< ಯೆಶಾಯನು 44 >

1 ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಇಸ್ರಾಯೇಲೇ, ಈಗ ಕೇಳು:
Kodwa khathesi zwana, Jakobe nceku yami, lawe Israyeli engikukhethileyo.
2 ನಿನ್ನನ್ನು ನಿರ್ಮಾಣಮಾಡಿ, ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯ ಮಾಡುವವನಾದ ಯೆಹೋವನು ಹೀಗೆನ್ನುತ್ತಾನೆ, “ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ!
Itsho njalo INkosi umenzi wakho lombumbi wakho kusukela esiswini, ezakusiza: Ungesabi, Jakobe, nceku yami, lawe Jeshuruni engikukhethileyo.
3 ಏಕೆಂದರೆ ಬತ್ತಿದ ಭೂಮಿಯಲ್ಲಿ ಮಳೆಗರೆದು ಒಣನೆಲದಲ್ಲಿ ಕಾಲುವೆಗಳನ್ನು ಹರಿಸುವೆನು, ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನು, ನಿನ್ನ ಸಂತತಿಯವರ ಮೇಲೆ ನನ್ನ ಆಶೀರ್ವಾದವನ್ನು ಸುರಿಸುವೆನು.
Ngoba ngizathela amanzi phezu kwakhe owomileyo, lezikhukhula emhlabathini owomileyo; ngizathela umoya wami phezu kwenzalo yakho, lesibusiso sami phezu kwembewu yakho.
4 ನೀರಿನ ಕಾಲುವೆಗಳ ಬಳಿಯಲ್ಲಿ ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿಯಾಗುವರು.
Bazahluma phakathi kotshani, njengeminyezane ngasezifuleni zamanzi.
5 (ಅನ್ಯಜನರಲ್ಲಿ) ಒಬ್ಬನು, ‘ನಾನು ಯೆಹೋವನ ಭಕ್ತನು’ ಎಂದು ಹೇಳಿಕೊಳ್ಳುವನು. ಇನ್ನೊಬ್ಬನು, ‘ನಾನು ಯಾಕೋಬ್ಯನ ಹೆಸರಿನವನು’ ಮತ್ತೊಬ್ಬನು ತನ್ನ ಕೈಯ ಮೇಲೆ, ‘ದಾಸನು’ ಎಂದು ಬರೆದುಕೊಂಡು ಇಸ್ರಾಯೇಲ್ ಎಂಬ ಬಿರುದನ್ನು ಧರಿಸಿಕೊಳ್ಳುವನು.”
Omunye uzakuthi: Mina ngingoweNkosi; lomunye azibize ngebizo likaJakobe, lomunye abhale esandleni sakhe ukuthi: NgingoweNkosi; azibonge ngebizo likaIsrayeli.
6 ಇಸ್ರಾಯೇಲರ ಅರಸನೂ, ವಿಮೋಚಕನೂ ಆಗಿರುವ ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, “ನಾನೇ ಆದಿಯೂ, ನಾನೇ ಅಂತ್ಯವೂ. ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.
Utsho njalo uJehova, inkosi yakoIsrayeli, loMhlengi wakhe, iNkosi yamabandla: Ngingowokuqala njalo ngingowokucina; njalo ngaphandle kwami kakho uNkulunkulu.
7 ನಾನು ಪುರಾತನ ಕಾಲದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಯಾರು ಪ್ರಕಟಿಸಿಕೊಂಡಿದ್ದಾರೆ? ಅಂಥವರಿದ್ದರೆ ನನ್ನೆದುರಿಗೆ ಹೇಳಿ ಸ್ಥಾಪಿಸಲಿ. ಇಲ್ಲವೆ ಮುಂದಿನವುಗಳನ್ನು ಈಗ ತಿಳಿಸಲಿ, ಭವಿಷ್ಯತ್ತುಗಳನ್ನು ಹೇಳಲಿ.
Njalo ngubani ongabiza njengami, akumemezele, angihlelele khona, kusukela ngimisa abantu bendulo? Lezinto ezizayo, lezizakuza, kabazimemezele kubo.
8 ಹೆದರಬೇಡಿರಿ, ಭಯಪಡಬೇಡಿರಿ! ನಾನು ಪೂರ್ವದಿಂದಲೂ ನಿಮಗೆ ಹೇಳಿ ಪ್ರಕಟಿಸಿಕೊಂಡೆನಷ್ಟೆ. ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರಿದ್ದಾನೋ? ಇನ್ನು ಯಾವ ಶರಣನೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.”
Lingatshaywa luvalo, lingesabi; kangikuzwisanga yini kusukela ngalesosikhathi, ngakumemezela? Njalo lina lingabafakazi bami. Kukhona yini uNkulunkulu ngaphandle kwami? Yebo, kalikho elinye iDwala; kangilazi.
9 ವಿಗ್ರಹ ಕೆತ್ತುವವರೆಲ್ಲಾ ನಿರರ್ಥಕರು, ಅವರ ಇಷ್ಟದ ವಿಗ್ರಹಗಳು ಯಾವುದಕ್ಕೂ ಉಪಯೋಗವಿಲ್ಲ, ವಿಗ್ರಹಗಳ ಪಕ್ಷದ ಸಾಕ್ಷಿಗಾರರು ನೋಡುವವರಲ್ಲ, ಗ್ರಹಿಸುವವರಲ್ಲ, ಅವರು ನಾಚಿಕೆಗೆ ಗುರಿಯಾಗುವರು.
Bonke ababumba izithombe ezibaziweyo bayize, lezinto zabo ezithandekayo kazisizi lutho; labo bangabafakazi babo, kababoni, kabazi; ukuze bayangeke.
10 ೧೦ ದೇವತೆಯನ್ನು ರೂಪಿಸುವವರೂ, ವ್ಯರ್ಥವಿಗ್ರಹವನ್ನು ಎರಕ ಹೊಯ್ಯುವವರೂ ಎಂಥವರು?
Ngubani obumbe unkulunkulu, loba wabumba ngokuncibilikisa isithombe esibaziweyo esingasizi lutho?
11 ೧೧ ವಿಗ್ರಹ ಶರಣರೆಲ್ಲಾ ಆಶಾಭಂಗಪಡುವರು, ಅದನ್ನು ಕೆತ್ತಿದವರು ಮನುಷ್ಯಮಾತ್ರದವರೇ. ಅವರೆಲ್ಲರು ಒಟ್ಟುಗೂಡಿಕೊಂಡು ನಿಲ್ಲಲಿ. ಅವರು ಒಟ್ಟಿಗೆ ಹೆದರಿಕೊಂಡು ಲಜ್ಜೆಪಡುವರು.
Khangela, bonke abangane bakhe bazayangeka; lababazi bangababantu; kababuthane bonke, basukume; bazakwesaba, bayangeke kanyekanye.
12 ೧೨ ಕಮ್ಮಾರನು ತನ್ನ ಸಲಕರಣೆಗಳನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸಮಾಡುತ್ತಾ, ಚಮಟಿಕೆಗಳಿಂದ ಬಡಿದು ತೋಳಿನ ಬಲದಿಂದ ವಿಗ್ರಹವನ್ನು ರೂಪಿಸುವನು. ಅವನು ಹಸಿದು ಬಳಲುವನು, ನೀರಿಲ್ಲದೆ ದಣಿಯುವನು.
Umkhandi wensimbiukhanda ihloka, asebenze emalahleni, alibumbe ngezando, alisebenze ngamandla engalo yakhe; yebo, alambe, aze aphele amandla; kanathi manzi, aze adinwe.
13 ೧೩ ಬಡಗಿಯು ಮರಕ್ಕೆ ನೂಲು ಹಾಕಿ ಮೊಳೆಯಿಂದ ಗೆರೆಯೆಳೆದು ಬಾಚಿಗಳಿಂದ ಕೆತ್ತಿ, ಕೈವಾರದಿಂದ ಗುರುತಿಸಿ, ಅದು ಮನೆಯಲ್ಲಿ ವಾಸಿಸತಕ್ಕದ್ದಾಗಲೆಂದು ಮನುಷ್ಯನ ಆಕಾರಕ್ಕೆ ತಂದು ಮನುಷ್ಯನ ಅಂದದಂತೆ ರೂಪಿಸುವನು.
Umbazi welula intambo yokulinganisa, adwebe ngosungulo, asenze ngezancele, asidwebe ngekhampasi, asenze ngomfanekiso womuntu, ngokobuhle bomuntu, ukuze sihlale endlini.
14 ೧೪ ಅವನು ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುವನು, ತುರಾಯಿ, ಅಲ್ಲೋನ್ ಮರಗಳನ್ನು ತೆಗೆದುಕೊಳ್ಳುವನು. ವನವೃಕ್ಷಗಳನ್ನು ತನಗೋಸ್ಕರ ಬೆಳೆಯುವನು. ಅವನು ಪೀತದಾರವನ್ನು ನೆಡಲು, ಮಳೆಯು ಅದನ್ನು ಬೆಳೆಸುವುದು.
Uzigamulela imisedari, athathe umsayiphuresi lesihlahla se-okhi, aziqinisela zona phakathi kwezihlahla zegusu, ahlanyele ifiri, lezulu liyikhulise.
15 ೧೫ ಅದು ಸೌದೆಗಾಗುವುದು. ಅದರಿಂದ ಬೆಂಕಿಯನ್ನು ಉರಿಸಿ ಚಳಿಕಾಯಿಸಿಕೊಳ್ಳುವನು. ಅವನು ಬೆಂಕಿಯನ್ನು ಹಚ್ಚಿ ರೊಟ್ಟಿಯನ್ನು ಸುಡುವನು. ಅದರಲ್ಲೇ ಒಂದು ದೇವರನ್ನು ಮಾಡಿಕೊಂಡು ಪೂಜಿಸುವನು, ವಿಗ್ರಹವನ್ನು ಮಾಡಿ ಅದಕ್ಕೆ ಅಡ್ಡಬೀಳುವನು.
Kuzakuba-ke ngokomuntu ukuthi akubase, njalo uzathatha kukho, othe; yebo akubase, abhake isinkwa; yebo enze unkulunkulu, amkhonze, enze isithombe esibaziweyo, akhothame kuso.
16 ೧೬ ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು, ಅದರ ಮೇಲೆ ಮಾಂಸವನ್ನು ಸುಡುವನು. ಅದನ್ನು ತಿಂದು ತೃಪ್ತನಾಗುವನು. ತನ್ನನ್ನು ಕಾಯಿಸಿಕೊಳ್ಳುತ್ತಾ, “ಆಹಾ, ಬೆಂಕಿಯನ್ನು ಕಂಡೆ, ಬೆಚ್ಚಗಾಯಿತು” ಎಂದುಕೊಳ್ಳುವನು.
Atshise ingxenye yakho emlilweni; ngengxenye yakho adle inyama, ose amawoso asuthe; yebo, uyotha athi: Alala! ngiyakhudumala, ngiwubonile umlilo.
17 ೧೭ ಅದರಲ್ಲಿ ಉಳಿದ ಭಾಗವನ್ನು ತನ್ನ ದೇವರನ್ನಾಗಿಯೂ, ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ, “ನೀನೇ ನನ್ನ ದೇವರು, ನನ್ನನ್ನು ರಕ್ಷಿಸು” ಎಂದು ಪ್ರಾರ್ಥಿಸುವನು.
Njalo okuseleyo kwakho akwenze kube ngunkulunkulu, kube yisithombe sakhe esibaziweyo; akhothame kuso, akhonze, akhuleke kuso athi: Ngophula, ngoba ungunkulunkulu wami.
18 ೧೮ ಇಂಥವರು ಏನೂ ತಿಳಿಯದವರು, ಏನೂ ಗ್ರಹಿಸಲಾರದವರು ಏಕೆಂದರೆ ಅವರ ಕಣ್ಣು ಕಾಣದಂತೆಯೂ, ಹೃದಯ ಗ್ರಹಿಸದಂತೆಯೂ ಯೆಹೋವನು ಮುಚ್ಚಿಬಿಟ್ಟಿದ್ದಾನೆ.
Kabazanga, kabaqedisisanga; ngoba ebhade amehlo abo ukuze bangaboni; lenhliziyo zabo ukuze bangaqedisisi.
19 ೧೯ “ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು. ಹೌದು, ಅದರ ಕೆಂಡದಲ್ಲಿ ರೊಟ್ಟಿ ಮಾಡಿ ಮಾಂಸವನ್ನು ಸುಟ್ಟು ತಿಂದೆನಲ್ಲಾ, ಉಳಿದ ಭಾಗದಿಂದ ಅಸಹ್ಯವಾದ ವಿಗ್ರಹವನ್ನು ನಾನು ಮಾಡಲೋ? ಮರದ ತುಂಡಿಗೆ ಅಡ್ಡಬೀಳಬಹುದೋ?” ಎಂದುಕೊಳ್ಳುವಷ್ಟು ಜ್ಞಾನ ವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆ ತಾರರು.
Kakho ocabanga enhliziyweni yakhe, njalo kakulalwazi njalo kakulakuqedisisa kokuthi: Ngibasile ingxenye yakho emlilweni, yebo ngibhake isinkwa phezu kwamalahle akho, ngosa inyama, ngayidla; kambe ngizakwenza insali yakho isinengiso yini? Ngizakhothamela okwesihlahla yini?
20 ೨೦ ಅವನು ತಿನ್ನುವುದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿತಪ್ಪಿಸಿದ ಕಾರಣ, “ನನ್ನ ಕೈ ಸುಳ್ಳನ್ನು ಹಿಡಿದಿದೆಯಲ್ಲಾ” ಎಂದುಕೊಳ್ಳಲೂ ಆಗದು. ತನ್ನನ್ನು ರಕ್ಷಿಸಿಕೊಳ್ಳಲೂ ಆಗದು.
Udla umlotha; inhliziyo ekhohlisiweyo imphambule, okokuthi angekhulule umphefumulo wakhe njalo kathi: Kakulamanga yini esandleni sami sokunene?
21 ೨೧ ಯಾಕೋಬೇ, ಇಸ್ರಾಯೇಲೇ, ಈ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೋ, ನನ್ನ ಸೇವಕನಾಗಿದ್ದೀಯಲ್ಲವೇ. ಇಸ್ರಾಯೇಲೇ, ನಾನು ನಿನ್ನನ್ನು ನಿರ್ಮಿಸಿದೆನು, ನೀನು ನನ್ನ ಸೇವಕನು, ನಿನ್ನನ್ನು ಮರೆತುಬಿಡೆನು.
Khumbula lezizinto, Jakobe, lawe Israyeli, ngoba uyinceku yami; ngikubumbile, uyinceku yami. Wena Israyeli, kawuyikukhohlwa yimi.
22 ೨೨ ನಿನ್ನ ದ್ರೋಹಗಳನ್ನು ಮೋಡದಂತೆ ನಿವಾರಿಸಿದ್ದೇನೆ. ನಿನ್ನ ಪಾಪಗಳನ್ನು ಮಂಜಿನಂತೆ ಕರಗಿಸಿದ್ದೇನೆ, ನಿನ್ನನ್ನು ವಿಮೋಚಿಸಿದ್ದೇನೆ, ನನ್ನ ಕಡೆಗೆ ತಿರುಗಿಕೋ.
Ngesule iziphambeko zakho njengeyezi elinzima, lanjengeyezi izono zakho; buyela kimi, ngoba ngikuhlengile.
23 ೨೩ ಆಕಾಶವೇ, ಹರ್ಷಧ್ವನಿಗೈ, ಯೆಹೋವನು ತನ್ನ ಕಾರ್ಯವನ್ನು ನೆರವೇರಿಸಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭಟಿಸು. ಪರ್ವತಗಳೇ, ವನವೇ, ಸಕಲವನವೃಕ್ಷಗಳೇ, ಉತ್ಸಾಹಧ್ವನಿಮಾಡಿರಿ. ಏಕೆಂದರೆ ಯೆಹೋವನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾಯೇಲಿನ ರಕ್ಷಣೆಯಿಂದ ತನ್ನ ಮಹಿಮೆಯನ್ನು ಪ್ರಚುರಗೊಳಿಸುವನು.
Hlabelelani, lina mazulu, ngoba iNkosi ikwenzile; memezani, zindawo eziphansi zomhlaba; qhamukani lihlabele, zintaba, gusu, laso sonke isihlahla esiphakathi kwakho; ngoba iNkosi imhlengile uJakobe, yazidumisa koIsrayeli.
24 ೨೪ ನಿನ್ನನ್ನು ಗರ್ಭದಿಂದಲೂ ರೂಪಿಸುತ್ತಾ ಬಂದಿರುವ ನಿನ್ನ ವಿಮೋಚಕನಾದ ಯೆಹೋವನು ಹೀಗೆನ್ನುತ್ತಾನೆ, “ಸರ್ವವನ್ನು ಉಂಟುಮಾಡಿದ ಕರ್ತನಾದ ಯೆಹೋವನು ನಾನೇ, ನಾನೊಬ್ಬನೇ ಗಗನಮಂಡಲವನ್ನು ಹರಡಿ, ಭೂಮಂಡಲವನ್ನು ವಿಸ್ತರಿಸಿದ್ದೇನೆ.
Itsho njalo iNkosi, uMhlengi wakho, leyakubumba kwasesiswini: NgiyiNkosi eyenza zonke izinto; eyendlala amazulu, mina ngedwa; eyeneka umhlaba ngokwami;
25 ೨೫ ನಾನು ಕೊಚ್ಚಿಕೊಳ್ಳುವವರ ಶಕುನಗಳನ್ನು ನಿರರ್ಥಕಪಡಿಸಿ, ಕಣಿಹೇಳುವವರನ್ನು ಮರುಳುಗೊಳಿಸಿ, ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳಿವಳಿಕೆಯನ್ನು ಹುಚ್ಚುತನವಾಗ ಮಾಡುವೆನು.
efubisa izibonakaliso zabaqambimanga; yenze izanuse zihlanye; ebuyisela emuva abahlakaniphileyo; yenze ulwazi lwabo lube yibuthutha;
26 ೨೬ ನನ್ನ ಸೇವಕನ ಮಾತನ್ನು ಸ್ಥಾಪಿಸಿ ನನ್ನ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವವನಾಗಿದ್ದೇನೆ. ಯೆರೂಸಲೇಮಿಗೆ, ‘ನೀನು ಜನ ನಿವಾಸವಾಗುವಿ’ ಎಂದು ಯೆಹೂದದ ಪಟ್ಟಣಗಳಿಗೆ, ‘ಅವು ತಿರುಗಿ ಕಟ್ಟಲ್ಪಡುವವು, ಅಲ್ಲಿನ ಹಾಳು ಸ್ಥಳಗಳನ್ನು ನೆಟ್ಟಗೆ ಮಾಡುವೆನು’ ಎಂದು ಮುಂತಿಳಿಸಿ
eqinisa ilizwi lenceku yayo; ifeze amacebo ezithunywa zayo; ethi kuyo iJerusalema: Uzahlalwa; lemizini yakoJuda: Lizakwakhiwa; futhi ngizavusa amanxiwa ayo;
27 ೨೭ ಜಲರಾಶಿಗೆ, ‘ಬತ್ತಿಹೋಗು, ನಿನ್ನಲ್ಲಿ ಸೇರುವ ನದಿಗಳನ್ನು ಒಣಗಿಸುವೆನು’ ಎಂದು ನಾನು ಅಪ್ಪಣೆ ಕೊಡುವವನಾಗಿದ್ದೇನೆ.
etshoyo enzikini: Tshana; njalo ngizakomisa imifula yakho;
28 ೨೮ ಕೋರೆಷನ ವಿಷಯವಾಗಿ, ‘ಅವನು ನನ್ನ ಮಂದೆಯನ್ನು ಕಾಯುವವನು, ಯೆರೂಸಲೇಮು ಕಟ್ಟಲ್ಪಡಲಿ, ದೇವಸ್ಥಾನದ ಅಸ್ತಿವಾರವು ಹಾಕಲ್ಪಡಲಿ’ ಎಂದು ಹೇಳಿ, ‘ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸತಕ್ಕವನು’” ಎಂಬುದಾಗಿ ಮಾತನಾಡುವವನು ನಾನೇ.
etshoyo ngoKoresi: Ungumelusi wami, uzaphelelisa intokozo yami yonke; ithi lakuJerusalema: Kayakhiwe; lethempelini: Isisekelo sakho kasibekwe.

< ಯೆಶಾಯನು 44 >