< ᏣᏂ ᏄᏍᏛ ᎠᏥᎾᏄᎪᏫᏎᎸᎢ 13 >

1 ᎠᎺᏉᎯᏃ ᎤᎶᏗ ᏃᏳᎯ ᎨᏒ ᎥᏆᎴᏔᏅᎩ, ᎠᎴ ᏅᎩ ᏗᎦᏅᏌᏗ ᏥᎪᎥᎩ ᎠᎺᏉᎯ ᏓᏳᏚᎩᏒᎩ, ᎦᎵᏉᎩ, ᏓᏍᎫᏓᏛᎩ ᎠᎴ ᎠᏍᎪᎯ ᏚᎷᎬᎩ, ᏚᎷᎬᏃ ᎠᏍᎪᎯ ᏚᎵᏍᏚᎸᎩ, ᏓᏍᎫᏓᏛᏃ ᎤᏁᎳᏅᎯ ᏚᏙᎥ ᎠᏐᏢᎢᏍᏙᏗ ᎨᏒ ᎪᏪᎸᎩ.
ಸಮುದ್ರ ತೀರದ ಮರಳಿನ ಮೇಲೆ ನಿಂತನು. ಸಮುದ್ರದಿಂದ ಒಂದು ಮೃಗವು ಏರಿಬರುವುದನ್ನು ಕಂಡೆನು. ಅದಕ್ಕೆ ಏಳು ತಲೆಗಳೂ, ಹತ್ತು ಕೊಂಬುಗಳೂ, ಕೊಂಬುಗಳ ಮೇಲೆ ಹತ್ತು ಕಿರೀಟಗಳೂ, ಹಣೆಗಳ ಮೇಲೆ ದೇವದೂಷಣೆಯ ನಾಮಗಳೂ ಇದ್ದವು.
2 ᎿᎭᏃ ᏅᎩ ᏗᎦᏅᏌᏗ ᏥᎪᎥᎯ ᏢᏓᏥᏧᎶᎸᏗ ᎾᏍᎩᏯ ᎨᏒᎩ, ᏚᎳᏍᎬᏃ ᏲᏅᏥᏚᎳᏍᎦ ᎾᏍᎩᏯ ᎨᏒᎩ, ᎠᎰᎵᏃ ᏢᏓᏥ ᎤᏃᏕᏅ ᎠᎰᎵ ᏥᏄᏍᏙ ᎾᏍᎩᏯ ᎨᏒᎩ, ᎢᎾᏛᏃ ᎤᏁᎸᎩ ᎤᏤᎵ ᎤᎵᏂᎬᎬᎢ ᎠᎴ ᎤᏤᎵ ᎤᏪᏗᏱ ᎨᏒᎢ, ᎠᎴ ᎤᏣᏗ ᎢᏳᏛᏁᎵᏓᏍᏗᏱ ᎤᎵᏍᎪᎸᏓᏁᎸᎩ.
ನಾನು ಕಂಡ ಮೃಗವು ಚಿರತೆಯಂತಿತ್ತು ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಿಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ಶಕ್ತಿಯನ್ನೂ, ಸಿಂಹಾಸನವನ್ನೂ, ಮಹಾ ಅಧಿಕಾರವನ್ನೂ ಕೊಟ್ಟನು.
3 ᏌᏉᏃ ᎠᏍᎫᏓᏛ ᎠᎩᎪᎲᎩ ᎬᏩᏲᎱᎯᏍᏗ ᎢᏴᏛ ᏣᏥᏐᏅᏃ ᏓᏤᎸᎩ; ᎠᎴ ᎾᏍᎩ ᎬᏩᏲᎱᎯᏍᏗ ᎢᏴᏛ ᎠᏥᏐᏅᏅ ᎤᏗᏩᏒᎯ ᎨᏒᎩ; ᎠᎴ ᏂᎬᎾᏛ ᎡᎶᎯ [ ᎠᏁᎯ ] ᎠᏂᏍᏆᏂᎪᏍᎬᎩ [ ᎠᎴ ] ᎠᏂᏍᏓᏩᏗᏒᎩ ᎾᏍᎩ Ꮎ ᏅᎩ-ᏗᎦᏅᏌᏗ.
ಅದರ ತಲೆಗಳಲ್ಲಿ ಒಂದು ತಲೆ ಗಾಯಹೊಂದಿ ಸಾಯುವ ಹಾಗಿರುವುದನ್ನು ಕಂಡೆನು. ಆ ಮರಣಕರವಾದ ಗಾಯವು ವಾಸಿಯಾಯಿತು, ಭೂಲೋಕದವರೆಲ್ಲರು ಆ ಮೃಗವನ್ನು ನೋಡುತ್ತಾ ಆಶ್ಚರ್ಯಪಟ್ಟರು.
4 ᎠᎴ ᎤᎾᏓᏙᎵᏍᏓᏁᎸᎩ ᎢᎾᏛ ᎾᏍᎩ ᏅᎩ-ᏓᎦᏅᏌᏗ ᎤᎵᏂᎬᎬ ᎤᏁᎸᎯ ᎨᏒᎢ; ᎠᎴ ᎾᏍᎩ ᏅᎩ-ᏗᎦᏅᏌᏗ ᎤᎾᏓᏙᎵᏍᏓᏁᎸᎩ, ᎯᎠ ᎾᏂᏪᏍᎬᎩ, ᎦᎪ ᏅᎩ-ᏗᎦᏅᏌᏗ ᏄᏍᏛ ᎾᏍᎩᏯ ᏄᏍᏗ? ᎦᎪ ᏰᎵ ᎾᏍᎩ ᏓᎿᎭᏩ ᏱᎾᏅᎦ?
ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವನಾದ್ದರಿಂದ ಅವರು ಆ ಘಟಸರ್ಪನಿಗೆ ಆರಾಧನೆ ಮಾಡಿದರು. ಇದಲ್ಲದೆ ಆ ಮೃಗಕ್ಕೂ ಆರಾಧನೆ ಮಾಡಿ, “ಈ ಮೃಗಕ್ಕೆ ಸಮಾನರು ಯಾರು? ಇದರ ವಿರುದ್ಧ ಯುದ್ಧ ಮಾಡುವುದಕ್ಕೆ ಯಾರು ಶಕ್ತರು?” ಎಂದರು.
5 ᎠᎴ ᎠᎰᎵ ᎠᏥᏁᎸᎩ ᎾᏍᎩ ᎬᏗᏍᎬ ᎤᏣᏘ ᎠᏢᏈᏍᏗ ᎨᏒ ᎦᏬᏂᏍᎬᎩ ᎠᎴ ᎠᏐᏢᎢᏍᏗᏍᎬᎩ; ᎠᎴ ᎠᎦᎵᏍᎪᎸᏓᏁᎸᎩ ᏅᎦᏍᎪᎯ ᏔᎵᎦᎵ ᎢᏯᏅᏙ ᎤᏕᏗᏱ.
ಬಡಾಯಿಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು ಮತ್ತು ನಲವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು.
6 ᎠᎴ ᎠᎰᎵ ᎤᏍᏚᎢᏒᎩ ᎤᏁᎳᏅᎯ ᎠᏐᏢᎢᏍᏗᏍᎬᎢ, ᏚᏙᎥ ᎦᎬᏩᏐᏢᏙᏗᏱ, ᎠᎴ ᎾᏍᎩ ᎤᏤᎵ ᎦᎵᏦᏛᎢ, ᎠᎴ ᎾᏍᎩ Ꮎ ᎦᎸᎳᏗ ᎠᏁᎯ.
ಆ ಮೃಗವು ಬಾಯಿದೆರೆದು ದೇವರನ್ನು ದೂಷಿಸಿದ್ದಲ್ಲದೆ ಆತನ ನಾಮವನ್ನೂ, ಆತನು ವಾಸಿಸುವ ನಿವಾಸವನ್ನೂ, ಪರಲೋಕ ನಿವಾಸಿಗಳನ್ನೂ ದೂಷಿಸಿತು.
7 ᎠᎴ ᎾᏍᎩ ᎠᏥᏁᎸᎩ ᎤᎾᏓᏅᏘ ᏓᎿᎭᏩ ᎢᏳᏅᏁᏗᏱ, ᎠᎴ ᎾᏍᎩ ᏧᏎᎪᎩᏍᏗᏱ; ᎠᎴ ᎠᏥᏁᎸᎩ ᎾᏍᎩ ᎢᏳᏩᏂᏐᏗᏱ ᏗᎬᏩᏁᎶᏙᏗᏱ ᎾᏂᎥ ᏓᏂᎳᏍᏓᎳᏩᏗᏒᎢ, ᎠᎴ ᏧᏓᎴᏅᏛ ᏗᏂᏬᏂᏍᎩ ᎨᏒᎢ, ᎠᎴ ᎤᎾᏓᏤᎵᏛ ᏴᏫ ᏓᏁᏩᏗᏒᎢ.
ಇದಲ್ಲದೆ ದೇವಜನರ ಮೇಲೆ ಯುದ್ಧ ಮಾಡಿ ಅವರನ್ನು ಜಯಿಸುವುದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು ಮತ್ತು ಸಕಲ ಕುಲ, ಜನ, ಭಾಷೆ, ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
8 ᎠᎴ ᎾᏂᎥ ᎡᎶᎯ ᏓᏁᏩᏗᏒ ᏓᎬᏩᏓᏙᎵᏍᏓᏁᎵ, ᎾᏍᎩ ᏚᎾᏙᎥ ᏂᏗᎪᏪᎸᎾ ᎬᏂᏛ ᎪᏪᎵᎯ ᎾᏍᎩ ᎤᏃᏕᎾ ᎠᎩᎾ ᎤᏤᎵᎦ, ᎾᏍᎩ [ ᎤᏃᏕᎾ ᎠᎩᎾ ] ᎡᎶᎯ ᏧᏙᏢᏅ ᏅᏓᎬᏩᏓᎴᏅᏛ ᎠᏥᎸᎯ ᏥᎨᏎᎢ.
ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಮರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆದಿರುವುದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಅದಕ್ಕೆ ಆರಾಧನೆ ಮಾಡುವರು.
9 ᎩᎶ ᎦᎵᎷᎨᏍᏗ ᎾᏍᎩ ᏩᏛᎬᎦ.
ಕಿವಿಯುಳ್ಳವನು ಕೇಳಲಿ,
10 ᎩᎶ ᎠᏂᏴᎩ ᏓᏘᎾᏫᏗᏍᎨᏍᏗ ᎾᏍᎩ ᎠᏴᎩ ᎠᎦᏘᏁᏫᏛᏗ ᎨᏎᏍᏗ; ᎩᎶ ᎭᏰᎳᏍᏗ-ᎦᏅᎯᏛ ᎠᏓᎯᏍᏗᏍᎨᏍᏗ ᎾᏍᎩ ᎠᏎ ᎭᏰᎳᏍᏗ-ᎦᏅᎯᏛ ᎬᏗ ᎠᏥᎢᏍᏗ ᎨᏎᏍᏗ. ᎠᏂ ᎾᏍᎩ ᏗᏅᏂᏗᏳ ᎨᏒ ᎠᎴ ᎤᏃᎯᏳᏒ ᎤᎾᏓᏅᏘ [ ᎬᏂᎨᏒ ᏂᎦᎵᏍᏗᎭ.]
೧೦ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು, ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ.
11 ᎠᎴ ᏅᏩᏓᎴ ᏅᎩ-ᏗᎦᏅᏌᏗ ᎥᏥᎪᎥᎩ ᎦᏙᎯ ᏓᏳᏄᎪᏥᏗᏒᎩ; ᎠᎴ ᏔᎵ ᏚᎷᎬᎩ ᎤᏃᏕᎾ ᎠᎩᎾ ᏥᏚᎷᎪ ᎾᏍᎩᏯᎢ, ᎠᎴ ᎢᎾᏛ ᎦᏬᏂᏍᎬ ᎾᏍᎩᏯ ᎦᏬᏂᏍᎬᎩ.
೧೧ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು, ಅದು ಘಟಸರ್ಪದಂತೆ ಮಾತನಾಡಿತು.
12 ᎠᎴ ᎢᎬᏱ ᎤᎾᏄᎪᏨᎯ ᏅᎩ-ᏗᎦᏅᏌᏗ ᎾᏍᎩᏯ ᏄᎵᏂᎬᎬ ᏄᎵᏂᎬᎬᎩ, ᎠᎴ ᎡᎶᎯ ᎠᎴ ᎾᏍᎩ ᎾᎿᎭᎠᏁᎯ ᎤᎾᏓᏙᎵᏍᏓᏁᏗᏱ ᏂᏕᎬᏁᎲᎩ ᎢᎬᏱ ᎤᎾᏄᎪᏨᎯ ᏅᎩ-ᏗᎦᏅᏌᏗ, ᎾᏍᎩ ᎬᏩᏲᎱᎯᏍᏗ ᎨᏒ ᎢᏴᏛ ᎠᏥᏐᏅᏅ ᎤᏗᏩᏒᎯ.
೧೨ಈ ಮೃಗವು ಮೊದಲನೆಯ ಮೃಗದ ಎದುರು ತನ್ನ ಅಧಿಕಾರವನ್ನೆಲ್ಲಾ ನಡೆಸಿ, ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು.
13 ᎠᎴ ᎤᏣᏘ ᎤᏍᏆᏂᎪᏗ ᏕᎤᎸᏫᏍᏓᏁᎭ, ᎾᏍᎩ ᎠᏥᎸ ᎦᎸᎳᏗ ᏅᏓᏳᎶᎯᏍᏗᏱ ᎠᏂᏃ ᎡᎶᎯ ᎤᏬᏥᎯᏍᏗᏱ ᏂᎬᏁᎭ ᏴᏫ ᎠᏥᎦᏔᎲᎢ,
೧೩ಇದು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಇಳಿದುಬರುವಂತಹ ಅದ್ಭುತಕಾರ್ಯಗಳನ್ನು ಮಾಡುತ್ತಾ,
14 ᎠᎴ ᎡᎶᎯ ᎠᏁᎯ ᏕᎦᎶᏄᎮᎭ ᎬᏗᏍᎬ ᎤᏍᏆᏂᎪᏗ ᏗᎬᏩᎸᏫᏍᏓᏁᏗ ᎨᏒ ᎠᎦᏔᎲ ᏅᎩ-ᏗᎦᏅᏌᏗ; ᎯᎠ ᏂᏕᎦᏪᏎᎭ ᎾᏍᎩ Ꮎ ᎡᎶᎯ ᎠᏁᎯ, ᎾᏍᎩ ᏅᎩ-ᏗᎦᏅᏌᏗ ᏗᏟᎶᏍᏔᏅᎯ ᎢᏦᏢᎾ, ᎾᏍᎩ ᎭᏰᎳᏍᏗ-ᎦᏅᎯᏛ ᎬᏗ ᎠᏥᏐᏅᏅᎯ ᎠᎴ ᏧᏛᏂᏛᎩ.
೧೪ಆ ಮೊದಲನೆಯ ಮೃಗದ ಸನ್ನಿಧಿಯಲ್ಲಿ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವಿರುವುದರಿಂದ ಭೂನಿವಾಸಿಗಳನ್ನು ಮರಳುಗೊಳಿಸಿತ್ತು. ಅವರಿಗೆ, ಕತ್ತಿಯಿಂದ ಗಾಯಹೊಂದಿ ಸಾಯದೆ ಬದುಕಿದ ಮೃಗದ ಘನಕ್ಕಾಗಿ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಬೋಧಿಸಿತು.
15 ᎠᎴ ᎤᎲᎩ ᎬᏃᏛ ᎢᏳᏩᏁᏗᏱ ᎾᏍᎩ Ꮎ ᏅᎩ-ᏗᎦᏅᏌᏗ ᏣᎦᏟᎶᏍᏔᏅᎯ, ᎾᏍᎩ ᎬᏩᏬᏂᎯᏍᏗ ᎢᏳᎵᏍᏙᏗᏱ ᎾᏍᎩ Ꮎ ᏅᎩ-ᏗᎦᏅᏌᏗ ᏣᎦᏟᎶᏍᏔᏅᎯ, ᎠᎴ ᎾᏍᎩ ᎢᏳᏩᏂᏐᏗᏱ ᏗᎨᏥᎢᏍᏗᏱ ᎾᏂᎥ ᎾᎾᏓᏙᎵᏍᏓᏁᎲᎾ ᎾᏍᎩ Ꮎ ᏅᎩᏗᎦᏅᏌᏗ ᏣᎦᏟᎶᏍᏔᏅᎯ.
೧೫ಇದಲ್ಲದೆ ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ, ತನ್ನನ್ನು ಆರಾಧಿಸದವರೆಲ್ಲರಿಗೂ ಮರಣದಂಡನೆಯಾಗುವಂತೆ ಮಾಡುವ ಶಕ್ತಿಯು ಆದಕ್ಕಿತ್ತು.
16 ᎠᎴ ᎾᏍᎩ ᏄᏩᏂᏌᏅᎩ ᏂᎦᏗᏳ ᏧᎾᏍᏗᏱ ᎠᎴ ᏧᎾᏛᎾ, ᏧᏁᎿᎭᎢ ᎠᎴ ᎤᏲ ᎢᏳᎾᏛᎿᎭᏕᎩ, ᏂᏗᎨᏥᎾᏝᎥᎾ ᎠᎴ ᏗᎨᏥᎾᏝᎢ, ᏗᎨᎪᏪᎶᏗᏱ ᏗᏂᎦᏘᏏᏗᏢ ᏧᏃᏰᏂ, ᎠᎴ ᏗᏂᎬᏓᎨᏂ;
೧೬ಈ ಎರಡನೆಯ ಮೃಗವು, ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತನ್ನು ಹೊಂದಬೇಕೆಂದು ಒತ್ತಾಯ ಮಾಡಿತ್ತು.
17 ᎠᎴ ᎾᏍᎩ ᎩᎶ ᎬᏩᏩᎯᏍᏗ ᏂᎨᏒᎾ ᎠᎴ ᎬᏩᎾᏗᏅᏗ ᏂᎨᏒᎾ ᎢᏳᎵᏍᏙᏗᏱ, ᎾᏍᎩ Ꮎ ᎤᏩᏒ ᎠᎪᏪᎵ, ᎠᎴ ᏚᏙᎥᏉ ᏅᎩ-ᏗᎦᏅᏌᏗ ᎠᎪᏪᎶᏔᏅᎯ, ᎠᎴ ᏚᏙᎥ ᎢᎦᎢ ᎠᏎᏍᏗᏱ ᎨᏒ ᎠᎪᏪᎶᏔᏅᎯ.
೧೭ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಆ ಗುರುತು ಯಾವುದೆಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಸಂಖ್ಯೆ.
18 ᎠᏂ ᎠᎦᏙᎥᎯᏍᏗ ᎨᏒ ᎪᎱᏍᏗ ᎢᏛᏓ. ᎩᎶ ᎤᏬᎵᏣᏘ ᎨᏎᏍᏗ ᏩᏎᎦ ᎢᎦᎢ ᎨᏒ ᎠᎦᏎᏍᏗᏱ ᏅᎩ-ᏗᎦᏅᏎᏗ; ᏴᏫᏰᏃ ᎤᏎᏍᏗ ᎨᏒ ᎤᎬᏩᎳ; ᎠᎴ ᎾᏍᎩ ᎠᎦᏎᏍᏗ ᎨᏒ ᎯᎠ ᏂᎦᎥ, ᏑᏓᎵᏧᏈ ᏑᏓᎳᏍᎪᎯ ᏑᏓᎵᎦᎵ.
೧೮ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ. ಅದರ ಸಂಖ್ಯೆಯು 666.

< ᏣᏂ ᏄᏍᏛ ᎠᏥᎾᏄᎪᏫᏎᎸᎢ 13 >