< ಯೆಶಾಯನು 22 >

1 ದಿವ್ಯದರ್ಶನದ ಕಣಿವೆಯ ವಿಷಯವಾದ ದೈವೋಕ್ತಿ. ಯಾವ ಕಾರಣಕ್ಕಾಗಿ ನಿನ್ನ ಜನರೆಲ್ಲರೂ ಮಾಳಿಗೆಗಳನ್ನು ಹತ್ತಿದರು?
Бреме долини виђења. Шта ти је те си сва изашла на кровове?
2 ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಪಟ್ಟಣವೇ; ನಿನ್ನಲ್ಲಿ ಹತರಾದವರು ಕತ್ತಿಯಿಂದ ಸಾಯಲಿಲ್ಲ, ಅವರು ಯುದ್ಧದಲ್ಲಿ ಸತ್ತವರಲ್ಲ.
Граде пуни вике и вреве, граде весели! Твоји побијени нису побијени мачем нити погибоше у боју.
3 ನಿನ್ನ ಅಧಿಕಾರಿಗಳು ಒಟ್ಟಿಗೆ ಓಡಿ ಬಿಲ್ಲುಗಾರರಿಲ್ಲದೆ ಸೆರೆಯಾಗಿದ್ದಾರೆ; ದೂರದಿಂದ ಓಡುತ್ತಾ ಶತ್ರುವಿಗೆ ಸಿಕ್ಕಿದ ನಿನ್ನ ಜನರೆಲ್ಲರೊಂದಿಗೆ ಕಟ್ಟುಬಿದ್ದಿದ್ದಾರೆ.
Главари твоји узмакоше свиколики, повезаше их стрелци; шта се год нађе твојих, сви су повезани, ако и побегоше далеко.
4 ಹೀಗಿರಲು, “ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ, ಬಹು ಸಂಕಟದಿಂದ ನಾನು ಅಳುವೆನು, ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವುದಕ್ಕೆ ತವಕಗೊಳ್ಳದಿರಿ.
Зато рекох: Прођите ме се, да плачем горко; не трудите се да ме тешите за погибљу кћери народа мог.
5 ಸೇನಾಧೀಶ್ವರನಾದ ಯೆಹೋವನೆಂಬ ಕರ್ತನಿಂದ ದಿವ್ಯದರ್ಶನದ ಕಣಿವೆಗೆ ಗಲಿಬಿಲಿಯ ದಿನ, ತುಳಿದಾಟದ ದಿನ, ಭ್ರಾಂತಿಯ ದಿನ, ಕೋಟೆಯು ಒಡೆದು ಹೋಗಲು, ಕೂಗು ಬೆಟ್ಟವನ್ನು ಮುಟ್ಟುವ ದಿನ ಬಂದಿದೆ.
Јер је ово дан муке и потирања и сметње од Господа, Господа над војскама, у долини виђења; обалиће зид, и вика ће бити до горе.
6 ಏಲಾಮು ಕುದರೆಗಳ ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿಯನ್ನು ತೆಗೆದರು.
И Елам узе Тул, с колима људи и с коњицима, и Кир истаче штит.
7 ನಿಮ್ಮ ಪ್ರಿಯವಾದ ಕಣಿವೆಗಳಲ್ಲಿ ರಥಗಳು ತುಂಬಿದವು, ರಾಹುತರು ಬಾಗಿಲಿನ ಹತ್ತಿರ ವ್ಯೂಹಕಟ್ಟಿದರು.”
И красне долине твоје напунише се кола, и коњици се наместише пред вратима.
8 ಅವನು ಯೆಹೂದದ ರಕ್ಷಣೆಯ ಮುಸುಕನ್ನು ತೆಗೆದಿದ್ದಾನೆ. ಆ ದಿನದಲ್ಲಿ (ಲೆಬನೋನಿನ) ತೋಪು ಎನಿಸಿಕೊಳ್ಳುವ ಮಂದಿರದಲ್ಲಿನ ಆಯುಧಗಳ ಕಡೆಗೆ ದೃಷ್ಟಿಹಾಕಿದಿರಿ.
И одастре се застирач Јудин; и погледао си у то време на оружје у кући шумској.
9 ದಾವೀದನ ಪಟ್ಟಣದ ಕೋಟೆಯ ಒಡಕುಗಳು ಬಹಳವೆಂದು ನೋಡಿದಿರಿ; ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ.
И видесте да је много пролома на граду Давидовом, и сабрасте воду у доњем језеру.
10 ೧೦ ಯೆರೂಸಲೇಮಿನ ಮನೆಗಳನ್ನು ಲೆಕ್ಕಿಸಿ, ಪೌಳಿಗೋಡೆಯನ್ನು ಭದ್ರಪಡಿಸುವುದಕ್ಕೆ ಮನೆಗಳನ್ನು ಒಡೆದು ಹಾಕಿಬಿಟ್ಟಿರಿ.
И избројасте куће јерусалимске, и развалисте куће да утврдите зид.
11 ೧೧ ಎರಡು ಗೋಡೆಗಳ ನಡುವೆ ಹಳೆಯ ಕೊಳದ ನೀರಿಗಾಗಿ ತೊಟ್ಟಿಯನ್ನು ಮಾಡಿದ್ದೀರಿ; ಆದರೆ ಇದನ್ನೆಲ್ಲಾ ನಡೆಸಿದಾತನ ಕಡೆಗೆ ನೀವು ದೃಷ್ಟಿಯಿಡಲಿಲ್ಲ, ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಿಲ್ಲ.
И начинисте јаз међу два зида за воду из старог језера; али не погледасте на Оног који је то учинио и не обазресте се на Оног који је то одавно спремио.
12 ೧೨ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು, ಆ ದಿನದಲ್ಲಿ ನಿಮಗೆ ಆಜ್ಞಾಪಿಸಿದನು. ಕಣ್ಣೀರು ಸುರಿಸಿ, ಗೋಳಾಡಿರಿ, ತಲೆಬೋಳಿಸಿಕೊಳ್ಳಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ ಎಂಬುದೇ.
И зва вас Господ над војскама у онај дан да плачете и ридате и да скубете косе и припашете кострет;
13 ೧೩ ಆದರೆ ಇಗೋ, ಉಲ್ಲಾಸ, ಹರ್ಷ, ಕುರಿದನಗಳನ್ನು ಕಡಿಯುವುದು, ಮಾಂಸ ತಿನ್ನುವುದು, ದ್ರಾಕ್ಷಾರಸ ಕುಡಿಯುವುದು, ನಾಳೆ ಸಾಯುತ್ತೇವೆಂದು ಇಂದು ತಿಂದು ಕುಡಿಯುವುದೇ ನಿಮ್ಮ ಕಾರ್ಯ.
А гле, радост и весеље, убијају говеда, кољу овце, једу месо и пију вино говорећи: Једимо и пијмо, јер ћемо сутра умрети.
14 ೧೪ ಹೀಗಿರಲು, ಸೇನಾಧೀಶ್ವರನಾದ ಯೆಹೋವನು ನನ್ನ ಕಿವಿಗಳಲ್ಲಿ ಪ್ರಕಟಿಸಿದ್ದೇನೆಂದರೆ, “ನೀವು ಸಾಯುವ ತನಕ ಈ ಅಧರ್ಮಕ್ಕೆ ಪ್ರಾಯಶ್ಚಿತ್ತವು ಇಲ್ಲವೇ ಇಲ್ಲ ಎಂದು ಸೇನಾಧೀಶ್ವರನಾಗಿರುವ ಯೆಹೋವನೆಂಬ ಕರ್ತನಾದ ನಾನು ನುಡಿದಿದ್ದೇನೆ” ಎಂಬುದೇ.
Али Господ над војскама јави ми: Неће вам се опростити ово безакоње до смрти, вели Господ, Господ над војскама.
15 ೧೫ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ನುಡಿದಿದ್ದಾನೆ, “ಹೋಗು, ಅರಮನೆಯ ಮೇಲ್ವಿಚಾರಕನಾದ ಶೆಬ್ನನೆಂಬ ಈ ಅಧ್ಯಕ್ಷನ ಬಳಿಗೆ ಹೋಗಿ ಅವನಿಗೆ ಹೇಳತಕ್ಕದ್ದೇನೆಂದರೆ,
Овако вели Господ, Господ над војскама: Иди к оном ризничару, к Сомни, управитељу дворском,
16 ೧೬ ‘ಇಲ್ಲಿ ನಿನಗೇನು ಕೆಲಸ? ಇಲ್ಲಿ ನಿನಗಾಗಿ ಸಮಾಧಿಯನ್ನು ತೋಡಿಸಿಕೊಂಡಿರುವ ನೀನು ಯಾರು? ಉನ್ನತದಲ್ಲಿ ನಿನಗೆ ಸಮಾಧಿಯನ್ನು ಕೊರೆಸುತ್ತಾ, ಬಂಡೆಯನ್ನು ಕೆತ್ತಿಸಿ, ನಿನಗಾಗಿ ವಿಶ್ರಾಂತಿಯ ಸ್ಥಳವನ್ನು ತೋಡಿಸಿದಿ ಅಲ್ಲವೇ?’”
И реци му: Шта ћеш ти ту? И ко ти је ту, те си ту истесао себи гроб? Истесао си себи гроб на високом месту и спремио си себи стан у камену.
17 ೧೭ ಇಗೋ, ಬಲಿಷ್ಠ ಮನುಷ್ಯನಾದ ನಿನ್ನನ್ನು ಯೆಹೋವನು ಎಸೆಯುವನು, ನಿನ್ನನ್ನು ಕೆಳಗೆ ಎಸೆಯುವನು, ನಿನ್ನನ್ನು ಗಟ್ಟಿಯಾಗಿ ಹಿಡಿಯುವನು.
Ево, човече, Господ ће те бацити далеко и затрпаће те.
18 ೧೮ ನಿನ್ನನ್ನು ಚೆಂಡಿನಂತೆ ಸುತ್ತಿ ಸುತ್ತಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು; ದಣಿಯ ಮನೆಗೆ ಅವಮಾನ ತಂದವನೇ, ಅಲ್ಲೇ ಸಾಯುವಿ, ನಿನ್ನ ವೈಭವದ ರಥಗಳು ಅಲ್ಲೇ ಇರುವವು.
Завитлаће те и хитити као лопту у земљу пространу; онде ћеш умрети и онде ће бити кола славе твоје, срамото дому господара свог;
19 ೧೯ ಯೆಹೋವನಾದ ನಾನು, “ನಿನ್ನನ್ನು ಉದ್ಯೋಗದಿಂದ ತಳ್ಳಿಬಿಡುವೆನು, ನಿನ್ನ ಪದವಿಯಿಂದ ನಿನ್ನನ್ನು ಎಳೆದು ಹಾಕುವೆನು.
И сврћи ћу те с места твог, и истераћу те из службе твоје.
20 ೨೦ ಆ ದಿನದಲ್ಲಿ ನನ್ನ ಸೇವಕನೂ, ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆಯುವೆನು.
И у то време позваћу слугу свог Елијакима сина Хелкијиног;
21 ೨೧ ನಿನ್ನ ನಿಲುವಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟಿ, ನಿನ್ನ ಅಧಿಕಾರವನ್ನು ಅವನ ಕೈಗೆ ಕೊಡುವೆನು; ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಮನೆತನದವರಿಗೂ ತಂದೆಯಾಗುವನು.
И обући ћу му твоју хаљину, и твојим ћу га појасом опасати, и твоју ћу му власт дати у руку, и биће отац Јерусалимљанима и дому Јудином.
22 ೨೨ ನಾನು ದಾವೀದನ ಮನೆಯ ಬೀಗದ ಕೈಯನ್ನು ನಿನ್ನ ಹೊಣೆಗಾರಿಕೆಗೆ ಕೊಡುವೆನು; ಅವನು ತೆರೆದರೆ ಯಾರೂ ಮುಚ್ಚರು, ಮುಚ್ಚಿದರೆ ಯಾರೂ ತೆರೆಯರು.
И метнућу му кључ од дома Давидовог на раме: кад он отвори, неће нико затворити, и кад он затвори, неће нико отворити.
23 ೨೩ ಗಟ್ಟಿಯಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ವಂಶದವರಿಗೆ ವೈಭವವುಳ್ಳ ಸಿಂಹಾಸನವಾಗಿರುವನು.
И као клин углавићу га на тврдом месту, и биће престо славе дому оца свог;
24 ೨೪ ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ವೈಭವವನ್ನು ಅವರು ಆ ದಿನದಲ್ಲಿ ಅವನಿಗೆ ವಹಿಸುವರು” ಎಂಬುದೇ.
И о њему ће се вешати сва слава дома оца његовог, синова и унука, свакојаки судови, и најмањи, и чаше и мехови.
25 ೨೫ ಸೇನಾಧೀಶ್ವರನಾದ ಯೆಹೋವನು ಹೀಗೆ ನುಡಿಯುತ್ತಾನೆ. “ಗಟ್ಟಿಯಾದ ಸ್ಥಳದಲ್ಲಿ ಹೊಡೆದ ಮೊಳೆಯು ಆ ದಿನದಲ್ಲಿ ಕುಸಿದು ಹೋಗುವುದು; ಅದು ಬಡಿಯಲ್ಪಟ್ಟು ಬೀಳಲಾಗಿ ಅದರ ಮೇಲೆ ಇದ್ದ ಭಾರವೂ ತೆಗೆದು ಹಾಕಲ್ಪಡುವುದು ಯೆಹೋವನೇ ಇದನ್ನು ನುಡಿದಿದ್ದಾನೆ” ಎಂಬುದೇ.
У то време, вели Господ над војскама, помериће се клин углављен на тврдом месту, и извадиће се и пашће, и тежа што је на њему пропашће; јер Господ рече.

< ಯೆಶಾಯನು 22 >