕೊಳ್ಳುವುದನ್ನು ಯೇಸುವು ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುವುದೇನು?
తదా యీశుస్తేషామ్ ఇత్థం చిన్తనం విదిత్వా తేభ్యోకథయద్ యూయం మనోభిః కుతో వితర్కయథ?
23 ೨೩ ಯಾವುದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ? ಎದ್ದು ನಡೆ ಅನ್ನುವುದೋ?
తవ పాపక్షమా జాతా యద్వా త్వముత్థాయ వ్రజ ఏతయో ర్మధ్యే కా కథా సుకథ్యా?
24 ೨೪ ಆದರೆ ಪಾಪಗಳನ್ನು ಕ್ಷಮಿಸುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಎಂದು ಹೇಳಿದನು.
కిన్తు పృథివ్యాం పాపం క్షన్తుం మానవసుతస్య సామర్థ్యమస్తీతి యథా యూయం జ్ఞాతుం శక్నుథ తదర్థం (స తం పక్షాఘాతినం జగాద) ఉత్తిష్ఠ స్వశయ్యాం గృహీత్వా గృహం యాహీతి త్వామాదిశామి|
25 ೨೫ ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ಮನೆಗೆ ಹೋದನು.
తస్మాత్ స తత్క్షణమ్ ఉత్థాయ సర్వ్వేషాం సాక్షాత్ నిజశయనీయం గృహీత్వా ఈశ్వరం ధన్యం వదన్ నిజనివేశనం యయౌ|
26 ೨೬ ನೋಡಿದವರೆಲ್ಲರೂ ಬೆರಗಾಗಿ ದೇವರನ್ನು ಕೊಂಡಾಡಿದರು ಮತ್ತು ಅವರು ಭಯ ಹಿಡಿದವರಾಗಿ, “ನಾವು ಈ ಹೊತ್ತು ಅಪೂರ್ವ ಸಂಗತಿಯನ್ನು ಕಂಡೆವು” ಅಂದರು.
తస్మాత్ సర్వ్వే విస్మయ ప్రాప్తా మనఃసు భీతాశ్చ వయమద్యాసమ్భవకార్య్యాణ్యదర్శామ ఇత్యుక్త్వా పరమేశ్వరం ధన్యం ప్రోదితాః|
27 ೨೭ ಅನಂತರ ಯೇಸು ಹೊರಟು ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು,
తతః పరం బహిర్గచ్ఛన్ కరసఞ్చయస్థానే లేవినామానం కరసఞ్చాయకం దృష్ట్వా యీశుస్తమభిదధే మమ పశ్చాదేహి|
28 ೨೮ ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು.
తస్మాత్ స తత్క్షణాత్ సర్వ్వం పరిత్యజ్య తస్య పశ్చాదియాయ|
29 ೨೯ ತರುವಾಯ ಲೇವಿಯು ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿರಲು, ಸುಂಕದವರೂ ಇತರರೂ ಗುಂಪಾಗಿ ಕೂಡಿ ಬಂದು ಅವರ ಸಂಗಡ ಊಟಕ್ಕೆ ಕುಳಿತುಕೊಂಡಿದ್ದರು.
అనన్తరం లేవి ర్నిజగృహే తదర్థం మహాభోజ్యం చకార, తదా తైః సహానేకే కరసఞ్చాయినస్తదన్యలోకాశ్చ భోక్తుముపవివిశుః|
30 ೩೦ ಅದನ್ನು ಕಂಡು ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗೊಣಗುಟ್ಟುತ್ತಾ, “ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವುದೇಕೆ?” ಎಂದು ಕೇಳಿದರು.
తస్మాత్ కారణాత్ చణ్డాలానాం పాపిలోకానాఞ్చ సఙ్గే యూయం కుతో భంగ్ధ్వే పివథ చేతి కథాం కథయిత్వా ఫిరూశినోఽధ్యాపకాశ్చ తస్య శిష్యైః సహ వాగ్యుద్ధం కర్త్తుమారేభిరే|
31 ೩೧ ಅದಕ್ಕೆ ಯೇಸು, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು;
తస్మాద్ యీశుస్తాన్ ప్రత్యవోచద్ అరోగలోకానాం చికిత్సకేన ప్రయోజనం నాస్తి కిన్తు సరోగాణామేవ|
32 ೩೨ ನಾನು ನೀತಿವಂತರನ್ನಲ್ಲ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಪಾಪಿಗಳನ್ನು ಕರೆಯುವುದಕ್ಕೆ ಬಂದಿದ್ದೇನೆ” ಎಂದು ಅವರಿಗೆ ಉತ್ತರಕೊಟ್ಟನು.
అహం ధార్మ్మికాన్ ఆహ్వాతుం నాగతోస్మి కిన్తు మనః పరావర్త్తయితుం పాపిన ఏవ|
33 ೩೩ ಅವರು ಆತನಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸದಿಂದ ವಿಜ್ಞಾಪನೆಗಳನ್ನು ಮಾಡುತ್ತಾ ಇರುತ್ತಾರೆ; ಅದರಂತೆ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಊಟಮಾಡುತ್ತಾರೆ ಕುಡಿಯುತ್ತಾರೆ” ಎಂದು ಹೇಳಲು,
తతస్తే ప్రోచుః, యోహనః ఫిరూశినాఞ్చ శిష్యా వారంవారమ్ ఉపవసన్తి ప్రార్థయన్తే చ కిన్తు తవ శిష్యాః కుతో భుఞ్జతే పివన్తి చ?
34 ೩೪ ಯೇಸು ಅವರಿಗೆ, “ಮದಲಿಂಗನು ಮದುವೆಯ ಅತಿಥಿಗಳ ಸಂಗಡ ಇರುವಲ್ಲಿ ಅವರಿಗೆ ಉಪವಾಸವಿರಿಸುವುದಕ್ಕೆ ನಿಮ್ಮಿಂದಾದೀತೇ?
తదా స తానాచఖ్యౌ వరే సఙ్గే తిష్ఠతి వరస్య సఖిగణం కిముపవాసయితుం శక్నుథ?
35 ೩೫ ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಳ್ಳಲ್ಪಡುವ ಕಾಲ ಬರುತ್ತದೆ. ಆ ಕಾಲದಲ್ಲೆ ಅವರು ಉಪವಾಸಮಾಡುವರು” ಎಂದು ಉತ್ತರಕೊಟ್ಟನು.
కిన్తు యదా తేషాం నికటాద్ వరో నేష్యతే తదా తే సముపవత్స్యన్తి|
36 ೩೬ ಯೇಸು ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದನು, ಅದೇನೆಂದರೆ, “ಯಾರೂ ಹೊಸ ವಸ್ತ್ರದಿಂದ ಒಂದು ತುಂಡನ್ನು ತೆಗೆದುಕೊಂಡು ಹಳೇ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ, ಹಚ್ಚಿದರೆ ಆ ಹೊಸದನ್ನು ಹರಿದು ಕೆಡಿಸಿದ ಹಾಗಾಗುವುದಲ್ಲದೆ, ಹೊಸದರಿಂದ ಹರಿದು ಹಚ್ಚಿದ ತ್ಯಾಪೆಯು ಹಳೆಯ ವಸ್ತ್ರಕ್ಕೆ ಒಪ್ಪುವದೂ ಇಲ್ಲ.
సోపరమపి దృష్టాన్తం కథయామ్బభూవ పురాతనవస్త్రే కోపి నుతనవస్త్రం న సీవ్యతి యతస్తేన సేవనేన జీర్ణవస్త్రం ఛిద్యతే, నూతనపురాతనవస్త్రయో ర్మేలఞ్చ న భవతి|
37 ೩೭ ಮತ್ತು ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವುದಿಲ್ಲ; ಹಾಗೆ ಇಟ್ಟರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಒಡೆದು ಹೋಗುವವು.
పురాతన్యాం కుత్వాం కోపి నుతనం ద్రాక్షారసం న నిదధాతి, యతో నవీనద్రాక్షారసస్య తేజసా పురాతనీ కుతూ ర్విదీర్య్యతే తతో ద్రాక్షారసః పతతి కుతూశ్చ నశ్యతి|
38 ೩೮ ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು.
తతో హేతో ర్నూతన్యాం కుత్వాం నవీనద్రాక్షారసః నిధాతవ్యస్తేనోభయస్య రక్షా భవతి|
39 ೩೯ ಇದಲ್ಲದೆ ಹಳೇ ದ್ರಾಕ್ಷಾರಸವನ್ನು ಕುಡಿದವನು ಹೊಸದು ಬೇಕು ಅನ್ನುವುದಿಲ್ಲ, ‘ಹಳೆಯದೇ ಉತ್ತಮ’ ಅನ್ನುವನು.”
అపరఞ్చ పురాతనం ద్రాక్షారసం పీత్వా కోపి నూతనం న వాఞ్ఛతి, యతః స వక్తి నూతనాత్ పురాతనమ్ ప్రశస్తమ్|

< ಲೂಕನು 5 >