< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 12 >

1 ದಾವೀದನು ಕೀಷನ ಮಗನಾದ ಸೌಲನಿಗೆ ಹೆದರಿ ಚಿಕ್ಲಗಿನಲ್ಲಿ ಅಡಗಿಕೊಂಡಿದ್ದಾಗ
जब दाऊद सिकलग में कीश के पुत्र शाऊल के डर के मारे छिपा रहता था, तब ये उसके पास वहाँ आए, और ये उन वीरों में से थे जो युद्ध में उसके सहायक थे।
2 ಬಿಲ್ಲುಗಾರರೂ, ಎಡಗೈ ಬಲಗೈಗಳಿಂದ ಕಲ್ಲುಗಳನ್ನೂ ಮತ್ತು ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದು ಯುದ್ಧದಲ್ಲಿ ಸಹಾಯಮಾಡುವುದಕ್ಕಾಗಿ ಅವನ ಬಳಿಗೆ ಬಂದ ಯುದ್ಧವೀರರ ಪಟ್ಟಿ.
ये धनुर्धारी थे, जो दाएँ-बाएँ, दोनों हाथों से गोफन के पत्थर और धनुष के तीर चला सकते थे; और ये शाऊल के भाइयों में से बिन्यामीनी थे,
3 ಸೌಲನ ಕುಲಬಂಧುಗಳಾದ ಬೆನ್ಯಾಮೀನ್ಯರಲ್ಲಿ ಮುಖ್ಯಸ್ಥನಾದ ಅಹೀಯೆಜೆರ್ ಮತ್ತು ಯೋವಾಷ ಎಂಬ ಗಿಬೆಯ ಊರಿನ ಹಷ್ಷೆಮಾಹನ ಮಕ್ಕಳು. ಅಜ್ಮಾವೆತನ ಮಕ್ಕಳಾದ ಯೆಜೀಯೇಲ್ ಪೆಲೆಟರು. ಅನತೋತ್ ಊರಿನವರಾದ ಯೇಹು ಬೇರಾಕಾರು,
मुख्य तो अहीएजेर और दूसरा योआश था जो गिबावासी शमाआ का पुत्र था; फिर अज्मावेत के पुत्र यजीएल और पेलेत, फिर बराका और अनातोती येहू,
4 ಮೂವತ್ತು ಭಟರಲ್ಲಿ ಶೂರನು ಮುಖ್ಯಸ್ಥನು ಆದ ಗಿಬ್ಯೋನಿನ ಇಷ್ಮಾಯ, ಗೆದೇರಾ ಊರಿನವರಾದ ಯೆರೆಮೀಯ ಯಹಜೀಯೇಲ್, ಯೋಹಾನಾನ್, ಯೋಜಾಬಾದರು,
और गिबोनी यिशमायाह जो तीसों में से एक वीर और उनके ऊपर भी था; फिर यिर्मयाह, यहजीएल, योहानान, गदेरावासी योजाबाद,
5 ಹರೀಫ್ಯರಾದ ಎಲ್ಲೂಜೈ, ಯೆರೀಮೋತ್, ಬೆಯಲ್ಯ, ಶೆಮರ್ಯ, ಶೆಫಟ್ಯರು,
एलूजै, यरीमोत, बाल्याह, शेमर्याह, हारूपी शपत्याह,
6 ಕೋರಹಿಯರಾದ ಎಲ್ಕಾನ್, ಇಷ್ಷೀಯ, ಅಜರೇಲ್, ಯೋವೆಜೆರ್, ಯಾಷೊಬ್ಬಾಮರು,
एल्काना, यिश्शिय्याह, अजरेल, योएजेर, याशोबाम, जो सब कोरहवंशी थे,
7 ಗೆದೋರಿನ ಯೆರೋಹಾಮನ ಮಕ್ಕಳಾದ ಯೋವೇಲ ಮತ್ತು ಜೆಬದ್ಯರು ಇವರೇ.
और गदोरवासी यरोहाम के पुत्र योएला और जबद्याह।
8 ಯುದ್ಧವೀರರೂ ಯುದ್ಧನಿಪುಣರೂ, ಗುರಾಣಿಬರ್ಜಿಗಳಲ್ಲಿ ಪ್ರವೀಣರೂ, ಸಿಂಹಮುಖರೂ, ಬೆಟ್ಟದ ಜಿಂಕೆಯಂತೆ ಓಡುವ ಚುರುಕು ಕಾಲಿನವರು ಆಗಿದ್ದು, ದಾವೀದನು ಅರಣ್ಯ ದುರ್ಗದಲ್ಲಿದ್ದಾಗ ಅವನನ್ನು ಸೇರಿಕೊಂಡ ಗಾದ್ಯರು:
फिर जब दाऊद जंगल के गढ़ में रहता था, तब ये गादी जो शूरवीर थे, और युद्ध विद्या सीखे हुए और ढाल और भाला काम में लानेवाले थे, और उनके मुँह सिंह के से और वे पहाड़ी मृग के समान वेग से दौड़नेवाले थे, ये और गादियों से अलग होकर उसके पास आए,
9 ಮುಖ್ಯಸ್ಥನು ಏಜೆರ್, ಎರಡನೆಯವನು ಓಬದ್ಯ, ಮೂರನೆಯವನು ಎಲೀಯಾಬ್,
अर्थात् मुख्य तो एजेर, दूसरा ओबद्याह, तीसरा एलीआब,
10 ೧೦ ನಾಲ್ಕನೆಯವನು ಮಷ್ಮನ್ನ, ಐದನೆಯವನು ಯೆರೆಮೀಯ,
१०चौथा मिश्मन्ना, पाँचवाँ यिर्मयाह,
11 ೧೧ ಆರನೆಯವನು ಅತ್ತೈ, ಏಳನೆಯವನು ಎಲೀಯೇಲ್,
११छठा अत्तै, सातवाँ एलीएल,
12 ೧೨ ಎಂಟನೆಯವನು ಯೋಹಾನಾನ್, ಒಂಬತ್ತನೆಯವನು ಎಲ್ಜಾಬಾದ್,
१२आठवाँ योहानान, नौवाँ एलजाबाद,
13 ೧೩ ಹತ್ತನೆಯವನು ಯೆರೆಮೀಯನು, ಹನ್ನೊಂದನೆಯವನು ಮಕ್ಬನ್ನೈ ಇವರೇ.
१३दसवाँ यिर्मयाह और ग्यारहवाँ मकबन्नै था,
14 ೧೪ ಗಾದ್ಯರಾದ ಇವರು ಸೇನಾಧಿಪತಿಗಳಾಗಿದ್ದರು. ಇವರಲ್ಲಿ ಕನಿಷ್ಠನಾದವನು ನೂರು ಜನರ ಮೇಲೆಯೂ, ಶ್ರೇಷ್ಠನಾದವನು ಸಾವಿರ ಜನರ ಮೇಲೆಯೂ ಇದ್ದರು.
१४ये गादी मुख्य योद्धा थे, उनमें से जो सबसे छोटा था वह तो एक सौ के ऊपर, और जो सबसे बड़ा था, वह हजार के ऊपर था।
15 ೧೫ ಯೊರ್ದನ್ ನದಿಯು ಮೊದಲನೆಯ ತಿಂಗಳಿನಲ್ಲಿ ದಡ ತುಂಬಿ ಹರಿಯುತ್ತಿರುವಾಗ, ಇವರು ಅದನ್ನು ದಾಟಿ ನದಿಯ ತಗ್ಗಿನ ಪೂರ್ವ ಮತ್ತು ಪಶ್ಚಿಮ ಪ್ರದೇಶದಲ್ಲಿರವ ಎಲ್ಲರನ್ನೂ ಓಡಿಸಿಬಿಟ್ಟರು.
१५ये ही वे हैं, जो पहले महीने में जब यरदन नदी सब किनारों के ऊपर-ऊपर बहती थी, तब उसके पार उतरे; और पूर्व और पश्चिम दोनों ओर के सब तराई के रहनेवालों को भगा दिया।
16 ೧೬ ಬೆನ್ಯಾಮೀನ್ ಮತ್ತು ಯೂದ ಕುಲದವರಲ್ಲಿ ಕೆಲವರು ದಾವೀದನಿದ್ದ ದುರ್ಗದ ಬಳಿಗೆ ಬರಲು ದಾವೀದನು ಹೊರಗೆ ಹೋಗಿ ಅವರೆದುರಿಗೆ ನಿಂತು ಅವರಿಗೆ,
१६कई एक बिन्यामीनी और यहूदी भी दाऊद के पास गढ़ में आए।
17 ೧೭ “ನೀವು ಸ್ನೇಹಭಾವದಿಂದ ಸಹಾಯ ಮಾಡುವುದಕ್ಕಾಗಿ ನನ್ನ ಬಳಿಗೆ ಬಂದಿರುವುದಾದರೆ ನಿಮ್ಮೊಡನೆ ನನಗೆ ಐಕ್ಯಭಾವವಿರುವುದು. ನಿರಪರಾಧಿಯಾದ ನನ್ನನ್ನು ನನ್ನ ವಿರೋಧಿಗಳಿಗೆ ಒಪ್ಪಿಸುವ ಕುಯುಕ್ತಿಯಿಂದ ಬಂದಿರುವುದಾದರೆ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ನೋಡಿ ದಂಡಿಸಲಿ” ಎಂದು ಹೇಳಿದನು.
१७उनसे मिलने को दाऊद निकला और उनसे कहा, “यदि तुम मेरे पास मित्रभाव से मेरी सहायता करने को आए हो, तब तो मेरा मन तुम से लगा रहेगा; परन्तु जो तुम मुझे धोखा देकर मेरे शत्रुओं के हाथ पकड़वाने आए हो, तो हमारे पितरों का परमेश्वर इस पर दृष्टि करके डाँटे, क्योंकि मेरे हाथ से कोई उपद्रव नहीं हुआ।”
18 ೧೮ ಆಗ ಮೂವತ್ತು ಜನರಲ್ಲಿ ಮುಖ್ಯಸ್ಥನಾದ ಅಮಾಸೈಯು ಆತ್ಮಾವೇಶವುಳ್ಳವನಾಗಿ, “ದಾವೀದನೇ, ನಾವು ನಿನ್ನವರು; ಶುಭವಾಗಲಿ! ಇಷಯನ ಮಗನೇ, ನಾವು ನಿನ್ನ ಪಕ್ಷದವರು; ಶುಭವಾಗಲಿ! ನಿನಗೂ ನಿನ್ನ ಸಹಾಯಕರಿಗೂ ಶುಭವಾಗಲಿ! ನಿನ್ನ ದೇವರು ನಿನಗೆ ಜಯವನ್ನು ಕೊಡುವವನಾಗಿದ್ದಾನೆ” ಎಂದು ಹೇಳಿದನು. ಆಗ ದಾವೀದನು ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡು ಸೈನ್ಯಾಧಿಪತಿಗಳನ್ನಾಗಿ ನೇಮಿಸಿದನು.
१८तब आत्मा अमासै में समाया, जो तीसों वीरों में मुख्य था, और उसने कहा, “हे दाऊद! हम तेरे हैं; हे यिशै के पुत्र! हम तेरी ओर के हैं, तेरा कुशल ही कुशल हो और तेरे सहायकों का कुशल हो, क्योंकि तेरा परमेश्वर तेरी सहायता किया करता है।” इसलिए दाऊद ने उनको रख लिया, और अपने दल के मुखिए ठहरा दिए।
19 ೧೯ ಸೌಲನಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗುವ ಫಿಲಿಷ್ಟಿಯರ ಜೊತೆಯಲ್ಲಿ ದಾವೀದನೂ ಹೋಗುತ್ತಿರುವಾಗ ಕೆಲವು ಜನ ಮನಸ್ಸೆಯವರು ಬಂದು ಅವನೊಡನೆ ಸೇರಿಕೊಂಡರು. ದಾವೀದನು ನಿಜವಾಗಿ ಫಿಲಿಷ್ಟಿಯರಿಗೆ ಸಹಾಯಕನು ಆಗಿರಲಾರನೆಂದು, ಅವರ ಪ್ರಭುಗಳು, “ಇವನು ನಮ್ಮ ತಲೆಗಳನ್ನು ಕಡಿದು ತಿರುಗಿ ತನ್ನ ಯಜಮಾನನಾದ ಸೌಲನೊಂದಿಗೆ ಸೇರಿಕೊಂಡಾನು” ಎಂಬುದಾಗಿ ಆಲೋಚಿಸಿ ಅವನನ್ನು ಹಿಂದಕ್ಕೆ ಕಳುಹಿಸಿದರು.
१९फिर कुछ मनश्शेई भी उस समय दाऊद के पास भाग आए, जब वह पलिश्तियों के साथ होकर शाऊल से लड़ने को गया, परन्तु वह उसकी कुछ सहायता न कर सका, क्योंकि पलिश्तियों के सरदारों ने सम्मति लेने पर यह कहकर उसे विदा किया, “वह हमारे सिर कटवाकर अपने स्वामी शाऊल से फिर मिल जाएगा।”
20 ೨೦ ಅವನು ಹಿಂತಿರುಗಿ ಚಿಕ್ಲಗಿಗೆ ಹೋಗುವಾಗ ಮನಸ್ಸೆ ಕುಲದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹು ಮತ್ತು ಚಿಲ್ಲೆತೈ ಎಂಬುವರು ಬಂದು ಅವನೊಂದಿಗೆ ಸೇರಿಕೊಂಡರು.
२०जब वह सिकलग को जा रहा था, तब ये मनश्शेई उसके पास भाग आए; अर्थात् अदनह, योजाबाद, यदीएल, मीकाएल, योजाबाद, एलीहू और सिल्लतै जो मनश्शे के हजारों के मुखिए थे।
21 ೨೧ ಯುದ್ಧವೀರರೂ, ಸೇನಾಧಿಪತಿಗಳೂ ಆದ ಇವರೆಲ್ಲರೂ ಸುಲಿಗೆ ಗುಂಪುಗಳಿಗೆ ವಿರೋಧವಾಗಿ ದಾವೀದನಿಗೆ ಸಹಾಯಮಾಡುವವರಾದರು.
२१इन्होंने लुटेरों के दल के विरुद्ध दाऊद की सहायता की, क्योंकि ये सब शूरवीर थे, और सेना के प्रधान भी बन गए।
22 ೨೨ ದಾವೀದನ ಸಹಾಯಕ್ಕೆ ಪ್ರತಿದಿನವೂ ಹೊಸ ಗುಂಪುಗಳು ಬರುತ್ತಿದ್ದವು. ಅವನ ಸೈನ್ಯವು ದೇವರ ಸೈನ್ಯದಷ್ಟು ದೊಡ್ಡದಾಯಿತು.
२२वरन् प्रतिदिन लोग दाऊद की सहायता करने को उसके पास आते रहे, यहाँ तक कि परमेश्वर की सेना के समान एक बड़ी सेना बन गई।
23 ೨೩ ಯೆಹೋವನ ಆಜ್ಞೆಯಂತೆ ಸೌಲನ ರಾಜ್ಯವನ್ನು ದಾವೀದನಿಗೆ ಒಪ್ಪಿಸುವುದಕ್ಕೋಸ್ಕರ ಹೆಬ್ರೋನಿನಲ್ಲಿದ್ದ ಅವನ ಬಳಿಗೆ ಗುಂಪುಗುಂಪುಗಳಾಗಿ ಬಂದ ಯುದ್ಧಸನ್ನದ್ಧರಾಗಿದ್ದವರ ಲೆಕ್ಕ;
२३फिर लोग लड़ने के लिये हथियार बाँधे हुए हेब्रोन में दाऊद के पास इसलिए आए कि यहोवा के वचन के अनुसार शाऊल का राज्य उसके हाथ में कर दें: उनके मुखियों की गिनती यह है।
24 ೨೪ ಯೆಹೂದ್ಯರಿಂದ ಬರ್ಜಿ, ಗುರಾಣಿಗಳನ್ನು ಹಿಡಿದ ಸೈನಿಕರು ಆರು ಸಾವಿರದ ಎಂಟನೂರು.
२४यहूदा के ढाल और भाला लिए हुए छः हजार आठ सौ हथियार-बन्द लड़ने को आए।
25 ೨೫ ಸಿಮೆಯೋನ್ಯರಿಂದ ಏಳು ಸಾವಿರದ ನೂರು ಯುದ್ಧವೀರರು.
२५शिमोनी सात हजार एक सौ तैयार शूरवीर लड़ने को आए।
26 ೨೬ ಲೇವಿಯರಿಂದ ನಾಲ್ಕು ಸಾವಿರದ ಆರುನೂರು ಸೈನಿಕರಲ್ಲದೆ,
२६लेवीय चार हजार छः सौ आए।
27 ೨೭ ಆರೋನ್ಯರ ಮುಖ್ಯಸ್ಥನಾದ ಯೆಹೋಯಾದಾವನೂ ಮತ್ತು ಅವನ ಮೂರು ಸಾವಿರದ ಏಳು ನೂರು ಸೈನಿಕರೂ;
२७और हारून के घराने का प्रधान यहोयादा था, और उसके साथ तीन हजार सात सौ आए।
28 ೨೮ ಪರಾಕ್ರಮಶಾಲಿಯಾದ ಚಾದೋಕನೆಂಬ ಯೌವನಸ್ಥನೂ, ಅವನ ಕುಟುಂಬದವರಾದ ಇಪ್ಪತ್ತೆರಡು ಅಧಿಪತಿಗಳೂ,
२८और सादोक नामक एक जवान वीर भी आया, और उसके पिता के घराने के बाईस प्रधान आए।
29 ೨೯ ಸೌಲನ ಸಂಬಂಧಿಕರಾದ ಬೆನ್ಯಾಮೀನ್ಯರಲ್ಲಿ ಮೂರು ಸಾವಿರ ಸೈನಿಕರು ಬಂದರು. ಬೆನ್ಯಾಮೀನ್ಯರಲ್ಲಿ ಹೆಚ್ಚಿನ ಭಾಗದವರು ಸೌಲನ ಮನೆಯವರೊಂದಿಗೆ ಸೇರಿಕೊಂಡಿದ್ದರು.
२९और शाऊल के भाई बिन्यामीनियों में से तीन हजार आए, क्योंकि उस समय तक आधे बिन्यामीनियों से अधिक शाऊल के घराने का पक्ष करते रहे।
30 ೩೦ ಎಫ್ರಾಯೀಮಿನ ಆಯಾ ಗೋತ್ರಗಳಲ್ಲಿ ಪ್ರಸಿದ್ಧರಾದ ಇಪ್ಪತ್ತು ಸಾವಿರದ ಎಂಟುನೂರು ಮಹಾಯುದ್ಧವೀರರು,
३०फिर एप्रैमियों में से बड़े वीर और अपने-अपने पितरों के घरानों में नामी पुरुष बीस हजार आठ सौ आए।
31 ೩೧ ಮನಸ್ಸೆಯ ಅರ್ಧ ಕುಲದಿಂದ ದಾವೀದನ ಪಟ್ಟಾಭಿಷೇಕಕ್ಕೆ ಹೋಗಬೇಕೆಂದು ಹೆಸರುಹೆಸರಾಗಿ ನೇಮಿಸಲ್ಪಟ್ಟವರು ಹದಿನೆಂಟು ಸಾವಿರ ಸೈನಿಕರು.
३१मनश्शे के आधे गोत्र में से दाऊद को राजा बनाने के लिये अठारह हजार आए, जिनके नाम बताए गए थे।
32 ೩೨ ಇಸ್ಸಾಕಾರ್ಯರಿಂದ ಇನ್ನೂರು ಮುಖ್ಯಸ್ಥರು. ಇವರು ಸಮಯೋಚಿತಜ್ಞಾನವುಳ್ಳವರಾಗಿ ಇಸ್ರಾಯೇಲರು ಮಾಡತಕ್ಕದ್ದನ್ನು ಅರಿತವರಾಗಿದ್ದರು. ಇವರ ಸಹೋದರರೆಲ್ಲರೂ ಇವರ ಆಜ್ಞೆಗೆ ಬದ್ಧರಾಗಿದ್ದರು.
३२इस्साकारियों में से जो समय को पहचानते थे, कि इस्राएल को क्या करना उचित है, उनके प्रधान दो सौ थे; और उनके सब भाई उनकी आज्ञा में रहते थे।
33 ೩೩ ಜೆಬುಲೂನ್ಯರಿಂದ ಯುದ್ಧಪ್ರವೀಣರೂ, ಸರ್ವಾಯುಧಗಳನ್ನು ಧರಿಸಿ ವ್ಯೂಹಕಟ್ಟ ಬಲ್ಲವರೂ, ದೃಢಚಿತ್ತರೂ ಆದರು ಐವತ್ತು ಸಾವಿರ ಸೈನಿಕರು.
३३फिर जबूलून में से युद्ध के सब प्रकार के हथियार लिए हुए लड़ने को पाँति बाँधनेवाले योद्धा पचास हजार आए, वे पाँति बाँधनेवाले थे और चंचल न थे।
34 ೩೪ ನಫ್ತಾಲಿಯರಿಂದ ಸಾವಿರ ನಾಯಕರೂ, ಗುರಾಣಿಬರ್ಜಿಗಳನ್ನು ಹಿಡಿದಿರುವ ಮೂವತ್ತೇಳು ಸಾವಿರ ಸೈನಿಕರೂ,
३४फिर नप्ताली में से प्रधान तो एक हजार, और उनके संग ढाल और भाला लिए सैंतीस हजार आए।
35 ೩೫ ದಾನ್ಯರಿಂದ ಇಪ್ಪತ್ತೆಂಟು ಸಾವಿರದ ಆರುನೂರು ಯುದ್ಧನಿಪುಣರು.
३५दानियों में से लड़ने के लिये पाँति बाँधनेवाले अट्ठाईस हजार छः सौ आए।
36 ೩೬ ಆಶೇರ್ಯರಿಂದ ಯುದ್ಧಕ್ಕೆ ಸಿದ್ಧರಾದ ನಲ್ವತ್ತು ಸಾವಿರ ಯುದ್ಧನಿಪುಣರು,
३६और आशेर में से लड़ने को पाँति बाँधनेवाले चालीस हजार योद्धा आए।
37 ೩೭ ಯೊರ್ದನಿನ ಆಚೆಯಲ್ಲಿದ್ದ ರೂಬೇನ್, ಗಾದ್, ಅರ್ಧಮನಸ್ಸೆ ಕುಲಗಳಿಂದ ಸರ್ವಾಯುದ್ಧಧಾರಿಗಳಾದ ಒಂದು ಲಕ್ಷದ ಇಪ್ಪತ್ತು ಸಾವಿರ ಸೈನಿಕರು.
३७और यरदन पार रहनेवाले रूबेनी, गादी और मनश्शे के आधे गोत्रियों में से युद्ध के सब प्रकार के हथियार लिए हुए एक लाख बीस हजार आए।
38 ೩೮ ದಾವೀದನನ್ನು ಇಸ್ರಾಯೇಲರ ಅರಸನನ್ನಾಗಿ ಮಾಡುವುದಕ್ಕೋಸ್ಕರ ಯುದ್ಧನಿಪುಣರಾದ ಈ ಎಲ್ಲಾ ಸೈನಿಕರು ಪೂರ್ಣಮನಸ್ಸಿನಿಂದ ಹೆಬ್ರೋನಿಗೆ ಬಂದರು. ಉಳಿದ ಎಲ್ಲಾ ಇಸ್ರಾಯೇಲರು ದಾವೀದನಿಗೆ ರಾಜ್ಯಾಭಿಷೇಕಮಾಡುವುದರಲ್ಲಿ ಏಕಮನಸ್ಸುಳ್ಳವರಾಗಿದ್ದರು.
३८ये सब युद्ध के लिये पाँति बाँधनेवाले दाऊद को सारे इस्राएल का राजा बनाने के लिये हेब्रोन में सच्चे मन से आए, और अन्य सब इस्राएली भी दाऊद को राजा बनाने के लिये सहमत थे।
39 ೩೯ ಅವರು ಅಲ್ಲಿ ಮೂರು ದಿನ ದಾವೀದನ ಸಂಗಡ ಇದ್ದು ಅನ್ನ ಪಾನಗಳನ್ನು ತೆಗೆದುಕೊಂಡರು. ಅವರ ಸಹೋದರರು ಅವರಿಗೋಸ್ಕರ ಎಲ್ಲವನ್ನೂ ಸಿದ್ಧಪಡಿಸಿದರು.
३९वे वहाँ तीन दिन दाऊद के संग खाते पीते रहे, क्योंकि उनके भाइयों ने उनके लिये तैयारी की थी,
40 ೪೦ ಇದಲ್ಲದೆ ಇಸ್ಸಾಕಾರ್, ಜೆಬುಲೂನ್, ನಫ್ತಾಲಿ ಮೊದಲುಗೊಂಡು ಎಲ್ಲಾ ಸಮೀಪ ಪ್ರಾಂತ್ಯಗಳವರು ಎತ್ತು, ಕತ್ತೆ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ಆಹಾರ ಪದಾರ್ಥಗಳನ್ನು ಹೊತ್ತುಕೊಂಡು ಬಂದರು. ಅವರು ತರತರದ ರೊಟ್ಟಿ, ಅಂಜೂರಹಣ್ಣಿನ ಉಂಡೆ, ಒಣಗಿದ ದ್ರಾಕ್ಷಿಗೊಂಚಲು, ದ್ರಾಕ್ಷಾರಸ, ಎಣ್ಣೆ, ಅನೇಕ ದನಕುರಿಗಳು ಇವುಗಳನ್ನು ತಂದರು. ಇಸ್ರಾಯೇಲರೊಳಗೆ ಮಹಾ ಸಂಭ್ರಮ ಸಂತೋಷವಿತ್ತು.
४०और जो उनके निकट वरन् इस्साकार, जबूलून और नप्ताली तक रहते थे, वे भी गदहों, ऊँटों, खच्चरों और बैलों पर मैदा, अंजीरों और किशमिश की टिकियाँ, दाखमधु और तेल आदि भोजनवस्तु लादकर लाए, और बैल और भेड़-बकरियाँ बहुतायत से लाए; क्योंकि इस्राएल में आनन्द मनाया जा रहा था।

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 12 >