< اَلْمُلُوكِ ٱلْأَوَّلُ 3 >

وَصَاهَرَ سُلَيْمَانُ فِرْعَوْنَ مَلِكَ مِصْرَ، وَأَخَذَ بِنْتَ فِرْعَوْنَ وَأَتَى بِهَا إِلَى مَدِينَةِ دَاوُدَ إِلَى أَنْ أَكْمَلَ بِنَاءَ بَيْتِهِ وَبَيْتِ ٱلرَّبِّ وَسُورِ أُورُشَلِيمَ حَوَالَيْهَا. ١ 1
ಸೊಲೊಮೋನನು ಈಜಿಪ್ಟಿನ ಅರಸನಾದ ಫರೋಹನ ಸಂಗಡ ಬಂಧುತ್ವ ಮಾಡಿ, ಫರೋಹನ ಮಗಳನ್ನು ಮದುವೆಮಾಡಿಕೊಂಡನು. ಅವನು ತನ್ನ ಮನೆಯನ್ನೂ, ಯೆಹೋವ ದೇವರ ಆಲಯವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಸುತ್ತಲೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.
إِلَّا أَنَّ ٱلشَّعْبَ كَانُوا يَذْبَحُونَ فِي ٱلْمُرْتَفَعَاتِ، لِأَنَّهُ لَمْ يُبْنَ بَيْتٌ لِٱسْمِ ٱلرَّبِّ إِلَى تِلْكَ ٱلْأَيَّامِ. ٢ 2
ಆ ಕಾಲದವರೆಗೂ ಯೆಹೋವ ದೇವರ ಹೆಸರಿಗಾಗಿ ಆಲಯ ಇರಲಿಲ್ಲ. ಆದುದರಿಂದ, ಜನರು ಎತ್ತರದ ಸ್ಥಳಗಳಲ್ಲಿ ಬಲಿ ಅರ್ಪಿಸುತ್ತಿದ್ದರು.
وَأَحَبَّ سُلَيْمَانُ ٱلرَّبَّ سَائِرًا فِي فَرَائِضِ دَاوُدَ أَبِيهِ، إِلَّا أَنَّهُ كَانَ يَذْبَحُ وَيُوقِدُ فِي ٱلْمُرْتَفَعَاتِ. ٣ 3
ಸೊಲೊಮೋನನು ಯೆಹೋವ ದೇವರನ್ನು ಪ್ರೀತಿಸಿ, ತನ್ನ ತಂದೆ ದಾವೀದನ ಕಟ್ಟಳೆಯಲ್ಲಿ ನಡೆಯುತ್ತಾ ಇದ್ದನು. ಆದರೂ ತಾನು ಎತ್ತರ ಸ್ಥಳಗಳಲ್ಲಿ ಬಲಿಯನ್ನೂ, ಧೂಪವನ್ನೂ ಅರ್ಪಿಸುತ್ತಾ ಇದ್ದನು.
وَذَهَبَ ٱلْمَلِكُ إِلَى جِبْعُونَ لِيَذْبَحَ هُنَاكَ، لِأَنَّهَا هِيَ ٱلْمُرْتَفَعَةُ ٱلْعُظْمَى، وَأَصْعَدَ سُلَيْمَانُ أَلْفَ مُحْرَقَةٍ عَلَى ذَلِكَ ٱلْمَذْبَحِ. ٤ 4
ಗಿಬ್ಯೋನಿನ ಅತಿಮುಖ್ಯವಾದ ಉನ್ನತ ಸ್ಥಳಕ್ಕೆ ಅರಸನಾದ ಸೊಲೊಮೋನನು ಬಲಿಗಳನ್ನರ್ಪಿಸಲು ಹೋಗಿ, ಆ ಬಲಿಪೀಠದ ಮೇಲೆ ಸಾವಿರ ದಹನಬಲಿಗಳನ್ನು ಅರ್ಪಿಸಿದನು.
فِي جِبْعُونَ تَرَاءَى ٱلرَّبُّ لِسُلَيْمَانَ فِي حُلْمٍ لَيْلًا، وَقَالَ ٱللهُ: «ٱسْأَلْ مَاذَا أُعْطِيكَ». ٥ 5
ಅವನು ಗಿಬ್ಯೋನಿನಲ್ಲಿರುವಾಗ ರಾತ್ರಿಯಲ್ಲಿ ಸ್ವಪ್ನದೊಳಗೆ ಯೆಹೋವ ದೇವರು ಸೊಲೊಮೋನನಿಗೆ ಕಾಣಿಸಿಕೊಂಡರು. ದೇವರು ಅವನಿಗೆ, “ನಾನು ನಿನಗೆ ಏನು ವರ ಕೊಡಬೇಕು? ಕೇಳಿಕೋ,” ಎಂದರು.
فَقَالَ سُلَيْمَانُ: «إِنَّكَ قَدْ فَعَلْتَ مَعَ عَبْدِكَ دَاوُدَ أَبِي رَحْمَةً عَظِيمَةً حَسْبَمَا سَارَ أَمَامَكَ بِأَمَانَةٍ وَبِرٍّ وَٱسْتِقَامَةِ قَلْبٍ مَعَكَ، فَحَفِظْتَ لَهُ هَذِهِ ٱلرَّحْمَةَ ٱلْعَظِيمَةَ وَأَعْطَيْتَهُ ٱبْنًا يَجْلِسُ عَلَى كُرْسِيِّهِ كَهَذَا ٱلْيَوْمِ. ٦ 6
ಅದಕ್ಕೆ ಸೊಲೊಮೋನನು, “ನನ್ನ ತಂದೆಯಾಗಿರುವ ನಿಮ್ಮ ಸೇವಕನಾದ ದಾವೀದನು ನಿಮ್ಮ ಮುಂದೆ ನೀತಿಯಿಂದಲೂ, ಯಥಾರ್ಥವಾದ ಹೃದಯವುಳ್ಳವನಾಗಿಯೂ ನಡೆದದ್ದರಿಂದ, ನೀವು ಅವನಿಗೆ ಮಹಾಕರುಣೆಯನ್ನು ತೋರಿಸಿದ್ದೀರಿ. ಈ ಮಹಾಕರುಣೆಯನ್ನು ಮುಂದುವರೆಸುತ್ತಾ ಈ ದಿನ ಅವನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಮಗನನ್ನು ಕೊಟ್ಟಿದ್ದೀರಿ.
وَٱلْآنَ أَيُّهَا ٱلرَّبُّ إِلَهِي، أَنْتَ مَلَّكْتَ عَبْدَكَ مَكَانَ دَاوُدَ أَبِي، وَأَنَا فَتىً صَغِيرٌ لَا أَعْلَمُ ٱلْخُرُوجَ وَٱلدُّخُولَ. ٧ 7
“ಈಗ ನನ್ನ ದೇವರಾದ ಯೆಹೋವ ದೇವರೇ, ನೀವು ನನ್ನ ತಂದೆ ದಾವೀದನಿಗೆ ಬದಲಾಗಿ ನಿಮ್ಮ ಸೇವಕನನ್ನು ಅರಸನನ್ನಾಗಿ ಮಾಡಿದ್ದೀರಿ. ಆದರೆ ನಾನು ಚಿಕ್ಕ ಬಾಲಕನಾಗಿದ್ದು, ನನ್ನ ಕರ್ತವ್ಯವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿಲ್ಲ.
وَعَبْدُكَ فِي وَسَطِ شَعْبِكَ ٱلَّذِي ٱخْتَرْتَهُ، شَعْبٌ كَثِيرٌ لَا يُحْصَى وَلَا يُعَدُّ مِنَ ٱلْكَثْرَةِ. ٨ 8
ಇದಲ್ಲದೆ ನಿಮ್ಮ ಸೇವಕನಾದ ನಾನು ನೀವು ಆಯ್ದುಕೊಂಡಂಥ ಅಸಂಖ್ಯಾತ ಜನರ ಮಧ್ಯದಲ್ಲಿ ಇದ್ದೇನೆ.
فَأَعْطِ عَبْدَكَ قَلْبًا فَهِيمًا لِأَحْكُمَ عَلَى شَعْبِكَ وَأُمَيِّزَ بَيْنَ ٱلْخَيْرِ وَٱلشَّرِّ، لِأَنَّهُ مَنْ يَقْدِرُ أَنْ يَحْكُمَ عَلَى شَعْبِكَ ٱلْعَظِيمِ هَذَا؟» ٩ 9
ಆದ್ದರಿಂದ ನಿಮ್ಮ ಜನರನ್ನು ಪರಿಪಾಲಿಸುವುದಕ್ಕೆ, ಒಳ್ಳೆಯದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ, ನಿಮ್ಮ ಸೇವಕನಿಗೆ ತಿಳುವಳಿಕೆಯುಳ್ಳ ಹೃದಯವನ್ನು ಕೊಡಬೇಕು. ಏಕೆಂದರೆ ಈ ನಿಮ್ಮ ಮಹಾಜನರ ನ್ಯಾಯತೀರಿಸುವುದಕ್ಕೆ ಸಾಮರ್ಥ್ಯವುಳ್ಳವರು ಯಾರು?” ಎಂದನು.
فَحَسُنَ ٱلْكَلَامُ فِي عَيْنَيِ ٱلرَّبِّ، لِأَنَّ سُلَيْمَانَ سَأَلَ هَذَا ٱلْأَمْرَ. ١٠ 10
ಸೊಲೊಮೋನನು ಕೇಳಿದ ಈ ಮಾತು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದಾಗಿತ್ತು.
فَقَالَ لَهُ ٱللهُ: «مِنْ أَجْلِ أَنَّكَ قَدْ سَأَلْتَ هَذَا ٱلْأَمْرَ، وَلَمْ تَسْأَلْ لِنَفْسِكَ أَيَّامًا كَثِيرَةً وَلَا سَأَلْتَ لِنَفْسِكَ غِنًى، وَلَا سَأَلْتَ أَنْفُسَ أَعْدَائِكَ، بَلْ سَأَلْتَ لِنَفْسِكَ تَمْيِيزًا لِتَفْهَمَ ٱلْحُكْمَ، ١١ 11
ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ದೀರ್ಘಾಯುಷ್ಯ ಅಥವಾ ಸಂಪತ್ತನ್ನು ಕೇಳಲಿಲ್ಲ, ಅಥವಾ ನಿನ್ನ ಶತ್ರುಗಳ ಮರಣವನ್ನು ಕೇಳಿಲ್ಲ, ಆದರೆ ನ್ಯಾಯವನ್ನು ನಿರ್ವಹಿಸುವುದಕ್ಕಾಗಿ ನಿನಗೋಸ್ಕರ ವಿವೇಕವನ್ನು ಕೇಳಿದ್ದರಿಂದ,
هُوَذَا قَدْ فَعَلْتُ حَسَبَ كَلَامِكَ. هُوَذَا أَعْطَيْتُكَ قَلْبًا حَكِيمًا وَمُمَيِّزًا حَتَّى إِنَّهُ لَمْ يَكُنْ مِثْلُكَ قَبْلَكَ وَلَا يَقُومُ بَعْدَكَ نَظِيرُكَ. ١٢ 12
ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ನಿನಗೆ ಜ್ಞಾನವನ್ನೂ, ವಿವೇಚನೆಯುಳ್ಳ ಹೃದಯವನ್ನೂ ಕೊಟ್ಟಿದ್ದೇನೆ. ನಿನಗೆ ಸಮನಾದ ಜ್ಞಾನಿಯು ಈ ಮುಂಚೆಯೂ ಇರಲಿಲ್ಲ, ನಿನ್ನ ತರುವಾಯವೂ ಇರುವುದಿಲ್ಲ.
وَقَدْ أَعْطَيْتُكَ أَيْضًا مَا لَمْ تَسْأَلْهُ، غِنًى وَكَرَامَةً حَتَّى إِنَّهُ لَا يَكُونُ رَجُلٌ مِثْلَكَ فِي ٱلْمُلُوكِ كُلَّ أَيَّامِكَ. ١٣ 13
ನೀನು ಕೇಳದ ಐಶ್ವರ್ಯವನ್ನೂ, ಘನವನ್ನೂ ಕೊಟ್ಟಿದ್ದೇನೆ. ಆದ್ದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸುಗಳಲ್ಲಿ ಒಬ್ಬನೂ ಇರುವುದಿಲ್ಲ.
فَإِنْ سَلَكْتَ فِي طَرِيقِي وَحَفِظْتَ فَرَائِضِي وَوَصَايَايَ، كَمَا سَلَكَ دَاوُدُ أَبُوكَ، فَإِنِّي أُطِيلُ أَيَّامَكَ». ١٤ 14
ನೀನು, ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು, ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಕೈಗೊಂಡರೆ, ನಿನ್ನ ದಿವಸಗಳನ್ನು ಹೆಚ್ಚಿಸುವೆನು,” ಎಂದರು.
فَٱسْتَيْقَظَ سُلَيْمَانُ وَإِذَا هُوَ حُلْمٌ. وَجَاءَ إِلَى أُورُشَلِيمَ وَوَقَفَ أَمَامَ تَابُوتِ عَهْدِ ٱلرَّبِّ وَأَصْعَدَ مُحْرَقَاتٍ وَقَرَّبَ ذَبَائِحَ سَلَامَةٍ، وَعَمِلَ وَلِيمَةً لِكُلِّ عَبِيدِهِ. ١٥ 15
ತರುವಾಯ ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಸ್ವಪ್ನವೆಂದು ತಿಳಿದುಕೊಂಡನು. ಅವನು ಯೆರೂಸಲೇಮಿಗೆ ಬಂದು, ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು, ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ, ತನ್ನ ಸೇವಕರಿಗೆ ಔತಣವನ್ನು ಏರ್ಪಡಿಸಿದನು.
حِينَئِذٍ أَتَتِ ٱمْرَأَتَانِ زَانِيَتَانِ إِلَى ٱلْمَلِكِ وَوَقَفَتَا بَيْنَ يَدَيْهِ. ١٦ 16
ಇಬ್ಬರು ವೇಶ್ಯೆಯರು ಅರಸನ ಬಳಿಗೆ ಬಂದು, ಅವನ ಮುಂದೆ ನಿಂತರು.
فَقَالَتِ ٱلْمَرْأَةُ ٱلْوَاحِدَةُ: «ٱسْتَمِعْ يَاسَيِّدِي. إِنِّي أَنَا وَهَذِهِ ٱلْمَرْأَةُ سَاكِنَتَانِ فِي بَيْتٍ وَاحِدٍ، وَقَدْ وَلَدْتُ مَعَهَا فِي ٱلْبَيْتِ. ١٧ 17
ಅವರಲ್ಲಿ ಒಬ್ಬಳು, “ನನ್ನ ಒಡೆಯನೇ, ನಾನೂ, ಈ ಹೆಣ್ಣು ಮಗಳು ಒಂದೇ ಮನೆಯಲ್ಲಿ ವಾಸವಾಗಿದ್ದೇವೆ.
وَفِي ٱلْيَوْمِ ٱلثَّالِثِ بَعْدَ وِلَادَتِي وَلَدَتْ هَذِهِ ٱلْمَرْأَةُ أَيْضًا، وَكُنَّا مَعًا، وَلَمْ يَكُنْ مَعَنَا غَرِيبٌ فِي ٱلْبَيْتِ غَيْرَنَا نَحْنُ كِلْتَيْنَا فِي ٱلْبَيْتِ. ١٨ 18
ನಾನು ಅವಳ ಸಂಗಡ ಮನೆಯಲ್ಲಿರುವಾಗ, ಮಗುವನ್ನು ಹೆತ್ತೆನು. ನಾನು ಹೆತ್ತ ಮೂರು ದಿವಸಗಳ ತರುವಾಯ, ಈ ಹೆಣ್ಣು ಮಗಳು ಕೂಡ ಹೆತ್ತಳು. ನಾವು ಇಬ್ಬರೂ ಕೂಡಿಯೇ ಇದ್ದೆವು. ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತ್ಯಾರೂ ಇಲ್ಲ.
فَمَاتَ ٱبْنُ هَذِهِ فِي ٱللَّيْلِ، لِأَنَّهَا ٱضْطَجَعَتْ عَلَيْهِ. ١٩ 19
“ಆದರೆ ಅವಳು ಕೂಸಿನ ಮೇಲೆ ಮಲಗಿದ್ದರಿಂದ, ರಾತ್ರಿಯಲ್ಲಿ ಆಕೆಯ ಮಗು ಸತ್ತು ಹೋಯಿತು.
فَقَامَتْ فِي وَسَطِ ٱللَّيْلِ وَأَخَذَتِ ٱبْنِي مِنْ جَانِبِي وَأَمَتُكَ نَائِمَةٌ، وَأَضْجَعَتْهُ فِي حِضْنِهَا، وَأَضْجَعَتِ ٱبْنَهَا ٱلْمَيْتَ فِي حِضْنِي. ٢٠ 20
ಇವಳು ಮಧ್ಯರಾತ್ರಿಯಲ್ಲಿ ಎದ್ದು, ನಿನ್ನ ದಾಸಿಯು ನಿದ್ರೆಗೈಯುತ್ತಿರುವಾಗ, ನನ್ನ ಹತ್ತಿರ ಮಲಗಿದ್ದ ನನ್ನ ಮಗನನ್ನು ತೆಗೆದುಕೊಂಡು, ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು, ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು.
فَلَمَّا قُمْتُ صَبَاحًا لِأُرَضِّعَ ٱبْنِي، إِذَا هُوَ مَيْتٌ. وَلَمَّا تَأَمَّلْتُ فِيهِ فِي ٱلصَّبَاحِ، إِذَا هُوَ لَيْسَ ٱبْنِيَ ٱلَّذِي وَلَدْتُهُ». ٢١ 21
ಉದಯದಲ್ಲಿ ನನ್ನ ಕೂಸಿಗೆ ಹಾಲು ಕುಡಿಸಲು ಎದ್ದಾಗ, ಅದು ಸತ್ತಿತ್ತು! ಉದಯದಲ್ಲಿ ಅದನ್ನು ಕಂಡಾಗ, ಅದು ನಾನು ಹೆತ್ತ ಮಗುವಾಗಿರಲಿಲ್ಲ,” ಎಂದಳು.
وَكَانَتِ ٱلْمَرْأَةُ ٱلْأُخْرَى تَقُولُ: «كَلَّا، بَلِ ٱبْنِيَ ٱلْحَيُّ وَٱبْنُكِ ٱلْمَيْتُ». وَهَذِهِ تَقُولُ: «لَا، بَلِ ٱبْنُكِ ٱلْمَيْتُ وَٱبْنِيَ ٱلْحَيُّ». وَتَكَلَّمَتَا أَمَامَ ٱلْمَلِكِ. ٢٢ 22
ಆಗ ಆ ಬೇರೆ ಹೆಣ್ಣು ಮಗಳು, “ಇಲ್ಲ ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು,” ಎಂದಳು. ಮೊದಲನೆಯವಳು, “ಹಾಗಲ್ಲ, ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು,” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸಿದರು.
فَقَالَ ٱلْمَلِكُ: «هَذِهِ تَقُولُ: هَذَا ٱبْنِيَ ٱلْحَيُّ وَٱبْنُكِ ٱلْمَيْتُ، وَتِلْكَ تَقُولُ: لَا، بَلِ ٱبْنُكِ ٱلْمَيْتُ وَٱبْنِيَ ٱلْحَيُّ». ٢٣ 23
ಆಗ ಅರಸನು, “‘ಇವಳು ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು,’ ಎನ್ನುತ್ತಾಳೆ. ಅವಳು, ಹಾಗಲ್ಲ, ‘ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು,’ ಎನ್ನುತ್ತಾಳೆ,” ಎಂದು ಹೇಳಿ,
فَقَالَ ٱلْمَلِكُ: «اِيتُونِي بِسَيْفٍ». فَأَتَوْا بِسَيْفٍ بَيْنَ يَدَيِ ٱلْمَلِكِ. ٢٤ 24
ಅರಸನು, “ಖಡ್ಗವನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದನು. ಅವರು ಖಡ್ಗವನ್ನು ಅರಸನ ಬಳಿಗೆ ತಂದರು.
فَقَالَ ٱلْمَلِكُ: «ٱشْطُرُوا ٱلْوَلَدَ ٱلْحَيَّ ٱثْنَيْنِ، وَأَعْطُوا نِصْفًا لِلْوَاحِدَةِ وَنِصْفًا لِلْأُخْرَى». ٢٥ 25
ಆಗ ಅರಸನು, “ಬದುಕಿರುವ ಕೂಸನ್ನು ಎರಡು ತುಂಡಾಗಿ ಕಡಿದು, ಇವಳಿಗೆ ಅರ್ಧ ಪಾಲನ್ನೂ, ಅವಳಿಗೆ ಅರ್ಧ ಪಾಲನ್ನೂ ಕೊಡಿರಿ,” ಎಂದನು.
فَتَكَلَّمَتِ ٱلْمَرْأَةُ ٱلَّتِي ٱبْنُهَا ٱلْحَيُّ إِلَى ٱلْمَلِكِ، لِأَنَّ أَحْشَاءَهَا ٱضْطَرَمَتْ عَلَى ٱبْنِهَا، وَقَالَتِ: «ٱسْتَمِعْ يَا سَيِّدِي. أَعْطُوهَا ٱلْوَلَدَ ٱلْحَيَّ وَلَا تُمِيتُوهُ». وَأَمَّا تِلْكَ فَقَالَتْ: «لَا يَكُونُ لِي وَلَا لَكِ. اُشْطُرُوهُ». ٢٦ 26
ಆಗ ಬದುಕಿರುವ ಕೂಸಿನ ತಾಯಿಯಾಗಿರುವವಳ ಕರುಳುಗಳು ತನ್ನ ಮಗನಿಗಾಗಿ ಮರುಗಿದ್ದರಿಂದ ಅವಳು ಅರಸನಿಗೆ, “ನನ್ನ ಒಡೆಯನೇ, ಬದುಕಿರುವ ಕೂಸನ್ನು ಇವಳಿಗೆ ಕೊಡು, ಕೊಲ್ಲಬೇಡ,” ಎಂದಳು. ಆದರೆ, ಮತ್ತೊಬ್ಬಳು, ಅದು ನನಗಾಗಲಿ ನಿನಗಾಗಲಿ ಆಗಿರಬಾರದು, ಕಡಿಯಿರಿ. ಎಂದಳು.
فَأَجَابَ ٱلْمَلِكُ وَقَالَ: «أَعْطُوهَا ٱلْوَلَدَ ٱلْحَيَّ وَلَا تُمِيتُوهُ فَإِنَّهَا أُمُّهُ». ٢٧ 27
ಆಗ ಅರಸನು ಉತ್ತರವಾಗಿ, “ಬದುಕಿರುವ ಕೂಸನ್ನು ಮೊದಲನೆಯವಳಿಗೆ ಕೊಡಿರಿ, ಕೊಲ್ಲಬೇಡಿರಿ, ಇವಳೇ ಅದರ ತಾಯಿ,” ಎಂದನು.
وَلَمَّا سَمِعَ جَمِيعُ إِسْرَائِيلَ بِٱلْحُكْمِ ٱلَّذِي حَكَمَ بِهِ ٱلْمَلِكُ خَافُوا ٱلْمَلِكَ، لِأَنَّهُمْ رَأَوْا حِكْمَةَ ٱللهِ فِيهِ لِإِجْرَاءِ ٱلْحُكْمِ. ٢٨ 28
ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇಲರು ಕೇಳಿ, ಅರಸನಿಗೆ ಭಯಪಟ್ಟರು. ಏಕೆಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ಕಂಡರು.

< اَلْمُلُوكِ ٱلْأَوَّلُ 3 >