< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 1 >

1 ಆದಾಮನ ಸಂತಾನದವರು; ಸೇತ್, ಎನೋಷ್,
आदम, सेत, उनूस,
2 ಕೇನಾನ್, ಮಹಲಲೇಲ್, ಯೆರೆದ್,
किनान, महलीएल, यारिद,
3 ಹನೋಕ್, ಮೆತೂಷೆಲಹ, ಲೆಮೆಕ್,
हनूक, मतूसिलह, लमक,
4 ನೋಹ, ಶೇಮ್, ಹಾಮ್, ಯೆಫೆತ್ ಎಂಬವರು.
नूह, सिम, हाम, और याफ़त।
5 ಯೆಫೆತನ ಸಂತಾನದವರು ಯಾರೆಂದರೆ; ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು.
बनी याफ़त: जुमर और माजूज और मादी और यावान और तूबल और मसक और तीरास हैं।
6 ಗೋಮೆರನ ಸಂತಾನದವರು ಯಾರೆಂದರೆ; ಅಷ್ಕೆನೆಜ್, ರೀಫತ್ ಮತ್ತು ತೋಗರ್ಮ ಎಂಬವರು.
और बनी जुमर अश्कनाज और रीफ़त और तुजरमा है।
7 ಯಾವಾನನ ಸಂತಾನದವರು ಯಾರೆಂದರೆ ಎಲೀಷ, ತಾರ್ಷೀಷ್, ಕಿತ್ತೀಮ್, ದೋದಾನೀಮ್ ಎಂಬ ಸ್ಥಳಗಳವರು.
और बनी यावान, इलिसा और तरसीस, कित्ती और दूदानी हैं।
8 ಹಾಮಾನ ಸಂತಾನದವರು ಯಾರೆಂದರೆ ಕೂಷ್, ಮಿಚ್ರಯಿಮ್, ಪೂಟ್, ಕಾನಾನ್ ಎಂಬವರು.
बनी हाम: कूश और मिस्र, फ़ूत और कनान हैं।
9 ಕೂಷನ ಸಂತಾನದವರು: ಸೆಬಾ, ಹವೀಲ, ಸಬ್ತ, ರಮ್ಮ ಸಬ್ತೆಕ ಎಂಬುವರು. ರಮ್ಮನ ಸಂತಾನದವರು: ಶೆಬ ಮತ್ತು ದೆದಾನ್ ಎಂಬವರು.
बनी कूश: सबा और हवीला और सबता और रा'माह सब्तका हैं और बनी रामाह सबाह और ददान हैं।
10 ೧೦ ಕೂಷನು ನಿಮ್ರೋದನನ್ನು ಪಡೆದನು. ಇವನು ಈ ಭೂಮಿಯ ಮೇಲಿನ ಪ್ರಥಮ ಪರಾಕ್ರಮಶಾಲಿ ರಾಜನೆಂದು ಪ್ರಸಿದ್ಧನಾದನು.
कूश से नमरूद पैदा हुआ; ज़मीन पर पहले वही बहादुरी करने लगा।
11 ೧೧ ಮಿಚ್ರಯಿಮ್ಯರಿಂದ ಲೂದ್ಯರೂ, ಅನಾಮ್ಯರೂ, ಲೆಹಾಬ್ಯರೂ, ನಫ್ತುಹ್ಯರೂ,
और मिस्र से लूदी और अनामी और लिहाबी और नफ़तूही,
12 ೧೨ ಪತ್ರುಸ್ಯರೂ, ಕಸ್ಲುಹ್ಯರೂ, ಕಫ್ತೋರ್ಯರೂ ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದರು.
और फ़तरूसी और कसलूही जिनसे फ़िलिस्ती निकले, कफ़्तूरी पैदा हुए।
13 ೧೩ ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್, ನಂತರ ಹೇತ್ ಎಂಬವನು ಹುಟ್ಟಿದನು.
और कनान से सैदा जो उसका पहलौठा था, और हित्त,
14 ೧೪ ಇದಲ್ಲದೆ ಯೆಬೂಸಿಯರೂ, ಅಮೋರಿಯರೂ, ಗಿರ್ಗಾಷಿಯರೂ,
और यबूसी और अमोरी और जिरजाशी,
15 ೧೫ ಹಿವ್ವಿಯರೂ, ಅರ್ಕಿಯರೂ, ಸೀನಿಯರೂ,
और हव्वी और 'अर्क़ी और सीनी,
16 ೧೬ ಅರ್ವಾದಿಯರೂ, ಚೆಮಾರಿಯರೂ ಮತ್ತು ಹಮಾತಿಯರೂ ಕಾನಾನನಿಂದ ಹುಟ್ಟಿದವರು.
और अरवादी और सिमारी और हिमाती पैदा हुए।
17 ೧೭ ಶೇಮನ ಸಂತಾನದವರು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್ ಎಂಬುವರು.
बनी सिम: 'ऐलाम और असूर और अरफ़कसद और लूद और अराम और 'ऊज़ और हूल और जतर और मसक हैं।
18 ೧೮ ಅರ್ಪಕ್ಷದನಿಂದ ಶೆಲಹನೂ ಮತ್ತು ಶೆಳಹನಿಂದ ಏಬೆರನೂ ಹುಟ್ಟಿದನು.
और अरफ़कसद से सिलह पैदा हुआ और सिलह से इब्र पैदा हुआ।
19 ೧೯ ಏಬೆರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗ್ (ವಿಂಗಡನೆ) ಎಂಬ ಹೆಸರು. ಇವನ ಕಾಲದಲ್ಲಿ ಭೂಮಿಯ ಜನರು ವಿಂಗಡಿಸಲ್ಪಟ್ಟರು. ಇವನ ತಮ್ಮನ ಹೆಸರು ಯೊಕ್ತಾನ್.
और इब्र से दो बेटे पहले का नाम फ़लज था क्यूँकि उसके अय्याम में ज़मीन बटी, और उसके भाई का नाम युक्तान था।
20 ೨೦ ಯೋಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,
और युक्तान से अलमूदाद और सलफ़ और हसर मावत और इराख़,
21 ೨೧ ಹದೋರಾಮ್, ಊಜಾಲ್, ದಿಕ್ಲ,
और हदूराम और ऊज़ाल और दिक़ला,
22 ೨೨ ಎಬಾಲ್, ಅಬೀಮಾಯೇಲ್, ಶೆಬಾ,
और 'ऐबाल और अबीमाएल और सबा,
23 ೨೩ ಓಫೀರ್, ಹವೀಲಾ ಮತ್ತು ಯೋಬಾಬ್ ಎಂಬುವರು.
और ओफ़ीर और हवीला और यूबाब पैदा हुए; यह सब बनी युक्तान हैं।
24 ೨೪ ಶೇಮನ ಸಂತಾನದವರು: ಅರ್ಪಕ್ಷದ್, ಶೆಲಹ,
सिम, अरफ़कसद, सिलह,
25 ೨೫ ಏಬೆರ್, ಪೆಲೆಗ್, ರೆಯೂ,
इब्र, फ़लज, र’ऊ,
26 ೨೬ ಸೆರೂಗ್, ನಾಹೋರ್, ತೆರಹ,
सरुज, नहूर, तारह,
27 ೨೭ ಅಬ್ರಾಮ್ ಎಂಬ ಹೆಸರು ಹೊಂದಿದ ಅಬ್ರಹಾಮ ಎಂಬುವರು.
इब्रहाम या'नी अब्रहाम।
28 ೨೮ ಅಬ್ರಹಾಮನ ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್.
अब्रहाम के बेटे: इस्हाक़ और इस्मा'ईल थे।
29 ೨೯ ಇಷ್ಮಾಯೇಲರ ವಂಶಾವಳಿ: ಇಷ್ಮಾಯೇಲನಿಗೆ ಮೊದಲು ಹುಟ್ಟಿದವನು ನೆಬಾಯೋತ್, ಆ ಮೇಲೆ ಹುಟ್ಟಿದವರು ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
उनकी औलाद यह हैं: इस्मा'ईल का पहलौठा नबायोत उसके बाद कीदार और अदबिएल और मिबसाम,
30 ೩೦ ಮಿಷ್ಮ, ದೂಮಾ, ಮಸ್ಸ, ಹದದ್, ತೇಮ,
मिशमा'अ और दूमा और मसा, हदद और तेमा,
31 ೩೧ ಯೆಟೂರ್, ನಾಫೀಷ್ ಮತ್ತು ಕೇದೆಮ್ ಎಂಬುವರು.
यतूर, नाफ़ीस, क़िदमा; यह बनीइस्मा'ईल हैं।
32 ೩೨ ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಸಂತಾನದವರು: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ ಎಂಬವರು. ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರನ್ನು ಪಡೆದನು.
और अब्रहाम की हरम क़तूरा के बेटे यह हैं: उसके बत्न से ज़िमरान युकसान और मिदान और मिदियान और इस्बाक़ और सूख़ पैदा हुए और बनी युक़सान: सिबा और ददान हैं।
33 ೩೩ ಏಫ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬವರು ಮಿದ್ಯಾನನಿಂದ ಹುಟ್ಟಿದವರು. ಇವರೆಲ್ಲರೂ ಕೆಟೂರಳ ಸಂತತಿಯವರು.
और बनी मिदियान: 'एफ़ा और 'इफ़्र और हनूक और अबीदा'अ इल्दू'आ हैं; यह सब बनी क़तूरा हैं।
34 ೩೪ ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಏಸಾವ ಮತ್ತು ಇಸ್ರಾಯೇಲ್ ಇಸಾಕನ ಮಕ್ಕಳು.
और अब्रहाम से इस्हाक़ पैदा हुआ। बनी इस्हाक़: 'ऐसौ और इस्राईल थे।
35 ೩೫ ಏಸಾವನ ವಂಶಸ್ಥರು ಯಾರೆಂದರೆ ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ.
बनी 'ऐसौ: इलिफ़ज़ और र'ऊएल और य'ऊस और यालाम और क़ोरह हैं।
36 ೩೬ ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್; ತಿಮ್ನ ಮತ್ತು ಅಮಾಲೇಕ್ ಎಂಬವರು.
बनी इलिफ़ज़ तेमान और ओमर और सफ़ी और जा'ताम, क़नज़, और तिम्ना' और 'अमालीक़ हैं।
37 ೩೭ ರೆಯೂವೇಲನ ಮಕ್ಕಳು: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.
बनी र'ऊएल: नहत, ज़ारह, सम्मा और मिज़्ज़ा हैं।
38 ೩೮ ಸೇಯೀರನಿಂದ ಹುಟ್ಟಿದವರು ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್ ಸೇಯೀರನ ಮಕ್ಕಳು.
और बनी श'ईर: लोतान और सोबल और सबा'ऊन और 'अना और दीसोन और एसर और दीसान हैं।
39 ೩೯ ಲೋಟಾನನ ಮಕ್ಕಳು ಹೋರೀ ಮತ್ತು ಹೋಮಾಮ್. ಲೋಟಾನನ ತಂಗಿ ತಿಮ್ನ.
और हूरी और होमाम लूतान के बेटे थे, और तिम्ना' लोतान की बहन थी।
40 ೪೦ ಶೋಬಾಲನ ಮಕ್ಕಳು ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್. ಚಿಬ್ಬೋನನ ಮಕ್ಕಳು ಅಯ್ಯಾಹ ಮತ್ತು ಅನಾಹ.
बनी सोबल: 'अल्यान और मानहत 'एबाल सफ़ी और ओनाम हैं। अय्याह और 'अना सबा'ऊन के बेटे थे।
41 ೪೧ ಅನಾಹನ ಮಗನು ದೀಶೋನ್. ದೀಶೋನನ ಮಕ್ಕಳು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
और 'अना का बेटा दीसोन था; और हमरान और इश्बान और यित्रान और किरान दीसोन के बेटे थे।
42 ೪೨ ಏಚೆರನ ಮಕ್ಕಳು ಬಿಲ್ಹಾನ್, ಜಾವಾನ್ ಮತ್ತು ಯಾಕಾನ್. ದೀಶಾನನ ಮಕ್ಕಳು ಊಚ್ ಮತ್ತು ಅರಾನ್.
और एसर के बेटे: बिलहान और ज़ा'वान और या'क़ान थे और ऊज़ और अरान दीसान के बेटे थे।
43 ೪೩ ಇಸ್ರಾಯೇಲರ ಅರಸರು ಆಳ್ವಿಕೆ ಮಾಡುವುದಕ್ಕಿಂತ ಮೊದಲು ಎದೋಮ್ ದೇಶದಲ್ಲಿ ಅರಸರು ಆಳುತ್ತಿದ್ದರು. ಇವರಲ್ಲಿ ಬೆಯೋರನ ಮಗನಾದ ಬೆಳನು ಮೊದಲನೆಯವನು. ಅವನ ರಾಜಧಾನಿ ಹೆಸರು ದಿನ್ಹಾಬಾ.
और जिन बादशाहों ने मुल्क — ए — अदोम पर उस वक़्त हुकूमत की जब बनी — इस्राईल पर कोई बादशाह हुक्मरान न था वह यह हैं: बाला' बिन ब'ओर; उसके शहर का नाम दिन्हाबा था।
44 ೪೪ ಬೆಳನು ಸತ್ತ ನಂತರ ಬೊಚ್ರದವನಾದ ಜೆರಹನ ಮಗ ಯೋಬಾಬನು ಅಧಿಪತ್ಯಕ್ಕೆ ಬಂದನು.
और बाला' मर गया और यूबाब बिन ज़ारह जो बुसराही था उसकी जगह बादशाह हुआ।
45 ೪೫ ಯೋಬಾಬನು ಸತ್ತ ಮೇಲೆ ತೇಮಾನೀಯರ ದೇಶದವನಾದ ಹುಷಾಮನು ಆಳ್ವಿಕೆ ಮಾಡಿದನು.
और यूबाब मर गया और हशाम जो तेमान के 'इलाक़े का था उसकी जगह बादशाह हो हुआ।
46 ೪೬ ಹುಷಾಮನು ಸತ್ತ ಮೇಲೆ ಮೋವಾಬ್ಯರ ಬೈಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.
और हशाम मर गया और हदद बिन बिदद, जिसने मिदियानियों को मोआब के मैदान में मारा उसकी जगह बादशाह हुआ और उसके शहर का नाम 'अवीत था।
47 ೪೭ ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.
और हदद मर गया और शमला जो मसरिक़ा का था, उसकी जगह बादशाह हुआ।
48 ೪೮ ಸಮ್ಲಾಹನು ಸತ್ತ ಮೇಲೆ ಯೂಫ್ರೆಟಿಸ್ ನದಿ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
और शमला मर गया और साउल जो दरिया — ए — फ़रात के पास के रहोबोत का बाशिंदा था उसकी जगह बादशाह हुआ।
49 ೪೯ ಸೌಲನು ಸತ್ತ ಮೇಲೆ ಅಕ್ಬೋರನ ಮಗನಾದ ಬಾಳ್ಹಾನಾನು ಅರಸನಾದನು.
और साउल मर गया और बा'ल — हनान बिन अकबूर उसकी जगह बादशाह हुआ।
50 ೫೦ ಬಾಳ್ಹಾನಾನ್ ಸತ್ತ ಮೇಲೆ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೇದಳ ಮಗಳು,
और बा'ल — हनान मर गया और हदद उसकी जगह बादशाह हुआ; उसके शहर का नाम फ़ा'ई और उसकी बीवी का नाम महेतबेल था, जो मतरिद बिन्त मेज़ाहाब की बेटी थी।
51 ೫೧ ಹದದನು ಸತ್ತ ನಂತರ ಎದೋಮ್ಯ ಕುಲಪತಿಗಳಾದವರು ಯಾರೆಂದರೆ, ತಿಮ್ನ, ಅಲ್ಯ, ಯೆತೇತ್,
और हदद मर गया। फिर यह अदोम के रईस हुए: रईस तिम्ना’, रईस अलियाह, रईस यतीत,
52 ೫೨ ಒಹೋಲಿಬಾಮ, ಏಲ, ಪೀನೋನ್,
रईस ओहलीबामा, रईस ऐला, रईस फ़ीनोन,
53 ೫೩ ಕೆನೆಜ್, ತೇಮಾನ್, ಮಿಬ್ಚಾರ್,
रईस क़नज़, रईस तेमान, रईस मिब्सार,
54 ೫೪ ಮಗ್ದೀಯೇಲ್ ಮತ್ತು ಇರಾಮ್ ಇವರೇ.
रईस मज्दिएल, रईस 'इराम; अदोम के रईस यही हैं।

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 1 >