< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 5 >

1 ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ವಂಶಾವಳಿ. ರೂಬೇನನು ಚೊಚ್ಚಲ ಮಗನಾಗಿದ್ದರೂ ಅವನು ತನ್ನ ತಂದೆಯ ಉಪಪತ್ನಿಯೊಂದಿಗೆ ಸಂಗಮಿಸಿ ಹಾಸಿಗೆಯನ್ನು ಹೊಲೆ ಮಾಡಿದ್ದರಿಂದ ಅವನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಕುಲಕ್ಕೆ ಕೊಡಲ್ಪಟ್ಟಿತು.
ရုဗင်သည် ဣသရေလ၏ သားဦးဖြစ်သော် လည်း၊ အဘအိပ်ရာကို ညစ်ညူးစေသောကြောင့်၊ သားဦး အရာကိုနှုတ်ပြီးလျှင်၊ ဣသရေလ၏သားဖြစ်သော ယောသပ်၏ သားတို့အား ပေးသည်ဖြစ်၍၊ သားစဉ် မြေးဆက်တို့ကို မှတ်သောအခါ၊ သားဦးအရာကို လိုက်၍ မမှတ်ရ။
2 ಆದರೆ ಯೆಹೂದನು ಎಲ್ಲಾ ಸಹೋದರರಲ್ಲಿ ಬಲಿಷ್ಠನಾದುದರಿಂದಲೂ, ರಾಜಾಧಿಕಾರವು ಇವನ ಕುಲಕ್ಕೆ ಬಂದುದರಿಂದಲೂ ಯೋಸೇಫನು ವಂಶಾವಳಿಯ ಪಟ್ಟಿಗಳಲ್ಲಿ ಚೊಚ್ಚಲ ಮಗನೆಂದು ಲಿಖಿತವಾಗಲಿಲ್ಲ. ಆದರೂ ಚೊಚ್ಚಲ ಮಗನಿಗೆ ಸಿಕ್ಕತಕ್ಕ ಪಾಲು ಅವನಿಗೆ ಸಿಕ್ಕಿತು.
ယုဒသည်လည်း ညီအစ်ကိုတို့တွင် လွန်ကဲ၍ သူ၏အမျိုးထဲက မင်းဖြစ်တတ်သော်လည်း၊ သားဦးအရာ ကိုမရ၊ ယောသပ်ရ၏။
3 ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
ဣသရေလ၏ သားဦးရုဗင်သားကား ဟာနုတ်၊ ဖာလု၊ ဟေဇရုံ၊ ကာမိတည်း။
4 ಯೋವೇಲನ ವಂಶಾವಳಿ: ಇವನ ಮಗ ಶೆಮಾಯ; ಶೆಮಾಯನ ಮಗ ಗೋಗ್.
ယောလသားကား ရှေမာယ၊ ရှေမာယသား ဂေါဂ၊ ဂေါဂသား ရှေမိ၊
5 ಗೋಗನ ಮಗ ಶಿಮ್ಮೀ; ಇವನ ಮಗ ಮೀಕ. ಮೀಕನ ಮಗ ರೆವಾಯ, ಇವನ ಮಗ ಬಾಳ್.
ရှေမိသားမိက္ခ၊ မိက္ခသားရာယ၊ ရာယသား ဗာလတည်း။
6 ಬಾಳನ ಮಗ ಬೇರ. ರೂಬೇನ್ಯರ ಪ್ರಭುಗಳಲ್ಲೊಬ್ಬನಾಗಿದ್ದ ಇವನನ್ನು ಅಶ್ಶೂರದ ಅರಸನಾದ ತಿಗ್ಲತ್ ಫಿಲ್ನೇಸರನು ಸೆರೆಯೊಯ್ದನು.
ဗာလသားကား၊ အာရှုရိရှင်ဘုရင် တိဂလတ် ပိလေသာ သိမ်းသွားသော ရုဗင်အမျိုး မင်းဗေရာတည်း။
7 ವಂಶಾವಳಿಯ ಪಟ್ಟಿಯಲ್ಲಿ ಇವನ ಗೋತ್ರ ಸಂಬಂಧಿಗಳಾಗಿ ಲಿಖಿತರಾದವರು ನಾಯಕನಾದ ಯೆಗೀಯೇಲ್, ಜೆಕರ್ಯ, ಬೆಳ ಇವರೇ. ಬೆಳನು ಅಜಾಜನ ಮಗ.
သူ၏ညီ ယေယေလနှင့် ဇာခရိတို့သည်လည်း၊ သားစဉ်မြေးဆက် စာရင်းယူသောအခါ အဆွေအမျိုး သူကြီးဖြစ်သတည်း။
8 ಬೆಳನು ಅಜಾಜನ ಮಗ. ಅಜಾಜನು ಶೆಮಯನ ಮಗ. ಶೆಮಯನು ಯೋವೇಲನ ಮಗ. ಯೋವೇಲ್ಯರು ಅರೋಯೇರಿನಿಂದ ನೆಬೋ ಮತ್ತು ಬಾಳ್ಮೆಯೋನ್ ಎಂಬ ಸ್ಥಳಗಳವರೆಗೂ ವಾಸಿಸುತ್ತಿದ್ದರು.
ထိုအတူ ယောလ၊ ရှေမ၊ အာဇတ်တို့မှ ဆင်း သက်သော ဗေလသည်လည်းမင်းဖြစ်လျက်၊ အာရော်မြို့ မှစ၍ နေဗောမြို့၊ ဗာလမောင်မြို့တိုင်အောင် နေရာ ကျယ်၏။
9 ಪೂರ್ವ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಈಚೆಯಲ್ಲಿರುವ ಅರಣ್ಯವು ಇವರ ಮೇರೆ. ಇವರಿಗೆ ಗಿಲ್ಯಾದ್ ದೇಶದಲ್ಲಿ ಅನೇಕ ದನ ಕುರಿಹಿಂಡುಗಳಿದ್ದವು.
ဂိလဒ်ပြည်၌ သိုးနွားများပြားသောကြောင့်၊ အရှေ့မျက်နှာ၌ ဥဖရတ်မြစ်နှင့်ဆိုင်သော တောဝင်ဝ တိုင်အောင် နေရာကျယ်၏။
10 ೧೦ ಇವರು ಸೌಲನ ಕಾಲದಲ್ಲಿ ಹಗ್ರೀಯರೊಡನೆ ಯುದ್ಧಮಾಡಿ, ಅವರನ್ನು ಸಂಹರಿಸಿ, ಗಿಲ್ಯಾದಿನ ಪೂರ್ವದಿಕ್ಕಿನ ಪ್ರಾಂತ್ಯಗಳಲ್ಲಿದ್ದ ಅವರ ಡೇರೆಗಳಲ್ಲಿ ವಾಸಮಾಡ ತೊಡಗಿದನು.
၁၀ရှောလုမင်းလက်ထက် ဟာဂရအမျိုးသားတို့ကို စစ်တိုက်၍ လုပ်ကြံသဖြင့်၊ ဂိလဒ်ပြည်အရှေ့ပိုင်း တရှောက်လုံးတွင် ဟာဂရ၏နေရာကို ယူရနေရာကျကြ ၏။
11 ೧೧ ರೂಬೇನ್ಯರ ಎದುರಿನಲ್ಲಿ ಬಾಷಾನ್ ಸೀಮೆಯ ಸಲ್ಕದವರೆಗೂ ವಾಸಿಸುತ್ತಿದ್ದವರು ಗಾದ್ ಕುಲದವರು:
၁၁သူတို့တဘက်တချက်၊ ဗာရှန်ပြည်တွင် သလကာမြို့တိုင်အောင် ဂဒ်အမျိုးသားတို့သည် နေရာ ကျကြ၏။
12 ೧೨ ಪ್ರಧಾನನಾದ ಯೋವೇಲ್, ಎರಡನೆಯವನಾದ ಶಾಫಾಮ್, ಯನ್ನೈ, ಬಾಷಾನಿನಲ್ಲಿರುವ ಶಾಫಾಟ್ ಇವರೂ ನಾಯಕರಾಗಿದ್ದರು.
၁၂ဗာရှန်ပြည်၌ အကြီးအကဲကား ယောလ၊ ထိုနောက် ရှာဖံ၊ ယာနဲ၊ ရှာဖတ်တည်း။
13 ೧೩ ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್ ಎಂಬ ಏಳು ಕುಟುಂಬಗಳೂ ಇವರ ಕುಲಸಂಬಂಧಿಗಳು.
၁၃သူတို့အဆွေအမျိုးချင်း ပေါက်ဘော်တော်သော သူကားမိက္ခေလ၊ မေရှုလံ၊ ရှေဘ၊ ယောရဲ၊ ယာခန်၊ ဇယာ၊ ယေဗာ၊ ပေါင်းခုနစ်ယောက်တည်း။
14 ೧೪ ಇವರು ಅಬೀಹೈಲನ ಮಕ್ಕಳು: ಅಬೀಹೈಲನು ಹೂರೀಯ ಮಗ, ಇವನು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ, ಇವನು ಮೀಕಾಯೇಲನ ಮಗ. ಮೀಕಾಯೇಲನು ಯೆಷೀಷೈಯನ ಮಗ, ಇವನು ಯಹ್ದೋವಿನ ಮಗ, ಇವನು ಅಹೀಬೂಜನ ಮಗ.
၁၄ထိုသူတို့သည် ဂုနိ၊ အာဗဒျေလ၊ ဗုဇာတိ၊ ယာဒေါ၊ ယေရှိရှဲ၊ မိက္ခေလ၊ ဂိလဒ်၊ ယာရော်၊ ဟုရိ၊ အဘိဟဲလအမျိုးအနွယ်ဖြစ်သတည်း။ ဂုနိကား ထိုအဆွေ အမျိုး၏ သူကြီဖြစ်၏။
15 ೧೫ ಅಹೀಬೂಜನು ಅಬ್ದೀಯೇಲನ ಮಗ. ಅಬ್ದೀಯೇಲನು ಗೂನೀಯನ ಮಗ. ಇವನು ಇವರ ಗೋತ್ರದ ಮೂಲಪುರುಷನು.
၁၅
16 ೧೬ ಗಾದ್ಯರು ಗಿಲ್ಯಾದಿನಲ್ಲಿಯೂ ಬಾಷಾನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ, ಶಾರೋನಿನ ಎಲ್ಲಾ ಹುಲ್ಲುಗಾವಲುಗಳಲ್ಲಿಯೂ ಅವುಗಳ ಮೇರೆಗಳಲ್ಲಿಯೂ ವಾಸಿಸುತ್ತಿದ್ದರು.
၁၆သူတို့သည် ဂိလဒ်ပြည်၊ ဗာရှန်ပြည်မြို့ရွာ၊ ရှာရုန်မြို့ပတ်လည်ပြည်စွန်းတိုင်အောင် နေရာကျကြ၏။
17 ೧೭ ಅವರೆಲ್ಲರೂ ಯೆಹೂದ್ಯರ ಅರಸನಾದ ಯೋತಾಮನ ಕಾಲದಲ್ಲಿಯೂ, ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಕಾಲದಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ದಾಖಲಿಸಲ್ಪಟ್ಟರು.
၁၇ဤသူအပေါင်းတို့သည် ယုဒရှင်ဘုရင် ယောသံ နှင့် ဣသရေလရှင်ဘုရင် ယေရောဗောင်လက်ထက် သားစဉ်မြေးဆက် စာရင်းဝင်ကြ၏။
18 ೧೮ ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರಲ್ಲಿ ರಣವೀರರೂ ಗುರಾಣಿ ಖಡ್ಗಗಳನ್ನು ಹಿಡಿಯುವವರೂ, ಬಿಲ್ಲನ್ನು ಬೊಗ್ಗಿಸುವವರೂ, ಯುದ್ಧ ನಿಪುಣರೂ ಆಗಿರುವ ನಲ್ವತ್ತನಾಲ್ಕು ಸಾವಿರದ ಏಳು ನೂರ ಅರವತ್ತು ಸೈನಿಕರಿದ್ದರು.
၁၈ရုဗင်အမျိုး၊ ဂဒ်အမျိုး၊ မနာရှေအမျိုးတဝက်တွင် ဒိုင်းနှင့် ထားကို ကိုင်၍ လေးနှင့် ပစ်တတ်သဖြင့်၊ စစ်မှု စစ်ရေးကို လေ့ကျက်၍ စစ်ချီတတ်သော စစ်သူရဲပေါင်း ကား၊ လေးသောင်းလေးထောင်ခုနစ်ရာခြောက်ဆယ် တည်း။
19 ೧೯ ಅವರು ಹೋಗಿ ಹಗ್ರೀಯ, ಯೆಟೂರ್, ನಾಫೀಷ್ ಮತ್ತು ನೋದಾಬ್ ಇವರೊಡನೆಯೂ ಯುದ್ಧಮಾಡಿದರು.
၁၉ထိုသူတို့သည် ဟာဂရအမျိုးသားတို့နှင့် စစ်တိုက် ကြ၏။
20 ೨೦ ಅವರು ದೇವರ ಮೇಲೆ ಭರವಸೆ ಇಟ್ಟಿದ್ದರಿಂದ ಮೊರೆಯಿಟ್ಟ ಅವರ ಪ್ರಾರ್ಥನೆಗೆ ಕಿವಿಗೊಟ್ಟು ಯುದ್ಧದಲ್ಲಿ ಜಯವನ್ನು ಅನುಗ್ರಹಿಸಿದನು. ಹಗ್ರೀಯರೂ ಇವರ ಜೊತೆಯಲ್ಲಿದ್ದವರೂ ಅವರ ಕೈಯಲ್ಲಿ ಕೊಡಲ್ಪಟ್ಟರು.
၂၀စစ်တိုက်သောအခါ ဘုရားသခင်ကို ကိုးစား၍ ဆုတောင်းသောကြောင့်၊ ဘုရားသခင် မစတော် မူခြင်းကျေးဇူးအားဖြင့်၊ ဟာဂရလူတို့နှင့် သူတို့ဥစ္စာ ရှိသမျှကိုရကြ၏။
21 ೨೧ ಈ ಯುದ್ಧದಲ್ಲಿ ಅವರ ಹಿಂಡುಗಳನ್ನು ಅಂದರೆ, ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳೂ, ಎರಡು ಸಾವಿರ ಕತ್ತೆಗಳು ಮತ್ತು ಒಂದು ಲಕ್ಷ ಜನರನ್ನೂ ಕೊಳ್ಳೆಹಿಡಿದರು.
၂၁ကုလားအုပ်ငါးထောင်၊ သိုးနှစ်သိန်းငါးသောင်း၊ မြည်းနှစ်ထောင်၊ လူတသိန်းတို့ကိုသိမ်းယူကြ၏။
22 ೨೨ ಏಕೆಂದರೆ ದೇವರು ಅವರ ಪರವಾಗಿ ಯುದ್ಧಮಾಡಿದ್ದರಿಂದ ಅವರು ವೈರಿಗಳಲ್ಲಿ ಅನೇಕರನ್ನು ತಿವಿದು ಕೊಂದದ್ದಲ್ಲದೆ, ತಾವು ಸೆರೆಯಾಗಿ ಹೋಗುವವರೆಗೂ ಅವರ ಊರುಗಳಲ್ಲಿ ವಾಸಿಸಿದರು.
၂၂ဘုရားသခင့်အခွင့်နှင့် စစ်တိုက်သောကြောင့်၊ ရန်သူအများတို့သည် လဲသေကြ၏။ ဣသရေလလူတို့ သည် သိမ်းသွားခြင်းအမှုမရောက်မှီတိုင်အောင်၊ ဟာဂရ လူတို့နေရာ၌ နေရာကျကြ၏။
23 ೨೩ ಮನಸ್ಸೆ ಕುಲದ ಅರ್ಧಜನರು ಬಾಷಾನಿನಿಂದ ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಗಿರಿ ಇವುಗಳ ವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸಿದರು.
၂၃မနာရှေအမျိုးတဝက်သည်၊ ထိုပြည်တွင် ဗာရှန် မြို့မှစ၍ ဗာလဟေရမုန်မြို့၊ စနိရမြို့၊ ဟေရမုန်တောင် တိုင်အောင် ပွားများလျက်နေ၏။
24 ೨೪ ಇವರ ಗೋತ್ರಗಳ ಪ್ರಧಾನ ಪುರುಷರು ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್. ಇವರು ರಣವೀರರೂ ಪ್ರಖ್ಯಾತಿ ಹೊಂದಿದವರು ಗೋತ್ರಪ್ರಧಾನರೂ ಆಗಿದ್ದರು.
၂၄အဆွေအမျိုးသူကြီးများဟူမူကား၊ ခွန်အား ကြီး၍ ကျော်စောသော စစ်သူရဲဧဖာ၊ ဣရှိ၊ ဧလျေလ၊ အာဇရေလ၊ ယေရမိ၊ ဟောဒဝိ၊ ယာဒျေလတည်း။
25 ೨೫ ಅವರು ತಮ್ಮ ಪೂರ್ವಿಕರ ದೇವರಿಗೆ ದ್ರೋಹಿಗಳಾಗಿದರು. ಯೆಹೋವನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶದ ನಿವಾಸಿಗಳ ದೇವರುಗಳನ್ನು ಆರಾಧಿಸತೊಡಗಿದರು.
၂၅သို့ရာတွင် ရုဗင်အမျိုး၊ ဂဒ်အမျိုး၊ မနာရှေအမျိုး တဝက်သည် ဘိုးဘေးတို့၏ ဘုရားသခင်ကို ပြစ်မှား၍၊ မိမိတို့ရှေ့မှာ ဘုရားသခင်ဖျက်ဆီးတော်မူသောပြည်သား တို့ ဘုရားများနှင့် မှားယွင်းကြ၏။
26 ೨೬ ಆದುದರಿಂದ ಅಶ್ಶೂರದ ಅರಸನಾದ ಪೂಲ್, ತಿಗ್ಲತ್ಪಿಲೆಸರ್ ಎಂಬವರು ಇಸ್ರಾಯೇಲ್ ದೇವರ ಪ್ರೇರಣೆಯಿಂದ ಬಂದು ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರನ್ನು ಹಲಹ, ಹಾಬೋರ್, ಹಾರ ಎಂಬ ಪ್ರಾಂತ್ಯಗಳಿಗೂ, ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆ ಹಿಡಿದು ಕರೆದೊಯ್ದರು. ಅವರು ಇಂದಿನವರೆಗೂ ಅಲ್ಲಿಯೇ ನೆಲೆಸುವಂತೆ ದೇವರು ಮಾಡಿದ್ದಾನೆ.
၂၆သို့ဖြစ်၍ ဣသရေလအမျိုး၏ ဘုရားသခင်သည် အာရှုရိရှင်ဘုရင် ပုလနှင့်ရှင်ဘုရင် တိဂလတ်ပိလေသာ စိတ်ကို နှိုးဆော်တော်မူသဖြင့်၊ နောက်ရှင်ဘုရင်သည် ထိုဣသရေလအမျိုးသားတို့ကို ဂေါဇန်မြစ်နား၊ ဟေလမြို့၊ ဟာဗော်မြို့၊ ဟာရမြို့သို့ သိမ်းသွား၍ ယနေ့တိုင်အောင် နေရာချထား၏။

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 5 >