< أعمال 25 >

فَلَمَّا قَدِمَ فَسْتُوسُ إِلَى ٱلْوِلَايَةِ صَعِدَ بَعْدَ ثَلَاثَةِ أَيَّامٍ مِنْ قَيْصَرِيَّةَ إِلَى أُورُشَلِيمَ. ١ 1
ಫೆಸ್ತನು ಅಧಿಕಾರವಹಿಸಿಕೊಂಡು ಮೂರು ದಿನಗಳ ನಂತರ ಕೈಸರೈಯದಿಂದ ಯೆರೂಸಲೇಮಿಗೆ ಹೋದನು.
فَعَرَضَ لَهُ رَئِيسُ ٱلْكَهَنَةِ وَوُجُوهُ ٱلْيَهُودِ ضِدَّ بُولُسَ، وَٱلْتَمَسُوا مِنْهُ ٢ 2
ಅಲ್ಲಿ ಮುಖ್ಯಯಾಜಕರು ಹಾಗೂ ಯೆಹೂದ್ಯ ನಾಯಕರು ಅವರ ಮುಂದೆ ಬಂದು ಪೌಲನಿಗೆ ವಿರೋಧವಾಗಿ ಆರೋಪ ಮಾಡಿದರು.
طَالِبِينَ عَلَيْهِ مِنَّةً، أَنْ يَسْتَحْضِرَهُ إِلَى أُورُشَلِيمَ، وَهُمْ صَانِعُونَ كَمِينًا لِيَقْتُلُوهُ فِي ٱلطَّرِيقِ. ٣ 3
ತಮಗೆ ದಯೆತೋರಿ ಪೌಲನನ್ನು ಕೂಡಲೇ ಯೆರೂಸಲೇಮಿಗೆ ವರ್ಗಾಯಿಸಬೇಕೆಂದು ಫೆಸ್ತನನ್ನು ಬೇಡಿಕೊಂಡರು. ಏಕೆಂದರೆ ಪೌಲನು ಹಿಂದಿರುಗುವಾಗ ಮಾರ್ಗದಲ್ಲೇ ಅವನನ್ನು ಕೊಲ್ಲಬೇಕೆಂದು ಹೊಂಚುಹಾಕಿಕೊಂಡಿದ್ದರು.
فَأَجَابَ فَسْتُوسُ أَنْ يُحْرَسَ بُولُسُ فِي قَيْصَرِيَّةَ، وَأَنَّهُ هُوَ مُزْمِعٌ أَنْ يَنْطَلِقَ عَاجِلًا. ٤ 4
ಆದ್ದರಿಂದ ಫೆಸ್ತನು ಉತ್ತರವಾಗಿ, “ಪೌಲನು ಕೈಸರೈಯದಲ್ಲಿ ಕಾವಲೊಳಗಿದ್ದಾನೆ. ನಾನೇ ಅಲ್ಲಿಗೆ ಬೇಗ ಹೊಗಬೇಕೆಂದಿದ್ದೇನೆ.
وَقَالَ: «فَلْيَنْزِلْ مَعِي ٱلَّذِينَ هُمْ بَيْنَكُمْ مُقْتَدِرُونَ. وَإِنْ كَانَ فِي هَذَا ٱلرَّجُلِ شَيْءٌ فَلْيَشْتَكُوا عَلَيْهِ». ٥ 5
ನಿಮ್ಮಲ್ಲಿಯ ಕೆಲವು ನಾಯಕರು ನನ್ನೊಂದಿಗೆ ಅಲ್ಲಿಗೆ ಬರಲಿ. ಅವನೇನಾದರೂ ತಪ್ಪು ಮಾಡಿದ್ದರೆ ಅವನ ಮೇಲಿನ ದೂರುಗಳನ್ನು ಆಪಾದಿಸಲಿ,” ಎಂದನು.
وَبَعْدَ مَا صَرَفَ عِنْدَهُمْ أَكْثَرَ مِنْ عَشَرَةِ أَيَّامٍ ٱنْحَدَرَ إِلَى قَيْصَرِيَّةَ. وَفِي ٱلْغَدِ جَلَسَ عَلَى كُرْسِيِّ ٱلْوِلَايَةِ وَأَمَرَ أَنْ يُؤْتَى بِبُولُسَ. ٦ 6
ಎಂಟು ಹತ್ತು ದಿನಗಳನ್ನು ಅವರೊಂದಿಗೆ ಕಳೆದ ತರುವಾಯ ಅವನು ಕೈಸರೈಯಕ್ಕೆ ಹೋದನು. ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು ತನ್ನ ಮುಂದೆ ಪೌಲನನ್ನು ಕರೆತರಬೇಕೆಂದು ಆಜ್ಞಾಪಿಸಿದನು.
فَلَمَّا حَضَرَ، وَقَفَ حَوْلَهُ ٱلْيَهُودُ ٱلَّذِينَ كَانُوا قَدِ ٱنْحَدَرُوا مِنْ أُورُشَلِيمَ، وَقَدَّمُوا عَلَى بُولُسَ دَعَاوِيَ كَثِيرَةً وَثَقِيلَةً لَمْ يَقْدِرُوا أَنْ يُبَرْهِنُوهَا. ٧ 7
ಪೌಲನು ಅಲ್ಲಿಗೆ ಬಂದಾಗ, ಯೆರೂಸಲೇಮಿನಿಂದ ಬಂದ ಯೆಹೂದ್ಯರು ಅವನ ಸುತ್ತಲೂ ಎದ್ದು ನಿಂತು, ಅನೇಕ ತೀವ್ರ ಆಪಾದನೆಗಳನ್ನು ಅವನ ವಿರುದ್ಧ ಹೊರಿಸಿದರು. ಆದರೆ ಅವುಗಳನ್ನು ರುಜುವಾತುಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ.
إِذْ كَانَ هُوَ يَحْتَجُّ: «أَنِّي مَا أَخْطَأْتُ بِشَيْءٍ، لَا إِلَى نَامُوسِ ٱلْيَهُودِ وَلَا إِلَى ٱلْهَيْكَلِ وَلَا إِلَى قَيْصَرَ». ٨ 8
ಆಗ ಪೌಲನು ತನ್ನ ಪ್ರತಿವಾದವನ್ನು ಮುಂದಿಟ್ಟು: “ನಾನು ಯೆಹೂದ್ಯರ ನಿಯಮಕ್ಕೆ ವಿರೋಧವಾಗಲಿ, ದೇವಾಲಯಕ್ಕೆ ವಿರೋಧವಾಗಲಿ, ಕೈಸರನ ವಿರೋಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ,” ಎಂದನು.
وَلَكِنَّ فَسْتُوسَ إِذْ كَانَ يُرِيدُ أَنْ يُودِعَ ٱلْيَهُودَ مِنَّةً، أَجَابَ بُولُسَ قَائِلًا: «أَتَشَاءُ أَنْ تَصْعَدَ إِلَى أُورُشَلِيمَ لِتُحَاكَمَ هُنَاكَ لَدَيَّ مِنْ جِهَةِ هَذِهِ ٱلْأُمُورِ؟». ٩ 9
ಫೆಸ್ತನು ಯೆಹೂದ್ಯರ ಮೆಚ್ಚುಗೆಯನ್ನು ಗಳಿಸಲು ಬಯಸಿ ಪೌಲನಿಗೆ, “ನೀನು ಯೆರೂಸಲೇಮಿಗೆ ಹೋಗಿ, ಅಲ್ಲಿ ನನ್ನೆದುರಿನಲ್ಲಿ ಈ ದೂರುಗಳ ನ್ಯಾಯವಿಚಾರಣೆಗಾಗಿ ಒಪ್ಪಿಕೊಳ್ಳುವಿಯೋ?” ಎಂದು ಕೇಳಿದನು.
فَقَالَ بُولُسُ: «أَنَا وَاقِفٌ لَدَى كُرْسِيِّ وِلَايَةِ قَيْصَرَ حَيْثُ يَنْبَغِي أَنْ أُحَاكَمَ. أَنَا لَمْ أَظْلِمِ ٱلْيَهُودَ بِشَيْءٍ، كَمَا تَعْلَمُ أَنْتَ أَيْضًا جَيِّدًا. ١٠ 10
ಅದಕ್ಕೆ ಪೌಲನು, “ಈಗ ನಾನು ಕೈಸರನ ನ್ಯಾಯಾಲಯದ ಎದುರಿನಲ್ಲಿ ನಿಂತುಕೊಂಡಿದ್ದೇನೆ. ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ನೀವೇ ಚೆನ್ನಾಗಿ ತಿಳಿದುಕೊಂಡಿರುವಂತೆ ನಾನು ಯೆಹೂದ್ಯರಿಗೆ ವಿರೋಧವಾಗಿ ಯಾವ ತಪ್ಪನ್ನೂ ಮಾಡಿಲ್ಲ.
لِأَنِّي إِنْ كُنْتُ آثِمًا، أَوْ صَنَعْتُ شَيْئًا يَسْتَحِقُّ ٱلْمَوْتَ، فَلَسْتُ أَسْتَعْفِي مِنَ ٱلْمَوْتِ. وَلَكِنْ إِنْ لَمْ يَكُنْ شَيْءٌ مِمَّا يَشْتَكِي عَلَيَّ بِهِ هَؤُلَاءِ، فَلَيْسَ أَحَدٌ يَسْتَطِيعُ أَنْ يُسَلِّمَنِي لَهُمْ. إِلَى قَيْصَرَ أَنَا رَافِعٌ دَعْوَايَ!». ١١ 11
ಆದರೂ ಮರಣಶಿಕ್ಷೆಗೆ ಯೋಗ್ಯವಾದದ್ದೇನಾದರೂ ಮಾಡಿದ ಅಪರಾಧಿ ನಾನಾಗಿದ್ದರೆ, ಸಾಯಲಿಕ್ಕೂ ನಾನು ಹಿಂಜರಿಯುವುದಿಲ್ಲ. ಆದರೆ ಯೆಹೂದ್ಯರು ನನ್ನ ವಿರೋಧವಾಗಿ ತಂದಿರುವ ಆಪಾದನೆಗಳು ಸುಳ್ಳಾದವುಗಳಾದದ್ದರಿಂದ, ನನ್ನನ್ನು ಅವರಿಗೆ ಒಪ್ಪಿಸಲು ಯಾರಿಗೂ ಅಧಿಕಾರವಿಲ್ಲ. ನಾನು ನೇರವಾಗಿ ಕೈಸರನಿಗೇ ಮನವಿ ಮಾಡಿಕೊಳ್ಳುತ್ತೇನೆ,” ಎಂದು ಉತ್ತರಕೊಟ್ಟನು.
حِينَئِذٍ تَكَلَّمَ فَسْتُوسُ مَعَ أَرْبَابِ ٱلْمَشُورَةِ، فَأَجَابَ: «إِلَى قَيْصَرَ رَفَعْتَ دَعْوَاكَ. إِلَى قَيْصَرَ تَذْهَبُ!». ١٢ 12
ಆಗ ಫೆಸ್ತನು ತನ್ನ ನ್ಯಾಯಸಭೆಯೊಂದಿಗೆ ಸಮಾಲೋಚನೆ ಮಾಡಿ, “ನೀನು ಕೈಸರನಿಗೆ ಮನವಿ ಮಾಡಿಕೊಂಡಿರುವೆ, ಕೈಸರನ ಬಳಿಗೇ ಹೋಗು!” ಎಂದು ಉತ್ತರಿಸಿದನು.
وَبَعْدَمَا مَضَتْ أَيَّامٌ أَقْبَلَ أَغْرِيبَاسُ ٱلْمَلِكُ وَبَرْنِيكِي إِلَى قَيْصَرِيَّةَ لِيُسَلِّمَا عَلَى فَسْتُوسَ. ١٣ 13
ಕೆಲವು ದಿನಗಳ ನಂತರ ಫೆಸ್ತನನ್ನು ಅಭಿನಂದಿಸಲು ರಾಜ ಅಗ್ರಿಪ್ಪನು ಬೆರ್ನಿಕೆಯಳೊಂದಿಗೆ ಕೈಸರೈಯಕ್ಕೆ ಬಂದನು.
وَلَمَّا كَانَا يَصْرِفَانِ هُنَاكَ أَيَّامًا كَثِيرَةً، عَرَضَ فَسْتُوسُ عَلَى ٱلْمَلِكِ أَمْرَ بُولُسَ، قَائِلًا: «يُوجَدُ رَجُلٌ تَرَكَهُ فِيلِكْسُ أَسِيرًا، ١٤ 14
ಅವರು ಅಲ್ಲಿ ಅನೇಕ ದಿನಗಳನ್ನು ಕಳೆಯುತ್ತಿದ್ದಾಗ, ಫೆಸ್ತನು ಪೌಲನ ವಿಷಯವನ್ನು ರಾಜನೊಂದಿಗೆ ಚರ್ಚಿಸಿ, “ಕೈದಿಯಾಗಿ ಫೇಲಿಕ್ಸನು ಬಿಟ್ಟುಹೋದ ಒಬ್ಬ ಮನುಷ್ಯನಿದ್ದಾನೆ.
وَعَرَضَ لِي عَنْهُ رُؤَسَاءُ ٱلْكَهَنَةِ وَمَشَايِخُ ٱلْيَهُودِ لَمَّا كُنْتُ فِي أُورُشَلِيمَ طَالِبِينَ حُكْمًا عَلَيْهِ. ١٥ 15
ನಾನು ಯೆರೂಸಲೇಮಿಗೆ ಹೋದಾಗ ಮುಖ್ಯಯಾಜಕರೂ ಹಾಗೂ ಯೆಹೂದ್ಯರ ಹಿರಿಯರೂ ಅವನ ಮೇಲೆ ಆಪಾದನೆಗಳನ್ನು ತಂದು ಅವನಿಗೆ ವಿರೋಧವಾಗಿ ದಂಡನೆ ವಿಧಿಸಬೇಕೆಂದು ಕೇಳಿಕೊಂಡರು.
فَأَجَبْتُهُمْ أَنْ لَيْسَ لِلرُّومَانِيِّينَ عَادَةٌ أَنْ يُسَلِّمُوا أَحَدًا لِلْمَوْتِ قَبْلَ أَنْ يَكُونَ ٱلْمَشْكُوُّ عَلَيْهِ مُواجَهَةً مَعَ ٱلْمُشْتَكِينَ، فَيَحْصُلُ عَلَى فُرْصَةٍ لِلِٱحْتِجَاجِ عَنِ ٱلشَّكْوَى. ١٦ 16
“ಆಪಾದಿತನು ಆಪಾದನೆ ಹೊರಿಸುವವರ ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಹೊರಿಸಲಾದ ಆಪಾದನೆಗಳಿಗೆ ಪ್ರತಿವಾದ ಮಾಡಿಕೊಳ್ಳುವ ಮೊದಲು ಯಾವ ಮನುಷ್ಯನನ್ನೂ ಒಪ್ಪಿಸಿಕೊಡುವುದು ರೋಮ್ ಪದ್ಧತಿಯಲ್ಲ ಎಂದು ನಾನು ಅವರಿಗೆ ಹೇಳಿದೆನು.
فَلَمَّا ٱجْتَمَعُوا إِلَى هُنَا جَلَسْتُ مِنْ دُونِ إِمْهَالٍ فِي ٱلْغَدِ عَلَى كُرْسِيِّ ٱلْوِلَايَةِ، وَأَمَرْتُ أَنْ يُؤْتَى بِٱلرَّجُلِ. ١٧ 17
ಅವರು ನನ್ನೊಂದಿಗೆ ಇಲ್ಲಿಗೆ ಬಂದದ್ದರಿಂದ ನ್ಯಾಯವಿಚಾರಣೆಯನ್ನು ತಡಮಾಡದೆ ಪ್ರಾರಂಭಿಸಿದೆ. ಮರುದಿನ ನ್ಯಾಯವಿಚಾರಣೆ ನಡೆಸಿ ಪೌಲನೆಂಬ ಆ ಮನುಷ್ಯನನ್ನು ತರಬೇಕೆಂದು ಆಜ್ಞಾಪಿಸಿದೆ.
فَلَمَّا وَقَفَ ٱلْمُشْتَكُونَ حَوْلَهُ، لَمْ يَأْتُوا بِعِلَّةٍ وَاحِدَةٍ مِمَّا كُنْتُ أَظُنُّ. ١٨ 18
ಅವನ ಮೇಲೆ ಆಪಾದನೆ ಹೊರಿಸುವವರು ಮಾತನಾಡಲು ಎದ್ದು ನಿಂತಾಗ, ನಾನು ಭಾವಿಸಿದ ಯಾವುದೇ ಅಪರಾಧವನ್ನು ಅವರು ಅವನ ಮೇಲೆ ಹೊರಿಸಲಿಲ್ಲ.
لَكِنْ كَانَ لَهُمْ عَلَيْهِ مَسَائِلُ مِنْ جِهَةِ دِيَانَتِهِمْ، وَعَنْ وَاحِدٍ ٱسْمُهُ يَسُوعُ قَدْ مَاتَ، وَكَانَ بُولُسُ يَقُولُ: إِنَّهُ حَيٌّ. ١٩ 19
ಆದರೆ ಅವರಿಗೆ ತಮ್ಮ ಸಂಪ್ರದಾಯದ ಬಗ್ಗೆಯೂ ಸತ್ತು ಹೋಗಿದ್ದ ಯೇಸು ಎಂಬ ಮನುಷ್ಯನು ಜೀವಿಸುತ್ತಿದ್ದಾನೆಂದೂ ಪೌಲ ಹೇಳುವಂಥದ್ದರ ಬಗ್ಗೆ ವಾದವಿವಾದವಿತ್ತು.
وَإِذْ كُنْتُ مُرْتَابًا فِي ٱلْمَسْأَلَةِ عَنْ هَذَا قُلْتُ: أَلَعَلَّهُ يَشَاءُ أَنْ يَذْهَبَ إِلَى أُورُشَلِيمَ، وَيُحَاكَمَ هُنَاكَ مِنْ جِهَةِ هَذِهِ ٱلْأُمُورِ؟ ٢٠ 20
ನಾನು ಅಂಥಾ ವಿಚಾರಗಳ ಬಗ್ಗೆ ಅವನು ಯೆರೂಸಲೇಮಿಗೆ ಹೋಗಿ ಈ ಆಪಾದನೆಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಮನಸ್ಸಿದೆಯೋ ಎಂದು ಅವನನ್ನು ಕೇಳಿದೆನು.
وَلَكِنْ لَمَّا رَفَعَ بُولُسُ دَعْوَاهُ لِكَيْ يُحْفَظَ لِفَحْصِ أُوغُسْطُسَ، أَمَرْتُ بِحِفْظِهِ إِلَى أَنْ أُرْسِلَهُ إِلَى قَيْصَرَ». ٢١ 21
ಆದರೆ ಪೌಲನು ತನ್ನ ಬೇಡಿಕೆಯನ್ನು ನೇರವಾಗಿ ಕೈಸರನ ಬಳಿಗೆ ಕಳುಹಿಸುವವರೆಗೆ ಅವನನ್ನು ಕಾವಲಲ್ಲಿಡಬೇಕೆಂದು ಆಜ್ಞಾಪಿಸಿದ್ದೇನೆ,” ಎಂದು ಫೆಸ್ತನು ಹೇಳಿದನು.
فَقَالَ أَغْرِيبَاسُ لِفَسْتُوسَ: «كُنْتُ أُرِيدُ أَنَا أَيْضًا أَنْ أَسْمَعَ ٱلرَّجُلَ». فَقَالَ: «غَدًا تَسْمَعُهُ». ٢٢ 22
ಆಗ ಅಗ್ರಿಪ್ಪ ರಾಜನು, “ಈ ಮನುಷ್ಯನು ಹೇಳುವುದನ್ನು ನಾನೂ ಕೇಳಬೇಕೆಂದಿದ್ದೇನೆ,” ಎಂದು ಫೆಸ್ತನಿಗೆ ಹೇಳಿದನು. “ನಾಳೆಯೇ ಪೌಲನ ಬೇಡಿಕೆಯನ್ನು ಕೇಳುವಿರಿ,” ಎಂದು ಫೆಸ್ತನು ಉತ್ತರಕೊಟ್ಟನು.
فَفِي ٱلْغَدِ لَمَّا جَاءَ أَغْرِيبَاسُ وَبَرْنِيكِي فِي ٱحْتِفَالٍ عَظِيمٍ، وَدَخَلَا إِلَى دَارِ ٱلِٱسْتِمَاعِ مَعَ ٱلْأُمَرَاءِ وَرِجَالِ ٱلْمَدِينَةِ ٱلْمُقَدَّمِينَ، أَمَرَ فَسْتُوسُ فَأُتِيَ بِبُولُسَ. ٢٣ 23
ಮರುದಿನ ಅಗ್ರಿಪ್ಪನು ಹಾಗೂ ಬೆರ್ನಿಕೆಯು ಮಹಾ ವೈಭವದಿಂದ ಸೈನ್ಯಾಧಿಕಾರಿಗಳೊಂದಿಗೂ ಪಟ್ಟಣದ ಗಣ್ಯವ್ಯಕ್ತಿಗಳೊಂದಿಗೂ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯಂತೆ ಪೌಲನನ್ನು ಕರೆದುಕೊಂಡು ಬಂದರು.
فَقَالَ فَسْتُوسُ: «أَيُّهَا ٱلْمَلِكُ أَغْرِيبَاسُ وَٱلرِّجَالُ ٱلْحَاضِرُونَ مَعَنَا أَجْمَعُونَ، أَنْتُمْ تَنْظُرُونَ هَذَا ٱلَّذِي تَوَسَّلَ إِلَيَّ مِنْ جِهَتِهِ كُلُّ جُمْهُورِ ٱلْيَهُودِ فِي أُورُشَلِيمَ وَهُنَا، صَارِخِينَ أَنَّهُ لَا يَنْبَغِي أَنْ يَعِيشَ بَعْدُ. ٢٤ 24
ಆಗ ಫೆಸ್ತನು, “ಅಗ್ರಿಪ್ಪ ರಾಜನೇ, ನಮ್ಮ ಸಂಗಡ ಇಲ್ಲಿ ಸೇರಿ ಬಂದಿರುವವರೇ, ನೀವು ಕಾಣುತ್ತಿರುವ ಈ ಮನುಷ್ಯನು ಜೀವದಿಂದ ಉಳಿಯಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯೆಹೂದ್ಯರೆಲ್ಲರೂ ನನ್ನನ್ನು ಬೇಡಿಕೊಂಡಿದ್ದಾರೆ.
وَأَمَّا أَنَا فَلَمَّا وَجَدْتُ أَنَّهُ لَمْ يَفْعَلْ شَيْئًا يَسْتَحِقُّ ٱلْمَوْتَ، وَهُوَ قَدْ رَفَعَ دَعْوَاهُ إِلَى أُوغُسْطُسَ، عَزَمْتُ أَنْ أُرْسِلَهُ. ٢٥ 25
ಇವನು ಮರಣದಂಡನೆಗೆ ಯೋಗ್ಯವಾದ ಯಾವುದೇ ಅಪರಾಧ ಮಾಡಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದರೆ ಇವನು ನೇರವಾಗಿ ಚಕ್ರವರ್ತಿಗೇ ತನ್ನ ಬೇಡಿಕೆ ಸಲ್ಲಿಸಿದ್ದರಿಂದ ಇವನನ್ನು ರೋಮ್ ನಗರಕ್ಕೆ ಕಳುಹಿಸಲು ತೀರ್ಮಾನಿಸಿದ್ದೇನೆ.
وَلَيْسَ لِي شَيْءٌ يَقِينٌ مِنْ جِهَتِهِ لِأَكْتُبَ إِلَى ٱلسَّيِّدِ. لِذَلِكَ أَتَيْتُ بِهِ لَدَيْكُمْ، وَلَا سِيَّمَا لَدَيْكَ أَيُّهَا ٱلْمَلِكُ أَغْرِيبَاسُ، حَتَّى إِذَا صَارَ ٱلْفَحْصُ يَكُونُ لِي شَيْءٌ لِأَكْتُبَ. ٢٦ 26
ಆದರೂ ಇವನ ಬಗ್ಗೆ ಖಚಿತವಾಗಿ ತಮಗೆ ಬರೆಯಲು ನನಗೇನು ಇಲ್ಲದಿರುವುದರಿಂದ, ಅಗ್ರಿಪ್ಪ ರಾಜನೇ, ಇವನನ್ನು ತಮ್ಮ ಮುಂದೆ ತಂದಿದ್ದೇನೆ. ಹೀಗೆ ಈ ವಿಚಾರಣೆಯ ಮೂಲಕ ಬರೆಯಲು ನನಗೇನಾದರೂ ಸಿಕ್ಕಬಹುದು.
لِأَنِّي أَرَى حَمَاقَةً أَنْ أُرْسِلَ أَسِيرًا وَلَا أُشِيرَ إِلَى ٱلدَّعَاوِي ٱلَّتِي عَلَيْهِ». ٢٧ 27
ಏಕೆಂದರೆ ನಿಶ್ಚಿತವಾದ ಅಪರಾಧಗಳನ್ನು ಸೂಚಿಸದೆ ಒಬ್ಬ ಸೆರೆಯಾಳನ್ನು ಕಳುಹಿಸುವುದು ಸರಿಯಲ್ಲ ಎಂದು ನನಗನಿಸುತ್ತದೆ,” ಎಂದನು.

< أعمال 25 >