< ಯೆರೆಮೀಯನು 44 >

1 ಐಗುಪ್ತ ದೇಶದ ಮಿಗ್ದೋಲ್, ತಹಪನೇಸ್, ನೋಫ್ ಎಂಬ ಪಟ್ಟಣಗಳಲ್ಲಿಯೂ, ಪತ್ರೋಸ್ ಪ್ರಾಂತ್ಯದಲ್ಲಿಯೂ ವಾಸಮಾಡುತ್ತಿದ್ದ ಯೆಹೂದ್ಯರೆಲ್ಲರ ವಿಷಯವಾಗಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ,
Реч која дође Јеремији за све Јудејце који живљаху у земљи мисирској, који живљаху у Мигдолу и у Тафнесу и у Нофу и у земљи Патросу, говорећи:
2 “ಇಸ್ರಾಯೇಲಿನ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಾನು ಯೆರೂಸಲೇಮಿಗೂ, ಯೆಹೂದದ ಎಲ್ಲಾ ಊರುಗಳಿಗೂ ಬರಮಾಡಿದ ಕೇಡನ್ನು ನೀವು ನೋಡಿದ್ದೀರಷ್ಟೆ.
Овако вели Господ над војскама Бог Израиљев: Ви видесте све зло што наведох на Јерусалим и на све градове Јудине, и ево су данас пусти и нема никога да живи у њима,
3 ಆಹಾ, ಅಲ್ಲಿನವರು ತಮಗೂ, ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ತಿಳಿಯದ ಅನ್ಯದೇವತೆಗಳಿಗೆ ಧೂಪಹಾಕಿ ಸೇವೆಮಾಡುವುದಕ್ಕೆ ಆತುರಪಟ್ಟು ನನ್ನನ್ನು ಕೆಣಕಬೇಕೆಂದೇ ಈ ದುರಾಚಾರವನ್ನು ನಡೆಸಿದ್ದರಿಂದ ಆ ಸ್ಥಳಗಳು ಹಾಳಾದವು, ಅಲ್ಲಿ ಯಾರೂ ವಾಸಿಸರು.
За злоћу њихову коју чинише да би ме гневили ходећи да каде и служе другим боговима, којих не знаше ни они ни ви ни оци ваши.
4 ನಾನು ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ಅವರ ಬಳಿಗೆ ತಡ ಮಾಡದೆ ಕಳುಹಿಸುತ್ತಾ, ‘ಆಹಾ! ನಾನು ಹೇಸುವ ಈ ಅಸಹ್ಯಕಾರ್ಯವನ್ನು ಮಾಡಬೇಡಿರಿ’ ಎಂದು ಪ್ರಕಟಿಸುತ್ತಾ ಬಂದರೂ,
И слах к вама све слуге своје пророке зарана једнако говорећи: Не чините тај гад на који мрзим.
5 ಅವರು ಕಿವಿಗೊಟ್ಟು ಕೇಳಲಿಲ್ಲ, ಅನ್ಯದೇವತೆಗಳಿಗೆ ಧೂಪಹಾಕುವುದನ್ನು ನಿಲ್ಲಿಸಲಿಲ್ಲ, ತಮ್ಮ ದುರಾಚಾರವನ್ನು ಬಿಡಲಿಲ್ಲ.
Али не послушаше нити пригнуше уха свог да се врате од злоће своје, да не каде другим боговима.
6 ಆದಕಾರಣ ನನ್ನ ಉಗ್ರರೋಷಾಗ್ನಿಯು ಸುರಿದು ಯೆಹೂದದ ಊರುಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಧಗಧಗಿಸಿತು; ಅವು ಈಗಲೂ ಹಾಳು ಪಾಳಾಗಿವೆ.
Зато се изли јарост моја и гнев мој, и разгоре се у градовима Јудиним и по улицама јерусалимским, те посташе развалине и пустош, као што се види данас.
7 ಹೀಗಿರಲು ಸೇನಾಧೀಶ್ವರಸ್ವಾಮಿಯೂ ಇಸ್ರಾಯೇಲಿನ ದೇವರೂ ಆದ ಯೆಹೋವನು ಈಗ ಇಂತೆನ್ನುತ್ತಾನೆ, ಈ ದೊಡ್ಡ ಕೇಡನ್ನು ನಿಮಗೆ ನೀವೇ ಉಂಟುಮಾಡಿಕೊಳ್ಳುವುದೇಕೆ? ಈ ದುರಾಚಾರದ ನಿಮಿತ್ತ ಯೆಹೂದದಲ್ಲಿರುವ ಗಂಡಸರು, ಹೆಂಗಸರು, ಮಕ್ಕಳು, ಮೊಲೆಕೂಸುಗಳು ನಿರ್ಮೂಲವಾಗುವರು, ನಿಮ್ಮಲ್ಲಿ ಯಾರೂ ಉಳಿಯುವುದಿಲ್ಲ.
А сада овако вели Господ Бог над војскама, Бог Израиљев: зашто сами себи чините тако велико зло да истребите из Јуде људе и жене, децу и која сисају, да не остане у вас остатка,
8 ಪ್ರವಾಸಿಗಳಾಗಿ ನೀವು ಬಂದಿರುವ ಐಗುಪ್ತ ದೇಶದಲ್ಲಿ ಅನ್ಯದೇವತೆಗಳಿಗೆ ಧೂಪಹಾಕುವ ದುಷ್ಕೃತ್ಯವನ್ನು ನಡೆಸುತ್ತಾ ನನ್ನನ್ನು ಕೆಣಕುವುದರಿಂದ ನೀವು ನಿರ್ಮೂಲರಾಗಿ ಸಕಲ ಭೂರಾಜ್ಯಗಳ ಶಾಪ ಮತ್ತು ದೂಷಣೆಗಳಿಗೆ ಗುರಿಯಾಗುವಿರಿ.
Гневећи ме делима руку својих, кадећи другим боговима у земљи мисирској, у коју дођосте да се станите да бисте се истребили и постали клетва и руг у свих народа на земљи.
9 ನಿಮ್ಮ ಪೂರ್ವಿಕರು, ಯೆಹೂದದ ಅರಸರು, ಅವರ ಹೆಂಡತಿಯರು, ನೀವು ಮತ್ತು ನಿಮ್ಮ ಹೆಂಡತಿಯರು ಇವರೆಲ್ಲರೂ ಯೆಹೂದ ದೇಶದಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ನಡೆಸಿದ ದುರಾಚಾರಗಳನ್ನು ಮರೆತುಬಿಟ್ಟಿರೋ?
Јесте ли заборавили зла отаца својих и зла царева Јудиних и зла жена њихових, и своја зла и зла жена својих, која чинише у земљи Јудиној и по улицама јерусалимским?
10 ೧೦ ಅವರು ಇಂದಿನವರೆಗೂ ತಗ್ಗಲಿಲ್ಲ, ನನಗೆ ಭಯಪಡಲಿಲ್ಲ; ನಾನು ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ನೇಮಿಸಿದ ನಿಯಮನಿಷ್ಠೆಗಳನ್ನು ಅನುಸರಿಸಿ ನಡೆಯಲೂ ಇಲ್ಲ.
Не покорише се до данас нити се побојаше, нити ходише по мом закону и уредбама мојим, које ставих пред вас и пред оце ваше.
11 ೧೧ “ಆದಕಾರಣ ಇಸ್ರಾಯೇಲಿನ ದೇವರೂ, ಸೇನಾಧೀಶ್ವರನು ಆದ ಯೆಹೋವನು ಹೀಗೆನ್ನುತ್ತಾನೆ, ಆಹಾ, ಯೆಹೂದವನ್ನೆಲ್ಲಾ ನಿರ್ಮೂಲಮಾಡುವೆನು, ಕೇಡಿಗಾಗಿಯೇ ನಿಮ್ಮ ಮೇಲೆ ದೃಷ್ಟಿಯಿಡುವೆನು.
За то овако вели Господ над војскама, Бог Израиљев: ево, ја ћу вам обратити лице своје на зло, да истребим све Јудејце.
12 ೧೨ ಐಗುಪ್ತಕ್ಕೆ ಹೋಗಿ ಅಲ್ಲಿ ಪ್ರವಾಸಿಸಲು ಹಟಹಿಡಿದ ಯೆಹೂದದ ಉಳಿದ ಜನರನ್ನು ನಾನು ಹಿಡಿದು ನಾಶಮಾಡುವೆನು; ಐಗುಪ್ತದಲ್ಲೇ ಒರಗಿ ಹೋಗುವರು; ಖಡ್ಗ ಮತ್ತು ಕ್ಷಾಮಗಳಿಂದ ನಾಶವಾಗುವರು; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಖಡ್ಗ ಮತ್ತು ಕ್ಷಾಮಗಳಿಂದ ಸತ್ತು ಅಪವಾದ, ಶಾಪ, ನಿಂದೆಗೆ ಮತ್ತು ದೂಷಣೆಗಳಿಗೆ ಗುರಿಯಾಗುವರು.
И узећу остатак Јудин, који окрену лице своје да иде у земљу мисирску да се онде стани, и изгинуће сви; у земљи ће мисирској пасти и изгинути од мача и од глади, мало и велико, изгинуће од мача и од глади, и биће уклин и чудо и проклетство и руг.
13 ೧೩ ನಾನು ಯೆರೂಸಲೇಮಿನವರನ್ನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ದಂಡಿಸಿದಂತೆ ಐಗುಪ್ತದಲ್ಲಿ ವಾಸಿಸುವವರನ್ನೂ ದಂಡಿಸುವೆನು.
И походићу оне који наставају у земљи мисирској, као што сам походио Јерусалим, мачем, глађу и помором;
14 ೧೪ ಐಗುಪ್ತಕ್ಕೆ ಹೋಗಿ ಪ್ರವಾಸ ಮಾಡುತ್ತಿರುವ ಯೆಹೂದದ ಉಳಿದ ಜನರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಉಳಿದು ಅಲ್ಲಿಂದ ತಪ್ಪಿಸಿಕೊಂಡು ಯೆಹೂದಕ್ಕೆ ಹಿಂದಿರುಗುವುದಿಲ್ಲ; ಓಡಿಬರುವ ಸ್ವಲ್ಪ ಜನರೇ ಹೊರತು ಯಾರೂ ಹಿಂದಿರುಗುವುದಿಲ್ಲ.
И ниједан од остатка Јудиног, што отидоше у земљу мисирску да се онде стане, неће утећи нити се избавити да се врате у земљу Јудину, у коју се желе вратити да се населе; јер се неће вратити, осим који побегну.
15 ೧೫ “ಆಗ ತಮ್ಮ ಹೆಂಡತಿಯರು ಅನ್ಯದೇವತೆಗಳಿಗೆ ಧೂಪಹಾಕುತ್ತಿದ್ದರೆಂದು ತಿಳಿದುಕೊಂಡಿದ್ದ ಗಂಡಸರು, ಅಲ್ಲಿ ದೊಡ್ಡ ಗುಂಪಾಗಿ ನಿಂತುಕೊಂಡಿದ್ದ ಹೆಂಗಸರು ಅಂತು ಐಗುಪ್ತದಲ್ಲಿಯೂ, ಪತ್ರೋಸಿನಲ್ಲಿಯೂ ವಾಸವಾಗಿದ್ದವರೆಲ್ಲರೂ ಯೆರೆಮೀಯನಿಗೆ” ಹೀಗೆ ಹೇಳಿದರು,
Тада одговорише Јеремији сви људи који знаху да жене њихове каде другим боговима, и све жене, којих стајаше онде велик збор, и сав народ што живљаше у земљи мисирској, у Патросу, говорећи:
16 ೧೬ “ಯೆಹೋವನ ಹೆಸರಿನಿಂದ ನೀನು ನಮಗೆ ನುಡಿದ ಮಾತುಗಳನ್ನು ಕೇಳುವುದಿಲ್ಲ.
Шта нам каза у име Господње, нећемо те послушати;
17 ೧೭ ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುವುದಿಲ್ಲ ಎಂದು ನಾವು ಬಾಯಿಬಿಟ್ಟು ಹೇಳಿದ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುವೆವು. ಮೊದಲು ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇಮಿನ ಬೀದಿಗಳಲ್ಲಿ ನಾವೂ ಮತ್ತು ನಮ್ಮ ಪೂರ್ವಿಕರೂ ನಮ್ಮ ಅರಸರೂ, ನಮ್ಮ ಪ್ರಧಾನರೂ ಹೀಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬಾ ಉಂಡು ಸುಖಪಡುತ್ತಿದ್ದೆವು.
Него ћемо чинити све што је изашло из наших уста кадећи царици небеској и лијући јој наливе, као што смо чинили ми и оци наши, цареви наши и кнезови наши по градовима Јудиним и по улицама јерусалимским, јер бејасмо сити хлеба и беше нам добро и зло не виђасмо.
18 ೧೮ ಆದರೆ ನಾವು ಗಗನದ ಒಡತಿಗೆ ಧೂಪಹಾಕುವುದನ್ನೂ ಪಾನವನ್ನು ನೈವೇದ್ಯವಾಗಿ ಸುರಿಯುವುದನ್ನೂ ನಿಲ್ಲಿಸಿಬಿಟ್ಟಂದಿನಿಂದ ಎಲ್ಲಾ ಕೊರತೆಗೂ ಗುರಿಯಾಗಿ ಖಡ್ಗ, ಕ್ಷಾಮಗಳಿಂದ ನಾಶವಾಗುತ್ತಿದ್ದೇವೆ.
А од кад престасмо кадити царици небеској и лити јој наливе, ништа немамо и гинемо од мача и од глади.
19 ೧೯ ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುತ್ತಿದ್ದಾಗ ನಾವು ಆಕೆಯ ಪೂಜೆಗಾಗಿ ಆಕೆಯ ಆಕಾರವಾದ ಹೋಳಿಗೆಗಳನ್ನು ಮಾಡಿ ಪಾನದ್ರವ್ಯವನ್ನು ಅರ್ಪಿಸಿದ್ದು ನಮ್ಮ ಗಂಡಂದಿರಿಗೆ ಒಪ್ಪಿಗೆಯಾಗಿರಲಿಲ್ಲವೋ?” ಎಂದರು.
И кад кадимо царици небеској и лијемо јој наливе, еда ли јој без главара својих печемо колаче служећи јој и лијемо јој наливе?
20 ೨೦ ಆಗ ಯೆರೆಮೀಯನು ಗಂಡಸರಿಗೂ, ಹೆಂಗಸರಿಗೂ ಅಂತು ತನಗೆ ಆ ಉತ್ತರಕೊಟ್ಟ ಎಲ್ಲಾ ಜನರಿಗೂ,
Тада рече Јеремија свему народу, људима и женама, и свему народу, који му онако одговорише, говорећи:
21 ೨೧ “ನೀವು, ನಿಮ್ಮ ಪೂರ್ವಿಕರು, ನಿಮ್ಮ ಅರಸರು, ನಿಮ್ಮ ಪ್ರಧಾನರು, ಸಾಮಾನ್ಯ ಜನರು, ನೀವೆಲ್ಲರೂ ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇಮಿನ ಬೀದಿಗಳಲ್ಲಿ ಹಾಕಿದ ಧೂಪವು ಯೆಹೋವನ ನೆನಪಿನಲ್ಲಿ ಇಲ್ಲವೋ, ಅದು ಆತನ ಜ್ಞಾಪಕಕ್ಕೆ ಬರಲಿಲ್ಲವೋ?
Еда ли се не опомену Господ када, којим кадисте у градовима Јудиним и по улицама јерусалимским ви и оци ваши, цареви ваши и кнезови ваши и народ земаљски? И не дође ли Му у срце?
22 ೨೨ ನೀವು ನಡೆಸಿದ ದುರಾಚಾರಗಳನ್ನೂ, ಅಸಹ್ಯಕಾರ್ಯಗಳನ್ನೂ ಯೆಹೋವನು ಇನ್ನು ಸಹಿಸಲಾರದೆ ಹೋದುದರಿಂದ ನಿಮ್ಮ ದೇಶವು ಹಾಳುಬಿದ್ದು ಜನವಿಲ್ಲದೆ ನಾಶಕ್ಕೂ, ಶಾಪಕ್ಕೂ ಆಸ್ಪದವಾಯಿತು; ಈಗಲೂ ಹಾಗೆಯೇ ಇದೆ.
И не може Господ више подносити злоћу дела ваших и гадове које чинисте, те земља ваша поста пустош и чудо и проклетство, да нико на живи у њој, како се види данас.
23 ೨೩ ನೀವು ಯೆಹೋವನ ಮಾತನ್ನು ಕೇಳದೆ ಆತನ ಧರ್ಮಶಾಸ್ತ್ರವನ್ನೂ, ನಿಬಂಧನೆಗಳನ್ನೂ, ಕಟ್ಟಳೆಗಳನ್ನೂ ಅನುಸರಿಸದೆ ಆತನಿಗೆ ಪಾಪ ಮಾಡಿ ಅನ್ಯದೇವತೆಗಳಿಗೆ ಧೂಪಹಾಕಿದ್ದರಿಂದಲೇ ಇಂಥಾ ಕೇಡು ನಿಮಗೆ ಸಂಭವಿಸಿದೆ” ಎಂದನು.
Зато што кадисте и што грешисте Господу и не слушасте глас Господњи, и по закону Његовом и уредбама Његовим и сведочанствима Његовим не ходисте, зато вас задеси ово зло, како се види данас.
24 ೨೪ ಇದಲ್ಲದೆ ಯೆರೆಮೀಯನು ಹೆಂಗಸರಿಗೂ, ಎಲ್ಲಾ ಜನರಿಗೂ ಹೀಗೆ ಹೇಳಿದನು, “ಐಗುಪ್ತದಲ್ಲಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ.
Још рече Јеремија свему народу и свим женама: Чујте реч Господњу, сви Јудејци, који сте у земљи мисирској.
25 ೨೫ ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುವೆವು ಎಂದು ನಾವು ಮಾಡಿಕೊಂಡ ಹರಕೆಗಳನ್ನು ಖಂಡಿತವಾಗಿ ತೀರಿಸುವೆವು ಎಂಬುದಾಗಿ ನೀವೂ, ನಿಮ್ಮ ಹೆಂಡತಿಯರೂ ಬಾಯಿಂದ ಪ್ರತಿಜ್ಞೆಮಾಡಿ ಕೈಯಿಂದ ನೆರವೇರಿಸಿದ್ದೀರಲ್ಲಾ; ನಿಮ್ಮ ಹರಕೆಗಳನ್ನು ಖಂಡಿತವಾಗಿ ತೀರಿಸಿರಿ, ನೆರವೇರಿಸೇ ನೆರವೇರಿಸಿರಿ!
Овако вели Господ над војскама, Бог Израиљев, говорећи: ви и жене ваше рекосте устима својим и рукама својим извршисте говорећи: Извршаваћемо завете своје што заветовасмо кадећи царици небеској и лијући јој наливе. Доиста, испунисте завете своје и извршисте.
26 ೨೬ ಐಗುಪ್ತದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ; ಯೆಹೋವನು ಇಂತೆನ್ನುತ್ತಾನೆ, ‘ಆಹಾ, ಕರ್ತನಾದ ಯೆಹೋವನ ಜೀವದಾಣೆ ಎಂದು ನನ್ನ ಹೆಸರನ್ನು ಬಾಯಿಂದ ಎತ್ತಲಿಕ್ಕೆ ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನು ಇರುವುದಿಲ್ಲ ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆಯಿಟ್ಟಿದ್ದೇನೆ.
Зато чујте Јудејци реч Господњу, сви Јудејци који станујете у земљи мисирској: ево, ја се заклињем великим именом својим, вели Господ, да се име моје неће више изрицати устима ни једног Јудејца у свој земљи мисирској да би рекао: тако да је жив Господ Господ!
27 ೨೭ ಇಗೋ, ಇವರಿಗೆ ಮೇಲನ್ನಲ್ಲ, ಕೇಡನ್ನೇ ಮಾಡಬೇಕೆಂದು ಎಚ್ಚರಗೊಂಡಿದ್ದೇನೆ; ಐಗುಪ್ತದಲ್ಲಿನ ಎಲ್ಲಾ ಯೆಹೂದ್ಯರು ಖಡ್ಗ, ಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು.
Ево, ја ћу пазити на њих зла ради, не добра ради, и Јудејци који су у земљи мисирској, сви ће гинути од мача и од глади, докле их не буде ни једног.
28 ೨೮ ಖಡ್ಗಕ್ಕೆ ತಪ್ಪಿಸಿಕೊಂಡವರು ಸ್ವಲ್ಪ ಜನ ಮಾತ್ರವೇ ಆಗಿ ಐಗುಪ್ತದಿಂದ ಯೆಹೂದಕ್ಕೆ ಹಿಂದಿರುಗುವರು; ಆಗ ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದದ ಉಳಿದ ಜನರೆಲ್ಲರೂ ನನ್ನ ಮಾತು ನಡೆಯುವುದೋ ಅಥವಾ ತಮ್ಮ ಮಾತು ನಡೆಯುವುದೋ ಎಂದು ತಿಳಿದುಕೊಳ್ಳುವರು.
А који утеку од мача, вратиће се из земље мисирске у земљу Јудину, мало њих, јер сав остатак Јудин, што отидоше у земљу мисирску да се онде настане, познаће чија ће се реч навршити, моја или њихова.
29 ೨೯ ನಾನು ನಿಮ್ಮನ್ನು ಈ ಸ್ಥಳದಲ್ಲಿ ದಂಡಿಸುವೆನು ಎಂಬುದಕ್ಕೆ ಒಂದು ಗುರುತು ಕಾಣುವುದು; ನನ್ನ ಮಾತುಗಳು ಈಡೇರಿ ನಿಮಗೆ ಕೇಡನ್ನು ಉಂಟುಮಾಡುವೆನು ಎಂಬುದಾಗಿ ಅದರಿಂದಲೇ ನಿಮಗೆ ತಿಳಿದುಬರುವುದು.
А ово да вам је знак, говори Господ, да ћу вас походити на том месту да знате да ће се доиста испунити речи моје вама на зло;
30 ೩೦ ಅದೇನೆಂದರೆ, ಇಗೋ ನಾನು ಯೆಹೂದದ ಅರಸನಾದ ಚಿದ್ಕೀಯನನ್ನು ಅವನ ಪ್ರಾಣ ಹುಡುಕುತ್ತಿದ್ದ ಶತ್ರುವಾದ ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನ ಕೈಗೆ ಕೊಟ್ಟಂತೆ ಐಗುಪ್ತದ ಅರಸನಾದ ಫರೋಹ ಹೊಫ್ರನನ್ನು ಅವನ ಪ್ರಾಣ ಹುಡುಕುವ ಶತ್ರುಗಳ ಕೈಗೆ ಕೊಡುವೆನು; ಇದು ಯೆಹೋವನಾದ ನನ್ನ ನುಡಿ’” ಎಂಬುದೇ.
Овако вели Господ: Ево, ја ћу дати Фараона Вафрија, цара мисирског, у руке непријатељима његовим и у руке оним који траже душу његову, као што сам дао Седекију цара Јудиног у руке Навуходоносору цару вавилонском, непријатељу његовом и који тражаше душу његову.

< ಯೆರೆಮೀಯನು 44 >