< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 10 >

1 ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡಿದರು. ಇಸ್ರಾಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಸತ್ತುಹೋದರು.
А Филистеји се побише с Израиљем, и побегоше Израиљци испред Филистеја, и падаху мртви на гори Гелвуји.
2 ಫಿಲಿಷ್ಟಿಯರು ಸೌಲನನ್ನೂ, ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ, ಅವನ ಮಕ್ಕಳಾದ ಯೋನಾತಾನನ್ನೂ, ಅಬೀನಾದಾಬನನ್ನೂ ಮತ್ತು ಮಲ್ಕೀಷೂವನನ್ನೂ ಕೊಂದರು.
И стигоше Филистеји Саула и синове његове, и погубише Филистеји Јонатана и Авинадава и Малхисуја, синове Саулове.
3 ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹು ಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು.
И бој поста жешћи око Саула, и нађоше га стрелци, и он се уплаши од стрелаца.
4 ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು, ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನಗೆ ಅಪಕೀರ್ತಿ ತಂದಾರು” ಎಂದು ಹೇಳಲು ಅವನು ಹೆದರಿ ಹಿಂಜರಿದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು, ಅದರ ಮೇಲೆ ಬಿದ್ದನು.
И рече Саул момку који му ношаше оружје: Извади мач свој, и прободи ме да не дођу ти необрезани и наругају ми се. Али не хте момак који му ношаше оружје, јер га беше врло страх. Тада Саул узе мач и баци се на њ.
5 ಸೌಲನು ಸತ್ತದ್ದನ್ನು ಅವನ ಆಯುಧ ಹೊರುವವನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಸತ್ತನು.
А кад момак који му ношаше оружје виде где умре Саул, баци се и он на свој мач, и умре.
6 ಹೀಗೆ ಸೌಲನೂ, ಅವನ ಮೂರು ಮಕ್ಕಳೂ, ಅವನ ಮನೆಯವರೆಲ್ಲರೂ ಅದೇ ದಿನದಲ್ಲಿ ಸತ್ತರು.
Тако погибе Саул; и три сина његовог и сва чељад његова погибоше заједно.
7 ಇಸ್ರಾಯೇಲರು ಸೋತು ಹೋದರು. ಸೌಲನೂ, ಅವನ ಮಕ್ಕಳು ಸತ್ತರು ಎಂಬ ವರ್ತಮಾನವನ್ನು ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರೂ ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಮಾಡಿದರು.
А кад сви Израиљци који беху у долини видеше где побегоше Израиљци и где погибе Саул и синови његови, оставише градове своје и побегоше те дођоше Филистеји и осташе у њима.
8 ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕಾಗಿ ಬಂದಾಗ, ಸೌಲನೂ ಅವನ ಮೂರು ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವುದನ್ನು ಕಂಡರು.
А сутрадан дођоше Филистеји да свлаче мртве, и нађоше Саула и синове његове где леже на гори Гелвуји.
9 ಫಿಲಿಷ್ಟಿಯರು ಸೌಲನಿಗಿರುವುದೆಲ್ಲವನ್ನು ಸುಲಿದುಕೊಂಡು ಅವನ ತಲೆಯನ್ನೂ, ಆಯುಧಗಳನ್ನೂ ತಮ್ಮ ದೇಶದ ಎಲ್ಲಾ ಕಡೆಗೆ ಕಳುಹಿಸಿ, ತಮ್ಮ ದೇವತೆಗಳಿಗೂ, ಜನರಿಗೂ ಜಯವಾರ್ತೆಯನ್ನು ಮುಟ್ಟಿಸಿದರು.
И свукавши га узеше главу његову и оружје његово, и послаше у земљу филистејску на све стране да се објави код лажних богова њихових и по народу.
10 ೧೦ ಅವನ ಆಯುಧಗಳನ್ನು ತಮ್ಮ ದೇವಸ್ಥಾನದಲ್ಲಿಟ್ಟರು. ಅವನ ತಲೆಯನ್ನು ದಾಗೋನನ ಗುಡಿಯಲ್ಲಿ ನೇತುಹಾಕಿದರು.
И оставише оружје његово у кући богова својих, а главу му обесише у кући Дагоновој.
11 ೧೧ ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನವು ಯಾಬೇಷ್ ಗಿಲ್ಯಾದವರಿಗೆ ಮುಟ್ಟಿತು.
А кад чуше сви у Јавису галадском све што учинише Филистеји од Саула,
12 ೧೨ ಆಗ ಅವರಲ್ಲಿರುವ ಶೂರರೆಲ್ಲರೂ ಹೊರಟುಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಯಾಬೇಷಿಗೆ ತೆಗೆದುಕೊಂಡು ಬಂದು, ಅವರ ಎಲುಬುಗಳನ್ನು ಅಲ್ಲಿದ್ದ ಏಲಾ ಮರದ ಕೆಳಗೆ ಸಮಾಧಿ ಮಾಡಿ, ಏಳು ದಿನಗಳ ವರೆಗೆ ಉಪವಾಸ ಮಾಡಿದರು.
Подигоше се сви јунаци и узеше тело Саулово и телеса синова његових, и донесоше их у Јавис, и погребоше кости њихове под храстом у Јавису, и постише седам дана.
13 ೧೩ ಸೌಲನು ಯೆಹೋವನ ಮಾತು ಕೇಳದೆ ಆತನಿಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದಲೂ, ಯೆಹೋವನ ಸನ್ನಿಧಿಯಲ್ಲಿ ವಿಚಾರಿಸದೇ, ಭೂತ, ಪ್ರೇತಗಳನ್ನು ನಂಬಿ ದೇವ ದ್ರೋಹಿಯಾದುದರಿಂದ ಅವನಿಗೆ ಇಂಥ ಮರಣವಾಯಿತು.
И тако погибе Саул за безакоње своје, које учини Господу што не слуша речи Господње и што тражи да пита дух врачарски,
14 ೧೪ ಯೆಹೋವನು ಅವನನ್ನು ಕೊಲ್ಲಿಸಿ, ರಾಜ್ಯವನ್ನು ಇಷಯನ ಮಗನಾದ ದಾವೀದನಿಗೆ ಒಪ್ಪಿಸಿದನು.
А не пита Господа; зато га уби, и пренесе царство на Давида, сина Јесејевог.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 10 >