< ಯೆಹೋಶುವನು 12 >

1 ಇಸ್ರಾಯೇಲ್ಯರು ಯೊರ್ದನ್ ನದಿಯ ಪೂರ್ವ ದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನೂ ಕಣಿವೆ ಪ್ರದೇಶದ ಪೂರ್ವಭಾಗವನ್ನೂ ಸ್ವಾಧೀನ ಮಾಡಿಕೊಂಡು ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು.
А ово су цареви земаљски које побише синови Израиљеви и земљу њихову освојише с оне стране Јордана к истоку, од потока Арнона до горе Ермона и сву равницу к истоку:
2 ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾಗಿದ್ದವನು ಸೀಹೋನ್. ಇವನು ಅರ್ನೋನ್ ಕಣಿವೆಯ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ಕಣಿವೆಯಲ್ಲಿಯೇ ಇದ್ದ ಪಟ್ಟಣಗಳು ಇವುಗಳು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ಹೊಳೆಯವರೆಗಿರುವ ಗಿಲ್ಯಾದಿನ ಅರ್ಧಪ್ರಾಂತ್ಯವು
Сион цар аморејски који стајаше у Есевону и владаше од Ароира који је на брегу потока Арнона, и од половине потока и половином Галада до потока Јавока, где је међа синова амонских;
3 ಹಾಗೂ ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೋತ್ ಸಮುದ್ರದಿಂದ ಲವಣಸಮುದ್ರವೆನಿಸಿಕೊಳ್ಳುವ ಅರಾಬ್ ಸಮುದ್ರದ ಹತ್ತಿರವಿರುವ ಬೇತಯೆಷಿಮೋತಿನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ಕಣಿವೆ ಪ್ರದೇಶವು ಇವೇ ಅವನ ರಾಜ್ಯ:
И од равнице до мора хинеротског к истоку, и до мора уз поље, до мора сланог к истоку, како се иде к Ветсимоту, и с југа под гору Фазгу;
4 ಅಷ್ಟರೋತ್ ಹಾಗೂ ಎದ್ರೈ ಎಂಬ ಊರುಗಳಲ್ಲಿ ವಾಸವಾಗಿದ್ದ ರೆಫಾಯರ ವಂಶಸ್ಥರು ಬಾಷಾನಿನ ಅರಸನೂ ಆದ ಓಗನು ಸಂಹರಿಸಲ್ಪಟ್ಟವರಲ್ಲಿ ಎರಡನೆಯವನು.
И сусед му Ог, цар васански, који беше остао од Рафаја и сеђаше у Астароту и у Едрајину,
5 ಇವನ ರಾಜ್ಯ ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಪಟ್ಟಣವು, ಗೆಷೂರ್ಯರ ಮತ್ತು ಮಾಕತೀಯರ ಮೇರೆವರೆಗೆ ಇದ್ದ ಬಾಷಾನಿನ ಸೀಮೆ, ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗೆ ಇದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದ ವರೆಗಿದ್ದಿತ್ತು.
И владаше гором Ермоном и Салхом и свим Васаном до међе гесурске и махатске, и половином Галада до међе Сиона цара есевонског.
6 ಯೆಹೋವನ ಸೇವಕನಾದ ಮೋಶೆಯೂ, ಇಸ್ರಾಯೇಲ್ಯರ ಸಹಿತವಾಗಿ ಆ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವತ್ತಾಗಿ ಕೊಟ್ಟನು.
Њих поби Мојсије слуга Господњи и синови Израиљеви; и ту земљу даде Мојсије, слуга Господњи, у наследство племену Рувимовом и племену Гадовом и половини племена Манасијиног.
7 ಯೆಹೋಶುವನು ಇಸ್ರಾಯೇಲರ ಸಹಿತವಾಗಿ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಬೆಟ್ಟದ ಮೇಲಿನ ಪ್ರದೇಶಗಳು,
А ово су цареви земаљски које поби Исус са синовима Израиљевим с оне стране Јордана к западу, од Вал-Гада у пољу ливанском па до горе Алака како се иде к Сиру; и ту земљу даде Исус племенима Израиљевим у наследство према деловима њиховим,
8 ಇಳುಕಲ್ಲಿನ ಪ್ರದೇಶಗಳು, ಕಣಿವೆ ಪ್ರದೇಶಗಳು, ಬೆಟ್ಟಗಳ ಬುಡದಲ್ಲಿರುವ ಸೀಮೆಗಳು, ಅರಣ್ಯದ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ದೇಶಗಳನ್ನು ಇಸ್ರಾಯೇಲರ ಕುಲದವರಿಗೆ ಶಾಶ್ವತ ಆಸ್ತಿಯಾಗಿ ಕೊಟ್ಟನು. ಆ ಅರಸರ ಪಟ್ಟಿಯು ಹೇಗೆಂದರೆ,
По горама и по равницама, по пољима и по долинама, и у пустињи и на јужном крају, земљу хетејску, аморејску и хананејску, ферезејску, јевејску и јевусејску:
9 ಯೆರಿಕೋವಿನ ಅರಸನು - 1 ಬೇತೇಲ್ ಬಳಿಯಲ್ಲಿರುವ ಆಯಿ ಎಂಬ ಊರಿನ ಅರಸನು - 1
Цар јерихонски један; цар гајски до Ветиља један;
10 ೧೦ ಯೆರೂಸಲೇಮಿನ ಅರಸನು - 1 ಹೆಬ್ರೋನಿನ ಅರಸನು - 1
Цар јерусалимски један; цар хевронски један;
11 ೧೧ ಯರ್ಮೂತಿನ ಅರಸನು - 1 ಲಾಕೀಷಿನ ಅರಸನು - 1
Цар јармутски један, цар лахиски један;
12 ೧೨ ಎಗ್ಲೋನಿನ ಅರಸನು - 1 ಗೆಜೆರಿನ ಅರಸನು - 1
Цар јеглонски један; цар гезерски један;
13 ೧೩ ದೆಬೀರಿನ ಅರಸನು - 1 ಗೆದೆರಿನ ಅರಸನು - 1
Цар давирски један; цар гадерски један;
14 ೧೪ ಹೊರ್ಮದ ಅರಸನು - 1 ಅರಾದಿನ ಅರಸನು - 1
Цар орамски један; цар арадски један;
15 ೧೫ ಲಿಬ್ನದ ಅರಸನು - 1 ಅದುಲ್ಲಾಮಿನ ಅರಸನು - 1
Цар од Ливне један; цар одоламски један;
16 ೧೬ ಮಕ್ಕೇದದ ಅರಸನು - 1 ಬೇತೇಲಿನ ಅರಸನು - 1
Цар макидски један; цар ветиљски један;
17 ೧೭ ತಪ್ಪೂಹದ ಅರಸನು - 1 ಹೇಫೆರಿನ ಅರಸನು - 1
Цар тифувски један; цар еферски један;
18 ೧೮ ಅಫೇಕದ ಅರಸನು - 1 ಲಷ್ಷಾರೋನಿನ ಅರಸನು - 1
Цар афечки један; цар саронски један;
19 ೧೯ ಮಾದೋನಿನ ಅರಸನು - 1 ಹಾಚೋರಿನ ಅರಸನು - 1
Цар мадонски један; цар асорски један;
20 ೨೦ ಶಿಮ್ರೋನ್ಮೆರೋನಿನ ಅರಸನು - 1 ಅಕ್ಷಾಫಿನ ಅರಸನು - 1
Цар симрон-меронски један; цар ахсавски један;
21 ೨೧ ತಾನಕದ ಅರಸನು - 1 ಮೆಗಿದ್ದೋವಿನ ಅರಸನು - 1
Цар танашки један; цар мегидски један;
22 ೨೨ ಕೆದೆಷಿನ ಅರಸನು - 1 ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು - 1
Цар кедески један; цар јокнеамски код Кармела један;
23 ೨೩ ದೋರ್ ಪ್ರಾಂತ್ಯದ ದೋರಿನ ಅರಸನು - 1 ಗಿಲ್ಗಾಲಿನ ಅರಸನು - 1
Цар дорски у Нафат-Дору један; цар гојимски у Галгалу један;
24 ೨೪ ತಿರ್ಚದ ಅರಸನು - 1 ಒಟ್ಟು 31 ಮಂದಿ ಅರಸರು.
Цар тераски један. Свега тридесет и један цар.

< ಯೆಹೋಶುವನು 12 >